ಬ್ರೇಕಿಂಗ್ ನ್ಯೂಸ್
12-10-22 02:40 pm Source: Vijayakarnataka ಸಿನಿಮಾ
'ಏಕ್ ಲವ್ ಯಾ' ನಂತರ 'ಜೋಗಿ' ಪ್ರೇಮ್ ಏನ್ ಮಾಡ್ತಾರೆ ಅಂತ ಈಗಾಗಲೇ ಗೊತ್ತಾಗಿದೆ. ಅವರೀಗ ನಟ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳೋದಕ್ಕೆ ಸಜ್ಜಾಗಿದ್ದಾರೆ. ಇದೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರಕ್ಕಾಗಿ 70ರ ದಶಕದ ಕಾಲಘಟ್ಟವನ್ನು ಮರುಸೃಷ್ಟಿ ಮಾಡಲಾಗುತ್ತಿದೆ. ಭರ್ಜರಿ ಸೆಟ್ ಹಾಕಿ ಚಿತ್ರೀಕರಣ ಮಾಡುವ ಪ್ಲ್ಯಾನ್ 'ಜೋಗಿ' ಪ್ರೇಮ್ ಅವರದ್ದು. ಈ ಮಧ್ಯೆ ಒಂದಷ್ಟು ಫೋಟೋಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್, ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರನ್ನು ಪ್ರೇಮ್ ಭೇಟಿಯಾಗಿದ್ದಾರೆ. ಅವರ ಜೊತೆಗಿನ ಫೋಟೋಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ. ಹಾಗಾದರೆ, ಈ ಸ್ಟಾರ್ ಕಲಾವಿದರು ಧ್ರುವ ಸರ್ಜಾ ಸಿನಿಮಾದಲ್ಲಿ ನಟಿಸುತ್ತಾರಾ?
ಈ ಸಿನಿಮಾದಲ್ಲಿ ಸಂಜಯ್ ದತ್ ಇರ್ತಾರಾ?
ಧ್ರುವ ನಟನೆಯ ಈ ಸಿನಿಮಾಗೆ ಪರಭಾಷೆಯ ಬಿಗ್ ಸ್ಟಾರ್‌ಗಳನ್ನು ಕರೆತರುವುದಕ್ಕೆ ಪ್ರೇಮ್ ಮುಂದಾಗಿದ್ದಾರೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಮೊದಲನೆಯದಾಗಿ ಸಂಜಯ್ ದತ್ ಅವರಿಗೆ ಅಪ್ರೋಚ್ ಮಾಡಿದ್ದ ಪ್ರೇಮ್, ಅವರಿಗೆ ಸ್ಕ್ರಿಪ್ಟ್ ನೀಡಿದ್ದರು. ಅದು ಅವರಿಗೂ ಕೂಡ ಇಷ್ಟವಾಗಿತ್ತು ಎಂಬ ಮಾಹಿತಿಯನ್ನು ಈ ಹಿಂದೆ ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ತಿಳಿಸಿದ್ದೆವು. ಇದೀಗ ಅದು ನಿಜವಾಗುವ ಸಾಧ್ಯತೆ ಬಲವಾಗಿದೆ. ಪ್ರೇಮ್ ಮತ್ತು ಸಂಜಯ್ ದತ್ ಒಟ್ಟಿಗೆ ಚರ್ಚೆ ಮಾಡುತ್ತಿರುವ ಹಲವು ಫೋಟೋಗಳು ಬಹಿರಂಗಗೊಂಡಿವೆ.

ಹಾಗೆಯೇ, ಮೋಹನ್‌ಲಾಲ್ ಅವರ ಜೊತೆಗೆ ಪ್ರೇಮ್ ಇರುವ ಫೋಟೋಗಳು ಕೂಡ ಬಹಿರಂಗವಾಗಿವೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮೋಹನ್‌ಲಾಲ್ ಜೊತೆಗೆ ಇರುವ ಫೋಟೋಗಳನ್ನು ಹಂಚಿಕೊಂಡಿರುವ ಪ್ರೇಮ್, 'ನನ್ನ ಭಾವನೆಗಳನ್ನು ವಿವರಿಸಲು ಸಾಧ್ಯವಿಲ್ಲ. ಮೋಹನ್‌ಲಾಲ್ ಭಾರತೀಯ ಚಿತ್ರರಂಗದ ಒಬ್ಬ ಸೂಪರ್ ಸ್ಟಾರ್. ಆದರೂ ಎಷ್ಟೊಂದು ಸರಳ ವ್ಯಕ್ತಿತ್ವ.. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಸಾರ್..' ಎಂದು ಬರೆದುಕೊಂಡಿದ್ದರು.
ಧ್ರುವ & ಪ್ರೇಮ್ ಕಾಂಬಿನೇಷನ್‌ನ ಹೊಸ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯು ಅ.20ರಂದು ಗೊತ್ತಾಗಲಿದೆ. ಅಂದೇ ಈ ಸಿನಿಮಾದ ಟೈಟಲ್ ಘೋಷಣೆ ಆಗಲಿದೆ. ಜೊತೆಗೆ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ ಅನ್ನೋ ಮಾಹಿತಿ ಬಹಿರಂಗಗೊಳ್ಳಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕಾಗಿ 70ರ ದಶಕವನ್ನು ನಿರ್ದೇಶಕ ಪ್ರೇಮ್ ರಿಕ್ರಿಯೇಟ್ ಮಾಡುತ್ತಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆಯಲ್ಲಿರುವ 20 ಎಕರೆ ಸ್ಥಳದಲ್ಲಿ ಭರ್ಜರಿ ಸೆಟ್, ಮೈಸೂರು ಲ್ಯಾಂಪ್ಸ್ ಒಳಗಡೆ ಒಂದು ಸೆಟ್, ಹೈದರಾಬಾದ್, ಮುಂಬೈನ ಕೆಲ ಸ್ಟುಡಿಯೋಗಳಲ್ಲಿ ಸೆಟ್ ಹಾಕಲಾಗುತ್ತಿದೆ. ಬಹುತೇಕ ಸಿನಿಮಾ ಸೆಟ್‌ನಲ್ಲೇ ಪೂರ್ತಿ ಚಿತ್ರೀಕರಣವಾಲಿದೆ.

ಇನ್ನು, 'ಜೋಗಿ' ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನ ಸಿನಿಮಾವು ಅಕ್ಟೋಬರ್ ತಿಂಗಳ ಅಂತ್ಯದಿಂದ ಶೂಟಿಂಗ್ ಆರಂಭಿಸಲಿದೆ. ಈ ಸಿನಿಮಾಗೆ 'ರಂಗಿತರಂಗ', 'ವಿಕ್ರಾಂತ್ ರೋಣ' ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಲಿದ್ದಾರೆ. ಈ ಚಿತ್ರಕ್ಕಾಗಿ ಧ್ರುವ ಸರ್ಜಾ 15 ಕೆ.ಜಿ. ತೂಕ ಕಡಿಮೆಯಾಗಬೇಕಿದೆ. ಇದುವರೆಗೂ ಯಾರೂ ನೋಡಿರದ ಲುಕ್‌ನಲ್ಲಿ ಧ್ರುವ ಕಾಣಿಸಿಕೊಳ್ಳುತ್ತಿದ್ದು, ಸಂಪೂರ್ಣ ರೆಟ್ರೋ ಸ್ಟೈಲ್‌ನಲ್ಲಿ ಇರಲಿದೆ.
Director Jogi Prem Meets Mohanlal And Sanjay Dutt For Dhruva Sarja Starrer New Movie.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm