ಲಡಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ; ಚೀನಾ - ಭಾರತದ ನಡುವೆ ಮಹತ್ವದ ಸಭೆ

21-09-20 10:57 am       Headline Karnataka News Network   ದೇಶ - ವಿದೇಶ

ಪೂರ್ವ ಲಡಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಇಂದು ಭಾರತ-ಚೀನಾ ಸೇನೆಗಳ ನಡುವೆ ಆರನೇ ಹಂತದ ಮಹತ್ವದ ಮಾತುಕತೆ ನಡೆಯಲಿದೆ.

ಲಡಾಕ್, ಸೆಪ್ಟಂಬರ್ 21: ಪೂರ್ವ ಲಡಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಇಂದು ಭಾರತ-ಚೀನಾ ಸೇನೆಗಳ ನಡುವೆ ಆರನೇ ಹಂತದ ಮಹತ್ವದ ಮಾತುಕತೆ ನಡೆಯಲಿದೆ. ಗಡಿಯಲ್ಲಿರುವ ಚುಶುಲ್ ಮತ್ತು ಮೊಲ್ಡೊ ಮೀಟಿಂಗ್ ಪಾಯಿಂಟ್ ನಲ್ಲಿ ಈ ಸಭೆ ನಡೆಯಲಿದೆ.

ಎರಡು ಸೇನೆಗಳ ಕಾರ್ಫ್ಸ್ ಕಮಾಂಡರ್ ಮಟ್ಟದ ಸಭೆ ಇದಾಗಿದ್ದು, ಭಾರತದ ಪರ ಲೆಫ್ಟಿನೆಂಟ್ ಜನರಲ್ ಹರೇಂದ್ರ ಸಿಂಗ್ ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀ ವಾಸ್ತವ ಹಾಗೂ ಗೃಹ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

45 ವರ್ಷಗಳ ಬಳಿಕ ಗಡಿಯಲ್ಲಿ ಮೂರು ಬಾರಿ ಗುಂಡಿನ ಸದ್ದು ಮೊಳಗಿದ್ದು, ಎರಡು ಸೇನೆಯಿಂದ ಗುಂಡಿನ ಸದ್ದು ಮೊಳಗಿದೆ. ಪರಿಸ್ಥಿತಿ ನಿಯಂತ್ರಿಸಲು ಹಾಗೂ ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ.

Join our WhatsApp group for latest news updates