ಲಾಡು, ಪಾಯಸಕ್ಕೆ ಹಾಕುವ ಈ ಲವಂಗದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ

31-05-22 09:04 pm       Source: Vijayakarnataka   ಡಾಕ್ಟರ್ಸ್ ನೋಟ್

ಲವಂಗ ಕೇವಲ ಪಾಯಸ, ಲಾಡುಗೆ ಅಥವಾ ಪವಾಲ್ ಮಾಡುವಾಗ ಮಾತ್ರ ಇದು ಉಪಯೋಗ ಕ್ಕೆ ಬರುತ್ತದೆ, ಎಂದು ಅಂದುಕೊಳ್ಳಬೇಡಿ, ದಿನಾ ಒಂದೆರಡು ಲವಂಗವನ್ನು ಬಾಯಿಗೆಹಾಕಿ ಕೊಂಡು...

ಮನೆಯಲ್ಲಿ ಮಾಡುವ ಅಡುಗೆಗೆ, ಉಪ್ಪು ಹುಳಿ ಖಾರ ಸರಿ ಇದ್ದರೆ ಚೆನ್ನ. ಇಲ್ಲವೆಂದರೆ ಅದನ್ನು ಬಾಯಲ್ಲಿ ಇಡಲಿಕ್ಕು ಸಾಧ್ಯವಿಲ್ಲ. ಈ ಮೂರು ಸಾಮಾಗ್ರಿಗಳಲ್ಲಿ ಒಂದು ಹೆಚ್ಚು, ಅಥವಾ ಒಂದು ಕಡಿಮೆ ಆಗುವ ಹಾಗಿಲ್ಲ! ಸಮಾನ ಪ್ರಮಾಣದಲ್ಲಿ ಇದ್ದರೆಯೇ ಚೆಂದ! ಇದರಿಂದ ಅಡುಗೆಯ ಸ್ವಾದ ಹೆಚ್ಚಾಗುವುದರ ಜೊತೆಗೆ ಬಾಯಿಯ ರುಚಿ ಕೂಡ, ಹೆಚ್ಚಾಗುತ್ತದೆ.

ಇನ್ನು ಇದರ ಜೊತೆಗೆ ಒಗ್ಗರಣೆ ಮತ್ತು ಒಂದಿಷ್ಟು ಮಸಾಲೆ ಪದಾರ್ಥಗಳು ಕೂಡ ಆಹಾರದ ಸ್ವಾದವನ್ನು ಹೆಚ್ಚು ಮಾಡುತ್ತವೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ,ಅಡುಗೆ ಮನೆಯ ಡಬ್ಬದಲ್ಲಿ ಸದಾ ಕಂಡು ಬರುವ ಲವಂಗ. ಸಾಮಾನ್ಯವಾಗಿ ಲವಂಗವನ್ನು ವಿಶೇಷ ಅಡುಗೆ ತಯಾರಿಸುವಾಗ ಬಳಸುತ್ತೇವೆ. ಉದಾಹರಣೆಗೆ ನೋಡುವುದಾದರೆ, ಹಬ್ಬಹರಿದಿನಗಳಲ್ಲಿ ತಯಾರಿಸುವ ಲಾಡು, ಪಾಯಸಕ್ಕೆ ಬಳಸುತ್ತೇವೆ ಇಲ್ಲಾಂದರೆ ಬೆಳಗಿನ ಉಪಹಾರಕ್ಕೆಂದು ತಯಾರು ಮಾಡುವ ತರಕಾರಿ ಪಲಾವ್, ಟೊಮೆಟೋ ಬಾತ್, ಅಥವಾ ವಾರಕ್ಕೊಮ್ಮೆ ಮನೆ ಯಲ್ಲಿ ಚಿಕಬ್ ಬಿಯಾನಿ ಮಾಡುವಾಗಲೂ ಕೂಡ ಇದನ್ನು ಬಳಸುತ್ತೇವೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಸಿಹಿ ಮತ್ತು ಖಾರದ ಅಡುಗೆಗಳಿಗೆ ಲವಂಗ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ ಖಾರದ ಗುಣಲಕ್ಷಣಗಳು ಇದರಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ, ಹೆಚ್ಚಿನವರು ಇದನ್ನು ಸೇವಿಸಲು ಹಿಂದೆ- ಮುಂದೆ ನೋಡಿತ್ತಾರೆ! ಆದರೆ ಬೇರೆ ಬೇರೆ ರೂಪಗಳಲ್ಲಿ ಲವಂಗವನ್ನು, ಇದನ್ನು ನಮ್ಮ ಆಹಾರಕ್ರಮದಲ್ಲಿ ಬಳಸುವುದರಿಂದ ಕೆಳಗಿನ ಕೆಲವೊಂದು ಆರೋಗ್ಯ ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  • ಇತ್ತೀಚಿನ ದಿನಗಳಲ್ಲಿ ರೋಗನಿರೋಧಕ ಶಕ್ತಿಯ ಪ್ರಾಮುಖ್ಯತೆ ಏನೆಂಬುದು ನಮಗೆಲ್ಲಾ ಗೊತ್ತೇ ಇದೆ. ದೇಹದಲ್ಲಿ ರೋಗನಿರೋಧಕ ಶಕ್ತಿ, ಚೆನ್ನಾಗಿದ್ದರೆ ಸಾಧಾರಣವಾಗಿ ಸಣ್ಣಪುಟ್ಟ ಕಾಯಿಲೆ ಯಿಂದ ಹಿಡಿದು, ಕೊರೊನಾ ದಂತಹ ಮಹಾಮಾರಿ ಕಾಯಿಲೆಗಳನ್ನು ಕೂಡ ಎದುರಿಸುವ ಶಕ್ತಿ ನಮ್ಮಲ್ಲಿ ಸಿಗುತ್ತದೆ.
  • ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್‌ ಸಿ ಅಂಶಗಳನ್ನು ಒಳಗೊಂಡಿ ರುವ ಲವಂಗ, ದೇಹದಲ್ಲಿನ ಬಿಳಿ ರಕ್ತ ಕಣಗಳ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದರಿಂದ, ನಮ್ಮ ರೋಗ ನಿರೋಧಕ ವ್ಯವಸ್ಥೆಯು ಕೂಡ ಬಲವಾಗಿ ಯೇ ಇರುತ್ತದೆ, ಇದರಿಂದ ಹಲವಾರು ಸೋಂಕುಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ

Clove (50 gm)

  • ಮನುಷ್ಯನಿಗೆ ತಾವು ಸೇವಿಸಿದ, ಆಹಾರ ಸರಿಯಾಗಿ ಜೀರ್ಣಗೊಂಡರೆ ಮಾತ್ರ ಆರೋಗ್ಯದಿಂದ ಜೀವನ ನಡೆಸಲು ಸಾಧ್ಯ. ಇಲ್ಲಾಂದ್ರೆ ಇದೇ ಸಮಸ್ಯೆಗಳಿಂದಾಗಿ, ದೀರ್ಘಕಾಲದವರೆಗೆ ಅಜೀರ್ಣ ಸಮಸ್ಯೆ ಅಥವಾ ಮಲಬದ್ಧತೆ ಸಮಸ್ಯೆ ಉಂಟಾಗುವ ಸಂಭವ ಹೆಚ್ಚಿರುತ್ತದೆ.
  • ಹೀಗಾಗಿ ಜೀರ್ಣಕ್ರಿಯೆ ಸರಿಯಾಗಿ ನಡೆಯಬೇಕು ಎಂದರೆ, ಮೊದಲು ನಾವು ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು, ಜೊತೆಗೆ ಆರೋಗ್ಯಕಾರಿ ಜೀವನಶೈಲಿಯನ್ನು ಕೂಡ ನಡೆಸ ಬೇಕು ಹೀಗಿದ್ದಾಗ ಮಾತ್ರ ನಮ್ಮ ಜೀರ್ಣಾಂಗಕ್ಕೆ ಸಂಬಂಧ ಪಟ್ಟಂತೆ ಯಾವುದೇ ಸಮಸ್ಯೆಗಳನ್ನು ನಾವು ಕಂಡು ಕೊಳ್ಳಲು ಸಾಧ್ಯವಾಗುವುದಿಲ್ಲ
  • ಇನ್ನು ಒಂದು ವೇಳೆ, ಜೀರ್ಣಕ್ರಿಯೆಗೆ ಸಂಬಂಧಪಟ್ಟಂತೆ, ಏನಾದರೂ ಆರೋಗ್ಯ ಸಮಸ್ಯೆಗಳು ಕಂಡು ಬಂದರೆ, ಒಂದೆರಡು ಲವಂಗವನ್ನು ಬಾಯಿಗೆ ಹಾಕಿ ಜಗಿದು, ಅದರ ರಸವನ್ನು ನುಂಗಿದರೆ, ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆ ಗಳು ನಿವಾರಣೆಯಾಗಿ, ಜೀರ್ಣಕ್ರಿಯೆ ಕೂಡ ಸರಿಯಾಗಿ ನಡೆಯುತ್ತದೆ. ಅಷ್ಟೇ ಅಲ್ಲದೆ, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಲವಂಗ, ದೇಹದಲ್ಲಿ ಜೀರ್ಣ ರಸಗಳನ್ನು ಉತ್ಪತ್ತಿ ಮಾಡುವ ಮೂಲಕ ಈ ಸಮಸ್ಯೆಯನ್ನು ನಿವಾರಿಸುತ್ತದೆ, ಜೊತೆಗೆ ಇದರಲ್ಲಿ ಹೇರಳವಾಗಿ ನಾರಿನಾಂಶ ಕೂಡ ಕಂಡು ಬರುವುದರಿಂದ, ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಕೂಡ ಸದೃಢ ವಾಗಿ ಉಳಿಯಲಿದೆ.

ಲಿವರ್ ಭಾಗದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

how to cleanse liver: ಈ ನೈಸರ್ಗಿಕ ಪಾನೀಯ ಕುಡಿದರೆ ನಿಮ್ಮ ಲಿವರ್ ಕ್ಲೀನ್ ಅಂಡ್  ಕ್ಲಿಯರ್! - Vijaya Karnataka

  • ನಮ್ಮ ದೇಹದ ಒಳಭಾಗದಲ್ಲಿ ಕಂಡುಬರುವ ಅಂಗಾಂಗಗಳ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಯಾಕೆಂದರೆ ಇವುಗಳು ನಮ್ಮ ಕಣ್ಣಿಗೆ ಕಾಣದ, ದೇಹದ ಪ್ರಮುಖ ಅಂಗಾಂಗಳು, ಇವುಗಳ ಕಾರ್ಯ ವೈಖ ರ್ಯಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ, ಕೊನೆಗೆ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! ಇದರಲ್ಲಿ ಪ್ರಮುಖವಾಗಿ ನಮ್ಮ ಲಿವರ್ ಭಾಗದ ರಕ್ಷಣೆಯನ್ನು ನಾವು ಮರೆಯುವಂತಿಲ್ಲ.
  • ದೇಹದ ವಿಷಕಾರಿ ಅಂಶಗಳನ್ನು ದೇಹದಲ್ಲಿ ಉಳಿದುಕೊಳ್ಳದಂತೆ ನೋಡಿಕೊಳ್ಳುವ ಪ್ರಮುಖ ಕಾರ್ಯವನ್ನು, ಈ ಲಿವರ್ ಮಾಡುತ್ತದೆ. ಹೀಗಾಗಿ ಲಿವರ್ ಅಥವಾ ಯಕೃತ್‌ಗೆ ಯಾವುದೇ ಸೋಂಕು ಅಥವಾ ಆರೋಗ್ಯ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬೇಕು ಎಂದರೆ, ಬೆಳಗ್ಗೆ ಎದ್ದ ಕೂಡಲೇ ದಿನಾ ಒಂದೆರಡು ಲವಂಗಗಳನ್ನು ಬಾಯಿ ಗೆ ಹಾಕಿಕೊಂಡು ಜಗಿದು, ಅದರ ರಸ ನುಂಗುತ್ತಾ ಬಂದರೆ, ಲಿವರ್‌ಗೆ ಏನೂ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳಬಹುದು.

ಹಲ್ಲು ನೋವು ಕಡಿಮೆಯಾಗುತ್ತದೆ

  • ಹಲ್ಲು ನೋವನ್ನು ಅನುಭವಿಸಿದವರಿಗೆಯೇ ಗೊತ್ತು, ಇದರ ನೋವು ಏನೆಂಬುದು! ಆದರೆ ಈ ಸಮಸ್ಯೆಗೆ ಲವಂಗ ಬೆಸ್ಟ್ ಮನೆಮದ್ದು ಎಂದು ಹೇಳಬಹುದು. ಇದರಲ್ಲಿ ನೋವು ನಿವಾರಕ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವುದರಿಂದ, ಹಲ್ಲು ನೋವಿಗೆ ಕಾರಣವಾಗುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಹಲ್ಲುಗಳ ಹಾಗೂ ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೆ, ಬಾಯಿಂದ ಬರುವ ದುರ್ವಾಸನೆ ಕೂಡ ಇದರಿಂದ ದೂರವಾಗುತ್ತದೆ
  • ಹೀಗೆ ಮಾಡಿ, ಒಂದುವೇಳೆ, ಆಕಸ್ಮಾತ್ ಆಗಿ ಹಲ್ಲು ನೋವು, ಕಂಡು ಬಂದರೆ, ಬಾಯಿಯಲ್ಲಿ ಒಂದೆರಡು ಲವಂ ಗಗಳನ್ನು ಹಾಕಿಕೊಳ್ಳಿ ಇಲ್ಲಾಂದರೆ, ಒಂದು ಹತ್ತಿ ಉಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ, ನೋವಿರುವ ಭಾಗಕ್ಕೆ ಇಟ್ಟುಬಿಡಿ. ಸ್ವಲ್ಪ ಹೊತ್ತಿನಲ್ಲಿಯೇ ನೋವು ಶಮನ ವಾಗುತ್ತದೆ.

ತಲೆ ನೋವಿಗೆ ಉತ್ತಮ ಪರಿಹಾರ

ತಲೆನೋವಿಗೆ ಸುಲಭ ಪರಿಹಾರ-ಮನೆಮದ್ದು-Home Remedies For Headache-Kannada

  • ಮೊದಲೇ ಹೇಳಿದ ಹಾಗೆ ಲವಂಗಗಳಲ್ಲಿ ನೋವು ನಿವಾರಕ ಅಂಶಗಳು ಹೆಚ್ಚಾಗಿ ಕಂಡು ಬರುವುದರಿಂದ, ಇವು ನೈಸರ್ಗಿಕವಾಗಿ ಮೈಗ್ರೇನ್ ತಲೆ ನೋವು ಅಥವಾ ಸಾಧಾರಣ ತಲೆ ನೋವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಒಂದುವೇಳೆ ನಿಮಗೂ ಕೂಡ ತಲೆ ನೋವಿನ ಸಮಸ್ಯೆಗಳು ಇದ್ದರೆ ಬೆಳಗಿನ ಸಮಯದಲ್ಲಿ ಲವಂಗ ವನ್ನು ಬಾಯಿಯಲ್ಲಿ ಹಾಕಿಕೊಂಡು ಅದರ ರಸ ಕುಡಿಯುವುದರಿಂದ ತಲೆ ನೋವಿಗೆ ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು.
  • ಇನ್ನೂ ಒಂದು ಟ್ರಿಕ್ಸ್ ಇದೆ ನೋಡಿ, ತಿಂಗಳಲ್ಲಿ ಮೂರು ನಾಲ್ಕು ಬಾರಿಯಾದರೂ ವಿಪರೀತ ತಲೆನೋವಿನ ಸಮಸ್ಯೆ ಇರುವವರು,ದಿನಾ ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಲವಂಗದ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲಾಂದರೆ ಲವಂಗದ ಎಣ್ಣೆಯನ್ನು ಹಣೆಯ ಭಾಗಕ್ಕೆ ಮಸಾಜ್ ಮಾಡು ವುದರಿಂದ ಶೀಘ್ರ ಪರಿಹಾರವನ್ನು ಕಂಡುಕೊಳ್ಳಬಹುದು.

 

Know The Health Benefits Of Chewing Two Raw Cloves Everday