ಮದುವೆಯಾದ ನಾಲ್ಕೇ ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ನಟಿ ನಯನತಾರಾ ! 

09-10-22 07:59 pm       HK News Desk   ಸಿನಿಮಾ

ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ - ವಿಘ್ನೇಶ್‌ ದಂಪತಿ ಅವಳಿ ಮಕ್ಕಳಿಗೆ ತಂದೆ - ತಾಯಿಯಾಗಿದ್ದಾರೆ.

ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ - ವಿಘ್ನೇಶ್‌ ದಂಪತಿ ಅವಳಿ ಮಕ್ಕಳಿಗೆ ತಂದೆ - ತಾಯಿಯಾಗಿದ್ದಾರೆ.

ಬಾಡಿಗೆ ತಾಯ್ತನದಿಂದ ಇಬ್ಬರು ಪೋಷಕರಾಗಿದ್ದು, ಈ ಸಂತಸವನ್ನು ಸ್ವತಃ ವಿಘ್ನೇಶ್‌ ಶಿವನ್‌ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Nayanthara, Vignesh Shivan's wedding Highlights: Vignesh kisses Nayanthara  in first photos from wedding, shares mangalsutra and varmala moments |  Entertainment News,The Indian Express

ಈ ವರ್ಷದ ಜೂ.9 ರಂದು ನಟಿ ನಯನತಾರಾ ನಿರ್ದೇಶಕ ವಿಘ್ನೇಶ್‌ ಶಿವನ್‌ ತಮ್ಮ 7 ವರ್ಷದ ಪ್ರೇಮಕ್ಕೆ ಮದುವೆಯ ಮುದ್ರೆ ಒತ್ತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಹಾಬಲಿಪುರಂನ ಐಷಾರಾಮಿ ರೆಸಾರ್ಟ್‌ನ ಗಾಜಿನ ಮಂಟಪದಲ್ಲಿ ಗಣ್ಯರ ಸಮ್ಮುಖದಲ್ಲಿ ಇಬ್ಬರು ಮದುವೆಯಾಗಿದ್ದರು.

Vignesh Shivan & Nayanthara make their first official public appearance  after the wedding! - Viral clips - Tamil News - IndiaGlitz.com

ಇತ್ತೀಚಿಗೆ ಬ್ಯಾಂಕಾಕ್ ನಲ್ಲಿ ಜೋಡಿಯ ಹನಿಮೂನ್‌ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈಗ ಇಬ್ಬರು ತಂದೆ-ತಾಯಿಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ.

ನಯನತಾರಾ ಬಾಲಿವುಡ್‌ ನಲ್ಲಿ ʼಜವಾನ್‌ʼ ಚಿತ್ರದಲ್ಲಿ ಶಾರುಖ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಮುಂದಿನ ವರ್ಷ ರಿಲೀಸ್‌ ಆಗಲಿದೆ.

After years of staying together in a relationship, Nayanthara and Vignesh Shivan got married in a grand wedding four months ago. The duo have welcomed twin boys home and Vignesh Shivan posted the pictures of their new family members on his social media platform. Both Nayan and Vignesh are seen kissing the feet of the newborn twins. “Nayan & Me have become Amma & Appa. We are blessed with twin baby Boys.