ಬ್ರೇಕಿಂಗ್ ನ್ಯೂಸ್
15-02-21 02:19 pm Source: FILMIBEAT Manjunatha C ಸಿನಿಮಾ
2001 ರಲ್ಲಿ ಬಿಡುಗಡೆ ಆದ 'ರೆಹನಾ ಹೇ ತೇರಿ ದಿಲ್ ಮೇ' ಮೂಲಕ ಬಾಲಿವುಡ್ ಪ್ರವೇಶಿಸಿದ ನಟಿ ದಿಯಾ ಮಿರ್ಜಾ ಆ ನಂತರ ಹಲವು ವರ್ಷ ಬಾಲಿವುಡ್‌ನ ಖ್ಯಾತ ನಟಿಯಾಗಿ ಮೆರೆದರು. ಇದೀಗ ಸಹನಟಿಯಾಗಿ, ನಿರ್ಮಾಪಕಿಯಾಗಿ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ದಿಯಾ ಮಿರ್ಜಾ, ಮೊದಲ ಮದುವೆಯಿಂದ 2019 ರಲ್ಲಿ ವಿಚ್ಛೇಧನ ಪಡೆದಿದ್ದು, ಎರಡು ವರ್ಷದ ಒಂಟಿ ಜೀವನದ ಬಳಿಕ ಈಗ ಮತ್ತೆ ಮದುವೆ ಆಗಲು ತಯಾರಾಗಿದ್ದಾರೆ.
ದಿಯಾ ಮಿರ್ಜಾ 2014 ರಲ್ಲಿ ತಮ್ಮ ಬ್ಯುಸಿನೆಸ್ ಪಾರ್ಟನ್ ಆಗಿದ್ದ ಸಾಹಿಲ್ ಸಂಘಾ ಅವರೊಟ್ಟಿಗೆ ಮದುವೆಯಾದರು. ಅದಾದ ಬಳಿಕ 2019 ರಲ್ಲಿ ಇಬ್ಬರೂ ಬೇರಾದರು. ಇದೀಗ ಮತ್ತೆ ಮದುವೆ ಆಗುತ್ತಿದ್ದಾರೆ ಈ ನಟಿ.
40 ವರ್ಷ ವಯಸ್ಸಿನ ನಟಿ ದಿಯಾ ಮಿರ್ಜಾ ವೈಭವ್ ರೇಖಿ ಜೊತೆಗೆ ಸರಳವಾದ ಖಾಸಗಿ ಸಮಾರಂಭದಲ್ಲಿ ಮದುವೆ ಆಗುತ್ತಿದ್ದಾರೆ. ಇವರ ಮದುವೆ ಇಂದೇ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ದಿಯಾ ಮಿರ್ಜಾ ಹೇಳಿಕೆ ನೀಡಿಲ್ಲ.
ದಿಯಾ ಮಿರ್ಜಾ ಮದುವೆ ಆಗುತ್ತಿರುವ ವೈಭವ್ ರೇಖಿ ಮುಂಬೈನಲ್ಲಿ ಉದ್ಯಮಿ ಆಗಿದ್ದಾರೆ. ಪಿರಾಮಲ್ ಫಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕರಾಗಿದ್ದಾರೆ. ಈ ಮೊದಲು ಯೋಗ ತರಬೇತುದಾರ್ತಿ ಸುನೈನಾ ರೇಖಿ ಜೊತೆಗೆ ವಿವಾಹವಾಗಿದ್ದರು. ವಿಚ್ಛೇದನ ಪಡೆದ ಬಳಿಕ ಈಗ ದಿಯಾ ಜೊತೆ ವಿವಾಹವಾಗುತ್ತಿದ್ದಾರೆ. ವೈಭವ್ ಗೆ ಮಗಳು ಸಹ ಇದ್ದಾಳೆ.
ದಿಯಾ ಮಿರ್ಜಾ ಹಾಗೂ ಸಾಹಿಲ್ ಸಂಘಾ 2019 ರಲ್ಲಿ ಬೇರಾದರು. ಆಗ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡಿದ್ದ ನಟಿ, '11 ವರ್ಷ ಜೊತೆಗಿದ್ದ ನಾವು ಪರಸ್ಪರ ಒಪ್ಪಿಗೆ ಮೇರೆಗೆ ಈಗ ಬೇರಾಗುತ್ತಿದ್ದೇವೆ. ಇನ್ನು ಮುಂದೆ ನಾವು ಗೆಳೆಯರಾಗಿ ಉಳಿಯಲಿದ್ದೇವೆ' ಎಂದಿದ್ದರು.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm