ಬ್ರೇಕಿಂಗ್ ನ್ಯೂಸ್
11-05-22 03:11 pm HK Desk News ದೇಶ - ವಿದೇಶ
ಶ್ರೀಕಾಕುಳಂ, ಮೇ 11 : ಬಂಗಾಳ ಕೊಲ್ಲಿಯಲ್ಲಿ ಅಸಾನಿ ಚಂಡಮಾರುತ ಕಾರಣ ಕರಾವಳಿಯಲ್ಲಿ ಸಮುದ್ರ ಭೋರ್ಗರೆಯುತ್ತಾ ತೀರಕ್ಕೆ ಅಪ್ಪಳಿಸತೊಡಗಿದೆ. ಈ ನಡುವೆ, ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕರಾವಳಿ ತೀರದಲ್ಲಿ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಚಿನ್ನದ ಮಾದರಿಯ ರಥವೊಂದು ಸಮುದ್ರದಲ್ಲಿ ತೇಲಿಬಂದಿದ್ದು ಜನರಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಎಂಬಲ್ಲಿನ ಕರಾವಳಿ ತೀರದಲ್ಲಿ ಚಿನ್ನದ ರಥ ಮಂಗಳವಾರ ಬೆಳಗ್ಗೆ ತೇಲಿ ಬಂದಿದೆ. ಸ್ಥಳೀಯರು ಸಮುದ್ರದಲ್ಲಿ ಏನೋ ರಥದ ರೀತಿ ಕಂಡುಬಂದಿದ್ದನ್ನು ನೋಡಿ ಅಚ್ಚರಿಗೊಂಡಿದ್ದು ನೀರಿಗೆ ಹಾರಿ ದಡಕ್ಕೆ ಎಳೆದು ತಂದಿದ್ದಾರೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ಚಿನ್ನದ ಮಾದರಿಯ ರಥವೂ ಬೇರೆ ದೇಶದಿಂದ ಬಂದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ರಥ ದೇವಸ್ಥಾನದ ಮಾದರಿಯಲ್ಲಿದ್ದು ಚಿನ್ನದ ಬಣ್ಣದಲ್ಲಿ ಕಂಗೊಳಿಸುತ್ತಿದೆ. ಪೂರ್ತಿ ಚಿನ್ನದ್ದೇಯಾ ಅಥವಾ ಕೋಟಿಂಗ್ ಇದೆಯಾ ಅನ್ನೋದ್ರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಕೂಡ ಪರಿಶೀಲನೆಗೆ ಮುಂದಾಗಿದ್ದಾರೆ. ರಥದ ಮೇಲೆ 16/1/2022 ಎಂಬ ದಿನಾಂಕ ನಮೂದಿಸಲಾಗಿದೆ. ವಿದೇಶಿ ಬರವಣಿಗೆ ಇದೆ. ಬಹುಶಃ ರಥವೂ ಮಲೇಶಿಯಾ, ಥಾಯ್ಲೆಂಡ್ ಅಥವಾ ಜಪಾನ್ನಿಂದ ಬಂದಿರಬಹುದೆಂದು ಶಂಕಿಸಲಾಗಿದೆ. ಚಿನ್ನದ ರಥ ಕರಾವಳಿ ತೀರಕ್ಕೆ ತೇಲಿ ಬಂದಿರುವುದನ್ನು ತಿಳಿದು ದೂರದ ಪ್ರದೇಶಗಳಿಂದ ಜನರ ಕುತೂಹಲದಿಂದ ಆಗಮಿಸುತ್ತಿದ್ದಾರೆ.
ಇತ್ತೀಚಿನ ಚಂಡಮಾರುತದ ಸಂದರ್ಭದಲ್ಲಿ ಪೂರ್ವ ಗೋದಾವರಿ ಜಿಲ್ಲೆಯ ಕರಾವಳಿಯಲ್ಲೂ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಇದೀಗ ಸುನ್ನಪಲ್ಲಿ ಬಂದರಿಗೆ ಚಿನ್ನದ ರಥ ಬಂದಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಥದ ಮೂಲವನ್ನು ಹುಡುಕುತ್ತಿದ್ದಾರೆ.
#WATCH | Andhra Pradesh: A mysterious gold-coloured chariot washed ashore at Sunnapalli Sea Harbour in Srikakulam y'day, as the sea remained turbulent due to #CycloneAsani
— ANI (@ANI) May 11, 2022
SI Naupada says, "It might've come from another country. We've informed Intelligence & higher officials." pic.twitter.com/XunW5cNy6O
Residents dragged out a mysterious gold-coloured chariot that washed ashore at the Sunnapalli Sea Harbour in Andhra Pradesh’s Srikakulam amid turbulence due to Cyclone Asani on Tuesday. The sub-inspector (SI) of Naupada in the Srikakulam district said, "It might have come from another country. We have informed the intelligence and higher officials.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm