ಮಕ್ಕಳಿಗೆ ಪ್ರತಿದಿನ ಬಾದಾಮಿ ತಿನ್ನಿಸಬೇಕು ಯಾಕೆ ಗೊತ್ತಾ?

03-06-22 08:36 pm       Source: Vijayakarnataka   ಡಾಕ್ಟರ್ಸ್ ನೋಟ್

ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಬಾದಾಮಿ ಸೇವನೆಯು ಆರೋಗ್ಯಕರವಾಗಿದೆ. ನೆನಪಿನ ಶಕ್ತಿಯನ್ನು ಉತ್ತಮಗೊಳಿಸುವುದರ ಜೊತೆಗೆ ಮೂಳೆಗಳನ್ನೂ ಬಲಪಡಿಸುವ ಶಕ್ತಿ ಬಾದಾಮಿಗಿದೆ.

ನೀವು ಕೇಳಿರಬಹುದು ಯಾರಿಗಾದರೂ ಯಾವುದೋ ವಿಷ್ಯ ನೆನಪಿಲ್ಲ ಎಂದಾಗ ಬಾದಾಮಿ ತಿನ್ನು ನೆನಪು ಶಕ್ತಿ ಚೆನ್ನಾಗಿ ಆಗುತ್ತೆ ಎಂದು ಹೇಳುವುದನ್ನು. ಇದನ್ನು ಬರೀ ಮಾತಿಗೆ ಹೇಳುತ್ತಾರೆ ಅಂತಾ ನೀವು ತಿಳಿದುಕೊಂಡಿದ್ದೀರಾ? ಇಲ್ಲ ನಿಜವಾಗಿಯೂ ಬಾದಾಮಿ ಸೇವನೆಯು ನಮ್ಮ ನೆನಪಿನ ಶಕ್ತಿಯನ್ನು ಉತ್ತಮವಾಗಿಸುತ್ತದೆ. ಮಕ್ಕಳ ಮೆದುಳು ಸರಿಯಾಗಿ ಬೆಳೆಯಬೇಕೆಂದರೆ ಚುರುಕಾಗಿರಬೇಕೆಂದರೆ ಸಣ್ಣದಿನಿಂದಲೇ ಮೆದುಳಿನ ಬೆಳವಣಿಗೆಗೆ ಬೇಕಾಗಿರುವ ಆಹಾರವನ್ನು ಮಗುವಿನ ಆಹಾರದಲ್ಲಿ ಸೇರಿಸಬೇಕು. ಇದರಿಂದ ಅವರ ಮೆದುಳು ಸರಿಯಾಗಿ ಬೆಳೆಯುತ್ತದೆ. ಬಾದಾಮಿ ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಇದರಿಂದ ಮಕ್ಕಳ ಐಕ್ಯೂ ಮಟ್ಟ ಹೆಚ್ಚುತ್ತದೆ.

ಬಾದಾಮಿಯು ಶೂನ್ಯ ಗ್ಲೈಸೆಮಿಕ್ ಲೋಡ್ ಅನ್ನು ಹೊಂದಿರುತ್ತದೆ. ಇದು ಮಗುವಿನ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬಾದಾಮಿಯನ್ನು ಮಗುವಿಗೆ ತಿನ್ನಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಮೂಳೆಗಳು ಬಲಗೊಳ್ಳುತ್ತವೆ. ಮಗುವಿನ ಬೆಳವಣಿಗೆಗೆ ಬಾದಾಮಿ ಹೇಗೆ ಸಹಾಯ ಮಾಡುತ್ತದೆ ಎಂಬುವುದನ್ನು ನಾವಿಲ್ಲಿ ತಿಳಿಯೋಣ.

​ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ

What Do I Need to Know About Tree Nut Allergies? - Unlock Food

ಬಾದಾಮಿಯು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಬಹಳ ಮುಖ್ಯ. ಬಾದಾಮಿ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಮಕ್ಕಳ ಜ್ಞಾಪಕ ಶಕ್ತಿ ಚೆನ್ನಾಗಿರುತ್ತದೆ. ಇದು ಬರೀ ಮಕ್ಕಳಿಗಷ್ಟೇ ಅಲ್ಲ ದೊಡ್ಡವರೂ ಬಾದಾಮಿಯನ್ನು ಪ್ರತಿದಿನ ಸೇವಿಸುವುದರಿಂದ ಅವರ ನೆನಪಿನ ಶಕ್ತಿ ಉತ್ತಮವಾಗುತ್ತದೆ.

ಮೂಳೆಗಳು ಬಲಿಷ್ಠವಾಗುತ್ತದೆ

ಬಾದಾಮಿ ತಿನ್ನುವುದರಿಂದ ಮಕ್ಕಳ ಮೂಳೆಗಳೂ ಬಲಿಷ್ಠವಾಗಿರುತ್ತವೆ. ಮೂಳೆಯನ್ನು ಆರೋಗ್ಯವಾಗಿರಿಸುತ್ತದೆ. ಇದು ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ, ಇದು ಮೂಳೆಗಳ ಆರೋಗ್ಯಕ್ಕೆ ಅವಶ್ಯಕವಾಗಿದೆ. ಆಟವಾಡುವಾಗ ಮಕ್ಕಳು ಹೆಚ್ಚಾಗಿ ಗಾಯಗೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ, ಮೂಳೆ ಮುರಿತದ ಅಪಾಯವೂ ಹೆಚ್ಚು ಇರುತ್ತದೆ.

ಅದಕ್ಕಾಗಿಯೇ ಮಕ್ಕಳ ಮೂಳೆಗಳನ್ನು ಬಲಪಡಿಸುವುದು ಅವಶ್ಯಕ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ಮ್ಯಾಂಗನೀಸ್, ವಿಟಮಿನ್ ಕೆ, ಪ್ರೋಟೀನ್ ಮತ್ತು ತಾಮ್ರ, ಸತುವು ಸಹ ಬಾದಾಮಿಯಲ್ಲಿದೆ. ಇವೆಲ್ಲವೂ ಮೂಳೆಗಳನ್ನು ಗಟ್ಟಿಯಾಗಿಸಲು ಬಹಳ ಮುಖ್ಯವಾಗಿದೆ.

​ಐಕ್ಯೂ ಮಟ್ಟವನ್ನು ಹೆಚ್ಚಿಸುತ್ತದೆ

5 reasons to eat 4 soaked almonds in the morning every day! | India.com

ಈಗಿನ ಮಕ್ಕಳ ಐಕ್ಯೂ ಲೆವೆಲ್‌ ಸಿಕ್ಕಾಪಟ್ಟೆ ಹೈ ಆಗಿರುತ್ತದೆ. ನಿಮ್ಮ ಮಕ್ಕಳ ಐಕ್ಯೂ ಲೆವೆಲ್‌ ಜಾಸ್ತಿ ಆಗಬೇಕೆಂದರೆ ಪ್ರತಿದಿನ ಬಾದಾಮಿಯನ್ನು ತಿನ್ನಿಸಿ. ಬಾದಾಮಿಯು ಮಕ್ಕಳ ಮೆದುಳಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ಐಕ್ಯೂ ಮಟ್ಟವನ್ನು ಹೆಚ್ಚಿಸುತ್ತದೆ. ಬಾದಾಮಿಯಲ್ಲಿರುವ ಪ್ರೋಟೀನ್ ಮೆದುಳಿನ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ವಿಟಮಿನ್ ಇ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಿವೆ, ಇದು ಮೆದುಳಿನ ಬೆಳವಣಿಗೆಗೆ ಒಳ್ಳೆಯದು. ಬಾದಾಮಿಯು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ, ಇದು ಮೆದುಳಿನ ನರಗಳನ್ನು ಬಲಪಡಿಸುತ್ತದೆ.

​ರೋಗನಿರೋಧಕ ಶಕ್ತಿ ಪ್ರಬಲವಾಗುತ್ತದೆ

Are You Eating Brain Food - Almond - My Healthy Breakfast

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಉತ್ತಮವಾಗಿರಬೇಕು ಆಗ ಮಾತ್ರ ಯಾವುದೇ ರೋಗ ಬಹಳ ಬೇಗನೆ ಅವರನ್ನು ಆವರಿಸುವುದಿಲ್ಲ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ನೀವು ಬಾದಾಮಿಯನ್ನು ಕೊಡಬೇಕು. ಪೋಷಕಾಂಶಗಳಿಂದ ಕೂಡಿದ ಬಾದಾಮಿಯು ಮಕ್ಕಳನ್ನು ರಕ್ತ ಹೆಪ್ಪುಗಟ್ಟುವಿಕೆಯಿಂದ ರಕ್ಷಿಸುತ್ತದೆ. ಬಾದಾಮಿಯು ಪ್ರೋಟೀನ್ ಮತ್ತು ಕಬ್ಬಿಣವನ್ನು ಸಹ ಹೊಂದಿರುತ್ತದೆ, ಇದರ ಹೊರತಾಗಿ ಬಾದಾಮಿ ಮಕ್ಕಳ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

​ದೇಹಕ್ಕೆ ಶಕ್ತಿ ನೀಡುತ್ತದೆ

Here's why consuming soaked almonds are better than raw almonds

ಬಾದಾಮಿಯನ್ನು ಮಕ್ಕಳಿಗೆ ಆರೋಗ್ಯಕರ ತಿಂಡಿಯ ರೂಪದಲ್ಲಿಯೂ ನೀಡಬಹುದು. ಬಾದಾಮಿ ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಬಾದಾಮಿಯು ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ, ಇದರಿಂದಾಗಿ ಮಕ್ಕಳು ತ್ವರಿತ ಶಕ್ತಿಯನ್ನು ಪಡೆಯುತ್ತಾರೆ. ಬಾದಾಮಿಯನ್ನು ನೀವು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ಸೇವಿಸಬಹುದು. ಇಲ್ಲವಾದರೆ ಬಾದಾಮಿಯನ್ನು ತುಪ್ಪದಲ್ಲಿ ಹುರಿದು ತಿನ್ನಬಹುದು. ಬಾದಾಮಿಯಿಂದ ವಿವಿಧ ಸಿಹಿ ತಿಂಡಿಗಳನ್ನೂ ತಯಾರಿಸಬಹುದು.

Almond For Kids Brain Development.