ಕೋವಿಡ್ 19 ಎರಡನೇ ಅಲೆ: ಹೊಸ ಕೊರೊನಾವೈರಸ್‌ನ ಲಕ್ಷಣಗಳಿವು

19-04-21 04:15 pm       source: BOLDSKY   ಡಾಕ್ಟರ್ಸ್ ನೋಟ್

ಭಾರತದಲ್ಲಿ ಕೊರೊನಾವೈರಸ್‌ 2ನೇ ಅಲೆ ಅಬ್ಬರಿಸುತ್ತಿದೆ. ಮೊದಲನೇ ಅಲೆಗಿಂತ ಈಗ ಬಂದಿರುವ ರೂಪಾಂತರ ಕೊರೊನಾವೈರಸ್ ಭೀಕರವಾಗಿದೆ ಎಂದೇ ಹೇಳಬಹುದು. ದಿನದಿಂದ ದಿನಕ್ಕೆ ಕೇಸ್‌ಗಳು ಹೆಚ್ಚಾಗುತ್ತಲೇ ಹೋಗುತ್ತಿವೆ.

ಭಾರತದಲ್ಲಿ ಕೊರೊನಾವೈರಸ್‌ 2ನೇ ಅಲೆ ಅಬ್ಬರಿಸುತ್ತಿದೆ. ಮೊದಲನೇ ಅಲೆಗಿಂತ ಈಗ ಬಂದಿರುವ ರೂಪಾಂತರ ಕೊರೊನಾವೈರಸ್ ಭೀಕರವಾಗಿದೆ ಎಂದೇ ಹೇಳಬಹುದು. ದಿನದಿಂದ ದಿನಕ್ಕೆ ಕೇಸ್‌ಗಳು ಹೆಚ್ಚಾಗುತ್ತಲೇ ಹೋಗುತ್ತಿವೆ. ಜನರು ಆಸ್ಪತ್ರೆಯಲ್ಲಿ ಐಸಿಯು ಸಿಗದೆ ಒದ್ದಾಡಬೇಕಾದ ಪರಿಸ್ಥಿತಿ ಬಂದೊಗಿದೆ ಎಂದಾದರೆ ಈ ಸೋಂಕು ಎಷ್ಟೊಂದು ಭೀಕರವಾಗಿ ಹಬ್ಬುತ್ತಿದೆ ಅಲ್ಲವೇ? ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ಗಳಿಗೆ ತುಂಬಾ ಬೇಡಿಕೆ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್‌ಗೆ ಕೊರತೆ ಉಂಟಾಗುತ್ತಿವೆ.

ಈಗ ಬಂದಿರುವ ರೂಪಾಂತರ ಕೊರೊನಾವೈರಸ್ ಲಕ್ಷಣಗಳು ಕೋವಿಡ್‌ 19 ಪರೀಕ್ಷೆಯಲ್ಲಿ ಪತ್ತೆ ಹಚ್ಚಲೂ ಕಷ್ಟವಾಗಿದೆ. ಹೊಸ ಕೊರೊನಾವೈರಸ್‌ ತಗುಲಿದಾಗ ಈ ಕೆಳಗಿನ ಕೆಲ ಲಕ್ಷಣಗಳು ಕಂಡು ಬರುತ್ತಿವೆ:

1. ಗಂಟಲು ಕೆರೆತ: ಗಂಟಲು ಕೆರೆತ, ಆಹಾರ ನುಂಗಲು ಕಷ್ಟವಾಗುವುದು ಇವೆಲ್ಲಾ ಕೊರೊನಾವೈರಸ್‌ನ ಸಾಮಾನ್ಯ ಲಕ್ಷಣವಾಗಿದೆ. ಈ ರೀತಿಯ ಲಕ್ಷಣಗಳು ಶೇ.52ರಷ್ಟು ಕೊರೊನಾ ಸೋಂಕಿತರಲ್ಲಿ ಕಂಡು ಬರುತ್ತಿದೆ.

2. ತಲೆಸುತ್ತು

2. ತಲೆಸುತ್ತು ಯುಕೆ ತಜ್ಞರ ವರದಿ ಪ್ರಕಾರ ಕೋವಿಡ್‌ 19 ಸೋಂಕಿತರಲ್ಲಿ ಹೆಚ್ಚಿನವರಲ್ಲಿ ತಲೆಸುತ್ತು ಕಂಡು ಬಂದಿದೆ. ತಲೆಸುತ್ತು ಕೊರೊನಾವೈರಸ್ ಸೋಂಕಿನ ಲಕ್ಷಣವಾಗಿದೆ. ಈ ರೀತಿಯ ಲಕ್ಷಣಗಳು ಕೊರೊನಾ ಪಾಸಿಟಿವ್ ಎಂದು ವರದಿ ಬರುವ ಮೊದಲೇ ಕಂಡು ಬಂದಿದೆ.

3. ಮೈಕೈ ನೋವು

3. ಮೈಕೈ ನೋವು

ಇನ್ನು ಕೊರೊನಾವೈರಸ್‌ ಸೋಂಕಿತರಲ್ಲಿ ಅನೇಕರಲ್ಲಿ ಮೈಕೈ ನೋವು, ಕೈ-ಕಾಲುಗಳ ಸಂಧಿಗಳಲ್ಲಿ ನೀವು, ಸ್ನಾಯು ಸೆಳೆತ ಕಂಡು ಬಂದಿರುವುದಾಗಿ ತಜ್ಞರು ತಿಳಿಸಿದ್ದಾರೆ.

4. ಚಳಿ, ಜ್ವರ

4. ಚಳಿ, ಜ್ವರ

ತುಂಬಾ ಚಳಿಯಾಗುವುದು ಹಾಗೂ ಜ್ವರ ಕಾಣಿಸಿಕೊಂಡರೆ ಅದು ಕೊರೊನಾವೈರಸ್ ಸೋಂಕಿನ ಲಕ್ಷಣವಾಗಿರಬಹುದು. ಇದು ರೂಪಾಂತರ ಕೊರೊನಾವೈರಸ್‌ನ ಸಾಮಾನ್ಯ ಲಕ್ಷಣವಾಗಿದೆ.

5. ವಾಂತಿ

5. ವಾಂತಿ

ವಾಂತಿ, ಸುಸ್ತು ಇವುಗಳು ಕೂಡ ಕೊರೊನಾವೈರಸ್ ಲಕ್ಷಣವಾಗಿದೆ. ಈ ರೀತಿಯ ಲಕ್ಷಣಗಳು ಕೊರೊನಾ ಸೋಂಕು ತಗುಲಿದ ಆರಂಭದಲ್ಲಿಯೇ ಕಂಡು ಬರುವುದು.

6. ಎಂಜಲು ಉತ್ಪತ್ತಿಯಾಗುವುದಿಲ್ಲ

6. ಎಂಜಲು ಉತ್ಪತ್ತಿಯಾಗುವುದಿಲ್ಲ

ಇನ್ನು ಕೊರೊನಾವೈರಸ್‌ ತಗಲಿದಾಗ ಕೆಲವರಲ್ಲಿ ಎಂಜಲು ಉತ್ಪತ್ತಿಯಾಗುವುದಿಲ್ಲ. ಈ ರೀತಿಯ ಲಕ್ಷಣಗಳು ಕಮಡು ಬಂದರೆ ಆಹಾರ ಸೇವಿಸಲು ಕಷ್ಟವಾಗಬಹುದು ಹಾಗೂ ಮಾತನಾಡಲು ತೊಂದರೆ ಉಂಟಾಗಬಹುದು. ಇನ್ನು ಲಂಡನ್‌ನ ಕಿಂಗ್ಸ್‌ ಕಾಲೇಜಿನ ಪ್ರೊಫೆಸರ್ ಟಿಮ್ ಸ್ಪೆಕ್ಟರ್ ತಮ್ಮ ಟ್ವಿಟರ್‌ನಲ್ಲಿ ಕೊರೊನಾ ಸೋಂಕು ತಗುಲಿದ ಪ್ರತೀ ಐದರಲ್ಲಿ ಒಬ್ಬರಿಗೆ ತ್ವಚೆಯಲ್ಲಿ ಗುಳ್ಳೆಗಳು ಏಳುವುದು, ವಿಚಿತ್ರ ಬಾಯಿ ಹುಣ್ಣಿನ ಸಮಸ್ಯೆ ಕಂಡು ಬರುವುದು. ಈ ರೀತಿಯ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿಯೇ ಐಸೋಲೇಟ್‌ ಆಗಿ ಎಂದು ಸಲಹೆ ನೀಡಿದ್ದಾರೆ.

ಸಲಹೆ:

ಸಲಹೆ:

ಕೊರೊನಾವೈರಸ್‌ ಲಕ್ಷಣಗಳು ಕಂಡು ಬಂದ ತಕ್ಷಣ ಯಾರ ಜೊತೆ ನೇರ ಸಂಪರ್ಕಕ್ಕೆ ಬಾರದೆ, ವೈದ್ಯರಿಂದ ಪರೀಕ್ಷೆ ಮಾಡಿಸಿ, ಕೊರೊನಾ ಸೋ ಕು ದೃಢಪಟ್ಟರೆ ವೈದ್ಯರ ಮಾರ್ಗಸೂಚಿಗಳನ್ನು ಅನುಸರಿಸಿ. ಇನ್ನು ಕೊರೊನಾ ಸೋಂಕಿನಿಂದ ಸಾವನ್ನಪ್ಪಲು ಪ್ರಮುಖ ಕಾರಣ ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿರುವುದು. ಕೆಲವರು ಸಣ್ಣ-ಪುಟ್ಟ ಲಕ್ಷಣಗಳು ಕಂಡು ಬಂದಾಗ ಆಸ್ಪತ್ರೆಗೆ ಹೋಗುವುದೇ ಇಲ್ಲ.

ನಂತರ ಆರೋಗ್ಯ ಗಂಭೀರವಾದಾಗ ಆಸ್ಪತ್ರೆಗೆ ಬರುತ್ತಾರೆ, ಆಗ ವೈದ್ಯರಿಗೂ ಕಷ್ಟವಾಗುವುದು, ಅಲ್ಲದೆ ಕೆಲವು ಸಂದರ್ಭದಲ್ಲಿ ಬೆಡ್‌ ಸಿಗುವುದೂ ಕಷ್ಟವಾಗುವುದು.

This News Is A Copy Of BOLDSKY