ಬ್ರೇಕಿಂಗ್ ನ್ಯೂಸ್
03-08-23 04:16 pm Source: News18 Kannada ಸಿನಿಮಾ
ರಜನೀಕಾಂತ್ ಅವರು ಜೈಲರ್ನಲ್ಲಿ ಸೂಪರ್ ಆಗಿ ಕಾಣಿಸಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾದ ಟ್ರೈಲರ್ ಬುಧವಾರ ರಿಲೀಸ್ ಆಗಿದ್ದಾರೆ. ತಲೈವಾ ಫ್ಯಾನ್ಸ್ ಈ ಟ್ರೈಲರ್ಗೆ ಫಿದಾ ಆಗಿದ್ದಾರೆ. ಈ ಟ್ರೈಲರ್ ಮೂಲಕ ರಜನಿ ಬೆಳ್ಳಿತೆರೆಯ ವೈಭವ ಮತ್ತೊಮ್ಮೆ ರಿವೀಲ್ ಆಗಿದೆ. ಸ್ಟೋರಿ ಲೈನ್ ಹಾಗೂ ವಿಶುವಲ್ಸ್ ಪ್ರೇಕ್ಷಕರನ್ನು ಫಿದಾ ಮಾಡಿದೆ. ಆ್ಯಕ್ಷನ್ ಸೀಕ್ವೆನ್ಸ್ ಹಾಗೂ ಸಿನಿಮಾಟೊಗ್ರಫಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ರಜನೀಕಾಂತ್ ಅವರು ಎಂದಿನಂತೆ ಬ್ರಿಲಿಯೆಂಟ್ ಆಗಿ ಕಾಣಿಸಿದ್ದಾರೆ. ಈ ಸಿನಿಮಾದಲ್ಲಿ ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ, ವಿನಾಯಕನ್ ನಟಿಸಿದ್ದಾರೆ. ಈ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಅನಿರುಧ್ದ್ ಸಂಗೀತ ಒದಗಿಸಿದ್ದಾರೆ.

ಶಿವಣ್ಣ ರಜನೀಕಾಂತ್ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಲಿವುಡ್ ನಟ ಮೋಹನ್ಲಾಲ್ ಕೂಡಾ ನಟಿಸಿದ್ದಾರೆ. ಆದರೆ ಶಿವಣ್ಣ ಅವರನ್ನು ಟ್ರೈಲರ್ನಲ್ಲಿ ಎಲ್ಲಿಯೂ ತೋರಿಸಿಲ್ಲ. ಹಾಗಾಗಿ ಕನ್ನಡ ಸಿನಿಪ್ರೇಮಿಗಳು ಶಿವಣ್ಣ ಎಲ್ಲಿ ಎಂದು ಕೇಳುತ್ತಿದ್ದಾರೆ.
ಕಲಾವಿದರು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿರುವುದು ಮುಖ್ಯ. ದೊಡ್ಡ ಚಿತ್ರಗಳಲ್ಲಿ, ಪ್ರತಿ ನಾಯಕನ ಸ್ಕ್ರೀನ್ ಟೈಮ್ ಬಗ್ಗೆ ಪ್ರೇಕ್ಷಕರಿಗೆ ಕುತೂಹಲವಿರುತ್ತದೆ. ಆದರೆ ಕೆಲವೊಮ್ಮೆ ದೊಡ್ಡ ನಟರು ಸಹ ಸಣ್ಣ ಪಾತ್ರಗಳಿಗೆ ಒಪ್ಪುತ್ತಾರೆ. ಪ್ರತಿಯೊಬ್ಬರಿಗೂ ಇದರ ಹಿಂದೆ ಬೇರೆ ಬೇರೆ ಕಾರಣಗಳಿರುತ್ತವೆ. ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾದಲ್ಲಿ ಕೇವಲ 11 ನಿಮಿಷ ನಟಿಸಿರುವ ಶಿವಣ್ಣ ಅವರಿಗೆ 61 ವರ್ಷ ವಯಸ್ಸಾಗಿದೆ. ಆದರೆ ಕಾಲಿವುಡ್ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ ಸ್ಯಾಂಡಲ್ವುಡ್ ಸ್ಟಾರ್. ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಒಬ್ಬ ನಟನಿಗೆ ಕೇವಲ 11 ನಿಮಿಷಗಳ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ.

ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಶಿವ ರಾಜ್‌ಕುಮಾರ್ ಅವರು ಮಾತ್ರವಲ್ಲದೆ ಕಂಪ್ಲೀಟ್ ಸ್ಟಾರ್ ಮೋಹನ್ ಲಾಲ್ ಕೂಡಾ ಜೈಲರ್ನಲ್ಲಿ ನಟಿಸಿದ್ದಾರೆ. ಜೈಲರ್’ ಚಿತ್ರದಲ್ಲಿ ಶಿವ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಜೈಲರ್' ಚಿತ್ರದಲ್ಲಿ ತಮ್ಮ ಪಾತ್ರ ಕೇವಲ 11 ನಿಮಿಷಗಳು ಎಂದು ಶಿವ ಇತ್ತೀಚೆಗೆ ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನೆಲ್ಸನ್ ಅವರಿಗೆ ಚಿತ್ರದ ಕಥೆ ಹೇಳಲು ಬಂದಾಗ ಅವರು ಅದನ್ನು ಕೇಳದೆ ಚಿತ್ರ ಮಾಡಲು ಒಪ್ಪಿಕೊಂಡರು. ಕನ್ನಡ ಚಿತ್ರರಂಗದ ಹೆಸರಾಂತ ನಟ ಶಿವಣ್ಣ ‘ಜೈಲರ್’ ಚಿತ್ರಕ್ಕೆ ಯೆಸ್ ಅಂದಿದ್ದು ತಲೈವರ್ ಸಿನಿಮಾ ಎಂಬ ಕಾರಣಕ್ಕೆ. ರಜನಿಕಾಂತ್ ಜೊತೆ ಸಿನಿಮಾ ಮಾಡುವ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದ ಅವರು, ಪಾತ್ರ ಎಷ್ಟು ನಿಮಿಷವಾದರೂ ಪರವಾಗಿಲ್ಲ ಎಂದಿದ್ದಾರೆ.
Jailer Movie Trailer Released Sandalwood views asks where is Shivarajkumar.
03-12-25 03:01 pm
HK News Desk
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
03-12-25 07:19 pm
HK News Desk
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
ಅಫ್ಘಾನಿಸ್ತಾನದಲ್ಲಿ ಒಂದೇ ಕುಟುಂಬದ 13 ಜನರನ್ನು ಕೊಂ...
03-12-25 03:04 pm
ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್...
02-12-25 11:19 pm
03-12-25 10:35 pm
Mangalore Correspondent
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
K. C. Venugopal, Mangalore, Dk Shivakumar: ಮಂ...
03-12-25 11:54 am
Bjp, Arun Puthila, Puttur, Mangalore: ಬಿಜೆಪಿ...
01-12-25 09:25 pm
03-12-25 01:41 pm
Bangalore Correspondent
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm
Udupi Rape, Crime, Hindu Jagaran Vedike: ಮದುವ...
01-12-25 04:50 pm