ಬ್ರೇಕಿಂಗ್ ನ್ಯೂಸ್
29-03-22 10:13 pm Bengaluru Correspondent ನ್ಯೂಸ್ View
ಬೆಂಗಳೂರು, ಮಾ.29: ರಾಜ್ಯದಲ್ಲಿ ಹಲಾಲ್ ಅನ್ನುವುದು ಈಗ ಭಾರೀ ಚರ್ಚೆಯ ವಸ್ತುವಾಗಿದೆ. ಹಲಾಲ್ ಮಾರ್ಕಿನ ವಸ್ತುಗಳಿಗೆ ಬಹಿಷ್ಕಾರ ಹಾಕಬೇಕು ಎಂದು ಹಿಂದು ಸಂಘಟನೆಗಳು ಗುಲ್ಲೆಬ್ಬಿಸಿವೆ. ಇಷ್ಟಕ್ಕೂ ಈ ಹಲಾಲ್ ಎಂದರೇನು, ಕೇವಲ ಮಾಂಸದ ಮಾರುಕಟ್ಟೆಗೆ ಮಾತ್ರ ಸೀಮಿತ ಆಗಿದ್ದ ಹಲಾಲ್, ಟ್ರೇಡ್ ಮಾರ್ಕ್ ಆಗಿದ್ದು ಹೇಗೆ ? ಇತರೇ ವಸ್ತುಗಳಿಗೂ ಹಲಾಲ್ ಮಾರ್ಕ್ ಅಗತ್ಯವಿದೆಯೇ ಎನ್ನುವ ಬಗ್ಗೆ ಜನರಲ್ಲಿ ಗೊಂದಲ ಎದ್ದಿದೆ.
ಮೂಲತಃ ಹಲಾಲ್ ಮತ್ತು ಹರಾಮ್ ಅನ್ನುವುದು ಅರಬೀ ಪದಗಳು. ಮುಸ್ಲಿಮರ ಆಹಾರದ ವಿಷಯದಲ್ಲಿ ಚಾಲ್ತಿಗೆ ಬಂದಿರುವಂಥದ್ದು. ಹಲಾಲ್ ಅಂದರೆ ಧರ್ಮ ಸಮ್ಮತ ಎನ್ನುವುದಷ್ಟೇ ಅರ್ಥ. ಹರಾಮ್ ಅಂದರೆ ಧರ್ಮ ನಿಷೇಧಿತ ಎಂದರ್ಥ. ಅಂದರೆ ಖುರಾನ್ ಪ್ರಕಾರ ನಿಷಿದ್ಧವಾಗಿರುವುದನ್ನು ಹರಾಮ್ ಎಂದು ಹೇಳಲಾಗುತ್ತದೆ. ಇಸ್ಲಾಮ್ ಪ್ರಕಾರ, ಸತ್ತ ಪ್ರಾಣಿ ಪಕ್ಷಿಗಳನ್ನು ತಿನ್ನುವುದಕ್ಕೆ ಬಳಸಬಾರದು. ಜೀವಂತ ಇರುವ ಕೋಳಿ ಅಥವಾ ಇತರ ಪ್ರಾಣಿಗಳನ್ನು ಅಲ್ಲಾಹನ ಪ್ರಾರ್ಥನೆ ಸಲ್ಲಿಸಿ ಸಾಯಿಸಿ ಮಾಂಸ ತಯಾರಿಸುವುದೇ ಹಲಾಲ್. ಹಾಗಾಗಿ ತಾವಾಗೇ ಸತ್ತ ಕೋಳಿಗಳನ್ನು ತಿನ್ನಬಾರದು. ಅಲ್ಲದೆ, ಕೋಳಿಯನ್ನು ಕುತ್ತಿಗೆ ಕೊಯ್ದು ಸಾಯಿಸುವುದಕ್ಕೂ ಮೊದಲು ಅದಕ್ಕೆ ನೀರು ಕೊಡಬೇಕು. ಸಾಯಿಸುವಾಗ ಅಲ್ಲಾಹನ ಹೆಸರಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಅನ್ನುವುದು ಇಸ್ಲಾಮಲ್ಲಿದೆ ಎನ್ನುತ್ತಾರೆ ತಿಳಿದವರು.
ಅದರ ಪ್ರಕಾರ, ಹಲಾಲ್ ಹೆಸರಲ್ಲಿ ಕೋಳಿ ಇನ್ನಿತರ ಮಾಂಸದಂಗಡಿಗಳು ಚಾಲ್ತಿಗೆ ಬಂದಿದ್ದವು. ಕಳೆದ ಹತ್ತು ವರ್ಷಗಳಲ್ಲಿ ಕರಾವಳಿ ಭಾಗದಲ್ಲಿ ಹಲಾಲ್ ಚಿಕನ್ ಸೆಂಟರ್ ಇನ್ನಿತರ ಅಂಗಡಿಗಳು ಶುರುವಾಗಿದ್ದವು. ಅದಕ್ಕೂ ಹಿಂದೆ ಇರಲಿಲ್ಲ. ಆದರೆ ಇದೇ ಹೊತ್ತಿಗೆ ಹಲಾಲ್ ಅನ್ನುವುದು ಗಲ್ಫ್ ಮಾರುಕಟ್ಟೆಯಲ್ಲಿ ಟ್ರೇಡ್ ಮಾರ್ಕ್ ಆಗಿ ಬೆಳೆದು ಬಂದಿತ್ತು. ಮುಸ್ಲಿಂ ಕೇಂದ್ರಿತವಾಗಿ ವ್ಯಾಪಾರ, ವಹಿವಾಟು ಬೆಳೆಸುವ ಹಿಡನ್ ಅಜೆಂಡಾ ಇಟ್ಟುಕೊಂಡವರು ಹಲಾಲ್ ಅನ್ನುವುದನ್ನು ಟ್ರೇಡ್ ಮಾರ್ಕ್ ಆಗಿ ಮಾಡಿದ್ದರು. ಅಲ್ಲಿ ಆಹಾರ ಪದಾರ್ಥಗಳಲ್ಲಿ ಮೊದಲಿಗೆ ಶುರುವಾಗಿದ್ದ ಈ ರೀತಿಯ ಟ್ರೇಡ್ ಮಾರ್ಕ್ ಆನಂತರ ಇತರ ವಸ್ತುಗಳಿಗೂ ಬಂದು ಬಿದ್ದಿತ್ತು. ಹಲಾಲ್ ಮಾರ್ಕ್ ಇರುವುದನ್ನು ಮಾತ್ರ ಖರೀದಿಸಿ ಎಂದು ಮುಸ್ಲಿಮರಿಗೆ ಪರೋಕ್ಷವಾಗಿ ಸೂಚನೆ ನೀಡಿದ್ದರಿಂದ ಹಲಾಲ್ ಮಾರುಕಟ್ಟೆಗೆ ಭಾರೀ ಬೇಡಿಕೆಯೂ ಬಂದಿತ್ತು.
ಈ ರೀತಿಯ ಹಲಾಲ್ ಟ್ರೇಡ್ ಮಾರ್ಕ್ ಕಳೆದ ಎರಡು ವರ್ಷಗಳಲ್ಲಿ ಭಾರತದ ಪ್ರಮುಖ ನಗರಗಳಿಗೂ ಎಂಟ್ರಿಯಾಗಿದೆ. ದೇಶದ ಕರಾವಳಿಯ ಭಾಗದಲ್ಲಿ ಕೇವಲ ಹಲಾಲ್ ಚಿಕನ್ ಎಂಬುದಷ್ಟೇ ಆಗಿದ್ದ ಹಲಾಲ್ ಅನ್ನುವ ಟ್ರೇಡ್ ಮಾರ್ಕಿನ ಇತರೇ ಸಾಮಗ್ರಿಗಳೂ ಮಾರುಕಟ್ಟೆಗೆ ಬಂದಿವೆ. ಬೆಂಗಳೂರು, ಹೈದರಾಬಾದ್, ಕೊಚ್ಚಿ, ಮುಂಬೈನಂತಹ ಪ್ರಮುಖ ನಗರಗಳಲ್ಲಿ ಮೊದಲಿಗೆ ಕಾಣಿಸಿಕೊಂಡ ಹಲಾಲ್ ಟ್ರೇಡ್ ಮಾರ್ಕ್ ಈಗ ಎಲ್ಲ ಕಡೆಯೂ ಕಂಡುಬರುತ್ತಿದೆ. ಹೈಪರ್ ಮಾರ್ಕೆಟ್ ರೀತಿಯ ಮಾಲ್ ಗಳಲ್ಲಿ ಹಲಾಲ್ ಟ್ರೇಡ್ ಮಾರ್ಕ್ ಇರುವಂತಹ ವಸ್ತುಗಳಷ್ಟೇ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಹಲಾಲ್ ಮಾರ್ಕ್ ಅನ್ನುವುದು ಸಾರ್ವತ್ರಿಕವೋ ಅನ್ನುವಂತಾಗಿತ್ತು.
ಆದರೆ ಈ ಹಲಾಲ್ ಮಾರ್ಕಿನ ಹಿನ್ನೆಲೆಯೇನು, ಆ ಸಾಮಗ್ರಿಗೂ ಹಲಾಲ್ ಗೂ ಏನು ಸಂಬಂಧ ಅನ್ನುವುದು ಜನರಿಗೆ ತಿಳಿದಿಲ್ಲ. ಮೂಲತಃ ಹಲಾಲ್ ಅನ್ನುವುದು ಮುಸ್ಲಿಮರ ಪಾಲಿಗೆ ಸ್ವೀಕಾರಾರ್ಹ ಅನ್ನುವ ಪದ ಅಷ್ಟೇ ಆಗಿತ್ತು. ಅದೇ ಪದವನ್ನು ಆಧರಿಸಿ, ಎಲ್ಲ ವಸ್ತುಗಳಿಗೂ ಹಲಾಲ್ ಅನ್ನೋದನ್ನು ಟ್ರೇಡ್ ಮಾರ್ಕ್ ಮಾಡಲಾಗಿತ್ತು. ಅದು ಇದ್ದರಷ್ಟೇ ಖರೀದಿಸಬೇಕೆಂಬ ಪರೋಕ್ಷ ನಿಯಂತ್ರಣದಿಂದಾಗಿ ನಿರ್ದಿಷ್ಟ ವರ್ಗದ ಜನರು ಬೆಂಬಲವನ್ನೂ ನೀಡಿದ್ದರು. ಹಾಗಾಗಿ ಹಲಾಲ್ ಟ್ರೇಡ್ ಮಾರ್ಕ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಐಎಸ್ಐ ಮಾರ್ಕ್ ಗಿಂತಲೂ ಹೆಚ್ಚು ಮೌಲ್ಯ ಕಂಡುಕೊಂಡಿದೆ. ನಿಜಕ್ಕಾದರೆ, ಹಲಾಲ್ ಅನ್ನುವುದನ್ನು ಎಲ್ಲ ಸಾಮಗ್ರಿಗಳಿಗೂ ಅನ್ವಯ ಮಾಡಬೇಕಿರಲಿಲ್ಲ. ಗಲ್ಫ್ ದೇಶಗಳಲ್ಲಿ ಮೊದಲಿಗೆ ಮುಸ್ಲಿಮರಿಗೆ ಸೇರಿದ ಕಂಪನಿಗಳು ಈ ಹಾಲ್ ಮಾರ್ಕ್ ಅನ್ನು ಶುರು ಮಾಡಿದ್ದವು. ಆಬಳಿಕ ಇತರೇ ಕಂಪನಿಗಳಿಗೂ ಹಲಾಲ್ ಮಾರ್ಕ್ ಅನುಸರಿಸುವುದು ಅನಿವಾರ್ಯ ಆಗಿತ್ತು. ಹಲಾಲ್ ಅನ್ನೋದರ ಅರ್ಥ ತಿಳಿಯದಿದ್ದರೂ ವ್ಯಾಪಾರದ ಕಾರಣಕ್ಕೆ ಟ್ರೇಡ್ ಮಾರ್ಕ್ ಹಾಕಲು ಶುರು ಮಾಡಿದ್ದವು.
ಹಲಾಲ್ ಟ್ರೇಡ್ ಮಾರ್ಕ್ ಹಾಕಲು ಶುರು ಮಾಡಿದ್ದರ ಹಿನ್ನೆಲೆಯೇನಂದ್ರೆ, ಆ ವಸ್ತುವಿನಲ್ಲಿ ಯಾವುದೇ ಹರಾಮಿ ವಸ್ತುಗಳನ್ನು ಬಳಸಿಲ್ಲ ಎಂದರ್ಥ. ಇಸ್ಲಾಮ್ ಪ್ರಕಾರ, ಅಸ್ವೀಕಾರಾರ್ಹ ವಸ್ತುಗಳನ್ನು ಬಳಸಿಲ್ಲ ಅನ್ನುವುದನ್ನು ಸೂಚ್ಯವಾಗಿ ಸೂಚಿಸಲು ಹಲಾಲ್ ಟ್ರೇಡ್ ಮಾರ್ಕ್ ಆರಂಭಿಸಲಾಗಿತ್ತು. ನಿಧಾನಕ್ಕೆ ಹಲಾಲ್ ಅನ್ನುವ ಮಾರ್ಕ್ ಮುಂದಿಟ್ಟು ಮುಸ್ಲಿಮ್ ಕಂಪನಿಗಳು ತಮ್ಮದೇ ಸಮುದಾಯದ ಮಾರುಕಟ್ಟೆಯನ್ನು ಸೆಳೆದುಕೊಳ್ಳಲು ಯಶಸ್ವಿಯಾಗಿದ್ದವು. ಅದನ್ನು ಕ್ರಮೇಣ ಭಾರತಕ್ಕೂ ವಿಸ್ತರಿಸಿದ್ದು ಹಲಾಲ್ ಮಾರ್ಕ್ ಇಟ್ಟುಕೊಂಡೇ ಸಮುದಾಯದ ಜನರ ವ್ಯಾಪಾರ, ವಹಿವಾಟನ್ನು ತಮ್ಮ ಕಂಪನಿಗಳಲ್ಲೇ ಪರೋಕ್ಷವಾಗಿ ನಿಯಂತ್ರಿಸುವ ಹುನ್ನಾರವನ್ನೂ ಹೊಂದಿತ್ತು. ಅದೀಗ ಹಿಂದು ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದ್ದು ಹಲಾಲ್ ಮಾರ್ಕ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
What is the reason behind Hallal ban in Karnataka an article by Headline Karnataka.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm