ಡ್ರಗ್ಸ್ ಖರೀದಿಸುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಿರುತೆರೆ ನಟಿ!!

26-10-20 10:43 am       Headline Karnataka News Network   ಸಿನಿಮಾ

ಮಾದಕವಸ್ತುಗಳ ಮಾರಾಟ ಮತ್ತು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಆಂಕರ್ ಪ್ರೀತಿಕಾ ಚೌವ್ಹಾಣ್ ರನ್ನು ಮುಂಬೈನ ಮಾದಕ ವಸ್ತು ನಿಯಂತ್ರಣ ತಂಡದ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಮಹಾರಾಷ್ಟ್ರ , ಅಕ್ಟೋಬರ್. 26 : ಡ್ರಗ್​​ ಸಾಗಿಸುತ್ತಿದ್ದ ಆರೋಪದಡಿ ಕಿರುತರೆ ನಟಿ ಸೇರಿ ಇಬ್ಬರನ್ನು ಮುಂಬೈನ ವರ್ಸೋವಾದಲ್ಲಿ ರೆಡ್​ಹ್ಯಾಂಡ್ ಆಗಿ ​ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ಬಂಧಿಸಿದೆ.

ಪ್ರಖ್ಯಾತ ಟಿವಿ ನಟಿ ಪ್ರೀತಿಕಾ ಚೌಹಾಣ್ ಮಾದಕ ವಸ್ತು ಮಾರಾಟಗಾರನಿಂದ ಗಾಂಜಾ ಖರೀದಿಸಬೇಕಾದರೆ ನೇರವಾಗಿ ಎನ್‌ಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಮೂಲತಃ ಹಿಮಾಚಲ ಪ್ರದೇಶದ ಪ್ರೀತಿಕಾ 2015ರಿಂದ ಸೀರಿಯಲ್‌ಗಳಲ್ಲಿ ನಟಿಸಲು ಆರಂಭಿಸಿದ್ದರು.

'ಸಾವಧಾನ್ ಇಂಡಿಯಾ', 'ದೇವೋ ಕೆ ದೇವ್ ಮಹದೇವ್', 'ಸಂಕಟ ಮೋಚನ ಮಹಾಬಲಿ ಹನುಮಾನ್' ಮೊದಲಾದ ಕಿರುತೆರೆ ಶೋ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್ ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಬಿ. ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.

ವಿವಿಧ ಕಡೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದು, ಇದೇ ವೇಳೆ ಪ್ರೀತಿಕಾ ಚೌಹಾಣ್ ಬಳಿ 99 ಗ್ರಾಂ ಡ್ರಗ್ಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.