ಇನ್ನು ಮುಂದೆ ಟೀ-ಕಾಫಿಗೆಲ್ಲಾ ಸಕ್ಕರೆ ಬಳಸಬೇಡಿ! ಇಲ್ಲಾಂದ್ರೆ ಆರೋಗ್ಯಕ್ಕೆ ತೊಂದರೆ...

17-03-23 07:22 pm       Source: Vijayakarnataka   ಡಾಕ್ಟರ್ಸ್ ನೋಟ್

ಪ್ರತಿದಿನದ ಟೀ-ಕಾಫಿಗೆ ಜಾಸ್ತಿ ಪ್ರಮಾಣದಲ್ಲಿ ಸಕ್ಕರೆಯನ್ನು ಬೆರೆಸಿ ಕುಡಿಯುವುದರಿಂದ, ಮುಂದಿನ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಗಳಾದ ಶುಗರ್, ಹೃದಯದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ

ಈಗಿನ ಕಾಲದ ಮಕ್ಕಳಿಗೆ ಮನೆಯಲ್ಲಿ ಸಕ್ಕರೆ ಬೆರೆಸದ ಟೀ-ಕಾಫಿ ಅಥವಾ ಹಾಲು ಕೊಟ್ಟರೆ, ಸಿಕ್ಕಾಪಟ್ಟೆ ಗಲಾಟೆ ಮಾಡಲು ಶುರು ಮಾಡಿಬಿಡುತ್ತಾರೆ. ಅಷ್ಟೇ ಯಾಕೆ ಮನೆಯ ಸದಸ್ಯರಿಗೂ ಕೂಡ ಸಕ್ಕರೆ ಹಾಕದ ಟೀ-ಕಾಫಿ ಕುಡಿ ಯಿರಿ ಹೇಳಿದರೆ ಹೆಚ್ಚಿನವರ ಮುಖ ಗಂಟು ಹಾಕಿ ಕೊಳ್ಳುತ್ತಾರೆ! ಕಾರಣ ಇಷ್ಟೇ ಸಕ್ಕರೆ ಇಲ್ಲದೆ ಟೀ-ಕಾಫಿ ಕುಡಿಯಲು ಅವರಿಗೆ ಮನಸ್ಸೇ ಒಪ್ಪಲ್ಲ.

ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕೂಡ, ಸಕ್ಕರೆ ಬೆರೆಸ ಪಾನೀಯ ಕುಡಿಯಲು ಸಾಧ್ಯವೇ ಇಲ್ಲ ಎನ್ನುವಂತಾ ಗಿದೆ. ಆದರೆ ನಿಮಗೆ ಗೊತ್ತಿರಲಿ ಬಿಳಿ ಹರಳಿನಂತೆ ಕಾಣುವ ಈ ಸಕ್ಕರೆ, ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರೂ ಕೂಡ ಹೇಳುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಆರೋಗ್ಯ ತಜ್ಞರು ಹೇಳುವ ಪ್ರಕಾರ

A Complete Guide To Sugar Substitutes - Sugar Alternatives

 • ಸಕ್ಕರೆ ಹಾಗೂ ಸಕ್ಕರೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ಹಾಗೂ ಪಾನೀಯಗಳನ್ನು ಅನಿಯ ಮಿತವಾಗಿ ಸೇವನೆ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
 • ಕೊನೆಗೆ ಇದೇ ಕಾರಣದಿಂದಾಗಿ ದೀರ್ಘಕಾಲದ ಕಾಯಿಲೆ ಗಳಾದ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಹಾಗೂ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ನಮ್ಮನ್ನು ಆವರಿಸಿ ಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆಯಂತೆ! ಹೀಗಾಗಿ ಸಕ್ಕರೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡರೆ, ಆರೋಗ್ಯಕ್ಕೆ ಒಳ್ಳೆಯದು.

ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ!

Natural home remedies for dry cough | Medanta

 • ನಿಮಗೆ ಗೊತ್ತಿರಲಿ, ನಾವು ದಿನನಿತ್ಯ ಸೇವನೆ ಮಾಡುವ ಯಾವು ದೇ ಆಹಾರ ಪದಾರ್ಥಗಳು ಅಥವಾ ಪಾನೀಯ ಗಳಿಗೆ ಸಕ್ಕರೆ ಅಂಶವನ್ನು ಹೆಚ್ಚು ಬಳಕೆ ಮಾಡಿದರೆ, ಆಹಾರದ ರುಚಿ ಹೆಚ್ಚಾಗುತ್ತದೆ ನಿಜ.
 • ಆದರೆ ಮುಂದಿನ ದಿನಗಳಲ್ಲಿ ಆರೋಗ್ಯ ಹದಗೆಡುತ್ತದೆ. ಅದರಲ್ಲೂ ಪ್ರಮುಖವಾಗಿ ನಮ್ಮ ರೋಗ ನಿರೋಧಕ ಶಕ್ತಿ ದಿನಾ ಹೋದ ಹಾಗೆ ಕಡಿಮೆ ಆಗುತ್ತಾ ಹೋಗುತ್ತದೆ.
 • ಪ್ರಮುಖವಾಗಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ವನ್ನು ಒಳಗೊಂಡ ಆಹಾರಗಳನ್ನು ತಿನ್ನುವುದು ಅಥವಾ ಪಾನೀಯಗಳನ್ನು ಕುಡಿಯುವುದು, ಇಲ್ಲಾಂದ್ರೆ ಕೃತಕ ಸಕ್ಕರೆ ಅಂಶ ಇರುವ ಸಿಹಿ ತಿಂಡಿಗಳನ್ನು ಸೇವನೆ ಮಾಡುತ್ತಾ ಬಂದ್ರೆ, ಕ್ರಮೇಣವಾಗಿ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಾ ಬರುತ್ತದೆ ಎಂದು ವೈದ್ಯರು ಎಚ್ಚರಿಸುತ್ತಾರೆ.

ಬಿಳಿ ರಕ್ತ ಕಣಗಳ ಸಂತತಿ ಕಡಿಮೆ ಆಗಬಹುದು!

ಬಿಳಿ ರಕ್ತ ಕಣಗಳ ಸಂತತಿ ಕಡಿಮೆ ಆಗಬಹುದು!

 • ದೇಹದಲ್ಲಿ ಬಿಳಿ ರಕ್ತ ಕಣಗಳ ಪ್ರಾಮುಖ್ಯತೆ ಏನೆಂಬು ದನ್ನು ನಮಗೆ ಗೊತ್ತೇ ಇದೆ. ಇವುಗಳು ಆರೋಗ್ಯದ ವಿಷ್ಯ ದಲ್ಲಿ ಸಾಕಷ್ಟು ರಕ್ಷಣಾತ್ಮಕವಾಗಿ ಕೆಲಸ ಮಾಡುತ್ತವೆ.
 • ಪ್ರಮುಖವಾಗಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ, ದೇಹದೊಳಗಿನ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೊಡೆ ದೋಡಿಸು ವಲ್ಲಿ ಇವುಗಳ ಪಾತ್ರ ಮರೆಯು ವಂತಿಲ್ಲ.
 • ಹೀಗಾಗಿ ಬಿಳಿ ರಕ್ತಗಳ ಆರೋಗ್ಯ ಚೆನ್ನಾಗಿ ಇರಬೇಕೆಂದರೆ, ಸಕ್ಕರೆ ಹಾಗೂ ಸಕ್ಕರೆ ಅಂಶ ಇರುವ ಆಹಾರಗಳಿಂದ ದೂರ ಇರಬೇಕು.
 • ಇಲ್ಲಾಂದ್ರೆ ಸಕ್ಕರೆ ಅಂಶಗಳು ಹೆಚ್ಚಿರುವ ಆಹಾರಗಳು ಬಿಳಿ ರಕ್ತ ಕಣಗಳ ಸಂತತಿಗೆ ಹಾನಿ ಮಾಡಿ ಬಿಡುತ್ತದೆ.​

ಕೃತಕ ಸಕ್ಕರೆ ಪದಾರ್ಥ ಕೂಡ ಅಷ್ಟೇ ಡೇಂಜರ್!

3-ingredient Mysore pak | Mysore pak recipe | easy recipe | Sweets | Food | Manorama English

 • ಇನ್ನು ಕೃತಕ ಸಕ್ಕರೆಯಂಶ ಹೊಂದಿರುವ ಪದಾರ್ಧ ಗಳಾದ ಬೇಕರಿ ಸ್ವೀಟ್ಸ್, ಕೇಕ್, ಕುಕ್ಕೀಸ್ ಹಾಗೂ ಕಲರ್ ಕಲರ್ ಸಾಫ್ಟ್ ಡ್ರಿಂಕ್ಸ್‌ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ.
 • ಇದಕ್ಕೆ ಪ್ರಮುಖ ಕಾರಣ ಇದರಲ್ಲಿ ಬಳಸುವ ಕೃತಕ ಸಿಹಿ ಪದಾರ್ಥಗಳು ಬಾಯಿಯ ರುಚಿ ಹೆಚ್ಚಿಸುವುದು ಎನ್ನುವ ಒಂದೇ ಕಾರಣ ಬಿಟ್ಟರೆ, ಉಳಿದೆಲ್ಲಾ ವಿಷ್ಯದಲ್ಲೂ ಕೂಡ ತುಂಬಾನೇ ಅಪಾಯಕಾರಿ!
 • ಪ್ರಮುಖವಾಗಿ ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರು ಪೇರು ಮಾಡುವುದರ ಜೊತೆಗೆ ದೀರ್ಘಕಾಲದ ಕಾಯಿಲೆ ಗಳಾದ ಸಕ್ಕರೆಕಾಯಿಲೆ, ರಕ್ತದೊತ್ತಡ, ಹೃದಯದ ಸಮಸ್ಯೆಗಳು ಎಲ್ಲಾ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಕೊನೆಯ ಮಾತು

ಕೊನೆಯ ಮಾತು

 • ನೈಸರ್ಗಿಕ ಸಿಹಿ ಅಂಶಗಳನ್ನು ಹೊಂದಿರುವ ಹಾಗೂ ಆರೋ ಗ್ಯಕ್ಕೆ ಒಳ್ಳೆಯ ಪೌಷ್ಟಿಕ ಸತ್ವಗಳನ್ನು ನೀಡುವ ಆಹಾರಗಳಾದ ಹಸಿರೆಲೆ ಸೊಪ್ಪು-ತರಕಾರಿಗಳು, ಒಣಫಲ ಗಳಾದ ಬಾದಾಮಿ, ಖರ್ಜೂರ ಹಣ್ಣುಗಳು, ಒಣದ್ರಾಕ್ಷಿ, ಗೋಡಂಬಿ ಬೀಜಗಳ ನ್ನೆಲ್ಲಾ ಮಿತವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡರೆ ಒಳ್ಳೆಯದು.

know the healthy reasons why you must stop adding sugar to your tea or coffee.