ಬ್ರೇಕಿಂಗ್ ನ್ಯೂಸ್
07-08-22 03:29 pm Source: Artical by Udaya Shetty, Panjimaru ನ್ಯೂಸ್ View
ಗೆಳೆತನವು ಮೂರು ತೆರನಾದುದೆಂದು ಬಲ್ಲವರು ಹೇಳುತ್ತಾರೆ. ಮತ್ತು ಚಾಣಕ್ಯನೀತಿಯೂ ಈ ಮಾತುಗಳನ್ನೇ ಸಮರ್ಥಿಸುತ್ತವಂತೆ. ಈ ಮೂರು ವಿಧದ ಸ್ನೇಹಗಳು ಯಾವುದೆಂದರೆ;
1. ವಿಫಲ ಸ್ನೇಹ
2. ಸಫಲ ಸ್ನೇಹ
3. ಸುಫಲ ಸ್ನೇಹ
ವಿಫಲ ಸ್ನೇಹ: ತಮ್ಮ ಅನುಕೂಲಕ್ಕಾಗಿ ಅಥವಾ ಕಾರ್ಯ ಸಾಧನೆಗಾಗಿ ಅಥವಾ ಸಮಯ ಸಂದರ್ಭಕ್ಕನುಗುಣವಾಗಿ ಮಾಡಿಕೊಂಡಿರುವ ಗೆಳೆತನ. ವಿಫಲ ಸ್ನೇಹಕ್ಕೆ ಅತ್ಯುತ್ತಮ ಉದಾಹರಣೆ ದ್ರೋಣ ಹಾಗೂ ದ್ರುಪದರದ್ದು. ವಿದ್ಯಾರ್ಥಿ ದೆಸೆಯಲ್ಲಿರುವಾಗ ಅನ್ಯೋನ್ಯವಾಗಿದ್ದ ಗೆಳೆತನ ದ್ರುಪದನಿಗೆ ಅಧಿಕಾರ ದೊರೆತಾಗ ಬಣ್ಣ ಬಯಲಾಯಿತು. ಪ್ರತಿಕಾರದ ಹೊಗೆ ಹೊತ್ತಿ ಉರಿಯಿತು. ದ್ರೋಣ ದ್ರುಪದರ ಮರಣದಲ್ಲೂ ನಿಲ್ಲದೇ ಮತ್ತೂ ಮುಂದುವರಿದು ಮಕ್ಕಳು ಮೊಮ್ಮಕ್ಕಳ ಮರಣದವರೆಗೂ ಸಾಗಿತು.
ಸಫಲ ಸ್ನೇಹ: ಇಬ್ಬರಿಗೂ ಅಗತ್ಯವಾಗಿ ಬೇಕಾಗಿರುವ, ಬಿಟ್ಟಿರಲಾರದ ಸ್ನೇಹ. ಯಾರು ತಪ್ಪಿ ನಡೆದರೂ ಅದನ್ನು ತಪ್ಪು ಎಂದು ಹೇಳುವ ಛಾತಿಯಾಗಲಿ, ಸರಿಪಡಿಸಿಕೋ ಎಂದು ಹೇಳುವ ಗುಣ ಮತ್ತೊಬ್ಬ ಗೆಳೆಯನಲ್ಲಿ ಇಲ್ಲದಿರುವುದು. ಮಾತ್ರವಲ್ಲ ಗೆಳೆಯ ಮಾಡಿದ ತಪ್ಪನ್ನು ಸರಿಯೆಂದು ಸಮರ್ಥಿಸುವುದು ಈ ಸಫಲ ಗೆಳೆತನದ ಮತ್ತೊಂದು ಗುಣ. ಕರ್ಣ ಮತ್ತು ದುರ್ಯೋಧನರ ಸ್ನೇಹವು
ಸಫಲ ಸ್ನೇಹಕ್ಕೆ ಅತ್ಯುತ್ತಮ ಉದಾಹರಣೆ. ಇವರ ಸ್ನೇಹದಿಂದ ಒಬ್ಬರಿಂದ ಮತ್ತೊಬ್ಬರಿಗೆ ಲಾಭವಾಯಿತೇ ಅನ್ಯಥಾ ಸಮಾಜಕ್ಕಲ್ಲ. ಕರ್ಣನಿಗೆ ಅಧಿಕಾರ ಸಿಕ್ಕಿತು. ದುರ್ಯೋಧನನಿಗೆ ಪಾಂಡವರ ಮೇಲೆ ವೈರ ಸಾಧಿಸಲು ಬಲ ಬಂತು. ಆದರೆ ಇವರೀರ್ವರ ಸ್ನೇಹದ ಪರಿಣಾಮ ಮಾತ್ರ ಹದಿನೆಂಟು ಅಕ್ಷೋಹಿಣಿ ಸೈನಿಕರ ಮರಣದಲ್ಲಿ ಪರ್ಯಾವಸಾನಗೊಂಡಿತು. ಅದರೂ ಕೊನೆತನಕ ಒಬ್ಬರು ಮತ್ತೊಬ್ಬರನ್ನು ಹೊಗಳುವುದರಲ್ಲಿಯೇ ನಿರತರಾಗಿದ್ದರು.
ಸುಫಲ ಸ್ನೇಹ: ಸ್ನೇಹಿತ ಹೇಗಿದ್ದಾನೋ ಹಾಗೆಯೇ ಸ್ವೀಕರಿಸುವುದು. ಅನಂತರ ಒಬ್ಬರು ಮತ್ತೊಬ್ಬರ ಏಳಿಗೆಗಾಗಿ ಶ್ರಮಿಸುವುದು. ತಪ್ಪು ಮಾಡಿದಾಗ ಖಡಾಖಂಡಿತವಾಗಿ ಖಂಡಿಸುವುದು. ಎಂದೂ ಮುಖಸ್ತುತಿ ಮಾಡದಿರುವುದು. ಇಂಥ ಸ್ನೇಹದಿಂದ ಮತ್ತು ಸ್ನೇಹಿತರಿಂದ ಸಮಾಜದ ಉದ್ಧಾರವಾಗುತ್ತದೆ. ಕೃಷ್ಣಾರ್ಜುನರು ಸುಫಲ ಸ್ನೇಹಕ್ಕೆ ಬಹಳ ಉತ್ತಮ ಉದಾಹರಣೆ. ಸೌಭದ್ರೆಯ ಸ್ವಂತ ಅಣ್ಣ ಬಲರಾಮನ ವಿರುದ್ಧವಿದಾಗಲೂ ಅರ್ಜುನನಿಗೆ ಕೊಟ್ಟು ಮದುವೆ ಮಾಡಿದ. ಅಳಿಯನಾದ ಅಭಿಮನ್ಯುವಿಗೆ ಧನುರ್ವಿದ್ಯೆಯನ್ನೂ ಕಲಿಸಿದ. ಮಹಾಭಾರತ ಸಮರದಲ್ಲಿ ಅರ್ಜುನನು ಸೆಣಸುವುದಿಲ್ಲ ಎಂದು ಶಸ್ತ್ರ ಸನ್ಯಾಸವನ್ನು ಮಾಡಿದಾಗ ನೀನು ತಪ್ಪು ಮಾಡುತ್ತಿದ್ದಿ ಎಂದು ಬೈದು ಹೇಳಿದನು. ಮೂರ್ಖ ಎಂದನು ಕೃಷ್ಣ. ಮಾತ್ರವಲ್ಲ; ನೀನು ಕ್ಷತ್ರಿಯನಾಗಿ ಹುಟ್ಟಿ ಕ್ಷತ್ರಿಯ ಧರ್ಮ ಪಾಲಿಸದೇ ಇರುವುದು ತರವಲ್ಲ. ಅದರಿಂದಾಗುವ ಅನಾಹುತ ಪರಂಪರೆಗಳು ಏನು? ಎಂಥದು? ಎಂಬ ಧರ್ಮ ಜಿಜ್ಞಾಸೆಯ ಗೀತೆ ಭಗವದ್ಗೀತೆಯಾಗಿ ಸುಮಾರು ಐದು ಸಾವಿರ ವರ್ಷಗಳ ನಂತರವೂ ಜಗದ್ಗೀತೆಯಾಗಿರುವುದು ಸುಫಲ ಸ್ನೇಹದ ಫಲವಾಗಿ ಲೋಕಕ್ಕೆ ಒದಗಿರುವುದು ನಿತ್ಯ ಸತ್ಯವಾಗಿದೆ.
ಕಲಿಯುಗದಲ್ಲಿ ವಿಫಲ ಹಾಗೂ ಸಫಲ ಸ್ನೇಹಗಳನ್ನು ನಿತ್ಯ ಕಾಣಬಹುದು. ಆದರೆ ಸುಫಲ ಸ್ನೇಹಕ್ಕೆ ಉದಾಹರಣೆಗಳು ಸಿಗುವುದು ಕಷ್ಟ.
ಉದಯ ಶೆಟ್ಟಿ, ಪಂಜಿಮಾರು
Friendship day 2022 article by Uday Shetty. Friendship is the most beautiful bond which makes relationship easy. Friendship day is dedicated to friends with whom you share the precious moments of life and this day is being celebrated on the first Sunday in the month of August i.e., today, 7th August, 2022. Friendship day is celebrated across the world by those who share special bond with their friends.
22-12-24 10:26 pm
HK News Desk
Pralhad Joshi, CT Ravi: ಸಿಟಿ ರವಿಯನ್ನ ಎನ್ಕೌಂಟ...
22-12-24 10:23 am
Bangalore Volvo Car Accident: ಕೋಟಿ ಬೆಲೆಯ ಕಾರಿ...
21-12-24 09:28 pm
CT Ravi Released: ಸಿ.ಟಿ.ರವಿ ಬಂಧನ ಖಂಡಿಸಿ ರಾಜ್ಯ...
20-12-24 10:43 pm
C T Ravi Arrested, Minister Lakshmi Hebbalkar...
19-12-24 08:05 pm
20-12-24 05:01 pm
HK News Desk
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
22-12-24 11:03 pm
Mangalore Correspondent
Kundapura Jet ski, Drowning: ತ್ರಾಸಿ ಬೀಚ್ ನಲ್ಲ...
22-12-24 06:04 pm
Celebrate Christmas and New Year in Style wit...
22-12-24 12:33 am
Mangalore Heli Tourism: ಮಂಗಳೂರು ನಗರ ದರ್ಶನಕ್ಕೆ...
21-12-24 08:16 pm
Praveen Nettaru Murder, NIA Arrest: ಪ್ರವೀಣ್ ನ...
21-12-24 11:30 am
22-12-24 07:23 pm
Bangalore Correspondent
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm
Puttur, Gold Robbery, Mangalore Crime: ಪುತ್ತೂ...
21-12-24 07:45 pm
Mangalore, Fraud case, Odisha: ನಕಲಿ ಷೇರು ಮಾರು...
21-12-24 06:24 pm
Kodagu Fake Gold Bank Case; ಕೇರಳದಲ್ಲಿ ನಕಲಿ ಚಿ...
20-12-24 08:20 pm