ಶೀಘ್ರದಲ್ಲೇ ಮದುವೆ ಆಗ್ತಾರೆ ಪವಿತ್ರಾ ಲೋಕೇಶ್&ನರೇಶ್; ಹೊಸ ವರ್ಷಕ್ಕೆ ಗುಡ್‌ ನ್ಯೂಸ್ ನೀಡಿದ ಜೋಡಿ

31-12-22 01:14 pm       Source: Vijayakarnataka   ಸಿನಿಮಾ

ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಮದುವೆ ಆಗಲಿದ್ದಾರೆ ಎಂಬ ಚರ್ಚೆ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಇದೀಗ ಅದಕ್ಕೆಲ್ಲ ಅಧಿಕೃತ ಸ್ಪಷ್ಟನೆ ಸಿಕ್ಕಿದೆ.

ಕೆಲ ತಿಂಗಳ ಹಿಂದೆ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಓಡಾಡಿದ್ದವು. ಇಬ್ಬರು ಮದುವೆ ಆಗಿದ್ದಾರೆ, ಆಗಲಿದ್ದಾರೆ ಎಂಬೆಲ್ಲ ಚರ್ಚೆಗಳು ನಡೆದಿದ್ದವು. ಅಲ್ಲದೆ, ಸಾಕಷ್ಟು ಕಾಂಟ್ರವರ್ಸಿ ಕೂಡ ಆಗಿತ್ತು. ಆದರೆ ಇದೀಗ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ಅಧಿಕೃತವಾಗಿ ನಟ ನರೇಶ್ ಈ ಬಗ್ಗೆ ಸ್ಪಷ್ಪನೆ ನೀಡಿದ್ದು, ಶೀಘ್ರದಲ್ಲೇ ಅವರು ಪವಿತ್ರಾ ಲೋಕೇಶ್ ಅವರೊಂದಿಗೆ ಮದುವೆ ಆಗಲಿದ್ದಾರೆ. ಹೊಸ ವರ್ಷ ಇಂಥದ್ದೊಂದು ಗುಡ್ ನ್ಯೂಸ್ ಅನ್ನು ಅವರು ಹಂಚಿಕೊಂಡಿದ್ದಾರೆ.

Telugu Actor Naresh Announces His Marriage With Kannada Actress Pavitra Lokesh.