ಪ್ರಧಾನಿ ಮೋದಿ ವಿದೇಶ ಪ್ರಯಾಣಕ್ಕೆ ತಗಲಿದ ಖರ್ಚು 517 ಕೋಟಿ ರೂ. ಮಾತ್ರ !

23-09-20 10:56 am       Headline Karnataka News Network   ದೇಶ - ವಿದೇಶ

ಪ್ರಧಾನಮಂತ್ರಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಒಟ್ಟಾರೆ 58 ದೇಶಗಳಿಗೆ ಭೇಟಿ ನೀಡಿದ್ದು, ಇದಕ್ಕಾಗಿ ಒಟ್ಟು 517 ಕೋ.ರೂ. ಖರ್ಚು ತಗಲಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸರಕಾರ ಲಿಖಿತ ಉತ್ತರ ನೀಡಿದೆ.

ನವದೆಹಲಿ, ಸೆಪ್ಟಂಬರ್ 23: ಪ್ರಧಾನಮಂತ್ರಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಒಟ್ಟಾರೆ 58 ದೇಶಗಳಿಗೆ ಭೇಟಿ ನೀಡಿದ್ದು, ಇದಕ್ಕಾಗಿ ಒಟ್ಟು 517 ಕೋ.ರೂ. ಖರ್ಚು ತಗಲಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸರಕಾರ ಲಿಖಿತ ಉತ್ತರ ನೀಡಿದೆ. ವಿದೇಶ ಪ್ರಯಾಣಕ್ಕೆ ವ್ಯಯಿಸಿದ ಖರ್ಚು ಎಷ್ಟೆಂಬ ಪ್ರಶ್ನೆಗೆ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಮುರಲೀಧರನ್ ಲಿಖಿತ ಉತ್ತರ ನೀಡಿದ್ದಾರೆ. 

ಪ್ರಧಾನಮಂತ್ರಿ ಮೋದಿ ಅಮೆರಿಕ ಹಾಗೂ ರಶ್ಯಕ್ಕೆ ತಲಾ ಐದು ಬಾರಿ ಭೇಟಿ ನೀಡಿದ್ದಾರೆ. ಗಡಿ ಬಿಕ್ಕಟ್ಟನ್ನು ಹೊಂದಿರುವ ಚೀನಾ ದೇಶಕ್ಕೆ ಐದು ಬಾರಿ ಮೋದಿ ಭೇಟಿ ನೀಡಿದ್ದಾರೆ ಎಂದು ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ. ಅಲ್ಲದೆ, ಸಿಂಗಾಪುರ, ಜರ್ಮನಿ, ಫ್ರಾನ್ಸ್, ಯುಎಇ ಹಾಗೂ ಶ್ರೀಲಂಕಾ ದೇಶಗಳಿಗೆ ಪ್ರಧಾನಿ ಭೇಟಿ ಕೊಟ್ಟಿದ್ದಾರೆ.

"ಈ ಎಲ್ಲ ವಿದೇಶ ಪ್ರಯಾಣಕ್ಕೆ ತಗಲಿರುವ ಒಟ್ಟು ಖರ್ಚು 517.82 ಕೋಟಿ ರೂ. ಎಂದು ಸರಕಾರದಿಂದ ಉತ್ತರ ನೀಡಿದ್ದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. 2019 ನವೆಂಬರ್‌ನಲ್ಲಿ ಕೊನೆಯ ಬಾರಿ ಪ್ರಧಾನಿ ವಿದೇಶಕ್ಕೆ ಭೇಟಿ ನೀಡಿದ್ದು, ಬ್ರೆಝಿಲ್‌ ನಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಈ ವರ್ಷ ಜಾಗತಿಕ ಮಟ್ಟದಲ್ಲಿ ಕೊರೋನ ಬಿಕ್ಕಟ್ಟು ಎದುರಾಗಿದ್ದರಿಂದ ಪ್ರಧಾನಿ ಈ ಬಾರಿ ವಿದೇಶ ಪ್ರಯಾಣ ಕೈಗೊಂಡಿಲ್ಲ.

Join our WhatsApp group for latest news updates (2)