ಹಿರಿಯ ನಟ-ನಿರ್ದೇಶಕ ದ್ವಾರಕೀಶ್ ಪತ್ನಿ ಅಂಬುಜಾ ನಿಧನ

16-04-21 04:33 pm       Source: FILMIBEAT Bharath Kumar K   ಸಿನಿಮಾ

ಕನ್ನಡ ಚಿತ್ರರಂಗದ ಹಿರಿಯ ನಟ-ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ಇಂದು ನಿಧನರಾಗಿದ್ದಾರೆ.

ಬೆಂಗಳೂರು, ಏ.16: ಕನ್ನಡ ಚಿತ್ರರಂಗದ ಹಿರಿಯ ನಟ-ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ಅವರು ಇಂದು (ಏಪ್ರಿಲ್ 16) ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಂಬುಜಾ ದ್ವಾರಕೀಶ್ ಅವರು ಎಚ್‌ಎಸ್‌ಆರ್ ಲೇಔಟ್‌ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂಬುಜಾ ದ್ವಾರಕೀಶ್ ಅವರು ಜನವರಿ ತಿಂಗಳಲ್ಲಿ 80ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ದ್ವಾರಕೀಶ್ ಮತ್ತು ಅಂಬುಜಾ ದಂಪತಿಗೆ ಐದು ಜನ ಗಂಡು ಮಕ್ಕಳು.



ಅಂಬುಜಾ ಅವರ ಅಂತಿಮ ಕಾರ್ಯಗಳು ಇಂದು ಸಂಜೆ ವೇಳೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪುತ್ರ ಯೋಗಿ ದ್ವಾರಕೀಶ್ ಮಾಹಿತಿ ನೀಡಿದ್ದಾರೆ.

ಅಂದ್ಹಾಗೆ, ದ್ವಾರಕೀಶ್ ಅವರಿಗೆ ಇಬ್ಬರು ಹೆಂಡತಿಯರು. ಅಂಬುಜಾ ಅವರನ್ನು ವಿವಾಹ ಆದ್ಮೇಲೆ ಅವರ ಸಮ್ಮತಿ ಪಡೆದು ಶೈಲಜಾ ಎನ್ನುವವರನ್ನು ಎರಡನೇ ವಿವಾಹವಾಗಿದ್ದರು.

This News Article Is A Copy Of FILMIBEAT