ಜೂ.ಚಿರುವನ್ನು ನೋಡಲು ಕೇರಳದಿಂದ ಬಂದ ಸ್ಟಾರ್ ದಂಪತಿ!!!

25-10-20 04:19 pm       Headline Karnataka News Network   ಸಿನಿಮಾ

ಮಾಲಿವುಡ್ ನ ಸ್ಟಾರ್ ದಂಪತಿಗಳಾದ ನಜೀಮ್ ಹಾಗೂ ಫಹಾದ್ ಫಾಸಿಲ್ ರವರು ಇಂದು ಮೇಘನಾ ಮಗುವನ್ನು ಎತ್ತಿ ಮುದ್ದಾಡಲು ಬೆಂಗಳೂರಿಗೆ ಬಂದಿದ್ದಾರೆ.

ಬೆಂಗಳೂರು, ಅಕ್ಟೋಬರ್ .25 : ಮೇಘನಾ ಪುತ್ರನನ್ನು ಕಾಣಲು ಚೆನ್ನೈನಿಂದ ಅರ್ಜುನ್ ಸರ್ಜಾ ದಂಪತಿ ಹಾಗೂ ಪುತ್ರಿ ಐಶ್ವರ್ಯಾ ನಿನ್ನೆ ಆಗಮಿಸಿದ್ದರು. ಇಂದು ಕೇರಳದಿಂದ ಸ್ಟಾರ್ ದಂಪತಿ ಮೇಘನಾ ಮಗುವನ್ನು ಎತ್ತಿ ಮುದ್ದಾಡಲು ಬಂದಿದ್ದಾರೆ.

ಮೇಘನಾ ಆಪ್ತ ಸ್ನೇಹಿತರಾದ ನಜ್ರಿಯಾ ನಜೀಮ್ ಫಹಾದ್ ಫಾಸಿಲ್ ಬೆಂಗಳೂರಿಗೆ ಆಗಮಿಸಿ ಮೇಘನಾ ಆರೋಗ್ಯ ವಿಚಾರಿಸಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯ ವಿಚಾರಿಸಿದ ನಂತರ ನಿರ್ದೇಶಕ ಪನ್ನಗಾಭರಣ ಜತೆ ನಜ್ರಿಯಾ ನಜೀಮ್-ಫಹಾದ್ ಫಾಸಿಲ್ ಚಿರು ಸರ್ಜಾ ಸಮಾಧಿಗೆ ತೆರಳಿದ್ದಾರೆ. ಸಮಾಧಿಗೆ ಭೇಟಿ ನೀಡಿದ ನಂತರದಲ್ಲಿ ಕೇರಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಮಲಯಾಳಂ ನ ಹಲವು ಸಿನಿಮಾಗಳಲ್ಲಿ ನಟಿಸಿದ ಮೇಘನಾ ರಾಜ್ ಗೆ ಮಲಯಾಳಂ ಸ್ಟಾರ್ ನಟಿ ನಾಜರಿಯಾ ಆಪ್ತ ಗೆಳತಿಯಾಗಿದ್ದಾರೆ.