ಬಿಕಿನಿಯಲ್ಲಿ ಕಾಣಿಸಿಕೊಂಡ ಗರ್ಭಿಣಿ ಅನುಷ್ಕಾ ಶರ್ಮಾ !

21-09-20 07:31 pm       Headline Karnataka News Network   ಸಿನಿಮಾ

ಇತ್ತೀಚೆಗಷ್ಟೇ ತಾನು ಗರ್ಭಿಣಿಯಾಗಿದ್ದನ್ನು ಹೇಳಿಕೊಂಡಿದ್ದ ಅನುಷ್ಕಾ ಶರ್ಮಾ ಈಗ ಫೋಟೋಗಳನ್ನು ಇನ್ ಸ್ಟಾ ಗ್ರಾಮಿನಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈ, ಸೆಪ್ಟಂಬರ್ 21: ಇತ್ತೀಚೆಗಷ್ಟೇ ತಾನು ಗರ್ಭಿಣಿಯಾಗಿದ್ದನ್ನು ಹೇಳಿಕೊಂಡಿದ್ದ ಅನುಷ್ಕಾ ಶರ್ಮಾ ಈಗ ಫೋಟೋಗಳನ್ನು ಇನ್ ಸ್ಟಾ ಗ್ರಾಮಿನಲ್ಲಿ ಹಂಚಿಕೊಂಡಿದ್ದಾರೆ. ಪತಿ ವಿರಾಟ್ ಕೊಹ್ಲಿ ಜೊತೆಗೆ ಬಿಕಿನಿ ಧರಿಸಿದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು, ಮಗುವಿನ ನಿರೀಕ್ಷೆಯಲ್ಲಿರುವ ಸಂಭ್ರಮನ್ನು ಹೇಳಿಕೊಂಡಿದ್ದಾರೆ.

ದುಬೈನಲ್ಲಿ ಐಪಿಎಲ್ ಕ್ರಿಕೆಟ್ ಆಟದಲ್ಲಿ ನಿರತರಾಗಿರುವ ಪತಿ ವಿರಾಟ್ ಕೊಹ್ಲಿ ಜೊತೆಗೆ ದುಬೈಗೆ ತೆರಳಿರುವ ಅನುಷ್ಕಾ ಶರ್ಮಾ ಅಲ್ಲಿಯೇ ಸ್ವಿಮ್ಮಿಂಗ್ ಉಡುಗೆಯಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಪ್ಪು ಬಟ್ಟೆಯಲ್ಲಿ ಬಿಳಿ ಕಲೆಗಳುಳ್ಳ ಬಿಕಿನಿ ಧರಿಸಿರುವ ಅನುಷ್ಕಾ ಶರ್ಮಾ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ವಿಚಾರವನ್ನು ತಿಳಿಸಿದ್ದಾರೆ. ಅಲ್ಲದೆ, ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಕೇಳಿಕೊಂಡಿದ್ದಾಳೆ.

ಇತ್ತೀಚೆಗಷ್ಟೇ ನಾವಿನ್ನು ಮೂವರು ಎಂದು ಟ್ವೀಟ್ ಮಾಡಿ ತಂದೆಯಾಗುತ್ತಿರುವ ವಿಚಾರ ಪ್ರಕಟಿಸಿದ್ದ ವಿರಾಟ್ – ಅನುಷ್ಕಾ ದಂಪತಿ, 2021ರ ಜನವರಿ ತಿಂಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬಹುಕಾಲ ಪ್ರೀತಿಯಲ್ಲಿದ್ದ ವಿರಾಟ್ ಜೋಡಿ ಕಳೆದ 2017ರಲ್ಲಿ ಇಟಲಿಯಲ್ಲಿ ಮದುವೆಯಾಗಿದ್ದರು.