ಬ್ರೇಕಿಂಗ್ ನ್ಯೂಸ್
21-04-22 02:48 pm Source: Vijayakarnataka ಸಿನಿಮಾ
ತಮ್ಮ ಕಂಚಿನ ಕಂಠದಿಂದ ಫೇಮಸ್ ಆಗಿರುವ ನಟ ವಸಿಷ್ಠ ಸಿಂಹ ಕನ್ನಡ, ತೆಲುಗು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಆಗಾಗ ಅವರು ನಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕನ್ನಡದಲ್ಲಿ ಇವರು ನಾಯಕರಾಗಿ ನಟಿಸುತ್ತಿರುವ ಸಿನಿಮಾವೊಂದು ಇಂದು ಅನೌನ್ಸ್ ಆಗಲಿದೆ. ‘ಕಾಲ ಚಕ್ರ’, ‘ತಲ್ವಾರ್ ಪೇಟೆ’ ಸಿನಿಮಾಗಳ ನಂತರ ವಸಿಷ್ಠ ಕನ್ನಡದಲ್ಲಿ ಮತ್ತೊಂದು ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಆ ಸಿನಿಮಾಗೆ ‘Loveಲಿ’ ಎಂಬ ಟೈಟಲ್ ಇಡಲಾಗಿದೆ. ಈ ಸಿನಿಮಾವನ್ನು ಚೇತನ್ ಕೇಶವ ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಆ್ಯಂಗ್ರಿ ಯಂಗ್ ಮ್ಯಾನ್ ಆಗಿದ್ದ ವಸಿಷ್ಠ ಸಿಂಹ ‘Loveಲಿ’ ಸಿನಿಮಾದಲ್ಲಿ ಕೊಂಚ ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಳ್ಳಲಿದ್ದಾರಂತೆ.
ನೈಜ ಘಟನೆಗಳಿಂದ ಸ್ಫೂರ್ತಿಗೊಂಡ ಸಿನಿಮಾ
‘Loveಲಿ ಸಿನಿಮಾ ಕಮರ್ಷಿಯಲ್ ಲವ್ ಸ್ಟೋರಿ ಎನ್ನಬಹುದು. ಇದರಲ್ಲಿ ರೌಡಿಸಂ, ರೊಮ್ಯಾನ್ಸ್, ಲವ್ ಸ್ಟೋರಿ ಎಲ್ಲವೂ ಇದೆ. ‘Loveಲಿ’ ಎಂದಾಕ್ಷಣ ಬರೀ ಲವ್ ಸ್ಟೋರಿ ಇರುತ್ತದೆ ಎಂದಲ್ಲ. ನಮ್ಮ ಮನಸ್ಸಲ್ಲಿ, ನಿಮ್ಮ ಮನಸ್ಸಲ್ಲಿ ಎಂಬಂತಹ ಅರ್ಥ ಬರುವಂತಹ ಟೈಟಲ್ ಅದು. ಲವ್ ಸ್ಟೋರಿಯಲ್ಲಿ ಎನ್ನುವುದನ್ನು ನಾವು ‘Loveಲಿ’ ಎಂದು ಮಾಡಿಕೊಂಡಿದ್ದೇವೆ. ಇದು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದುಕೊಂಡ ಸಿನಿಮಾ’ ಎಂದು ಹೇಳಿದ್ದಾರೆ ನಿರ್ದೇಶಕ ಚೇತನ್.
ಚೇತನ್‌ಗೆ ‘ಮಫ್ತಿ’ ನಿರ್ದೇಶಕ ನರ್ತನ್ ಜತೆ ಕೆಲಸ ಮಾಡಿದ ಅನುಭವವಿದೆ. ಏಳೆಂಟು ವರ್ಷದಿಂದ ವಸಿಷ್ಠ ಸಿಂಹ ಜತೆಯಲ್ಲಿಯೇ ಇರುವ ಚೇತನ್, ವಸಿಷ್ಠ ಅವರಿಗೆಂದೇ ಈ ಸ್ಕ್ರಿಪ್ಟ್ ಬರೆದಿದ್ದಾರಂತೆ. ಮೇ 4ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದೆ.
ವಸಿಷ್ಠಗೆ ಸಖತ್ ಬೇಡಿಕೆ
ಇನ್ನು, ವಸಿಷ್ಠಗೆ ತಮಿಳಿನಿಂದಲೂ ಸಾಕಷ್ಟು ಪ್ರಾಜೆಕ್ಟ್‌ಗಳು ಬರುತ್ತಿವೆ. ಮಲಯಾಳಂನಲ್ಲಿಯೂ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆ ಇರುವ ನಟ ವಸಿಷ್ಠ ಸಿಂಹ ಟಾಲಿವುಡ್‌ನಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ವೆಂಕಟೇಶ್ ನಟಿಸಿದ್ದ 'ನಾರಪ್ಪ' ಸಿನಿಮಾದಲ್ಲಿನ ಅವರ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಅವರು 3-4 ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಸಿಂಬಾ' ಎಂಬ ಸಿನಿಮಾದ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ವಸಿಷ್ಠ ಜತೆ ಜಗಪತಿ ಬಾಬು, ಅನಸೂಯಾ ಸೇರಿದಂತೆ ಬಹು ತಾರಾಗಣ ಈ ಸಿನಿಮಾದಲ್ಲಿದೆ. ಇದಲ್ಲದೆ 'ಓದೆಲಾ ರೈಲ್ವೇ ಸ್ಟೇಷನ್' ಹಾಗೂ ಮತ್ತೊಂದು ಹೆಸರಿಡದ ತೆಲುಗು ಸಿನಿಮಾಗಳು ರಿಲೀಸ್‌ಗೆ ರೆಡಿ ಇವೆ. ಈಚೆಗೆ 'ಕೆಜಿಎಫ್: ಚಾಪ್ಟರ್ 2' ಕೂಡ ಕಮಲ್ ಅನ್ನೋ ಪಾತ್ರದಲ್ಲಿ ವಸಿಷ್ಠ ಮಿಂಚಿದ್ದಾರೆ.
ಅಂದಹಾಗೆ, ಕಳೆದ ವರ್ಷದ ಮೊದಲ ದಿನವೇ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಎಂಟು ತಿಂಗಳ ಸಿಂಹದ ಮರಿಯನ್ನು ದತ್ತು ಪಡೆದಿದ್ದ ವಸಿಷ್ಠ, ಆ ಪುಟಾಣಿ ಸಿಂಹದ ಮರಿಗೆ ಅವರ ತಂದೆಯ ಹೆಸರಾದ ವಿಜಯ ನರಸಿಂಹ ಎಂದು ನಾಮಕರಣ ಮಾಡಿದ್ದರು.
Vasishta Simha Starrer New Movie Titled Loveli.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm