ಬ್ರೇಕಿಂಗ್ ನ್ಯೂಸ್
08-06-22 07:17 pm Source: Vijayakarnataka ಡಾಕ್ಟರ್ಸ್ ನೋಟ್
ಅನೇಕ ಹಣ್ಣುಗಳು ನಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಅಂತಹ ಹಣ್ಣುಗಳಲ್ಲಿ ಸ್ಟಾರ್ ಫ್ರುಟ್ ಅಥವಾ ಕ್ಯಾರಂಬೋಲಾ ಹಣ್ಣು ಕೂಡ ಒಂದು. ನಕ್ಷತ್ರದ ಆಕೃತಿಯಲ್ಲಿರುವ ಈ ಹಣ್ಣು ದೇಹದಲ್ಲಿನ ಅನೇಕ ಸಮಸ್ಯೆಗಳನ್ನು ಸುಧಾರಿಸಲು ಸಹಕಾರಿಯಾಗಿದೆ.
ನಕ್ಷತ್ರದ ಹಣ್ಣುಗಳು ಮೊದಲು ಹಸಿರು ಬಣ್ಣದಲ್ಲಿ ಇರುತ್ತವೆ. ನಂತರ ಹಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಾಗಿದ ನಕ್ಷತ್ರದ ಹಣ್ಣು ತಿರುಳಿರುವ, ಕುರುಕುಲಾದ ಮತ್ತು ರಸಭರಿತವಾಗಿರುತ್ತದೆ. ಜೊತೆಗೆ ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯನ್ನು ಹೊಂದಿರುತ್ತದೆ. ಸಣ್ಣ ನಕ್ಷತ್ರದ ಹಣ್ಣುಗಳು ದೊಡ್ಡ ಹಣ್ಣುಗಳಿಗಿಂತ ಹೆಚ್ಚು ರುಚಿಕರವಾಗಿರುತ್ತವೆ.
ಈ ಹಣ್ಣಿನಲ್ಲಿ ಹೇರಳವಾದ ವಿಟಮಿನ್ ಬಿ, ಸಿ, ಸೋಡಿಯಂ, ಪೊಟ್ಯಾಸಿಯಂ, ಫೈಬರ್, ಕ್ಯಾಲ್ಸಿಯಂ ಅಂಶಗಳು ಅಡಕವಾಗಿದೆ. ಹಾಗಾದರೆ ಈ ನಕ್ಷತ್ರ ಹಣ್ಣು ಯಾವೆಲ್ಲ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಸ್ಟಾರ್ ಫ್ರುಟ್ ಹೃದಯವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ಪೊಟ್ಯಾಸಿಯಂ ಅಂಶಗಳು ಹೃದಯ ಸ್ತಂಭನವನ್ನು ತಡೆಯುತ್ತದೆ. ಅಲ್ಲದೆ ರಕ್ತದ ಹರಿವನ್ನು ಸುಧಾರಿಸುತ್ತದೆ.
ನೀವು ಸ್ಟಾರ್ ಫ್ರುಟ್‌ನ್ನು ಸೇವಿಸುತ್ತೀರಿ ಎಂದರೆ ಹಸಿದ ಹೊಟ್ಟೆಯಲ್ಲಿ ಸೇವನೆ ಮಾಡಬೇಡಿ. ಊಟವಾದ ಬಳಿಕ ತಿಂದರೆ ಒಳ್ಳೆಯದು.
ಮಧುಮೇಹಕ್ಕೂ ಒಳ್ಳೆಯದು
ಮಧುಮೇಹ ಇರುವವರು ಈ ಹಣ್ಣನ್ನು ಸುಲಭದಲ್ಲಿ ಸೇವನೆ ಮಾಡಬಹುದಾಗಿದೆ. ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಸುಧಾರಿಸಲು ಈ ಸ್ಟಾರ್ ಫ್ರುಟ್ ಸಹಕಾರಿಯಾಗಿದೆ. ಹೀಗಾಗಿ ಮಧುಮೇಹಿಗಳು ಈ ಹಣ್ಣನ್ನು ಸೇವನೆ ಮಾಡಬಹುದು. ಅಲ್ಲದೆ ಸ್ಟಾರ್ ಫ್ರುಟ್ ನಲ್ಲಿ ಫೈಬರ್ ಅಂಶ ಸಮೃದ್ಧವಾಗಿರುವ ಕಾರಣ ಮಧುಮೇಹವನ್ನು ನಿಯಂತ್ರಿಸುತ್ತದೆ.
ಜೀರ್ಣಕ್ರಿಯೆಗೆ ಉಪಯುಕ್ತ
ಫೈಬರ್ ಅಂಶ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಸ್ಟಾರ್ ಫ್ರುಟ್‌ನಲ್ಲಿ ಫೈಬರ್ ಅಂಶ ಹೇರಳವಾಗಿರುವ ಕಾರಣ ಇದು ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಸ್ಟ್ರಾರ್ ಫ್ರುಟ್‌ನ್ನು ನೀವು ಕಿಚಡಿ ಮಾಡಿ ತಿನ್ನಬಹುದಾಗಿದೆ.
ಊಟದ ನಂತರ ಬೇಕಾದರೂ ಈ ಹಣ್ಣನ್ನು ಸೇವನೆ ಮಾಡಬಹುದು. ಮಾಂಸಹಾರ, ಕೆಲವು ಗಟ್ಟಿ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಅಜೀರ್ಣತೆ ಉಂಟಾಗಿ ತೊಂದರೆಯಾದರೆ ಈ ಸ್ಟಾರ್ ಫ್ರುಟ್‌ನ್ನು ಸೇವನೆ ಮಾಡಿ.
ವಿಟಮಿನ್ ಸಿ ಯ ಆಗರ
ಸ್ಟಾರ್ ಫ್ರುಟ್‌ನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಹೀಗಾಗಿ ಇದು ದೇಹದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೆ ಹೇರಳವಾದ ನೀರಿನಾಂಶವಿರುವ ಕಾರಣ ದೇಹ ನಿರ್ಜಲೀಕರಣವಾಗದಂತೆ ತಡೆಯುತ್ತದೆ.
ಇದರ ಜ್ಯೂಸ್ ಮಾಡಿ ಸೇವನೆ ಮಾಡಬಹುದು. ಆದರೆ ನೆನಪಿಡಿ ಹುಳಿ ಇರುವ ಕಾರಣ ಹೆಚ್ಚಿನ ಸೇವನೆ ಮಾಡುವುದು ಒಳ್ಳೆಯದಲ್ಲ. ಪಿತ್ತವಾದರೆ ಕಷ್ಟ.
ಉರಿಯೂತವನ್ನು ತಡೆಯುತ್ತದೆ
ಕೆಲವೊಮ್ಮೆ ನರಗಳ ಸಮಸ್ಯೆಯಾದರೆ ದೇಹದಲ್ಲಿ ಉರಿಯೂತ ಉಂಟಾಗುತ್ತದೆ. ಕಾಲು, ಕೈಗಳ ನರಗಳು ಇದ್ದಕ್ಕಿಂತೆ ಉರಿಯಲು ಆರಂಭವಾಗುತ್ತವೆ. ಇದನ್ನು ತಡೆಯಲು ಸ್ಟಾರ್ ಫ್ರುಟ್ ಸಹಾಯಕವಾಗಿದೆ.
ನಿಯಮಿತವಾಗಿ ಅಲ್ಲದಿದ್ದರೂ ವಾರದಲ್ಲಿ ಒಮ್ಮೆಯಾದರೂ ಈ ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ದಂತ ಸಮಸ್ಯೆಗಳನ್ನೂ ದೂರವಾಗಿಸಬಹುದು.
Health Benefits Of Star Fruit.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm