ಹಾರ್ಟ್ ಪ್ರಾಬ್ಲಮ್ ಬರಬಾರದೆಂದರೆ, ಬೀಟ್ರೂಟ್ ಜ್ಯೂಸ್ ಕುಡಿಯಬೇಕು

04-06-22 08:50 pm       Source: Vijayakarnataka   ಡಾಕ್ಟರ್ಸ್ ನೋಟ್

ಬೀಟ್ರೂಟ್ ಅಥವಾ ಇದರ ಜ್ಯೂಸ್ ಮಾಡಿ ಕುಡಿದರೆ, ದೇಹಕ್ಕೆ ರಕ್ತ ಹೆಚ್ಚು ಸೇರುತ್ತದೆ ಎಂದು ಹೇಳುತ್ತಾರೆ. ಆದರೆ ಇದರ ಪ್ರಯೋಜನಗಳು ಇಷ್ಟಕ್ಕೆ ನಿಂತಿಲ್ಲ, ಬದಲಿಗೆ ಅಧಿಕ ರಕ್ತದೊತ್ತಡದ...

ವೈದ್ಯರೇ ಹೇಳುವ ಪ್ರಕಾರ, ಹೃದಯಕ್ಕೆ ಸಮಸ್ಯೆ ಬಂದು, ಅದು ತನ್ನ ಕೆಲಸಕಾರ್ಯಗಳನ್ನು ನಿಲ್ಲಿಸಿ ಬಿಟ್ಟರೆ, ಮನುಷ್ಯ ಈ ಲೋಕದ ಪಯಣವನ್ನು ಮುಗಿಸಿದಂತೆ! ಅದಕ್ಕಾಗಿ ಹೃದಯದ ಆರೋ ಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸಬೇಕು. ಇದಕ್ಕಾಗಿ ಸರಿಯಾದ ಜೀವನಶೈಲಿ ಹಾಗೂ ಆರೋಗ್ಯಕಾರಿ ಆಹಾರಪದ್ಧತಿಗಳನ್ನು ಅನುಸರಿಸಬೇಕು.
ಸಾಮಾನ್ಯವಾಗಿ ದೈನಂದಿನ ಒತ್ತಡದ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಸೇವನೆ ಜೊತೆಗೆ ದೈಹಿಕ ವ್ಯಾಯಾಮ ಇಲ್ಲದೇ ಇರುವುದರಿಂದ, ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆಗಳು ಯುವಜನ ತೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ನಾವು ಸರಿಯಾದ ಆಹಾರ ಕ್ರಮ ಹಾಗೂ ಜೀವನ ಪದ್ಧತಿಯನ್ನು ಅನುಸರಿಸಿಕೊಂಡು ಹೋದರೆ, ಹೃದಯದ ಆರೋಗ್ಯವನ್ನು ಕಾಪಾಡಬಹುದು ಎಂದು ಆಹಾರ ತಜ್ಞರು ಹೇಳುವರು.

ಅದರಲ್ಲೂ ಅಧಿಕ ಕ್ಯಾಲೋರಿ ಇರುವಂತಹ ಆಹಾರಗಳನ್ನು ಹಾಗೂ ಎಣ್ಣೆಯಂಶ ಅಥವಾ ಕೊಬ್ಬಿನಾಂಶವಿರುವಂತಹ ಆಹಾರವನ್ನು ಕಡಿಮೆ ಮಾಡಿಕೊಂಡರೆ, ಹೃದಯದ ಆರೋಗ್ಯ ಕೂಡ ಆರೋಗ್ಯವಾಗಿ ಇರ ಲಿದೆ ಎಂದು ಹೃದಯದ ತಜ್ಞರೇ ಹೇಳುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಹೋಗಲಾಡಿಸಲು ಬೀಟ್ರೋಟ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ...

ಬೀಟ್ರೂಟ್ ಉಪಯೋಗ

Harvested beets | Kellogg Garden Organics™

  • ಕತ್ತರಿಸುವಾಗ ಕೆಂಪಗೆ ಕಾಣುತ್ತದೆ ಎನ್ನುವ ಒಂದೇ ಕಾರಣಕ್ಕೆ ಹೆಚ್ಚಿನವರು ಈ ತರಕಾರಿಯನ್ನು ಇಷ್ಟವಾಗು ವುದಿಲ್ಲ. ಆದರೆ ನಿಜ ಹೇಳಬೇಕೆಂದರೆ ನಾಲ್ಕೈದು ತರಕಾರಿಗಳಲ್ಲಿ ಸಿಗುವ ಆರೋಗ್ಯದ ಲಾಭಗಳು, ಈ ತರಕಾರಿಯಲ್ಲಿ ಸಿಗುತ್ತದೆ ಎಂದರೆ, ನೀವೇ ಲೆಕ್ಕ ಹಾಕಿ? ಹೀಗಾಗಿ ಅಪ್ಪಿ-ತಪ್ಪಿಯೂ ಕೂಡ ಅಡುಗೆಯಲ್ಲಿ ಬೀಟ್ರೂಟ್ ಅನ್ನು ಮಿಸ್ ಮಾಡಬೇಡಿ.
  • ಮುಖ್ಯವಾಗಿ ಈ ತರಕಾರಿಯಲ್ಲಿ ನೈಟ್ರೇಟ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮಪಡಿಸಿ, ಹೃದಯದ ಆರೋಗ್ಯವನ್ನು ಕೂಡ ಕಾಪಾ ಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೀಗಿರುವಾಗ ಇಂತಹ ಒಂದು ಅದ್ಭುತ ತರಕಾರಿ ಯನ್ನು ಕಡೆಗಣಿಸಲು ಸಾಧ್ಯವೇ? ಖಂಡಿತ ಇಲ್ಲ ಅಲ್ಲವೇ? ಹಾಗಾದ್ರೆ ಇಂದೇ ಬೀಟ್ರೋಟ್‌ನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿ

ಹೃದಯಕ್ಕೆ ಒಳ್ಳೆಯದು

  • ಮೊದಲೇ ಹೇಳಿದ ಹಾಗೆ, ಈ ತರಕಾರಿಯಲ್ಲಿ ನೈಟ್ರೇಟ್ ಅಂಶ ಯಥೇಚ್ಛವಾಗಿ ಕಂಡು ಬರುತ್ತದೆ. ಇವು ದೇಹದ ರಕ್ತಸಂಚಾರ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ರಕ್ತನಾಳಗಳನ್ನು ಹಿಗ್ಗಿಸಿ, ಸರಿಯಾಗಿ ರಕ್ತಸಂಚಾರ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುತ್ತದೆ. ಇದರಿಂದ ಹೃದಯದ ಮಾಂಸ ಖಂಡಗಳಿಗೆ ಹಾಗೂ ಪಂಪಿಂಗ್ ಪ್ರಕ್ರಿಯೆಗಳಿಗೆ ಇದು ಅನು ಕೂಲವಾಗುತ್ತದೆ.
  • ಅದರಲ್ಲೂ ದಿನಕ್ಕೊಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ, ಹೈಬಿಪಿ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ, ಅಲ್ಲದೆ ರಕ್ತದಲ್ಲಿ ಏರುಪೇರು ಆಗುವ ಪ್ರಕ್ರಿಯೆ ಕೂಡ ನಿಯಂತ್ರಣಕ್ಕೆ ಬಂದು, ಹೃದಯಕ್ಕೆ ಯಾವುದೇ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ಬೀಟ್ರೂಟ್ ಜ್ಯೂಸ್

Patients Suffering From These Diseases Must Avoid Beetroot At All Costs

  • ವಿಟಮಿನ್ ಸಿ, ವಿಟಮಿನ್ ಬಿ6, ಪೊಟಾಶಿಯಂ, ಕಬ್ಬಿನಾಂಶ, ಕ್ಯಾಲ್ಸಿಯಂ, ಖನಿಜಾಂಶಗಳು ಹಾಗೂ ಹಲ ವಾರು ಬಗೆಯ ಪೌಷ್ಟಿಕ ಸತ್ವಗಳು ಇದರಲ್ಲಿ ಹೇರಳವಾಗಿ ಕಂಡುಬರುವುದರಿಂದ, ಪ್ರತೀ ನಿತ್ಯ ಒಂದು ಲೋಟ ಬೀಟ್ ರೂಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಅತಿಯಾದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ, ಇದರಿಂದ ಹೃದಯದ ಆರೋಗ್ಯ ಕೂಡ ವೃದ್ಧಿ ಯಾಗುತ್ತದೆ.
  • ಅಷ್ಟೇ ಅಲ್ಲದೆ, ದೇಹದ ರಕ್ತ ನೈಸರ್ಗಿಕವಾಗಿ ಶುದ್ಧೀಕರಣ ಆಗುವುದರಿಂದ, ದೇಹದಲ್ಲಿ ಶೇಖರಣೆ ಗೊಂಡ ವಿಷಕಾರಿ ಅಂಶಗಳು ಮೂತ್ರ ವಸರ್ಜನೆಯ ಮೂಲಕ ಹೊರ ಹೊರ ಹೋಗಲು ಸಹಾ ಯವಾಗುತ್ತದೆ. ಅಲ್ಲದೆ ಸಣ್ಣವಯಸ್ಸಿನಲ್ಲಿ ಕಾಡುವ ಚರ್ಮದ ಸುಕ್ಕಿನ ಸಮಸ್ಯೆಗಳು ಕೂಡ ದೂರವಾಗುತ್ತದೆ.

ಬೀಟ್ರೂಟ್ ಜ್ಯೂಸ್ ತಯಾರು ಮಾಡುವುದು ಹೇಗೆ?

Can Juicing Help Lower Blood Pressure? - Tastylicious

  • ಎರಡು ಮಧ್ಯಮ ಗಾತ್ರದ ಬೀಟ್ರೋಟ್ ತೆಗೆದುಕೊಂಡು ಅವುಗಳನ್ನು ಚೆನ್ನಾಗಿ, ನೀರಿನಿಂದ ಸ್ವಚ್ಛ ಮಾಡಿ, ಇದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ
  • ಆಮೇಲೆ ಸಣ್ಣದಾಗಿ ಹೋಳು ಮಾಡಿಕೊಂಡು, ಮಿಕ್ಸರ್ ಜಾರ್‌ಗೆ ಹಾಕಿ, ಇದಕ್ಕೆ ಒಂದು ಲೋಟ ನೀರು ಸೇರಿಸಿ, ಚೆನ್ನಾಗಿ ರುಬ್ಬಿಕೊಳ್ಳಿ. ಆ ಬಳಿಕ, ಇದನ್ನು ಸೋಸಿಕೊಂಡು ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಹಿಂಡಿ ರುಚಿಯನ್ನು ಹೆಚ್ಚು ಮಾಡಿಕೊಳ್ಳಬಹುದು.

 

Beet Juice Lowers Blood Pressure And Keep Your Heart Healthy.