ಬ್ರೇಕಿಂಗ್ ನ್ಯೂಸ್
28-04-21 06:20 pm source: BOLDSKY ಡಾಕ್ಟರ್ಸ್ ನೋಟ್
ಕೊರೊನಾ ಹರಡುತ್ತಿರುವ ವೇಗಕ್ಕೆ ಬ್ರೇಕ್ ಹಾಕಲೇ ಬೇಕಾಗಿದೆ. ಪ್ರತಿಯೊಬ್ಬರು ಎಚ್ಚರವಹಿಸಿದರೆ ಕೊರೊನಾವನ್ನು ಸುಲಭವಾಗಿ ನಿಯಂತ್ರಿಸಬಹುದು, ಆದರೆ ನಿರ್ಲಕ್ಷ್ಯದಿಂದಾಗಿ ಕೊರೊನಾ ಹರಡುತ್ತಿದೆ.
ಈಗಲೂ ಜನರು ಹೊರಗಡೆ ಹೋಗುವಾಗ ಪೋಲೀಸರನ್ನು ಕಾಣುವಾಗ ಮಾಸ್ಕ್ ಧರಿಸುತ್ತಿದ್ದಾರೆ, ನಂತರ ಕುತ್ತಿಗೆಗೆ ಧರಿಸಿ ನಡೆಯುತ್ತಿರುವ ಎಷ್ಟೂ ಜನರನ್ನು ನೋಡುತ್ತೇವೆ. ಆದರೆ ಈ ರೀತಿ ವರ್ತಿಸುವುದರಿಂದ ನಾವು ಅಪಾಯಕ್ಕೆ ಒಳಗಾಗುವುದು ಮಾತ್ರವಲ್ಲ, ನಮ್ಮ ಮನೆಯವರನ್ನು ಅಪಾಯಕ್ಕೆ ನೂಕಿ ಬಿಡುತ್ತೇವೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಹೊರಗಡೆ ಹೋಗುವಾಗ ಮಾತ್ರವಲ್ಲ ಮನೆಯೊಳಗೆ ಕೂಡ ಮಾಸ್ಕ್ ಧರಿಸುವುದು ಸುರಕ್ಷಿತ.
ನೀತಿ ಆಯೋಗದ(ಆರೋಗ್ಯ) ಸದಸ್ಯರಾಗಿರುವ ಡಾ. ವಿಕೆ ಪೌಲ್ ಪ್ರೆಸ್ ಉದ್ದೇಶಿಸಿ ಮಾತನಾಡುತ್ತಾ 'ಇದೀಗ ಜನರು ಮನೆಯೊಳಗೆ ಮಾಸ್ಕ್ ಧರಿಸುವ ಸಮಯ ಬಂದಿದೆ' ಎಂದು ಹೇಳಿದ್ದಾರೆ. ಕೊರೊನಾ ಎರಡನೇ ಅಲೆಯ ಸ್ವರೂಪ ಭೀಕರವಾಗಿದ್ದು ಹೊರಗಡೆ ಹೋಗುವಾಗ ಡಬಲ್ ಮಾಸ್ಕ್ ಧರಿಸುವುದು ಸುರಕ್ಷಿತವಾಗಿದೆ.
ಮನೆಯೊಳಗೆ ಮಾಸ್ಕ್ ಏಕೆ ಧರಿಸಬೇಕು?
ಮನೆಯಲ್ಲಿ ಇರುವ ಅಷ್ಟು ಸದಸ್ಯರು ಎಲ್ಲಾರೂ ಮನೆಯೊಳಗೇ ಇರುತ್ತಾರೆ, ಹೊರಗಡೆ ಹೋಗುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ, ಮನೆಯಲ್ಲಿ ಕೆಲವರು ಕೆಲಸಕ್ಕಾಗಿ ಹೊರ ಹೋಗುತ್ತಾರೆ, ಇನ್ನು ಕೆಲವರು ದಿನಸಿ ಸಾಮಾನು ತರಲು ಹೋಗಬಹುದು. ಹೊರಗಡೆ ಹೋಗಿ ಬರುವಾಗ ಸೋಂಕು ಅವರಿಗೆ ತಗುಲವ ಸಾಧ್ಯತೆ ಅಧಿಕವಿರುತ್ತದೆ. ಅವರು ಮನೆಯೊಳಗೆ ಬಂದಾಗ ಆ ಸೋಂಕು ಮನೆಯಲ್ಲೇ ಇದ್ದವರಿಗೆ ಹರಡುವ ಸಾಧ್ಯತೆ ಇದೆ. ಮನೆಯೊಳಗೇ ಇದ್ದರೂ ಸೋಂಕು ತಗುಲಿರುವ ಎಷ್ಟೋ ಪ್ರಕರಣಗಳಿವೆ.
ಮನೆಯೊಳಗೇ ಇರುವ ಸದಸ್ಯರಿಗೆ ಸೋಂಕು ತಗುಲು ಆ ಮನೆಯ ಸದಸ್ಯರು ಅಥವಾ ಆ ಮನೆಗೆ ಭೇಟಿ ಕೊಟ್ಟವರು ಕಾರಣರಾಗಿರುತ್ತಾರೆ. ಕೆಲವೊಮ್ಮೆ ಮನೆಗೆ ಪರಿಚಯಸ್ಥರು ಅಥವಾ ಅತಿಥಿಗಳು ಬರಬಹುದು. ಮನೆಗೆ ಬರುವವರನ್ನು ಬಾಗಿಲನ ಬಳಿಯೇ ನಿಲ್ಲು ಎಂದು ಹೇಳಲು ಸಾಧ್ಯವಿಲ್ಲ. ಅವರೊಂದಿಗೆ ಮಾತನಾಡುತ್ತೇವೆ, ಆಗ ಸೋಂಕು ತಗುಲಬಹುದು. ಆದ್ದರಿಂದ ಮಾಸ್ಕ್ ಧರಿಸಿದರೆ ಈ ಸಮಸ್ಯೆಯಿಲ್ಲ. ಬಂದವರಿಂದ ಅಥವಾ ಮನೆಯವರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುವುದು.
ಮನೆಯಲ್ಲಿ ಹಿರಿಯರಿದ್ದರೆ ತಪ್ಪದೆ ಮಾಸ್ಕ್ ಧರಿಸಿ
ಮನೆಯಲ್ಲಿ ಹಿರಿಯದಿದ್ದರೆ ತಪ್ಪದೆ ಮಾಸ್ಕ್ ಧರಿಸುವುದು ಸುರಕ್ಷಿತ. ಏಕೆಂದರೆ ವಯಸ್ಸಾದವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಮನೆಯಲ್ಲಿ ಯಾರಿಗಾದರೂ ಕೊರೊನಾ ಪಾಸಿಟಿವ್ ತಗುಲಿದ್ದರೆ, ಅವರಿಗೆ ರೋಗ ಲಕ್ಷಣಗಳು ಇಲ್ಲದಿದ್ದರೆ ಅವರಿಂದ ವಯಸ್ಸಾದವರಿಗೆ ಬರುವ ಸಾಧ್ಯತೆ ಅಧಿಕ ಇರುವುದರಿಂದ ಮಾಸ್ಕ್ ಧರಿಸುವುದು ಸುರಕ್ಷಿತವಾಗಿದೆ.
ಮನೆಗೆ ಕುಟುಂಬದವರು ಅಥವಾ ಸ್ನೇಹಿತರು ಬಂದಾಗ ಏನು ಮಾಡಬೇಕು?
ಮನೆಗೆ ಯಾರಾದರೂ ಬಂದಾಗ ನೀವು ಮಾಸ್ಕ್ ಧರಿಸಿದ್ದನ್ನು ನೋಡಿದರೆ ಅವರೂ ಧರಿಸುತ್ತಾರೆ, ಇಲ್ಲದಿದ್ದರೆ ಅವರ ಬಳಿ ಮಾಸ್ಕ್ ಧರಿಸುವಂತೆ ರಿಕ್ವೆಸ್ಟ್ ಮಾಡಿ. ಈಗ ಪ್ರತಿಯೊಬ್ಬರಿಗೂ ಪರಿಸ್ಥಿತಿ ಬಗ್ಗೆ ತಿಳುವಳಿಕೆ ಇದೆ, ಅಷ್ಟಕ್ಕೂ ಅವರು ಏನು ಅಂದುಕೊಳ್ಳುತ್ತಾರೋ ಎಂಬ ಭಯವಿದ್ದರೆ ನಿಮಗೆ ಏಕೋ ಶೀತ ಅನ್ನಿ, ನೀವು ಹೇಳದಿದ್ದರೂ ಅವರೇ ಮಾಸ್ಕ್ ಧರಿಸುತ್ತಾರೆ, ಅಲ್ಲಿಗೆ ಎಲ್ಲರೂ ಸುರಕ್ಷಿತ. ಅಲ್ಲದೆ ಮನೆಗೆ ಹೊರಗಿನವರು ಬಂದಾಗ ಅವರಿಂದ ಸ್ವಲ್ಪ ದೂರ ನಿಂತೇ ಮಾತನಾಡಿಸಿ.
ಮನೆಯಲ್ಲಿ ಎಲ್ಲರೂ ಕ್ವಾರಂಟೈನ್ ಅದರೆ ಮಾಸ್ಕ್ ಧರಿಸಬೇಕಾ?
ಒಂದು ವೇಳೆ ಕುಟುಂಬವದರು ಯಾರನ್ನು ಭೇಟಿಯಾಗದಿದ್ದರೆ ಅಥವಾ ಹೊರಗಡೆಯಿಂದ ಏನೂ ವಸ್ತು ತರಿಸಿಕೊಳ್ಳದಿದ್ದರೆ ಸೋಂಕು ಮನೆಯೊಳಗೆ ಬರುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಕ್ವಾರಂಟೈನ್ ಆಗಿದ್ದಾಗ ಯಾರಿಗಾದರೂ ಒಬ್ಬರಿಗೆ ಚಿಕ್ಕದಾಗಿ ಶೀತ ಕಂಡು ಬಂದರೂ ಮಾಸ್ಕ್ ಧರಿಸುವುದು ಸುರಕ್ಷಿತ.
ನೆನಪಿನಲ್ಲಿ ಇರಬೇಕಾದ ಸಂಗತಿಗಳು
ಕೋವಿಡ್ 19 ಒಬ್ಬರಿಂದ ಒಬ್ಬರಿಗೆ ಎಂಜಲು (respiratory droplets) ಮೂಲಕ ಹರಡುತ್ತಿದೆ. ಕೊರೊನಾ ಸೋಂಕಿತರು ಕೆಮ್ಮಿದಾಗ, ಶೀನಿದಾಗ ಹೊರ ಹೊಮ್ಮುವ ಎಂಜಲಿನಲ್ಲಿ ಕೊರೊನಾವೈರಸ್ ಇರುತ್ತದೆ. ಈ ವೈರಸ್ ನೆಲದ ಮೇಲೆ ಅಥವಾ ಕೊರೊನಾ ಸೋಂಕಿತ ಮುಟ್ಟಿದ ಕಡೆ ಇರುತ್ತದೆ, ಅದನ್ನು ಇನ್ನೊಬ್ಬರು ಮುಟ್ಟಿದಾಗ ಅಥವಾ ಅವರು ಕೆಮ್ಮಿದಾಗ, ಸೀನಿದಾಗ ಅವರ ಸಮೀಪ ನಿಂತಿದ್ದರೆ ಕೊರೊನಾ ಸೋಂಕು ಹರಡುವುದು. ಇದನ್ನು ತಡೆಗಟ್ಟುವಲ್ಲಿ ಮಾಸ್ಕ್ ಹಾಗೂ ಆಗಾಗ ಸೋಪು ಹಚ್ಚಿ ಕೈತೊಳೆಯುವುದು ಸಹಾಯಕ್ಕೆ ಬರುತ್ತದೆ. ನೀವು ಮನೆಯಲ್ಲಿ ಬಟ್ಟೆ ಮಾಸ್ಕ್ ಧರಿಸಿದರೆ ಸಾಕು, ಇನ್ನು ಸರ್ಜಿಕಲ್ ಮಾಸ್ಕ್ ಧರಿಸುವುದಾದರೆ ಗಂಟು ಹಾಕಿದ ರೀತಿಯಲ್ಲಿ ಬಳಸುವುದು ಸೂಕ್ತ. ಮಾಸ್ಕ್ ಲೂಸ್ ಆಗಿರಬಾರದು, ಫಿಟ್ ಆಗಿರಬೇಕು.
This News Article Is A Copy Of BOLDSKY
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm