ಮಳೆಗಾಲದಲ್ಲಿ ಮಾವಿನ ಹಣ್ಣು-ಕಲ್ಲಂಗಡಿ ಹಣ್ಣು, ಬಜ್ಜಿ ಬೋಂಡಾ ತಿನ್ನಲೇಬಾರದಂತೆ!!

11-06-22 09:17 pm       Source: Vijayakarnataka   ಡಾಕ್ಟರ್ಸ್ ನೋಟ್

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುವುದರಿಂದ, ಆದಷ್ಟು ಈ ಸಮಯದಲ್ಲಿ ಮಾವಿನಹಣ್ಣು, ಕಲ್ಲಂಗಡಿಹಣ್ಣು, ಹಾಗೂ ಎಣ್ಣೆಪದಾರ್ಥಗಳಿಂದ ಎಲ್ಲಾ...

 ಕಾಲಕ್ಕೆ ಅನುಸಾರವಾಗಿ, ನಮ್ಮ ದೈನಂದಿನ ಆಹಾರಪದ್ಧತಿ ಹಾಗೂ ಜೀವನಶೈಲಿ ಎರಡೂ ಕೂಡ ಬದಲಾಗಬೇಕು, ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಯಾಕೆಂದರೆ ಪ್ರಸ್ತುತ ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳು ಕಳೆದು ಹೋಯಿತು! ಅಂದರೆ, ಈಗಾಗಲೇ ಬೇಸಿಗೆ ಕಾಲ ಕಳೆದು, ಮಳೆಗಾಲ ಈಗಾಗೇ ಶುರುವಾಗಿದೆ ಎಂದರ್ಥ!

ಈ ಸಮಯದಲ್ಲಿ ವಾತಾವರಣದಲ್ಲಿ ಏರುಪೇರು ಉಂಟಾಗಿ, ಯಾವ ಸಮಯದಲ್ಲಿ ಮಳೆ ಶುರುವಾಗು ತ್ತದೆ ಎಂದು ಹೇಳಲಾಗುವುದಿಲ್ಲ! ಕೆಲವು ಕಡೆ ಧೋ ಎಂದು ಸಡನ್ ಆಗಿ ಸುರಿಯುವ ಮಳೆ ಇನ್ನು ಕೆಲವು ಕಡೆ ಸಣ್ಣ ಸಣ್ಣ ಹನಿಗಳ ಮೂಲಕ ವಾತಾವರಣಕ್ಕೆ ತಂಪೆರೆಯುತ್ತದೆ. ಈ ಸಮಯದಲ್ಲಿ ಬಹಳಷ್ಟು ಆರೋಗ್ಯ ಸಮಸ್ಯೆಗಳು ಜನರಿಗೆ ಕಂಡು ಬರುವುದು ಸಹಜ, ಕೆಲವೊಮ್ಮೆ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಗಳಿಂದ ಹಿಡಿದು, ಕೊನೆಗೆ, ಆಸ್ಪತ್ರೆಯಲ್ಲಿ ಮಲಗುವ ಪರಿಸ್ಥಿತಿಗೆ ತಂದು ತಲುಪಿಸುತ್ತದೆ!

ಹೀಗಾಗಿ ಮಳೆಗಾಲದಲ್ಲಿ ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮುಖ್ಯ ವಾಗಿ ನಾವು ಸೇವಿಸುವ ಆಹಾರಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು, ಅದರಲ್ಲೂ ಕೆಲವೊಂದು ಆಹಾರಗಳನ್ನು, ಪಾನೀಯಗಳನ್ನು ಹಾಗೂ ಹಣ್ಣುಗಳನ್ನು ಮಳೆಗಾಲ ಮುಗಿಯುವವರೆಗೂ ಕೂಡ ಸೇವಿಸಬಾರದು! ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ, ಮುಂದೆ ಓದಿ...

ಕಡಿಮೆ ಬೆಲೆಗೆ ಮಾವಿನ ಹಣ್ಣು ಸಿಕ್ಕರೂ ಕೂಡ ತಿನ್ನಲು ಹೋಗಬೇಡಿ...

A New Hybrid Variety of Mangoes Has Anti-Cancerous Properties, Can Lower  Blood Sugar Levels, Says Study

  • ಸಂಕ್ರಾಂತಿ ಹಬ್ಬ ಕಳೆದು, ಯುಗಾದಿ ಹಬ್ಬ ಶುರುವಾಗುವ ಸಮಯದಲ್ಲಿ ಅಂದರೆ ಬೇಸಿಗೆ ಕಾಲ ಪ್ರಾರಂಭವಾಗುವಾಗ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಕಾರುಬಾರು, ಬಹಳ ಜೋರಾಗಿಯೇ ನಡೆಯುತ್ತಿರುತ್ತದೆ. ಕೊನೆಗೆ ಬೇಸಿಗೆ ಮುಗಿದು, ಮಳೆಗಾಲ ಶುರುವಾದ ನಂತರವೂ ಕೂಡ ಮಾವಿನ ಹಣ್ಣು ಮಾತ್ರ, ಎಲ್ಲಾ ಕಡೆ ಕಾಣಲು ಸಿಗುತ್ತದೆ. ಈ ಸಮಯದಲ್ಲಿ ಈ ಹಣ್ಣಿನ ಬೆಲೆಯಲ್ಲಿ ಕಡಿಮೆ ಇರುವುದರಿಂದ, ಜನರು ಇಷ್ಟಪಟ್ಟು ಮಾವಿನಹಣ್ಣನ್ನು ಖರೀದಿಸಿ, ಸೇವನೆ ಮಾಡುತ್ತಾರೆ!
  • ಆದರೆ ಈ ಬಗ್ಗೆಆರೋಗ್ಯ ತಜ್ಞರು ಎಚ್ಚರಿಸುತ್ತಾರೆ! ಮಳೆಗಾಲ ಆರಂಭವಾದ ಬಳಿಕ ಮಾವಿನ ಹಣ್ಣು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು, ತಜ್ಞರ ಮಾತು! ಇದಕ್ಕೆ ಮುಖ್ಯ ಕಾರಣ ಈ ಹಣ್ಣಿನಲ್ಲಿ ನೀರಿನಾಂಶ ಹಾಗೂ ಸಕ್ಕರೆಯ ಪ್ರಮಾಣ ಹೇರಳವಾಗಿ ಕಂಡು ಬರುವುದ ರಿಂದ, ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬರುವ ಅಪಾಯ ಹೆಚ್ಚಿರುತ್ತದೆಯಂತೆ! ಅದರಲ್ಲೂ ಕೆಲವೊಮ್ಮೆ ಈ ಹಣ್ಣನ್ನು ಸೇವನೆ ಮಾಡುವುದರಿಂದ ಜ್ವರ, ಶೀತ, ಕೆಮ್ಮಿನ ಸಮಸ್ಯೆ ಉಂಟಾಗುವ ಅಪಾಯ ಕೂಡ ಹೆಚ್ಚಿರುತ್ತದೆಯಂತೆ.

ಕಲ್ಲಂಗಡಿ ಹಣ್ಣು ಮತ್ತು ಕರ್ಬೂಜ ಹಣ್ಣು

Harvesting Watermelons: The Right Time To Pick A Watermelon

  • ಕಲ್ಲಂಗಡಿ ಹಾಗೂ ಕರ್ಬೂಜದ ಹಣ್ಣನ್ನು ಬೇಸಿಗೆಯಲಿ ಎಷ್ಟು ಹೊಗಳಿದರೂ ಸಾಲದು! ತನ್ನಲ್ಲಿ ಅಪಾರ ಪ್ರಮಾಣದ ನೀರಿನಾಂಶವನ್ನು ಒಳಗೊಂಡಿರುವ ಈ ಎರಡೂ ಹಣ್ಣುಗಳು, ದೇಹದ ನಿರ್ಜ ಲೀಕರಣ ಸಮಸ್ಯೆಯನ್ನು ಹೋಗಲಾಡಿಸಿ, ಹಲವು ರೀತಿಯ ಪೌಷ್ಟಿಕ ಸತ್ವಗಳನ್ನು ದೇಹಕ್ಕೆ ಒದಗಿಸಿ ಕೊಡುತ್ತದೆ.
  • ಆದರೆ ಬೇಸಿಗೆ ಕಾಲ ಕಳೆದ ನಂತರ, ಇವು ಎರಡೂ ಹಣ್ಣುಗಳಿಂದ ಕೂಡ ದೂರವಿರಬೇಕೆಂತೆ! ಯಾಕೆಂದರೆ, ದೇಹಕ್ಕೆ ತುಂಬಾನೇ ತಂಪು ನೀಡುವ ಈ ಹಣ್ಣುಗಳು, ಮಳೆಗಾಲದಲ್ಲಿ ಸೇವಿಸಿದರೆ, ಶೀತ, ಜ್ವರ ಬರುವ ಸಾಧ್ಯತೆ ಹೆಚ್ಚಿರುತ್ತದೆಯಂತೆ.
  • ಅಷ್ಟೇ ಅಲ್ಲದೆ ಈ ಎರಡೂ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶ ಇರುವುದರಿಂದ, ಹಾಗೂ ಮಳೆಗಾಲದಲ್ಲಿ ನಮ್ಮ ದೇಹಕ್ಕೆ ಅಷ್ಟು ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇಲ್ಲದೆ ಇರುವುದರಿಂದ, ಇವುಗಳ ಸೇವನೆಯನ್ನು ಮಿತಿಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಅಥವಾ ಈ ಎರಡೂ ಹಣ್ಣು ಗಳಿಂದ ದೂರವಿದ್ದರೆ, ಬಹಳ ಒಳ್ಳೆಯದು.

ಡೈರಿ ಉತ್ಪನ್ನಗಳು

Make curd at home in 2 easy ways but keep these things in mind | NewsTrack  English 1

  • ಮಳೆಗಾಲದಲ್ಲಿ ಹಾಲಿನ ಉಪಉತ್ಪನ್ನಗಳನ್ನು ಮಿತವಾಗಿ ಸೇವಿಸಬೇಕು. ಉದಾಹರಣೆಗೆ ಡೈರಿ ಉತ್ಪನ್ನ ಗಳಾದ ಚೀಸ್, ಪನ್ನೀರ್ ಇಂತಹ ಆಹಾರ ಪದಾರ್ಥಗಳನ್ನು ಮಿತವಾಗಿ ಸೇವಿಸಬೇಕು. ಇನ್ನು ಮಳೆಗಾಲ ದಲ್ಲಿ ಶೀತ, ಜ್ವರ, ಕಫದ ಸಮಸ್ಯೆ ಇರುವವರು, ಮೊಸರು ಮಜ್ಜಿಗೆಯನ್ನು ಮಿತ ವಾಗಿ ಸೇವಿಸಬೇಕು.
  • ಊಟದ ಜೊತೆಗೆ ಸ್ವಲ್ಪ ಮೊಸರು ಅಥವಾ ಒಂದು ಲೋಟ ಮಜ್ಜಿಗೆಯನ್ನು ಕುಡಿಯುವುದರಿಂದ, ನಾವು ಸೇವಿಸಿ ಆಹಾರ ಪದಾರ್ಥಗಳು ದೇಹದಲ್ಲಿ ಬಹಳ ಬೇಗನೆ ಜೀರ್ಣವಾಗುತ್ತವೆ. ಯಾಕೆಂದರೆ ಇವೆರಡರಲ್ಲೂ ಕೂಡ ಪ್ರೋಬಯೋಟಿಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಉಪ್ಪಿನಾಂಶ ಹಾಗೂ ಎಣ್ಣೆ ಅಂಶ ಇರುವ ಆಹಾರಗಳಿಂದ ದೂರವಿರಿ

  • ಉಪ್ಪಿನಾಂಶ ಹಾಗೂ ಎಣ್ಣೆ ಅಂಶ ಇರುವ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನು ವುದು ನಮಗೆ ಗೊತ್ತೇ ಇದೆ. ಅದರಲ್ಲೂ ಮಳೆಗಾಲದಲ್ಲಿ ಎಣ್ಣೆಯಿಂದ ಮಾಡಿದ ತಿಂಡಿ ತಿನಿಸುಗಳು ಉದಾಹರಣೆಗೆ ಬಿಸಿಬಿಸಿ ಬೋಂಡಾ, ಕಬಾಬ್, ಇತರ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಸೇವಿಸಲು ಹೋಗಬೇಡಿ.
  • ಅಷ್ಟೇ ಅಲ್ಲದೆ, ಉಪ್ಪಿನಾಂಶ ಹೆಚ್ಚಿರುವ ಸ್ನ್ಯಾಕ್ಸ್ ಗಳಾದ ಆಲೂಗಡ್ಡೆ ಚಿಪ್ಸ್, ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ, ಹೃದಯಕ್ಕೆ ಸಮಸ್ಯೆ ಬರುವುದು ಮಾತ್ರವಲ್ಲದೆ, ಹೊಟ್ಟೆಗೆ ಸಂಬಂಧ ಪಟ್ಟ ಕಾಯಿಲೆಗಳು ಕೂಡ ಬರುವ ಅಪಾಯ ಹೆಚ್ಚಿ ರುತ್ತದೆ.

Monsoon Diet What Type Of Food We Must Avoid In Rainy Season.