ಬ್ರೇಕಿಂಗ್ ನ್ಯೂಸ್
16-04-22 01:51 pm Source: Vijayakarnataka ಸಿನಿಮಾ
'ಕರಾವಳಿ ಬೆಡಗಿ' ಪೂಜಾ ಹೆಗ್ಡೆ ಸದ್ಯ ಸೌತ್ ಇಂಡಿಯಾದ ಸಖತ್ ಚಾರ್ಮಿಂಗ್ ಇರುವ ನಟಿ. 'ಮಹರ್ಷಿ', 'ಅಲಾ ವೈಕುಂಠಪುರಮುಲೋ' ಥರದ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ಮೇಲೆ ಅವರಿಗೆ ಸಾಕಷ್ಟು ಬೇಡಿಕೆ ಬಂತು. ಆ ಪರಿಣಾಮ ಸಾಕಷ್ಟು ಆಫರ್ಸ್ ಅವರಿಗೆ ಬಂದವು. ತೆಲುಗು ಮಾತ್ರವಲ್ಲ, ಹಿಂದಿಯಲ್ಲೂ ಅವರಿಗೆ ಸಖತ್ ಅವಕಾಶಗಳು ಸಿಕ್ಕಿದವು. ಈ ಮಧ್ಯೆ ಅವರ ಎರಡು ಬಹುನಿರೀಕ್ಷಿತ ಸಿನಿಮಾಗಳು ಇನ್ನಿಲ್ಲದಂತೆ ನೆಲಕಚ್ಚಿದವು. ಆದರೂ ಕೂಡ ಪೂಜಾ ಹೆಗ್ಡೆ ಬೇಡಿಕೆ ಮಾತ್ರ ಕೊಂಚವೂ ಕಮ್ಮಿ ಆಗಿಲ್ಲ. ಸದ್ಯ ಅವರೊಂದು ಸಿನಿಮಾದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಅಚ್ಚರಿ ಎಂದರೆ, ಈ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಲು ಅವರು ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ!
ಎಫ್ 3 ಸಿನಿಮಾದಲ್ಲಿ ಐಟಂ ಸಾಂಗ್
ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ನಟನೆಯ 'ಎಫ್3' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಹಿಂದೆ ಇದೇ ಜೋಡಿ 'ಎಫ್2' ಸಿನಿಮಾ ಮಾಡಲಾಗಿತ್ತು. ಆ ಚಿತ್ರ ದೊಡ್ಡ ಹಿಟ್ ಆಗಿದ್ದರಿಂದ 'ಎಫ್3' ಸಿಕ್ವೇಲ್ ಮಾಡಲಾಗುತ್ತಿದೆ. ಏಪ್ರಿಲ್ ಅಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರಲು ನಿರ್ದೇಶಕ ಅನಿಲ್ ರವಿಪುಡಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಮಧ್ಯೆ ಚಿತ್ರಕ್ಕೆ ಒಂದು ಐಟಂ ಸಾಂಗ್ ಸೇರ್ಪಡೆಗೊಂಡಿದ್ದು, ಅದರಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಏ.15ರಂದು ಆ ಹಾಡಿನ ಚಿತ್ರೀಕರಣ ಕೂಡ ನಡೆದಿದೆ. ಪೂಜಾ ಅವರ ಫಸ್ಟ್ ಲುಕ್ ಅನ್ನು ನಿರ್ದೇಶಕ ಅನಿಲ್ ಹಂಚಿಕೊಂಡಿದ್ದಾರೆ.
ಸೋಲು ಕಂಡಿರುವ ಪೂಜಾ ಸಿನಿಮಾಗಳು
ಪ್ಯಾನ್ ಇಂಡಿಯಾ ಸಿನಿಮಾಗಳಾದ ಪ್ರಭಾಸ್ ನಟನೆಯ 'ರಾಧೆ ಶ್ಯಾಮ್' ಮತ್ತು 'ದಳಪತಿ' ವಿಜಯ್ ನಟನೆಯ 'ಬೀಸ್ಟ್' ಸಿನಿಮಾಗಳಿಗೆ ನಾಯಕಿಯಾಗುವ ಅವಕಾಶ ನಟಿ ಪೂಜಾ ಹೆಗ್ಡೆಗೆ ಸಿಕ್ಕಿತ್ತು. ಎರಡೂ ಕೂಡ ದೊಡ್ಡ ಸ್ಟಾರ್ ನಟರಿರುವ, ಬಿಗ್ ಬಜೆಟ್ ಸಿನಿಮಾಗಳು. ಆದರೆ, ಮಾರ್ಚ್ 11ರಂದು ತೆರೆಕಂಡ 'ರಾಧೆ ಶ್ಯಾಮ್' ಹೀನಾಯ ಸೋಲು ಕಂಡು ಇಪ್ಪತ್ತೇ ದಿನಕ್ಕೆ ಓಟಿಟಿಗೂ ಬಂತು. ಆದರೆ ಅಲ್ಲಿಯೂ ಹವಾ ಮಾಡಲು ಯಶಸ್ವಿಯಾಗಲಿಲ್ಲ. ಹಾಗೆಯೇ ವಿಜಯ್ ಜೊತೆಗೆ 'ಬೀಸ್ಟ್'ನಲ್ಲಿ ಪೂಜಾ ನಟಿಸಿದ್ದರು. ಏ.13ರಂದು ತೆರೆಕಂಡ ಆ ಸಿನಿಮಾ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಭಾರಿ ನಿರೀಕ್ಷೆಯಿದ್ದ ಕಾರಣ, ಮೊದಲ ದಿನಈಸಿನಿಮಾವು72.67ಕೋಟಿರೂ.ಗಳಿಸಿತ್ತು. ಆದರೆ, ಎರಡನೇ ದಿನಕ್ಕೆ ಗಳಿಕೆಯಲ್ಲಿ ತೀವ್ರ ಕುಸಿತ ಕಂಡಿದೆ. 2ನೇ ದಿನ ವಿಶ್ವಾದ್ಯಂತ 24.18 ಕೋಟಿ ರೂ. ಗಳಿಸಿದೆ. 'ಕೆಜಿಎಫ್: ಚಾಪ್ಟರ್ 2' ಅಬ್ಬರ ಎದುರು ಬೀಸ್ಟ್ ಕಲೆಕ್ಷನ್ ಮಾಡಲು ಸೋತಿದೆ.
ಒಂದು ಕೋಟಿ ರೂ ಸಂಭಾವನೆ
ಹೀಗೆ 'ರಾಧೆ ಶ್ಯಾಮ್' ಮತ್ತು 'ಬೀಸ್ಟ್' ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಂಡರೂ, ಪೂಜಾ ಹೆಗ್ಡೆ ಬೇಡಿಕೆ ಕೊಂಚವೂ ಕಮ್ಮಿ ಆಗಿಲ್ಲ. 'ಎಫ್3' ಚಿತ್ರದ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಲು ಅವರು ಭರ್ತಿ 1 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ! ಅದಕ್ಕೂ ಮುನ್ನ ಅವರು 1.50 ಕೋಟಿ ರೂ. ಕೇಳಿದ್ದರಂತೆ. ಅಂತಿಮವಾಗಿ 1 ಕೋಟಿ ರೂ.ಗೆ ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಅವರು ಐಟಂ ಸಾಂಗ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ರಾಮ್ ಚರಣ್, ಸಮಂತಾ ನಟಿಸಿದ್ದ 'ರಂಗಸ್ಥಲಂ'ನಲ್ಲೂ ಪೂಜಾ ಹೆಜ್ಜೆ ಹಾಕಿದ್ದರು. ಪೂಜಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. 'ಎಫ್3' ರಿಲೀಸ್ ಆಗುವ ವೇಳೆಯೇ ತೆರೆಗೆ ಬರಲಿರುವ 'ಆಚಾರ್ಯ' ಸಿನಿಮಾದಲ್ಲೂ ಪೂಜಾ ನಟಿಸಿದ್ದಾರೆ. ಹಿಂದಿಯ 'ಸರ್ಕಸ್' ಸಿನಿಮಾದಲ್ಲಿ ಅವರಿದ್ದಾರೆ. 'ಮಹರ್ಷಿ' ನಂತರ ಮತ್ತೊಮ್ಮೆ ಮಹೇಶ್ ಬಾಬು ಜೊತೆ ತೆರೆಹಂಚಿಕೊಳ್ಳುವ ಅವಕಾಶ ಕೂಡ ಪೂಜಾಗೆ ಸಿಕ್ಕಿದೆ.
Beast Actress Pooja Hegde Shoots Special Song For Victory Venkatesh Varun Tej Starrer F3 Movie.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm