ದೊಡ್ಡ ದೊಡ್ಡ ಕಾಯಿಲೆಗಳನ್ನು ಗುಣಪಡಿಸುತ್ತೆ ಈ ಸಿಹಿ ಗೆಣಸು!

31-12-22 07:14 pm       Source: Vijayakarnataka   ಡಾಕ್ಟರ್ಸ್ ನೋಟ್

ಸಂಕ್ರಾಂತಿ ಹಬ್ಬದ ಸಂದರ್ಭಕ್ಕೆ ತಕ್ಕಂತೆ ಹೇರಳವಾಗಿ ಎಲ್ಲಾ ಕಡೆ ಸಿಗುವ ಸಿಹಿ ಗೆಣಸನ್ನು ತಿನ್ನುವುದರಿಂದ ಹಲವು ಲಾಭಗಳಿವೆ. ನೀವು ಕೂಡ ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಚಳಿಗಾಲದ ಮಧ್ಯಭಾಗದಲ್ಲಿ ಹೊಸ ವರ್ಷವನ್ನು ವೆಲ್ಕಮ್ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಆರೋಗ್ಯದ ಕಡೆಗೂ ಗಮನ ಕೊಡುವುದು ಒಳ್ಳೆಯದು. ಹಲವಾರು ಪ್ರತಿಜ್ಞೆಗಳನ್ನು ಮನಸ್ಸಿನಲ್ಲಿ ಮಾಡಿಕೊಂಡು ಹೊಸ ವರ್ಷದಲ್ಲಿ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಹೊಸ ಆರೋಗ್ಯಕರವಾದ ಜೀವನ ಶೈಲಿಯನ್ನು ರೂಡಿ ಮಾಡಿಕೊಂಡರೆ ಆರೋಗ್ಯ ಚೆನ್ನಾಗಿರುತ್ತದೆ.

ಹೊಸ ವರ್ಷದ ಸಂದರ್ಭದಲ್ಲಿ ಬರುವ ಮೊಟ್ಟ ಮೊದಲನೆಯ ಹಬ್ಬವಾದ ಸಂಕ್ರಾಂತಿ ಸಮಯದಲ್ಲಿ ತಿನ್ನುವ ಸಿಹಿ ಗೆಣಸು ಆರೋಗ್ಯಕ್ಕೆ ತುಂಬಾ ಲಾಭಕಾರಿ. ವರ್ಷದ ಎಲ್ಲಾ ಸಮಯದಲ್ಲೂ ಮಾರು ಕಟ್ಟೆಯಲ್ಲಿ ಇದು ಸಿಗುತ್ತದೆ. ಆದರೆ ಈಗ ಸೀಸನ್. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಆರೋಗ್ಯ ತಜ್ಞರಾದ ಲವ್ನೀತ್ ಬತ್ರ ಈ ರೀತಿ ಹೇಳಿದ್ದಾರೆ.

ಜೀರ್ಣ ಶಕ್ತಿ ಹೆಚ್ಚಿಸುತ್ತದೆ

3 Signs Your Abdominal Pain May Be Serious - BASS Urgent Care

ಇದಕ್ಕೆ ಕಾರಣ ಸಿಹಿ ಗೆಣಸು ತನ್ನಲ್ಲಿ ನಾರಿನ ಅಂಶವನ್ನು ಅಪಾರವಾಗಿ ಹೊಂದಿರುವುದು. ಮಲಬದ್ಧತೆ ಸಮಸ್ಯೆಯನ್ನು ಇದು ನಿವಾರಣೆ ಮಾಡುತ್ತದೆ ಮತ್ತು ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆ, ನಿಮ್ಮದಾಗುವ ಹಾಗೆ ಮಾಡುತ್ತದೆ. ಯಾವುದೇ ಸಂದರ್ಭದಲ್ಲಿ ಬೇಕಾದರೂ ನೀವು ಇದನ್ನು ತಿನ್ನಬಹುದು.

ಕ್ಯಾನ್ಸರ್ ತೊಂದರೆಯನ್ನು ಕಡಿಮೆ ಮಾಡುತ್ತದೆ

ಸಿಹಿ ಗೆಣಸು ತನ್ನಲ್ಲಿ ಕ್ಯಾರೋಟಿನಾಯ್ಡ್ ಪ್ರಮಾಣವನ್ನು ಅಧಿಕವಾಗಿ ಹೊಂದಿರುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಇದು ಕಡಿಮೆ ಮಾಡುತ್ತದೆ. ಇದರ ಜೊತೆಗೆ anthocyanin ಎಂಬ ಅಂಶ ಇದರಲ್ಲಿ ಹೆಚ್ಚಾಗಿರುವುದರಿಂದ ಮುಂಬರುವ ದಿನಗಳಲ್ಲಿ ಕ್ಯಾನ್ಸರ್ ಸಾಧ್ಯತೆಯನ್ನು ಇದು ತಡೆಗಟ್ಟುತ್ತದೆ.

ಮಾನಸಿಕ ಒತ್ತಡ ನಿರ್ವಹಣೆ ಮಾಡುತ್ತದೆ

ಸಿಹಿ ಆಲೂಗಡ್ಡೆ ತನ್ನಲ್ಲಿ ಮೆಗ್ನೀಷಿಯಂ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದೆ. ಇದು ದಿನದ ಸಾಧಾರಣ ಕಾರ್ಯ ಚಟುವಟಿಕೆಗೆ ದೇಹಕ್ಕೆ ಸಾಕಷ್ಟು ಅನುಕೂಲವಾಗುತ್ತದೆ. ಪ್ರಮುಖವಾಗಿ ಮೆಗ್ನೀಷಿ ಯಮ್ ಮಾನಸಿಕ ಒತ್ತಡ ಮತ್ತು ಆತಂಕವನ್ನು ಸಾಕಷ್ಟು ಕಡಿಮೆ ಮಾಡುತ್ತದೆ.

ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಸಿಗುತ್ತದೆ

Health benefits and recipes of the humble sweet potato – Naturally Yours

  • ಈಗ ಚಳಿಗಾಲ ಆಗಿರುವುದರಿಂದ ನಮ್ಮ ಚರ್ಮ ಶೀತದ ಗಾಳಿಯ ಪ್ರಭಾವದಿಂದ ಒಣಗುತ್ತದೆ. ಆದರೆ ಸಿಹಿ ಆಲೂಗಡ್ಡೆ ಸೇವನೆ ಮಾಡುವುದರಿಂದ ಒಣ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ.
  • ಏಕೆಂದರೆ ಇದು ಸಂಪೂರ್ಣ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ಚರ್ಮದ ಅನೇಕ ಸಮಸ್ಯೆಗಳನ್ನು ಇದು ತೊಡೆದು ಹಾಕುತ್ತದೆ.

ಕೊನೆಯ ಮಾತು

World's staple food: Potatoes — Saturday Magazine — The Guardian Nigeria  News – Nigeria and World News

ಹಾಗಾಗಿ ಆರೋಗ್ಯ ತಜ್ಞರಾದ ಲವ್ನೀತ್ ಬತ್ರ ಹೇಳುವ ಹಾಗೆ ಚಳಿಗಾಲದಲ್ಲಿ ನೀವು ಈ ಒಂದು ಆಹಾರ ಪದಾರ್ಥವನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡು...

Sweet Potato Is Sweet To Your Health In These Angles.