ಈ ನಾಲ್ಕು ಬಗೆಯ ಹಸಿರೆಲೆ-ಸೊಪ್ಪುಗಳು ನಮ್ಮೆಲ್ಲರ ಆರೋಗ್ಯಕ್ಕೆ ಬಹಳ ಒಳ್ಳೆಯದು

25-05-22 08:07 pm       Source: Vijayakarnataka   ಡಾಕ್ಟರ್ಸ್ ನೋಟ್

ಪ್ರಕೃತಿದತ್ತವಾಗಿ ಸಿಗುವಂತಹ ಎಲ್ಲಾ ಬಗೆಯ ತರಕಾರಿಗಳು, ಆರೋಗ್ಯಕ್ಕೆ ತುಂಬಾ ಲಾಭಕಾರಿ ಅದರಲ್ಲೂ ಕೆಲವೊಂದು ಹಸಿರೆಲೆ ತರಕಾರಿಗಳಾದ ಪಾಲಕ್ ಸೊಪ್ಪು, ನುಗ್ಗೆ ಸೊಪ್ಪು, ಮೆಂತೆ ಸೊಪ್ಪು...

ಹಸಿರು ಎಲೆ ತರಕಾರಿಗಳಲ್ಲಿ ಅಡಗಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಸಾಧಾರಣವಾಗಿ,ಈ ತರಕಾರಿಗಳ ಬಗ್ಗೆ ಯಾರೂ ಕೂಡ ನಿರ್ಲಕ್ಷ ತೋರುವುದಿಲ್ಲ. ಏಕೆಂದರೆ ಇವುಗಳಲ್ಲಿ ಅಡಗಿರುವ ಆರೋಗ್ಯ ಪ್ರಯೋಜನಗಳು ಅಂತಹ ಗುಣಮಟ್ಟವನ್ನು ಪಡೆದಿ ರುತ್ತವೆ. ಒಂದು ವೇಳೆ, ಈ ತರಕಾರಿಗಳ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾ ಹೋದರೆ, ನಿಮಗೆ ನೀವೇ ಲಾಸ್ ಮಾಡಿ ಕೊಂಡ ಹಾಗೆ!

ಹೌದು ಅನೇಕ ಕಾಯಿಲೆಗಳನ್ನು ನಿವಾರಿಸುವ ಗುಣ ಹೊಂದಿರುವ ಈ ಹಸಿರು ಎಲೆ ತರಕಾರಿ ಗಳು, ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಆರೋಗ್ಯವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪ್ರಕೃತಿಯ ಮಡಿಲಿನಲ್ಲಿ ಬೆಳೆಸಲಾಗುವ ಕೆಲವೊಂದು ಹಸಿರೆಲೆ ತರಕಾರಿಗಳನ್ನು ಬಳಸಿಕೊಂಡರೆ, ಆರೋಗ್ಯಕ್ಕೆ ಅಪಾರವಾದ ಲಾಭಗಳನ್ನು ನಿರೀಕ್ಷಿಸಬಹು ದಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ಆರೋಗ್ಯಕ್ಕೆ ಒಂದಲ್ಲಾ ಒಂದು ರೀತಿಯಿಂದ ಸಹಾಯ ಮಾಡುವ ಕೆಲವೊಂದು ಹಸಿರೆಲೆ ತರಕಾರಿಗಳ ಬಗ್ಗೆ ನೋಡೋಣ ಬನ್ನಿ...

ನುಗ್ಗೆ ಸೊಪ್ಪು

ನುಗ್ಗೆ ಸೊಪ್ಪಿನ ಜಬರ್ದಸ್ತ್ ಪವರ್‍‌ಗೆ ನಮ್ಮದೊಂದು ಸಲಾಂ! | Health Benefits Of  Eating Drumstick Leaves - Kannada BoldSky

  • ಹೆಣ್ಣುಮಕ್ಕಳನ್ನು ನುಗ್ಗೆಮರಕ್ಕೆಹೋಲಿಸಿ ದೊಡ್ಡವರು ತಮಾಷೆ ಮಾಡಿರುವುದನ್ನು ಎಷ್ಟೋ ಬಾರಿ ಕೇಳಿದ್ದೇವೆ.. ಆದರೆ ನುಗ್ಗೆ ಮರ ಕೇವಲ ತಮಾಷೆಗಾಗಿ ಸೀಮಿತ ಎಂದು ಮಾತ್ರ ಅಂದು ಕೊಳ್ಳಬೇಡಿ.. ಯಾಕೆಂದರೆ ಹಲವಾರು ವರ್ಷಗಳ ಹಿಂದಿನಿಂದಲೂ ಕೂಡ, ಇದರ ಎಲೆಗಳಲ್ಲಿ ಅಡಗಿರುವ ವಿಶೇಷ ಔಷಧೀಯ ಗುಣಗಳಿಂದ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾದ ಮರ ಇದು. ತುಂಬಾನೇ ಹಳೆಯ ಇತಿಹಾಸ ಹೊಂದಿರುವ ಈ ನುಗ್ಗೆ ಸೊಪ್ಪಿನಲ್ಲಿ ಅಪಾರವಾದ ಆರೋಗ್ಯ ಪ್ರಯೋಜನಗಳು ಕಂಡು ಬರುತ್ತದೆ ಎಂದರೆ ನೀವು ನಂಬಲೇಬೇಕು.
  • ಹೌದು, ಈ ಸೊಪ್ಪಿನಲ್ಲಿ ಅಡಗಿರುವ ಹಲವಾರು ಆರೋಗ್ಯ ಪ್ರಯೋಜನಗಳಲ್ಲಿ, ಕೆಲವೊಂದನ್ನು ನೋಡುವುದಾದರೆ, ನಮಗೆಲ್ಲಾ ಗೊತ್ತೇ ಇರುವ ಹಾಗೆ ಕ್ಯಾನ್ಸರ್ ಕಾಯಿಲೆ ಇಂದಿಗೂ ಕೂಡ ಔಷಧಿಯೇ ಇಲ್ಲ ಹಲವಾರು ಸಂಶೋಧನೆಗಳು ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವ ಕ್ಯಾನ್ಸರ್ ಕೋಶ ಗಳನ್ನು ನಿವಾರಿಸುವ ಔಷಧಿಗಳ ಬಗ್ಗೆ ಹಲವಾರು ರೀತಿಯಲ್ಲಿ ಅಧ್ಯಾಯನ ನಡೆಸುತ್ತಾ ಬರುತ್ತಿದ್ದರೂ ಕೂಡ ಇದುವರೆಗೂ ಕೂಡ ಸಾಧ್ಯವಾಗಿಲ್ಲ!
  • ಆದರೆ ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ-ಆಕ್ಸಿಡೆಂಟ್ ಗಳು, ವಿಟಮಿನ್ ' ಸಿ ', ಜಿಂಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗು ವಂತಹ ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡಿ, ಈ ಕಾಯಿಲೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಅಷ್ಟೇ ಅಲ್ಲದೇ ಈ ಸೊಪ್ಪಿನಲ್ಲಿ ಹೇರಳವಾಗಿ ಕಂಡುಬರುವ ಕರಗುವ ಮತ್ತು ಕರಗದಿರುವ ನಾರಿ ನಾಂಶ ಜೀರ್ಣಾಂಗದ ಪ್ರಕ್ರಿಯೆಯನ್ನು ಹೆಚ್ಚಿಸಿ, ಅಜೀರ್ಣತೆ ಹಾಗೂ ಮಲಬದ್ಧತೆಯ ಸಮಸ್ಯೆ ಯನ್ನು ಗುಣಪಡಿಸುತ್ತದೆ. ಹೀಗಾಗಿ ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಥವಾ ವಾರಕ್ಕೆ ಒಂದೆರಡು ಬಾರಿಯಾದರೂ ನುಗ್ಗೆ ಸೊಪ್ಪಿನ ಪಲ್ಯ ಮಾಡಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.

ಸಬ್ಬಸಿಗೆ ಸೊಪ್ಪು

sabsige soppu: ಸಬ್ಬಸಿಗೆ ಸೊಪ್ಪಿನ ಈ ಪ್ರಯೋಜನಗಳನ್ನು ತಿಳಿದರೆ ಇಷ್ಟಪಟ್ಟು ದಿನಾ  ತಿನ್ನುವಿರಿ - Vijaya Karnataka

  • ಸಬ್ಬಸಿಗೆ ಸೊಪ್ಪಿನಲ್ಲಿ ಫ್ಲೇವನಾಯ್ಡ್ ಎನ್ನುವ ಖನಿಜಾಂಶಗಳು ಹೇರಳವಾಗಿ ಕಂಡು ಬರುತ್ತದೆ. ಇವು ದೇಹದಲ್ಲಿ ಹಾರ್ಮೋನುಗಳು ಏರುಪೇರಾಗದಂತೆ ನೋಡಿಕೊಳ್ಳುತ್ತದೆ. ಪ್ರಮುಖವಾಗಿ ಪ್ರತಿ ತಿಂಗ ಳಿನ ಮುಟ್ಟಿನ ಸಮಯದಲ್ಲಿ, ಮಹಿಳೆಯರಲ್ಲಿ ಕಂಡು ಬರುವ, ಹೊಟ್ಟೆ ನೋವು, ಸೆಳೆತ, ಪದೇಪದೇ ಆಯಾಸ, ಬೆನ್ನುನೋವು ಇಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
  • ಹೀಗಾಗಿ ಮಹಿಳೆಯರು ತಮ್ಮ ಋತುಚಕ್ರದ ಅವಧಿಯಲ್ಲಿ ಸಬ್ಬಸಿಗೆ ಸೊಪ್ಪಿನ ಪಲ್ಯ ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಬಹಳಒಳ್ಳೆಯದು.

ಪಾಲಕ್ ಸೊಪ್ಪು

Spinach health benefits it hepls to reduce sugar level | ಶುಗರ್  ನಿಯಂತ್ರಣದಲ್ಲಿ ಪರಿಣಾಮಕಾರಿ ಈ ಸೊಪ್ಪು.! ನಿತ್ಯ ಟ್ರೈ ಮಾಡಿ Lifestyle News in  Kannada

  • ಪಾಲಕ್ ಸೊಪ್ಪಿನಲ್ಲಿ ದೇಹಕ್ಕೆ ಬೇಕಾಗುವಂತಹ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ಕಂಡು ಬರುವುದರಿಂದ, ಇವು ಆರೋಗ್ಯಕ್ಕೆ ಬಹಳ ಒಳ್ಳೆಯದು, ಎಂದು ವೈಜ್ಞಾನಿಕವಾಗಿಯೂ ಸಾಬೀತು ಆಗಿದೆ. ಇದನ್ನು ಪಲ್ಯದ ರೂಪದಲ್ಲಿಯೂ ಸೇವನೆ ಮಾಡಬಹುದು, ಇಲ್ಲಾಂದ್ರೆ ದಾಲ್-ಪಾಲಕ್ ರೀತಿ ಮಾಡಿಕೊಂಡು ಸೇವನೆ ಮಾಡಬಹುದು, ಅಥವಾ ಇದರ ಜ್ಯೂಸ್ ಮಾಡಿ ಕೊಂಡು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು.
  • ಇನ್ನು ಪಾಲಕ್ ಸೊಪ್ಪಿನಲ್ಲಿ ಆರೋಗ್ಯಕ್ಕೆ ಬೇಕಾಗುವ ಪೌಷ್ಟಿಕ ಸತ್ವಗಳ ಜೊತೆಗೆ, ವಿಟಮಿನ್ ಸಿ, ವಿಟಮಿನ್ ಡಿ, ಕ್ಯಾಲ್ಸಿಯಂ, ಕರಗಬಲ್ಲ ನಾರಿನಾಂಶ, ಪೊಟಾಶಿಯಂ, ಮೆಗ್ನಿಶಿಯಂ, ಖನಿಜಾಂಶ ಗಳು ಹೇರಳವಾಗಿ ಕಂಡುಬರುವುದರಿಂದ ಕಣ್ಣಿನ ದೃಷ್ಟಿ, ಹೃದಯದ ಆರೋಗ್ಯಕ್ಕೆ, ದಿನವಿಡಿ ದೇಹಕ್ಕೆ ಶಕ್ತಿ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಮೆಂತ್ಯ ಸೊಪ್ಪು

fresh fenugreek leaves: ಮೆಂತೆ ಸೊಪ್ಪು ಕಹಿ ಗುಣವನ್ನು ಹೊಂದಿದ್ದರೂ ಆರೋಗ್ಯಕ್ಕೆ  ಒಳ್ಳೆಯದು - Vijaya Karnataka

  • ಕಹಿ ಗುಣವನ್ನು ಹೊಂದಿರುವ ಮೆಂತೆ ಸೊಪ್ಪು ಆರೋಗ್ಯವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸು ತ್ತದೆ. ಈ ಸೊಪ್ಪಿನ ಪಲ್ಯವನ್ನು ವಾರದಲ್ಲಿ ಒಂದೆರಡು ಬಾರಿ ಆದರೂ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತದೆ. ಉದಾಹರಣೆಗೆ ನೋಡು ವುದಾದರೆ...
  • ನಿಯಮಿತವಾಗಿ ಮೆಂತ್ಯೆ ಸೊಪ್ಪಿನ ಪಲ್ಯ ಸೇವನೆ ಅಥವಾ ಇದರ ಎಲೆಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರುಸುತ್ತಾ ಬಂದರೆ, ಹೃದಯ ಹಲವಾರು ಸಮಸ್ಯೆ ನಿವಾರಣೆ ಆಗುವುದು.
  • ಇನ್ನು ದೇಹದ ಉರಿಯೂತವನ್ನು ಕಡಿಮೆ ಮಾಡುವ ಗುಣ-ಲಕ್ಷಣಗಳನ್ನು ಹೊಂದಿರುವ ಮೆಂತ್ಯೆ ಸೊಪ್ಪು, ದೀರ್ಘಕಾಲಿನ ಕೆಮ್ಮು, ಬ್ರಾಂಕ್ರೈಟಿಸ್, ಚರ್ಮದ ಸಮಸ್ಯೆ, ಕಿಡ್ನಿ ಸಮಸ್ಯೆಗಳನ್ನೆಲ್ಲಾ ನಿವಾರಣೆ ಮಾಡುವ ಎಲ್ಲಾ ಗುಣಲಕ್ಷಣಗಳು ಇದರಲ್ಲಿ ಕಂಡುಬರುತ್ತದೆ.
  • ಇನ್ನು ಟೈಪ್ 1 ಮತ್ತು ಟೈಪ್ 2 ಮಧುಮೇಹ ಇರುವವರಿಗೆ ಮೆಂತ್ಯೆ ಸೊಪ್ಪು ತುಂಬಾ ಲಾಭಕಾರಿ..

 

These Are The Healthiest Leafy Green Vegetables, That You Must Add In Your Diet.