ಸುಲಭವಾಗಿ ಬೆನ್ನು ನೋವನ್ನು ಹೋಗಲಾಡಿಸುವುದು ಹೇಗೆ? ಆಯುರ್ವೇದ ವೈದ್ಯರ ಸಲಹೆ ಇಲ್ಲಿದೆ

28-05-22 08:21 pm       Source: Vijayakarnataka   ಡಾಕ್ಟರ್ಸ್ ನೋಟ್

ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಅದರ ಪರಿಹಾರದ ಬಗ್ಗೆ ಆಯುರ್ವೇದ ವೈದ್ಯೆ ಡಾ. ಶ್ರೀಲಕ್ಷ್ಮಿ ನೀಡಿದ ಮಾಹಿತಿ ಇಲ್ಲಿದೆ.

ಇಡೀ ದಿನ ಕುಳಿತು ಕೆಲಸ ಮಾಡುವುದು, ತಪ್ಪಾದ ಭಂಗಿಯಲ್ಲಿ ಮಲಗುವುದು, ಹೆಚ್ಚು ಪ್ರಯಾಣ ಮಾಡುವುದು ಹೀಗೆ ವಿವಿಧ ಕಾರಣಗಳಿಂದ ಬೆನ್ನು ತೀವ್ರವಾಗಿ ಕಾಡುತ್ತದೆ. ಒಂದು ಬಾರಿ ಬೆನ್ನು ನೋವು ಆರಂಭವಾದರೆ ಸುಧಾರಿಸಿಕೊಳ್ಳಲು ಹಲವು ದಿನಗಳೇ ಬೇಕು.

ಹೆಚ್ಚು ನೋವಿದೆ ಎಂದು ನೋವಿನ ಮಾತ್ರೆಗಳನ್ನು ಪದೇ ಪದೇ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇದು ಕಿಡ್ನಿಗೆ ಆಪಾಯವಾಗಬಹುದು. ಹೀಗಾಗಿ ನೈಸರ್ಗಿಕ ಚಿಕಿತ್ಸೆಯ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.

ಹಾಗಾದರೆ ಆಯುರ್ವೇದದಲ್ಲಿ ಬೆನ್ನು ನೋವನ್ನು ಪರಿಹಾರ ಮಾಡಲು ಯಾವೆಲ್ಲ ಕ್ರಮಗಳನ್ನು ಪಾಲಿಸಬಹುದು ಎನ್ನುವುದರ ಬಗ್ಗೆ ಆಯುರ್ವೇದ ವೈದ್ಯೆ ಡಾ. ಶ್ರೀಲಕ್ಷ್ಮಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.

​ಬೆನ್ನು ನೋವಿನ ಲಕ್ಷಣಗಳು

how to cure the back pain: ಸುಲಭವಾಗಿ ಬೆನ್ನು ನೋವನ್ನು ಹೋಗಲಾಡಿಸುವುದು ಹೇಗೆ?  ಆಯುರ್ವೇದ ವೈದ್ಯರ ಸಲಹೆ ಇಲ್ಲಿದೆ - Vijaya Karnataka

  • ಸೊಂಟ ಮತ್ತು ಕಾಲಿನ ನರಗಳು ಸೇರುವ ಜಾಗದಿಂದ ಮೇಲ್ಬಾಗದ ಬೆನ್ನಿನವರೆಗೂ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ.
  • ತೊಡೆ, ಕಾಲುಗಳಲ್ಲೂ ನೋವು ಆರಂಭವಾಗುತ್ತದೆ.
  • ಕೆಲವೊಮ್ಮೆ ಚುಚ್ಚಿದಂತಹ ಅನುಭವದ ನೋವಿದ್ದರೆ ಇನ್ನು ಕೆಲವೊಮ್ಮೆ ನರಗಳು ಜುಮ್‌ ಎನ್ನುವಂತಹ ನೋವು ಕೂಡ ಕಾಣಿಸಿಕೊಳ್ಳುತ್ತದೆ.
  • ಕಾಲುಗಳನ್ನು ಅಲುಗಾಡಿಸಲು ಸಾಧ್ಯವಾಗದೆ ಹಿಡಿದುಕೊಂಡ ಅನುಭವವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.

​ಬೆನ್ನುನೋವು ಕಾಣಿಸಿಕೊಳ್ಳಲು ಕಾರಣಗಳು

how to cure the back pain: ಸುಲಭವಾಗಿ ಬೆನ್ನು ನೋವನ್ನು ಹೋಗಲಾಡಿಸುವುದು ಹೇಗೆ?  ಆಯುರ್ವೇದ ವೈದ್ಯರ ಸಲಹೆ ಇಲ್ಲಿದೆ - Vijaya Karnataka

  • ಹೆಚ್ಚು ಹಂಪ್ಸ್‌, ಕಲ್ಲುಗಳಿವು ದಾರಿಯಲ್ಲಿ ವಾಹನದಲ್ಲಿ ಓಡಾಡಿದರೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಆದಷ್ಟು ಹಂತಹ ರಸ್ತೆಗಳಲ್ಲಿ ಓಡಾಡುವಾಗ ಎಚ್ಚರಿಕೆವಹಿಸಿ.
  • ಮತ್ತೊಂದು ಪ್ರಮುಖ ಕಾರಣವೆಂದರೆ ಭಾರವನ್ನು ಒಂದೇ ಸಲಕ್ಕೆ ಮೇಲಕ್ಕೆ ಎತ್ತುವ ಅಭ್ಯಾಸದಿಂದಲೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.
  • ಅದನ್ನು ಹೊರತುಪಡಿಸಿದರೆ ಮಲಗುವಾಗ ಮತ್ತು ಕುಳಿತುಕೊಳ್ಳುವಾಗ ಸರಿಯಾದ ಭಂಗಿ ಅನುಸರಿಸದಿದ್ದರೆ ತೀವ್ರವಾದ ಬೆನ್ನುನೋವು ಅನುಭವಿಸಬೇಕಾಗುತ್ತದೆ.

ಆಯುರ್ವೇದದಲ್ಲಿ ಬೆನ್ನುನೋವಿನ ವ್ಯಾಖ್ಯಾನ

how to cure the back pain: ಸುಲಭವಾಗಿ ಬೆನ್ನು ನೋವನ್ನು ಹೋಗಲಾಡಿಸುವುದು ಹೇಗೆ?  ಆಯುರ್ವೇದ ವೈದ್ಯರ ಸಲಹೆ ಇಲ್ಲಿದೆ - Vijaya Karnataka

ಆಯುರ್ವೇದದಲ್ಲಿ ಬೆನ್ನುನೋವನ್ನು ಗೃದೃಸಿ ವಾತ ಎಂದು ಕರೆಯುತ್ತಾರೆ. ಇದನ್ನು ಸಯಾಟಿಕ ಎಂದೂ ಕರೆಯುತ್ತಾರೆ. ಅಂದರೆ ವಾತ ದೋಷದಿಂದ ಬರುವ ಬೆನ್ನು ನೋವು. ಇದರಲ್ಲಿ ಎರಡು ವಿಧಗಳಿವೆ. ವಾತ ದೋಷದಿಂದ ಬರುವ ಬೆನ್ನುನೋವು ಮತ್ತು ಕಫ ದೋಷದಿಂದ ಬರುವ ಬೆನ್ನು ನೋವು. ಹೀಗಾಗಿ ರೋಗಿಯ ರೋಗ ಲಕ್ಷಣಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ ಎನ್ನುತ್ತಾರೆ ಡಾ. ಶ್ರೀಲಕ್ಷ್ಮಿ

ಬೆನ್ನು ನೋವು ನಿವಾರಣೆಗೆ ಏನನ್ನು ಮಾಡಬಹುದು?

ಗರ್ಭಿಣಿಯಾಗಿರುವಾಗ ಕಾಡುವ ಬೆನ್ನುನೋವು ನಿವಾರಣೆಗೆ ಟಿಪ್ಸ್ |  Tips-to-prevent-backaches-during-pregnancy - Kannada BoldSky

  • ಇಡೀ ದಿನ ಕುಳಿತುಕೊಳ್ಳುವ ಸಂದರ್ಭದಲ್ಲಿ ಆಗಾಗ ಭಂಗಿಯನ್ನು ಬದಲಿಸಿ. ಬೆನ್ನಿಗೆ ಹೆಚ್ಚು ಒತ್ತಡ ಬೀಳುವಂತೆ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಒಳಿತು.
  • ಬೆನ್ನು ನೋವಿಗೆ ಸುಲಭ ಪರಿಹಾರ ಎಂದರೆ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳುವುದು. ಇದಕ್ಕೆ ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ಮಲಗುವುದು ಮುಖ್ಯವಾಗಿದೆ.
  • ವ್ಯಾಯಾಮವನ್ನು ಮಾಡಬಹುದು. ಕೋರ್‌ ಮಸಲ್ಸ್‌ ವ್ಯಾಯಾಮದ ಮೂಲಕ ಕಾಲು, ಬೆನ್ನುಗಳ ಸ್ನಾಯುವನ್ನು ಬಲಪಡಿಸಿಕೊಳ್ಳಬಹುದು.
  • ಸುಲಭ ವ್ಯಾಯಮವೆಂದರೆ ನೇರವಾಗಿ ಮಲಗಿ ಕಾಲುಗಳನ್ನು 90 ಡಿಗ್ರಿಯಲ್ಲಿ ಮೇಲಕ್ಕೆ ಎತ್ತಿ ಗೋಡೆಗೆ ಆನಿಸಿಕೊಂಡು ಮಲಗುವುದರಿಂದ ಬೆನ್ನಿಗೆ ಆರಾಮದಾಯಕ ಅನುಭವ ಸಿಗುತ್ತದೆ. ಬೆನ್ನು ನೋವು ನಿವಾರಣೆಯಾಗುತ್ತದೆ.

​ವೈದ್ಯರ ಸಲಹೆ

how to cure the back pain: ಸುಲಭವಾಗಿ ಬೆನ್ನು ನೋವನ್ನು ಹೋಗಲಾಡಿಸುವುದು ಹೇಗೆ?  ಆಯುರ್ವೇದ ವೈದ್ಯರ ಸಲಹೆ ಇಲ್ಲಿದೆ - Vijaya Karnataka

ಆಯುರ್ವೇದದ ಮೂಲಕ ನೈಸರ್ಗಿಕ ಪದಾರ್ಥಗಳಿಂದ ಬೆನ್ನು ನೋವನ್ನು ಹೋಗಲಾಡಿಸಬಹುದು. ಅದಕ್ಕಾಗಿ, ತೈಲದ ಚಿಕಿತ್ಸೆ ಹಾಗೂ ಕೆಲವು ಕಷಾಯಗಳನ್ನು ನೀಡಲಾಗುತ್ತದೆ. ಇದರಿಂದ ಅತೀ ಕಡಿಮೆ ಸಮಯದಲ್ಲಿ ವಾತದೋಷದಿಂದ ಉಂಟಾಗುವ ಬೆನ್ನುನೋವನ್ನು ನಿವಾರಿಸಬಹುದಾಗಿದೆ.

ಕೆಲವು ಮಾತ್ರೆ, ಲೇಹಗಳ ಮೂಲಕ ಹಾಗೂ ಮುಖ್ಯವಾಗಿ ಪಂಚಕರ್ಮ ಚಿಕಿತ್ಸೆಯಲ್ಲಿ ಭಸ್ತಿ ಚಿಕಿತ್ಸೆ, ಮಾತ್ರಾ ಭಸ್ತಿ ಹಾಗೂ ಕಟಿ ಭಸ್ತಿಯಂತಹ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಬೆನ್ನು ನೋವನ್ನು ನಿವಾರಣೆ ಮಾಡಲಾಗುತ್ತದೆ ಎನ್ನುವುದು ಡಾ.ಶ್ರೀಲಕ್ಷ್ಮಿ ಅವರ ಸಲಹೆ.

Expert Explain How Can Prevent The Back Pain In Natural Way.