KGF 2' ಡಬ್ಬಿಂಗ್ ಶುರು ಮಾಡಿದ ನಟಿ ಶ್ರೀನಿಧಿ ಶೆಟ್ಟಿ

08-03-21 04:37 pm       source: FILMIBEAT   ಸಿನಿಮಾ

ಇಡೀ ದೇಶವೆ ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ.

ಇಡೀ ದೇಶವೆ ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಸದ್ಯ ತೆಲುಗು ಸಿನಿಮಾದಲ್ಲಿ ನಿರತರಾಗಿದ್ದಾರೆ. ಜೊತೆಗೆ ಕೆಜಿಎಫ್2 ನಲ್ಲೂ ಬ್ಯುಸಿಯಾಗಿದ್ದಾರೆ.

ಕೆಜಿಎಫ್-2 ಚಿತ್ರದ ಕೆಲಗಳು ಸರಾಗವಾಗಿ ಸಾಗುತ್ತಿದೆ. ಸದ್ಯ ಸಿನಿಮಾದ ಡಬ್ಬಿಂಗ್ ಕೆಲಗಳು ಪ್ರಾರಂಭವಾಗಿದೆ. ಈಗಾಗಲೇ ನಟಿ ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ನಲ್ಲಿ ಭಾಗಿಯಾಗಿದ್ದು, ತನ್ನ ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೆಜಿಎಫ್-2 ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಸದ್ಯ ಸಿನಿಮಾತಂಡ ಅದ್ದೂರಿಯಾದ ಪ್ರಿ ರಿಲೀಸ್ ಕಾರ್ಯಕ್ರಮ ಮಾಡಲು ನಿರ್ಧರಿಸಿದೆ. ಸಿನಿಮಾ ರಿಲೀಸ್ ಗೆ ಇನ್ನು ಮೂರ್ನಾಲ್ಕು ತಿಂಗಳು ಇರುವಾಗಲೇ ಪ್ರಿ ರಿಲೀಸ್ ಕಾರ್ಯಕ್ರಮ ಮಾಡಲು ಸಿನಿಮಾತಂಡ ಈಗಿನಿಂದಲೇ ಪ್ಲಾನ್ ಮಾಡುತ್ತಿದೆ.

This News Article Is A Copy Of FILMIBEAT