ಬ್ರೇಕಿಂಗ್ ನ್ಯೂಸ್
06-03-21 12:26 pm source: BOLDSKY ಡಾಕ್ಟರ್ಸ್ ನೋಟ್
ಕೊರೊನಾ ಎಂಬ ಮಹಾಮಾರಿಯನ್ನು ಮುಗಿಸಲು ಭಾರತ ಹಂತ-ಹಂತವಾವಾಗಿ ಸಜ್ಜಾಗುತ್ತಿದೆ. ನಮ್ಮಲ್ಲೇ ತಯಾರಾದ ಕೊರೊನಾ ಲಸಿಕೆ ಕೊರೊನಾ ತಡೆಗಟ್ಟಲು ಸಮರ್ಥವಾಗಿದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದ್ದು ಮೊದಲ ಹಂತದಲ್ಲಿ ಎಲ್ಲಾ ಕೊರೊನಾ ವಾರಿಯರ್ಸ್ಗೆ ಈ ಔಷಧಿ ನೀಡಲಾಯಿತು.
ಇದೀಗ ಎರಡನೇ ಹಂತದಲ್ಲಿ ಹಿರಿಯ ನಾಗರಿಕರಿಗೆ ನೀಡಲು ಮುಂದಾಗಿದೆ. ಇನ್ನೇನು ಕೆಲವೇ ತಿಂಗಳಿನಲ್ಲಿ ಭಾರತದಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ ಲಭಿಸಲಿದೆ. ಕೊರೊನಾ ಲಸಿಕೆ ನೀಡಲು ಪ್ರಾರಂಭಿಸಿ ತಿಂಗಳು ಕಳೆದರೂ ಜನರಿಗೆ ಇದರ ಕುರಿತು ಇನ್ನೂ ಅನೇಕ ಪ್ರಶ್ನೆಗಳಿವೆ.
ಕೊರೊನಾ ಲಸಿಕೆ ತೆಗೆದುಕೊಳ್ಳುವವರು ಅನುಸರಿಸಬೇಕಾದ ಅನುಸರಿಸಬೇಕಾದ ಅಗ್ಯತ ಮಾರ್ಗಸೂಚಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ:

ಭಾರತದಲ್ಲಿ ಲಭ್ಯವಿರುವ ಎರಡೂ ಲಸಿಕೆಗಳು ಸುರಕ್ಷಿತ
ಭಾರತದಲ್ಲಿ ಕೊವಾಕ್ಸಿನ್ ಹಾಗೂ ಕೋವಿಡ್ ಶೀಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡುತ್ತಿದ್ದು ಈ ಎರಡೂ ಲಸಿಕೆಗಳು ಸುರಕ್ಷಿತವಾಗಿದೆ ಎಂಬುವುದು ಸಂಶೋಧನೆಯಿಂದ ದೃಢಪಟ್ಟಿರುವ ಅಂಶವಾಗಿದೆ. ಪುನೆಯ ಸೆರಂ ಇನ್ಸಿಟ್ಯೂಟ್ ಆಫ್ ಇಂಡಿಯಾ ಕೋವಿಡ್ ಶೀಲ್ಡ್ ತಯಾರಿಸಿದೆ.
ಭಾರತ್ ಬಯೋಟೆಕ್ ಸಂಸ್ಥೆಯು ಕೊವಾಕ್ಸಿನ್ ಲಸಿಕೆಯನ್ನು ಸಿದ್ಧ ಪಡಿಸಿದೆ. ಈ ಲಸಿಕೆಗಳಲ್ಲಿ ಯಾವುದಾದರು ಒಂದು ಬಗೆಯ ಲಸಿಕೆಯನ್ನು ಎರಡು ಡೋಸ್ನಲ್ಲಿ ಅಂದ್ರೆ ಒಮ್ಮೆ ಪಡೆದ ಬಳಿಕ 14 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕು.

ಕೊರೊನಾ ಲಸಿಕೆ ಪಡೆಯುವ ಮುಂಚೆ ಏನು ಮಾಡಬೇಕೆಂದು ನೀಡಿರುವ ಮಾರ್ಗಸೂಚಿ
* ಮೆಡಿಸಿನ್ ಅಥವಾ ಡ್ರಗ್(ಔಷಧ) ಅಲರ್ಜಿ ಇದ್ದವರು ತಜ್ಞರಿಂದ ಕ್ಲಿಯರೆನ್ಸ್ ಪಡೆಯಬೇಕು. ವೈದ್ಯರು ನಿಮಗೆ ಸಿಆರ್ಪಿ (ರಿಯಾಕ್ಟಿವ್ ಪ್ರೊಟಿನ್), ಸಿಬಿಸಿ (ಕಂಪ್ಲೀಟ್ ಬ್ಲಡ್ ಕೌಂಟ್) ಅಥವಾ ಇಮ್ಯುನೋಗ್ಲೋಬುಲಿನ್ ಪರೀಕ್ಷೆ ಮಾಡಿಸುವಂತೆ ಸೂಚಿಸುತ್ತಾರೆ.
* ಒಂದು ವೇಳೆ ವೈದ್ಯರು ಲಸಿಕೆ ಮುಂಚೆ ತೆಗೆದುಕೊಳ್ಳುವ ಔಷಧ ಹಾಗೂ ಆಹಾರದ ಬಗ್ಗೆ ಏನಾದರೂ ಸೂಚಿಸಿದ್ದರೆ ಅದನ್ನು ಪಾಲಿಸಬೇಕು.
* ಈ ಲಸಿಕೆ ಪಡೆಯಲು ಬರುವಾಗ ಯಾವುದೇ ಆತಂಕ ಬೇಡ, ರಿಲ್ಯಾಕ್ಸ್ ಆಗಿರಿ ಎಂದು ವೈದ್ಯರು ಹೇಳುತ್ತಾರೆ.
* ಯಾರಿಗೆ ಮಧುಮೇಹ, ರಕ್ತದೊತ್ತಡ ಇದ್ದವರನ್ನು ಗಮನಿಸುತ್ತಾ ಇರಬೇಕು. ಕ್ಯಾನ್ಸರ್ಗೆ ಕೀಮೋ ಪಡೆದುಕೊಂಡವರನ್ನೂ ಕೂಡ ಲಸಿಕೆ ಬಳಿಕ ಗಮನಿಸಬೇಕು.
* ಅಲ್ಲದೆ ಬ್ಲಡ್ ಪ್ಲಾಸ್ಮಾ ಪಡೆದುಕೊಂಡಿದ್ದರೆ ಅಥವಾ ಮೋನೋಕ್ಲೋನಲ್ ಆ್ಯಂಟಿಬಾಡೀಸ್ ತೆಗೆದುಕೊಂಡಿದ್ದರೆ ಅಥವಾ ಒಂದೂವರೆ ತಿಂಗಳಿನ ಒಳಗೆ ಯಾವುದಾದರೂ ಸೋಂಕು ತಗುಲಿದ್ದರೆ ಅಂಥವರು ಈಗಲೇ ಲಸಿಕೆ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ.

ಲಸಿಕೆ ಪಡೆದ ಬಳಿಕ ಏನು ಮಾಡಬೇಕು?
* ಲಸಿಕೆ ಪಡೆದ ತಕ್ಷಣ ಹೋಗುವಂತಿಲ್ಲ, ಸ್ವಲ್ಪ ಹೊತ್ತು ಆಸ್ಪತ್ರೆಯಲ್ಲೇ ರೆಸ್ಟ್ ಮಾಡಿ ಹೋಗಬೇಕು.
ಹೀಗೆ ಮಾಡುವುದರಿಂದ ಒಂದು ವೇಳೆ ಲಸಿಕೆ ಪಪಡೆದ ತಕ್ಷಣವೇ ಏನಾದರೂ ಅಲರ್ಜಿ ಲಕ್ಷಣ ಕಂಡು ಬಂದರೆ ತಕ್ಷಣವೇ ಚಿಕಿತ್ಸೆ ನೀಡಬಹುದು. ಲಸಿಕೆ ಪಡೆದ ಬಳಿಕ ಏನಾದರೂ ಅಲರ್ಜಿ ಕಾಣಿಸಿದರೆ ಕೂಡಲೇ ಲಸಿಕೆ ಪಡೆದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ.
* ಕೆಲವರಿಗೆ ಲಸಿಕೆ ಪಡೆದ ಬಳಿಕ ಜ್ವರ, ಚುಚ್ಚಿದ ಭಾಗದಲ್ಲಿ ನೋವು ಮುಂತಾದ ಲಕ್ಷಣಗಳು ಕಂಡು ಬರಬಹುದು. ಹೀಗೆ ಕಂಡು ಬಂದರೆ ಹೆದರುವ ಅವಶ್ಯಕತೆ ಇಲ್ಲ.
* ತಲೆಸುತ್ತು, ಚಳಿಯಾಗುವುದು ಈ ರೀತಿಯೆಲ್ಲಾ ಕಂಡು ಬಂದರೆ ಒಂದೆರಡು ದಿನದಲ್ಲಿ ಸರಿ ಹೋಗುವುದು, ಆದ್ದರಿಂದ ಆತಂಕ ಬೇಡ.
This News Article Is A Copy Of BOLDSKY
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
13-07-26 09:16 pm
HK News Staffer
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
13-07-26 10:57 pm
HK News Staffer
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm
ಬಿಡದಿ ಟೌನ್ಶಿಪ್ ಜಟಾಪಟಿ ; ಸರ್ವೆಗೆ ಬಂದಿದ್ದ ಅಧಿ...
13-07-26 07:39 pm
ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ, ಧರ್ಮಸ್ಥಳ...
13-07-26 02:54 pm