ಬ್ರೇಕಿಂಗ್ ನ್ಯೂಸ್
09-11-20 03:16 pm Headline Karnataka News Network ಸಿನಿಮಾ
ಬೆಂಗಳೂರು, ನವೆಂಬರ್ 09: ಕನ್ನಡ ಚಿತ್ರರಂಗ ಎಂದೂ ಮರೆಯದ, ಮರೆಯಲಾಗದ ನಟ, ನಿರ್ದೇಶಕ, ಕಥೆಗಾರ ಶಂಕರಣ್ಣ. ನ.9 ಬಂತೂಂದ್ರೆ ತಮ್ಮ 36ರ ಹರೆಯದಲ್ಲೇ ಅಗಲಿ ಹೋದ ಶಂಕರಣ್ಣ ನೆನಪಾಗುತ್ತಾರೆ. ಶಂಕ್ರಣ್ಣ ಬದುಕಿರುತ್ತಿದ್ದರೆ ಇಂದಿಗೆ 66ನೇ ಹುಟ್ಟುಹಬ್ಬ. ಆದರೆ, ಮೊಗ್ಗರಳಿ ಹೂವಾಗಿ ನಳನಳಿಸುತ್ತಿದ್ದಾಗಲೇ ಅಕಾಲ ಮೃತ್ಯು ಬಂದೆರಗಿದ್ದು ಕನ್ನಡ ಚಿತ್ರಪ್ರೇಮಿಗಳ ಪಾಲಿಗೆ ಬರಸಿಡಿಲು. ಭಾರತ ಚಿತ್ರರಂಗ ಕಂಡ ಅತ್ಯದ್ಭುತ ನಟ, ನಿರ್ದೇಶಕನ ನೆನೆಯುವುದು ಕನ್ನಡಿಗರೆಲ್ಲರ ಕರ್ತವ್ಯ. ಹಾಗಾಗಿ ಅವರ ಬಗೆಗೊಂದಿಷ್ಟು.
ನವೆಂಬರ್ 9, 1954 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್‌ನಾಗ್ ಹುಟ್ಟಿದ್ದು. ನಕ್ಷತ್ರ ಪ್ರಕಾರ ಹೆತ್ತವರು ಇಟ್ಟಿದ್ದ ಹೆಸರು ಅವಿನಾಶ್ ಎಂದು. ಆದರೆ, ತಂದೆ ಹೊನ್ನಾವರದ ನಾಗರಕಟ್ಟೆಯವರಾದ ಸದಾನಂದ, ಮಗನನ್ನು ಪ್ರೀತಿಯಿಂದ ಭವಾನಿ ಶಂಕರ್ ಎಂದು ಕರೆಯುತ್ತಿದ್ದರು. ಹೀಗೆ ಅವಿನಾಶ್ ಯಾನೆ ಭವಾನಿ ಶಂಕರ್ ಪಿಯುಸಿ ಕಲಿತು ಮುಂಬೈಗೆ ತೆರಳಿದ್ದರು. ಆಗೆಲ್ಲಾ ಮುಂಬೈ ದೊಡ್ಡ ಶಹರವಾಗಿತ್ತು. ಕರಾವಳಿಯ ಹೆಚ್ಚಿನ ಮಂದಿ ಉದ್ಯೋಗಕ್ಕಾಗಿ ಮುಂಬೈಗೆ ಹೋಗುವುದು ವಾಡಿಕೆಯಾಗಿತ್ತು.
ಶಂಕರ್ ಕೂಡ ಉದ್ಯೋಗಕ್ಕಾಗಿಯೇ ಮುಂಬೈಗೆ ತೆರಳಿದ್ದರು. ಅಣ್ಣ ಅನಂತ್ ಕೂಡ ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ಹಾಗೆಯೇ ತಮ್ಮನಿಗೂ ಬ್ಯಾಂಕ್ ಉದ್ಯೋಗ ಪಡೆಯಲು ಕಷ್ಟವಾಗಲಿಲ್ಲ. ಆದರೆ, ಅಲ್ಲಿರುವಾಗಲೇ ಮುಂಬೈನಲ್ಲಿ ಆಗಲೇ ಪ್ರಚಲಿತ ಆಗಿದ್ದ ಮರಾಠಿ ರಂಗಭೂಮಿ ಶಂಕರ್ ಅವರನ್ನು ಆಕರ್ಷಿಸಿತ್ತು. ತಮಗರಿವಿಲ್ಲದೇ ರಂಗಭೂಮಿಯತ್ತ ಆಸಕ್ತರಾದ ಶಂಕ್ರಣ್ಣ ತನ್ನ ಗೆಳೆಯರ ಜೊತೆ ಸೇರಿ ತನ್ನ ಸಣ್ಣ ಪ್ರಾಯದಲ್ಲೇ ಮರಾಠಿ ಭಾಷೆಯಲ್ಲಿ ಚಿತ್ರಕತೆ ಬರೆದಿದ್ದರು. 22 ಜೂನ್, 1897 ಎನ್ನುವ ಆ ಚಿತ್ರ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿತ್ತು.
ಹೀಗಿರುವಾಗಲೇ ಮುಂಬೈನಲ್ಲಿ ಅದಾಗಲೇ ನೆಲೆಯೂರಿದ್ದ ಗಿರೀಶ್ ಕಾರ್ನಾಡ್ ಪರಿಚಯವಾಗಿ, ಶಂಕರ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಎಳೆತಂದರು. 1978ರಲ್ಲಿ ಕಾರ್ನಾಡರು ನಿರ್ದೇಶಿಸಿದ್ದ ಒಂದಾನೊಂದು ಕಾಲದಲ್ಲಿ ಎನ್ನುವ ಕನ್ನಡ ಚಿತ್ರದಲ್ಲಿ ಶಂಕರ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಅಭಿನಯಿಸಿದ ಮೊದಲ ಚಿತ್ರದಲ್ಲೇ ಶಂಕರ್ ಅವರಿಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದ್ದು ಅವರನ್ನು ಕನ್ನಡ ಚಿತ್ರರಂಗದಲ್ಲಿ ನಟನೆ ಮತ್ತು ನಿರ್ದೇಶನದತ್ತ ಆಸಕ್ತಿ ಬೆಳೆಯುವಂತೆ ಮಾಡಿತ್ತು. ಅತ್ತ ಮುಂಬೈ, ಇತ್ತ ಬೆಂಗಳೂರು ಎರಡು ಕಡೆಯೂ ತಿರುಗಾಟ. ಒಂದು ದಿನವೂ ಪುರುಸೊತ್ತಿಲ್ಲದ ಚಿತ್ರಯಾನದಲ್ಲಿ ತೊಡಗಿದ ಶಂಕರಣ್ಣ ಬಹುಬೇಗನೆ ಕನ್ನಡ ಚಿತ್ರರಂಗದಲ್ಲಿ ಅತಿ ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದರು. ಆನಂತರದ ಕೇವಲ 12 ವರ್ಷಗಳಲ್ಲಿ ಅವರು ಸುಮಾರು 92 ಚಿತ್ರಗಳಲ್ಲಿ ನಟಿಸಿದರು. ಕನ್ನಡದ ಇತಿಹಾಸದಲ್ಲಿ ಮೊದಲ ಬಾರಿಗೆ ತ್ರಿಪಾತ್ರದ ಅಭಿನಯವನ್ನೂ ಚಾಲ್ತಿಗೆ ತಂದಿದ್ದು ಶಂಕರಣ್ಣ (ಚಿತ್ರ -ಗೆದ್ದ ಮಗ).
ಈ ನಡುವೆ, ತಮ್ಮ ಸೋದರ ಅನಂತ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದು ಪಾತ್ರ ಮಾಡಿಸಿದ್ದೂ ಶಂಕರಣ್ಣ. ನಟನೆ, ನಿರ್ದೇಶನ, ನಿರ್ಮಾಣ ಈ ಮೂರೂ ಹೊಣೆಯನ್ನು ಏಕಕಾಲದಲ್ಲಿ ನಿಭಾಯಿಸಿದ್ದು ಶಂಕರಣ್ಣ. ತಂದೆಯ ಸರ್ ನೇಮ್ ಜೊತೆಗಿದ್ದ ನಾಗರಕಟ್ಟೆ ಹೆಸರು ತಮ್ಮ ಹೆಸರಿನ ಜೊತೆಗೂ ಸೇರಿಸಿಕೊಂಡಿದ್ದರು. ಆದರೆ, ಅದನ್ನು ಒಬ್ಬರು ಸ್ನೇಹಿತರ ಸಲಹೆಯಂತೆ ತಮ್ಮ ಹೆಸರಿನ ಜೊತೆಗೆ ನಾಗ್ ಅಂತಷ್ಟೇ ಇಟ್ಟುಕೊಂಡರು. 80ರ ದಶಕದಲ್ಲಿ ಅನಂತ್ – ಶಂಕರ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಸಾಧಿಸಿದ್ದು ಯಾವತ್ತೂ ಮರೆಯಲಾಗದ್ದು. ಅನಂತ್, ವಿಷ್ಣುವರ್ಧನ್ ಜೊತೆ ಸೇರಿ ಚಿತ್ರಗಳನ್ನು ಮಾಡುತ್ತಿದ್ದ ಶಂಕರ್ ನಾಗ್ ಪಾಲಿಗೆ ಆವತ್ತು ಸರಿಸಾಟಿಯಾದ ಇನ್ನೊಬ್ಬ ವ್ಯಕ್ತಿಯೇ ಕನ್ನಡ ಚಿತ್ರರಂಗದಲ್ಲಿ ಇರಲಿಲ್ಲ. ಶಂಕರ್ ಮತ್ತೊಂದಷ್ಟು ಕಾಲ ಇರುತ್ತಿದ್ದರೆ ಭಾರತದ ಚಿತ್ರರಂಗದಲ್ಲಿ ಕನ್ನಡವನ್ನು ಅಂತಾರಾಷ್ಟ್ರೀಯ ನೆಲೆಯಲ್ಲಿ ಮಿನುಗುವಂತೆ ಮಾಡುತ್ತಿದ್ದರು. ಇಂಥ ಮಾತುಗಳು ಹೊರಬರುವ ಹೊತ್ತಲ್ಲೇ ಶಂಕರ್ ಅವನ್ನು ಅಕಾಲ ಮೃತ್ಯು ಎದುರಾಗಿತ್ತು. ಕಾಲನ ಕರೆಗೆ ಓಗೊಟ್ಟು ಇಡೀ ಕನ್ನಡ ಚಿತ್ರರಂಗವನ್ನೇ ಅನಾಥವಾಗಿ ಮಾಡಿಹೋಗುವಂತಾಗಿತ್ತು.
ಅಪಘಾತ ಪ್ರೀ ಪ್ಲಾನ್ ಆಗಿತ್ತೇ..?
ಅದು ಸೆಪ್ಟಂಬರ್ 30, 1990. ದಾವಣಗೆರೆ ಜಿಲ್ಲೆಯ ಅನಗೋಡು ಎಂಬ ಹಳ್ಳಿಯಲ್ಲಿ ಜೋಕುರಸ್ವಾಮಿ ಎನ್ನುವ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಧಾರವಾಡದಿಂದ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತುರ್ತಾಗಿ ಬರಬೇಕಾಗಿದ್ದರಿಂದ ಶಂಕರ್ ನಾಗ್, ಆವತ್ತು ತಾವೇ ಕಾರು ಡ್ರೈವ್ ಮಾಡಿಕೊಂಡು ಬಂದಿದ್ದರು. ಒಬ್ಬರೇ ರಾತ್ರಿ ವೇಳೆ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಶಂಕರಣ್ಣನಿಗೆ ಲಾರಿ ಮುಖಾಮುಖಿ ಡಿಕ್ಕಿಯಾಗಿತ್ತು. ಕೆಲವರ ಪ್ರಕಾರ, ಪ್ಲೀ ಪಾನ್ಡ್ ಮರ್ಡರ್ ಎನ್ನುವವರಿದ್ದಾರೆ. ಆದರೆ, ಈವತ್ತಿಗೂ ಅಪಘಾತದ ಚಿತ್ರಣ ಹೊರಬಂದೇ ಇಲ್ಲ. ಶಂಕರ್ ಆ ರಾತ್ರಿಯಲ್ಲಿ ಕಾರಿನಲ್ಲಿ ಬರುತ್ತಿರುವುದನ್ನು ಗೊತ್ತಿದ್ದೇ ಲಾರಿಯನ್ನು ಮುಖಾಮುಖಿ ಆಗಿಸಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಅದಾಗಲೇ ಶಂಕರ್ ನಿರ್ದೇಶನ, ನಟನೆಯ ಸುಂದರಕಾಂಡ ಮತ್ತು ನಿಗೂಢ ರಹಸ್ಯ ಚಿತ್ರದ ಚಿತ್ರೀಕರಣ ಮುಗಿದಿತ್ತು. ವಾಯ್ಸ್ ಡಬ್ಬಿಂಗ್ ಮತ್ತೊಂದಷ್ಟು ಕೆಲಸ ಮಾತ್ರ ಬಾಕಿ ಉಳಿದಿತ್ತು. ಬಳಿಕ ಸುಂದರ ಕಾಂಡ ಚಿತ್ರಕ್ಕೆ ಶಂಕರ್ ಪಾತ್ರಕ್ಕೆ ಮುರಳಿ ವಾಯ್ಸ್ ಕೊಟ್ಟಿದ್ದರು. ನಿಗೂಢ ರಹಸ್ಯ ಚಿತ್ರಕ್ಕೆ ಅನಂತ್ ನಾಗ್ ಡಬ್ಬಿಂಗ್ ಕೆಲಸ ಮುಗಿಸಿದ್ದರು. ನಾಗಾಲೋಟದಲ್ಲಿ ಓಡುತ್ತಿದ್ದ ಶಂಕರ್ ಬದುಕಿಗೆ ಆವತ್ತಿನ ಅಪಘಾತ ತಿಲಾಂಜಲಿಯನ್ನೇ ಇಟ್ಟಿತ್ತು.
ಒಂದು ಆಕ್ಸಿಡೆಂಟ್ ಬೆನ್ನತ್ತಿದ್ದ ಜರ್ನಲಿಸ್ಟ್ !
1984ರಲ್ಲಿ ಶಂಕರ್ ನಾಗ್ ಆಕ್ಸಿಡೆಂಟ್ ಎನ್ನುವ ಚಿತ್ರ ನಿರ್ಮಿಸಿದ್ದರು. ಚಿತ್ರದಲ್ಲಿ ಅನಂತ್ ನಾಗ್, ಶಂಕರ್ ನಾಗ್ ಮತ್ತು ಅವರ ಪತ್ನಿ ಅರುಂಧತಿ ಮುಖ್ಯ ಪಾತ್ರದಲ್ಲಿದ್ದರು. ರಾಜಕೀಯ, ಮಾಧ್ಯಮ ಕ್ಷೇತ್ರದ ನಡುವಿನ ಭ್ರಷ್ಟಾಚಾರದ ಬಗ್ಗೆ ಬಿಚ್ಚಿಡುವ ಕತೆಯನ್ನು ಹೊಂದಿದ್ದ ಚಿತ್ರ ರಾಷ್ಟ್ರ ಮಟ್ಟದ ಗಮನ ಸೆಳೆದಿತ್ತು. ಚಿತ್ರಕತೆಗಾಗಿ ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು. ಅದರಲ್ಲಿ ಅನಂತ್ ನಾಗ್ ರಾಜಕಾರಣಿಯಾಗಿದ್ದರೆ, ಶಂಕರ್ ನಾಗ್ ಜರ್ನಲಿಸ್ಟ್ ರೋಲ್ ಮಾಡಿದ್ದರು. ಅರುಂಧತಿ ನಾಗ್, ಶ್ರೀಮಂತ ವಿಧವೆಯ ಪಾತ್ರ ನಿರ್ವಹಿಸಿದ್ದರು. ರಾಜಕಾರಣಿಗಳು ಮತ್ತು ಡ್ರಗ್ ಮಾಫಿಯಾದ ನಡುವೆ ಮಾಧ್ಯಮದ ಪಾತ್ರವನ್ನು ಅದ್ಭುತವಾಗಿ ತೋರಿಸಿದ್ದರು ಶಂಕರಣ್ಣ. ಸಾರ್ವಜನಿಕ ಜೀವನದ ಭ್ರಷ್ಟಾಚಾರವನ್ನು ತೆರೆದಿಟ್ಟ ಮೊದಲ ಚಿತ್ರ ಎಂಬ ಹೆಗ್ಗಳಿಕೆಯೂ ಅದಕ್ಕೆ ದೊರೆತಿತ್ತು. ಒಂದು ಆಕ್ಸಿಡೆಂಟ್ ಘಟನೆಯನ್ನು ಬೆನ್ನತ್ತಿ ಅದರಲ್ಲಿ ಪ್ರಭಾವಿ ರಾಜಕಾರಣಿಯ ಪಾತ್ರ ಇರುವುದನ್ನು ವರದಿ ಮಾಡಿದ್ದು ಅದನ್ನು ಪತ್ರಿಕೆಯ ಸಂಪಾದಕ ಪ್ರಕಟಣೆಗೆ ನಿರಾಕರಿಸುವುದೇ ಅದರಲ್ಲಿ ಕಥಾವಸ್ತು. ಈ ಚಿತ್ರ ಬಿಡುಗಡೆಯಾಗಿ ರಾಷ್ಟ್ರದ ಗಮನಸೆಳೆದು ಪ್ರಶಸ್ತಿ ಬಾಚಿಕೊಂಡ ಕೆಲವೇ ವರ್ಷಗಳಲ್ಲಿ ನಮ್ಮ ಶಂಕರಣ್ಣ ಅದೇ ಮಾದರಿಯ ಅಪಘಾತದಲ್ಲಿ ಇನ್ನಿಲ್ಲವಾಗಿದ್ದರು.
ಶಂಕರಣ್ಣನ ಸಾಧನೆಯ ಶಿಖರದಲ್ಲಿ ನೆನಪಿಸಿಕೊಳ್ಳಲೇಬೇಕಾದ್ದು ದೂರದರ್ಶನಕ್ಕೆ ನಿರ್ಮಿಸಿದ ಧಾರಾವಾಹಿ. ಆರ್.ಕೆ.ನಾರಾಯಣ್ ಅವರ ಇಂಗ್ಲಿಷ್ ಕಾದಂಬರಿ ಮಾಲ್ಗುಡಿ ಡೇಸ್ ಅನ್ನು ಅದೇ ಹೆಸರಲ್ಲಿ ಧಾರಾವಾಹಿ ಮಾಡಿದ್ದರು. ಸ್ವತಃ ಅಭಿನಯಿಸಿ, ನಿರ್ಮಿಸಿದ ಧಾರಾವಾಹಿ ಭಾರತದ ದೂರದರ್ಶನದ ಇತಿಹಾಸದಲ್ಲೇ ಅಚ್ಚಳಿಯದ ದಾಖಲೆಯಾಗಿದೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಹತ್ತಿರದ ಗೆಳೆಯನಾಗಿದ್ದ ಶಂಕರ್ ನಾಗ್, ಬೆಂಗಳೂರಿನ ಅಭಿವೃದ್ಧಿಗಾಗಿ ವಿಶಿಷ್ಟ ಕನಸುಗಳನ್ನು ಕಂಡಿದ್ದರು. ಮೆಟ್ರೋ ರೈಲು, ರೋಪ್ ವೇ ಯೋಜನೆ ತರಬೇಕೆಂಬ ಕನಸನ್ನು ಆಗಲೇ ಬಿತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಅಜರಾಮರ ಆಗಿರುವ ವ್ಯಕ್ತಿತ್ವ ಮರೆಯಾಗಿ ಕಳೆದ ಸೆಪ್ಟಂಬರ್ 30ಕ್ಕೆ ಮೂವತ್ತು ವರ್ಷ. ಆಟೋರಾಜ ಚಿತ್ರದಲ್ಲಿ ಚಿ. ಉದಯಶಂಕರ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ನಲಿವಾ ಗುಲಾಬಿ ಹೂವೇ, ಮುಗಿಲಾ ಮೇಲೇರಿ ನಗುವೇ ಎನ್ನುವ ಶಂಕರಣ್ಣನ ಹಾಡಿನಂತೆ ನಲಿದಾಡುತ್ತಲೇ ಮುಗಿಲು ಹತ್ತಿ ಹೋದವರು ಶಂಕರಣ್ಣ. ಆಟೋರಾಜ ಚಿತ್ರದ ಆ ಹಾಡು, ಆಟೋರಾಜನಾಗಿ ಮಾಡಿದ ಅಭಿನಯ ಆಟೋ ಚಾಲಕರಿಗೆಲ್ಲ ಪ್ರೇರಣೆಯಾಗಿತ್ತು. ಶಂಕರಣ್ಣನನ್ನು ಆರಾಧ್ಯ ದೇವರಾಗಿ ಪೂಜಿಸುವಂತೆ ಮಾಡಿತ್ತು. ಈಗಲೂ ಬೆಂಗಳೂರಿನಲ್ಲಿ ಆಟೋ ಹತ್ತಿದರೆ 90 ರಷ್ಟು ಆಟೋಗಳಲ್ಲಿ ಕಂಡುಬರೋದು ಶಂಕರಣ್ಣದ್ದೇ ಫೋಟೋ ಮಾತ್ರ...
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm