ಸೌತ್ ಬ್ಯೂಟಿ ಕಾಜಲ್ ಅಗರ್ವಾಲ್ ಗೆ ಮದುವೆ ಸಂಭ್ರಮ!!

30-10-20 09:18 am       Headline Karnataka News Network   ಸಿನಿಮಾ

ದಕ್ಷಿಣ ಭಾರತ​ದ ಸಿನಿಮಾ ಇಂಡಸ್ಟ್ರಿಯಲ್ಲಿ ಮುದ್ದಾದ‌ ನಟನೆಯಿಂದ ಗಮನ ಸೆಳೆದಿರುವ ನಟಿ ಕಾಜಲ್​ ಅಗರ್ವಾಲ್‌​,​ ಹಸೆಮಣೆ ಏರುವ ಖುಶಿಯಲ್ಲಿದ್ದಾರೆ.

ಮುಂಬೈ, ಅಕ್ಟೋಬರ್.30 : ಟಾಲಿವುಡ್ ಬೆಡಗಿ ಕಾಜಲ್ ಅಗರ್ವಾಲ್ ಇಂದು ಹಸಮಣೆ ಏರುವ ಖುಷಿಯಲ್ಲಿದ್ದಾರೆ. 

ಕಾಜಲ್ ರನ್ನು​​​ ಮದುವೆಯಾಗುತ್ತಿರುವ ಗೌತಮ್​ ಕಿಚ್ಲು ಉದ್ಯಮಿಯಾಗಿದ್ದು, ಈ ಇಬ್ಬರು ಬಹಳ ದಿನಗಳಿಂದ ಸ್ನೇಹಿತರಾಗಿದ್ದರು. ಅಭಿಮಾನಿಗಳಿಗೆ ತಿಳಿಸದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಾಜಲ್​​ ಅವರಿಗೆ ಗೌತಮ್​​ ಬಾಳಸಂಗಾತಿ ಆಗಲಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿದ್ದು, ನಾನಿನ್ನೂ ಕೇವಲ ಎರಡು ದಿನವಷ್ಟೇ ಮಿಸ್​ ಆನಂತ ರ ಮಿಸಸ್​​​ ಕಾಜಲ್​ ಅಗರ್​ವಾಲ್​ ಆಗಿರ್ತೀನಿ ಎಂದಿದ್ದರು.

ವಿವಾಹ ಪೂರ್ವ ಉತ್ಸವಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು  ಕಾಜಲ್ ಹಳದಿ ಉಡುಪಿನಲ್ಲಿ ಮಿಂಚುತ್ತಿದ್ದಾರೆ. ಮನೆಯ ಒಳಾಂಗಣ ವಿನ್ಯಾಸ ಕೂಡ ನೋಡುಗರ ಗಮನ ಸೆಳೆಯುತ್ತಿದೆ ಇಂದು ಮುಂಬೈನಲ್ಲಿ ನಟಿ ಕಾಜಲ್ ಮದುವೆ ನಡೆಯಲಿದ್ದು, ಕುಟುಂಬದ ಕೆಲವೇ ಸದಸ್ಯರು ಈ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿದೆ.