ಬ್ರೇಕಿಂಗ್ ನ್ಯೂಸ್
31-07-23 01:09 pm Source: Filmy Beat kannada ಸಿನಿಮಾ
ಸದ್ಯ ಕನ್ನಡ ಚಿತ್ರರಂಗಕ್ಕೆ ಹಲವಾರು ಯುವ ನಟರು ಕಾಲಿಟ್ಟಿದ್ದು, ಕಳೆದ ದಶಕದಲ್ಲಿ ಚಿತ್ರರಂಗಕ್ಕೆ ಇದೇ ರೀತಿ ಕಾಲಿಟ್ಟಿದ್ದ ಯುವ ನಟರಲ್ಲಿ ಕೆಲವರು ಚಿತ್ರರಂಗದ ಸ್ಟಾರ್‌ಗಳಾಗಿ ಗಟ್ಟಿಯಾಗಿ ಬೇರೂರಿದ್ದಾರೆ. ಅಂತಹ ಸ್ಟಾರ್ ನಟರ ಸಾಲಿಗೆ ಸೇರುವ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಸದ್ಯ ಸ್ಟಾರ್ ಆಗಿ ಸದ್ದು ಮಾಡುತ್ತಿರುವ ಧ್ರುವ ಸರ್ಜಾ ಚಿತ್ರರಂಗಕ್ಕೆ ಕಾಲಿಡುತ್ತಿರುವ ಯುವ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಹೌದು, ಯುವ ಚಿತ್ರದ ಚಿತ್ರೀಕರಣದ ಸೆಟ್‌ಗೆ ಭೇಟಿ ನೀಡಿರುವ ಧ್ರುವ ಸರ್ಜಾ ಯುವ ಚಿತ್ರತಂಡದ ಜತೆ ಮಾತನಾಡಿದ್ದಾರೆ. ಧ್ರುವ ಸರ್ಜಾ ಯುವ ಚಿತ್ರೀಕರಣದ ಸೆಟ್‌ನಲ್ಲಿ ಚಿತ್ರದ ನಾಯಕ ಯುವ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಅವರ ಜತೆ ಚರ್ಚೆ ನಡೆಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸದ್ಯ ಯುವ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಇತ್ತೀಚೆಗಷ್ಟೆ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕ್‌ನಾಥ್ ಚಿತ್ರದ ದೃಶ್ಯಗಳನ್ನು ಹೊಗಳಿ ಟ್ವೀಟ್ ಮಾಡಿ ಸಂತೋಷ್ ಆನಂದ್‌ರಾಮ್ ಅವರನ್ನು ಹೊಗಳುವ ಮೂಲಕ ಚಿತ್ರದ ರೆಕಾರ್ಡಿಂಗ್ ಕೆಲಸಗಳೂ ಸಹ ಭರದಿಂದ ಸಾಗುತ್ತಿದೆ ಎಂಬುದನ್ನು ತಿಳಿಸಿದ್ದರು. ಅತ್ತ ಧ್ರುವ ಸರ್ಜಾ ಮಾರ್ಟಿನ್ ಚಿತ್ರದಲ್ಲಿ ಬ್ಯುಸಿ ಇದ್ದು, ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿಯೂ ಸಹ ಬಣ್ಣ ಹಚ್ಚಿದ್ದಾರೆ.
ಅಜನೀಶ್ ಬಿ ಲೋಕನಾಥ್ ಟ್ವೀಟ್:
ಟೈಟಲ್, ಫಸ್ಟ್ ಲುಕ್ ಮೂಲಕ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕಿದ್ದ ಯುವ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ವರ್ಷಾಂತ್ಯದಲ್ಲಿ ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ 22ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲು ಕಾಯುತ್ತಿದೆ. ಇಷ್ಟರ ಮಟ್ಟಿಗೆ ಟಾಕ್ ಹುಟ್ಟಿಹಾಕಿರುವ ಯುವ ಚಿತ್ರದ ಕೆಲಸಗಳನ್ನು ಕಂಡ ಸಿನಿ ಕಲಾವಿದರು ಚಿತ್ರದ ಬಗ್ಗೆ ಹೇಳಿದ ಮಾತುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿವೆ.
ಈ ಹಿಂದೆ ನಟ ರವಿಶಂಕರ್ ಗೌಡ ಯುವ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿ ಅಲ್ಲಿ ಯುವ ರಾಜ್‌ಕುಮಾರ್ ನಟನೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ರೀತಿ ಎರಡು ವಾರಗಳ ಹಿಂದಷ್ಟೇ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಸಹ ಯುವ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಅಂದಹಾಗೆ ಅಜನೀಶ್ ಬಿ ಲೋಕನಾಥ್ ಯುವ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಈ ಚಿತ್ರದ ಕೆಲ ದೃಶ್ಯಗಳಿಗೆ ಹಿನ್ನೆಲೆ ಸಂಗೀತ ಸಂಯೋಜಿಸುವ ವೇಳೆ ಆ ದೃಶ್ಯಗಳನ್ನು ವೀಕ್ಷಿಸಿ ಮನ ಸೋತಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅಜನೀಶ್ ಬಿ ಲೋಕನಾಥ್ "ಯುವ ಚಿತ್ರದ ಅದ್ಭುತ ದೃಶ್ಯಗಳನ್ನು ವೀಕ್ಷಿಸಿ ಬೆರಗಾಗಿದ್ದೇನೆ. ಚಿತ್ರದ ದೃಶ್ಯಗಳು ಆಕರ್ಷಕವಾಗಿವೆ ಮತ್ತು ಯುವ ರಾಜ್‌ಕುಮಾರ್ ಅವರ ಅಭಿನಯ ಅದಕ್ಕೆ ಶಕ್ತಿ ತುಂಬಿದೆ. ನಾನು ಈಗಷ್ಟೇ ನೋಡಿದ ಅದ್ಭುತ ದೃಶ್ಯಗಳನ್ನು ನೀವೆಲ್ಲರೂ ಆನಂದಿಸಲು ಕಾತರರಾಗಿ ಕಾದಿರಿ. ನಿರ್ದೇಶಕ ಸಂತೋಷ್ ಆನಂದ್‌ರಾಮ್ ವಿಷನ್‌ಗೆ ಖುದೋಸ್" ಎಂದು ಬರೆದುಕೊಂಡಿದ್ದರು.
Action prince Dhruva sarja visits the sets of yuva rajkumars yuva movie
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm