ಬ್ರೇಕಿಂಗ್ ನ್ಯೂಸ್
 
            
                        27-02-22 10:59 pm HK Desk news ದೇಶ - ವಿದೇಶ
ಮಾಸ್ಕೋ, ಫೆ 27: ರಷ್ಯಾ-ಉಕ್ರೇನ್ ಸಂಘರ್ಷದ ಮಧ್ಯೆ, ಅಮೇರಿಕನ್ ಆನ್‌ಲೈನ್ ವೀಡಿಯೊ ಹಂಚಿಕೆ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್ ರಷ್ಯಾದ ಮಾಧ್ಯಮ ಆರ್‌ಟಿ ಮತ್ತು ಉಕ್ರೇನ್‌ನಲ್ಲಿರುವ ಇತರ ರಷ್ಯಾದ ಚಾನೆಲ್‌ಗಳನ್ನು ನಿರ್ಬಂಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನು ಗೂಗಲ್ ಕೂಡಾ ಇದುವೇ ಕ್ರಮವನ್ನು ಕೈಗೊಂಡಿದೆ ಎಂದು ವರದಿ ಉಲ್ಲೇಖ ಮಾಡಿದೆ.
ಶನಿವಾರ (ಫೆಬ್ರವರಿ 26) ಜಾಗತಿಕವಾಗಿ ಈ ಕಾರ್ಯವನ್ನು ಮಾಡಲಾಗಿದೆ ಎಂದು ವರದಿ ತಿಳಿಸಿದೆ. ರಷ್ಯಾವು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ವಿಧಿಸಲಾದ ಇತ್ತೀಚಿನ ನಿರ್ಬಂಧಗಳ ವ್ಯಾಪ್ತಿಯಲ್ಲಿ ರಷ್ಯಾದ ಚಾನೆಲ್‌ಗಳ ಮೇಲಿನ ನಿರ್ಬಂಧವು ಕೂಡಾ ಸೇರ್ಪಡೆ ಆಗಿದೆ.
ರಷ್ಯಾವು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭ ಮಾಡಿದ ಬಳಿಕ ವಿಧಿಸಲಾದ ಇತ್ತೀಚಿನ ನಿರ್ಬಂಧಗಳ ಹಿನ್ನೆಲೆ ಹಲವಾರು ರಷ್ಯಾದ ಚಾನೆಲ್‌ಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ಯೂಟ್ಯೂಬ್ ವಕ್ತಾರ ಐವಿ ಚೋಯ್ಸಿಟಿಂಗ್ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಮಾಹಿತಿ ನೀಡಿದೆ.

ನಾವು ಈ ಚಾನಲ್‌ಗಳಿಗೆ ಶಿಫಾರಸುಗಳನ್ನು ಗಮನಾರ್ಹವಾಗಿ ಮಿತಿಗೊಳಿಸುತ್ತೇವೆ. ನೀತಿಗಳನ್ನು ಉಲ್ಲಂಘಿಸುವ ಚಾನಲ್‌ಗಳು ಮತ್ತು ವೀಡಿಯೊಗಳನ್ನು ತೆಗೆದುಹಾಕಲಾಗಿದೆ," ಎಂದು ಯೂಟ್ಯೂಬ್ ಮಾಹಿತಿ ನೀಡಿದೆ. ಏತನ್ಮಧ್ಯೆ, ಮಾಧ್ಯಮ ವರದಿಗಳ ಪ್ರಕಾರ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತಿನಿಂದ ಹಣಗಳಿಸವ ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮವನ್ನು ಗೂಗಲ್ ನಿರ್ಬಂಧಿಸಿದೆ ಎಂದು ವರದಿ ಹೇಳಿದೆ.
ಭಾನುವಾರ ರಾಯಿಟರ್ಸ್ ವರದಿ ಮಾಡಿದ ಪ್ರಕಾರ ಜಾಹೀರಾತುಗಳನ್ನು ನೀಡುವುದು ಮತ್ತು ಜಿಮೇಲ್ ಅನ್ನು ಬಳಸುವುದನ್ನು ಒಳಗೊಂಡಂತೆ ರಷ್ಯಾದ ಆರ್‌ಟಿ ಚಾನಲ್, ಹಾಗೆಯೇ ಇತರ ರಷ್ಯಾದ ರಾಷ್ಟ್ರೀಯ ಮಾಧ್ಯಮಗಳಿಗೂ ಗೂಗಲ್, ಯೂಟ್ಯೂಬ್ ಸೇವೆಗಳಲ್ಲಿ ಜಾಹೀರಾತು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ, ಮೆಟಾ (ಹಿಂದೆ ಫೇಸ್‌ಬುಕ್ ಎಂದು ಕರೆಯಲಾಗುತ್ತಿತ್ತು) ಜಾಹೀರಾತುಗಳನ್ನು ಚಲಾಯಿಸುವ ಮತ್ತು ಮೆಟಾದ ಪ್ಲಾಟ್‌ಫಾರ್ಮ್‌ನಲ್ಲಿ ಹಣಗಳಿಸುವ ರಷ್ಯಾದ ರಾಷ್ಟ್ರೀಯ ಮಾಧ್ಯಮದ ಸಾಮರ್ಥ್ಯವನ್ನು ನಿರ್ಬಂಧಿಸುತ್ತಿದೆ ಎಂದು ಹೇಳಿದೆ.
ಉಕ್ರೇನ್‌ನಲ್ಲಿನ ಅಸಾಧಾರಣ ಸನ್ನಿವೇಶಗಳ ಹಿನ್ನೆಲೆ ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಗೂಗಲ್ ಅಂಗಸಂಸ್ಥೆಯ ವಕ್ತಾರರು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನಮ್ಮ ತಂಡಗಳು ಜಾಗತಿಕವಾಗಿ ಆರ್‌ಟಿಯ ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಯೂಟ್ಯೂಬ್ ನಲ್ಲಿ ಹಣಗಳಿಸುವ ಕೆಲವು ಚಾನಲ್‌ಗಳ ಸಾಮರ್ಥ್ಯವನ್ನು ಕಡಿಮೆ ಮಾಡಲು ನಿರ್ಧಾರ ಮಾಡಿದ್ದಾರೆ," ಎಂದು ರಷ್ಯಾದ ಮಾಧ್ಯಮಗಳನ್ನು ಉಲ್ಲೇಖ ಮಾಡಿ ಹೇಳಿದ್ದಾರೆ.
 
            
            
            After Russia’s attack on Ukraine, all kinds of sanctions are being imposed on Russia by America and its allies. Many big companies have also taken many important decisions regarding Russia. Now the name of the giant tech company Google has also been added in connection with the ban. Google has banned YouTube earnings on Russia’s RT and many other TV channels.
 
    
            
             30-10-25 11:00 pm
                        
            
                  
                Bangalore Correspondent    
            
                    
 
    ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
 
    ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
 
    ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
 
    ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
 
    
            
             30-10-25 03:20 pm
                        
            
                  
                HK News Desk    
            
                    
 
    ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
 
    ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
 
    ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
 
    ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
 
    
            
             30-10-25 11:16 pm
                        
            
                  
                Mangalore Correspondent    
            
                    
 
    ಧರ್ಮಸ್ಥಳ ಪ್ರಕರಣ ; ಮಹೇಶ್ ಶೆಟ್ಟಿ ತಿಮರೋಡಿ ತಂಡಕ್ಕ...
30-10-25 08:06 pm
 
    ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
 
    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
 
    ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
 
    
            
             31-10-25 12:55 pm
                        
            
                  
                HK News Desk    
            
                    
 
    ಇಂಗ್ಲೆಂಡಿನಲ್ಲಿ ಉದ್ಯೋಗ ಆಮಿಷ ; ಮಂಗಳೂರು- ಉಡುಪಿಯ...
29-10-25 10:43 pm
 
    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
 
    ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
 
    ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm