ಬ್ರೇಕಿಂಗ್ ನ್ಯೂಸ್
09-03-23 01:42 pm Source: news18 ಸಿನಿಮಾ
ಸಾಲು ಸಾಲು ಸಿನಿಮಾಗಳು ನಟ ಪ್ರಭಾಸ್ ಕೈ ಸೇರಿದೆ. ಬ್ಯುಸಿ ಶೂಟಿಂಗ್ ಶೆಡ್ಯೂಲ್ ನಡುವೆ ಮತ್ತಷ್ಟು ನಿರ್ಮಾಪಕರು ಪ್ರಭಾಸ್ ಡೇಟ್ಸ್ಗಾಗಿ ಕಾಯ್ತಿದ್ದಾರೆ. ಆದ್ರೆ ಕೆಲ ದಿನಗಳಿಂದ ಪ್ರಭಾಸ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಬಳಿಕ ಚೇತರಿಸಿಕೊಂಡಿದ್ರು. ಇದೀಗ ಮತ್ತೆ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ. ಪ್ರಭಾಸ್ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಪ್ರಭಾಸ್ ಆರೋಗ್ಯ ಹದಗಟ್ಟಿರುವ ಬಗ್ಗೆ ಅಭಿಮಾನಿಗಳು ಆತಂಕ ಹೊರಹಾಕಿದ್ದಾರೆ.
ಸದ್ಯಕ್ಕೆ ಎಲ್ಲಾ ಸಿನಿಮಾ ಶೂಟಿಂಗ್ನಿಂದ ಪ್ರಭಾಸ್ ಬ್ರೇಕ್ ತೆಗೆದುಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರಂತೆ. ಆರೋಗ್ಯ ಸುಧಾರಿಸದಿದ್ರೆ ಪ್ರಭಾಸ್ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬಂದಿದೆ. ಮಂಗಳವಾರ (ಫೆ.08) ಮಧ್ಯರಾತ್ರಿಯಿಂದಲೇ ಪ್ರಭಾಸ್ ಅವರ ಆರೋಗ್ಯ ಹದಗೆಟ್ಟಿತಂತೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಭಾಸ್ ಆರೋಗ್ಯದ ಬಗ್ಗೆ ಅಭಿಮಾನಿಗಳು ಕೂಡ ಆತಂಕ ಹೊರ ಹಾಕಿದ್ದಾರೆ. ಬಾಹುಬಲಿ ಶೀಘ್ರವೇ ಗುಣಮುಖರಾಗಿ ಎಂದು ಕಮೆಂಟ್ ಮಾಡ್ತಿದ್ದಾರೆ.
ಅನೇಕ ಸಿನಿಮಾಗಳು ಪ್ರಭಾಸ್ ಕೈಯಲ್ಲಿದೆ. ಪ್ಯಾನ್ ಇಂಡಿಯಾ ಚಿತ್ರ ರಾಜಾ ಡಿಲಕ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾರುತಿ ನಿರ್ದೇಶನ ಮಾಡ್ತಿದ್ದು. ಹಾರರ್ ಕಾಮಿಡಿ ಸಿನಿಮಾ ಇದಾಗಿದೆಯಂತೆ. ಈಗಾಗಲೇ ಈ ಚಿತ್ರದ ಶೇಕಡಾ 20ರಷ್ಟು ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ಬಹುಪಾಲು ಶೂಟಿಂಗ್ ಒಂದೇ ಮನೆಯಲ್ಲಿ ನಡೆಯುತ್ತದಂತೆ. ಆ ಮನೆಯ ಸೆಟ್ಗೆ ಸುಮಾರು 6 ಕೋಟಿ ಖರ್ಚು ಮಾಡಲಾಗಿದೆ.
ಈ ಚಿತ್ರಕ್ಕೆ ಪ್ರಭಾಸ್ ಸಂಭಾವನೆ ತೆಗೆದುಕೊಳ್ಳುತ್ತಿಲ್ಲ. 50 ಕೋಟಿ ಬಜೆಟ್ನಲ್ಲಿ ಚಿತ್ರ ಮುಗಿಯುವ ನಿರೀಕ್ಷೆ ಇದೆ. ಸತತ ಪ್ಯಾನ್-ಇಂಡಿಯನ್ ಚಿತ್ರಗಳೊಂದಿಗೆ ತನ್ನ ಶಕ್ತಿಯನ್ನು ತೋರಿಸುತ್ತಿರುವ ರೆಬೆಲ್ ಸ್ಟಾರ್, ಸ್ವಲ್ಪ ಚೇಂಜ್ ಅಂತ ಕಾಮಿಡಿ ಸಿನಿಮಾ ಮಾಡ್ತಿದ್ದಾರೆ. ಮತ್ತೊಂದೆಡೆ, ಅಭಿಮಾನಿಗಳು ಕೂಡ ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂವರು ನಾಯಕಿಯರು ನಟಿಸಲಿದ್ದಾರೆ ಎಂದು ವರದಿಯಾಗಿದೆ. ನಾಯಕಿಯರಾಗಿ ಶ್ರೀಲೀಲಾ, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಆಯ್ಕೆಯಾಗಿದ್ದಾರಂತೆ. ಈ ಚಿತ್ರಕ್ಕೆ ‘ರಾಜಾ ಡಿಲಕ್ಸ್’ ಎಂದು ಟೈಟಲ್ ನೀಡಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ನಲ್ಲಿಯೂ ಪ್ರತಿ ತಿಂಗಳು ಕೆಲವು ದಿನಗಳನ್ನು ಈ ಚಿತ್ರಕ್ಕೆ ಮೀಸಲಿಟ್ಟು ಆದಷ್ಟು ಬೇಗ ಮುಗಿಸಲು ಪ್ರಭಾಸ್ ಪ್ಲಾನ್ ಮಾಡಿದ್ದಾರೆ. ತಮನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಮಾರುತಿ ಕೂಡ 6 ತಿಂಗಳಲ್ಲಿ ಶೂಟಿಂಗ್ ಮುಗಿಸಿ ರಿಲೀಸ್ ಮಾಡುವ ಸಖತ್ ಪ್ಲಾನ್ ಮಾಡುತ್ತಿದ್ದಾರೆ. ಬುಜ್ಜಿಗಾಡು ಮತ್ತು ಏಕ್ ನಿರಂಜನ್ ಸಿನಿಮಾಗಳಲ್ಲಿ ಪ್ರಭಾಸ್ ಅವರ ಕಾಮಿಡಿ ಚೆನ್ನಾಗಿ ಕೆಲಸ ಮಾಡಿದೆ. ಆದರೆ ಸಿನಿಮಾಗಳು ಹಿಟ್ ಆಗಲಿಲ್ಲ. ಆದರೆ ರೆಬೆಲ್ ಸ್ಟಾರ್ ಮಾರುತಿ ಸಿನಿಮಾದ ಮೂಲಕ ಹಿಟ್ ನಿರೀಕ್ಷೆಯಲ್ಲಿದ್ದಾರೆ. ಪ್ರಭಾಸ್ ಅಭಿನಯದ ಮತ್ತೊಂದು ಅದ್ಧೂರಿ ಆಕ್ಷನ್ ಚಿತ್ರ ಸಲಾರ್. ಈ ಚಿತ್ರವನ್ನು ಕೆಜಿಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಭಾರೀ ನಿರೀಕ್ಷೆಗಳ ನಡುವೆ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್ ಹೈದರಾಬಾದ್ ನಲ್ಲಿ ಶರವೇಗದಲ್ಲಿ ಸಾಗುತ್ತಿದೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆಯಂತೆ. ಅದರ ಭಾಗವಾಗಿ ಸಲಾರ್ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಇದೇ ಮಾರ್ಚ್ ನಲ್ಲಿಯೇ ಮುಗಿಸಲು ಪ್ರಭಾಸ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
prabhas suffering from some health problems a new rumour goes viral.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm