ಬ್ರೇಕಿಂಗ್ ನ್ಯೂಸ್
07-05-21 11:30 am Reena TK, BoldSky Kannada ಡಾಕ್ಟರ್ಸ್ ನೋಟ್
18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಲಭ್ಯವಾಗಿರುವುದರಿಂದ ದೇಶದ ಶೇ. 70 ರಷ್ಟು ಜನರಿಗೆ ವ್ಯಾಕ್ಸಿನ್ ಲಭಿಸುವಂತಾಗುವುದು. ಈ ಲಸಿಕೆ ಅರ್ಹರಾಗಿರುವ ಪ್ರತಿಯೊಬ್ಬರು ತೆಗೆದುಕೊಂಡರೆ ಈಗ ಕೊರೊನಾ ಆರ್ಭಟಿಸುತ್ತಿದ್ದರೂ ಕೆಲವೇ ದಿನದಲ್ಲಿ ಸೋಂಕು ಕಡಿಮೆಯಾಗುವ ಎಲ್ಲಾ ಸಾದ್ಯತೆ ಇದೆ.
ಕೊರೊನಾ ವ್ಯಾಕ್ಸಿನ್ ಅನ್ನು ಎರಡು ಡೋಸ್ ಆಗಿ ತೆಗೆಯಬೇಕು. ಒಂದು ಡೋಸ್ ಪಡೆದ ಬಳಿಕ 4 ವಾರಗಳ ನಂತರ ಮತ್ತೊಂದು ಡೋಸ್ ತೆಗೆದುಕೊಳ್ಳಬೇಕು. ಕೋವಿಶೀಲ್ಡ್ ತೆಗೆದುಕೊಂಡಿದ್ದರೆ ಮೊದಲ ಡೋಸ್ ತೆಗೆದುಕೊಂಡ 6-8 ವಾರಗಳಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಬೇಕು. ಕೊರೊನಾವೈರಸ್ 2ನೇ ಅಲೆ ತುಂಬಾ ವೇಗವಾಗಿ ಹರಡುತ್ತಿರುವುದರಿಂದ ಮೊದಲ ಡೋಸ್ ಪಡೆದ ಕೆಲವರಲ್ಲಿಯೂ ಸೋಂಕು ಕಂಡು ಬರುತ್ತಿದೆ. ಕೊವಾಕ್ಸಿನ್ ಹಾಗೂ ಕೋವಿಶೀಲ್ಡ್ ಕೊರೊನಾವ ವಿರುದ್ಧ ಸಮರ್ಥವಾಗಿ ಹೋರಾಡುವ ಲಸಿಕೆಗಳು ಆಗಿದ್ದರೂ, ಈ ಲಸಿಕೆ ಪಡೆದುಕೊಂಡರೆ ಸೋಂಕು ಬರುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ.
ಕೊರೊನಾ ಲಸಿಕೆ ಪಡೆದ ಬಳಿಕ ಕೊರೊನಾ ಬಂದ್ರೆ?
ಕೊರೊನಾ ಲಸಿಕೆ ಎರಡು ಡೋಸ್ ಪಡೆದವರಲ್ಲಿ ಶೇ.4ರಷ್ಟು ಜನರಲ್ಲಿ ಸೋಂಕು ಬಂದಿದೆ. ಆದರೆ ಕೋವಿಡ್ 19 ಲಸಿಕೆ ಪಡೆದವರಲ್ಲಿ ಹಾಗೂ ಪಡೆಯದವರಲ್ಲಿ ಇರುವ ವ್ಯತ್ಯಾಸವೇನೆಂದರೆ ಈ ಲಸಿಕೆ ಪಡೆದುಕೊಂಡವರಲ್ಲಿ ರೋಗ ಲಕ್ಷಣಗಳು ಗಂಭೀರವಾಗುವುದಿಲ್ಲ, ಅಲ್ಲದೆ ಬೇಗನೆ ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು.
ಕೋವಿಡ್ 19 ಪಾಸಿಟಿವ್ ಬಂದವರು ಲಸಿಕೆ ಪಡೆಯಬಹುದೇ?
ಕೋವಿಡ್ 19 ಪಾಸಿಟಿವ್ ಬಂದಾಗ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವಂತಿಲ್ಲ. ಕೊರೊನಾದಿಂದ ಚೇತರಿಸಿದ 4-8 ವಾರಗಳ ಬಳಿಕ ತಿನ್ನಬೇಕು.
ಲಕ್ಷಣಗಳಿಲ್ಲದ ಕೊರೊನಾ ಸೋಂಕಿತರು ಲಸಿಕೆ ತೆಗೆದುಕೊಂಡರೆ?
ಕೆಲವರಿಗೆ ಕೋವಿಡ್ 19 ಬಂದರೂ ಯಾವುದೇ ಲಕ್ಷಣಗಳಿರುವುದಿಲ್ಲ, ಹಾಗಾಗಿ ಅವರಿಗೆ ಸೋಂಕು ಬಂದಿರುವುದು ಗೊತ್ತಿರುವುದಿಲ್ಲ , ಅಂತ ಸಮಯದಲ್ಲಿ ಕೋವಿಡ್ 19 ಲಸಿಕೆ ತೆಗೆದುಕೊಂಡರೆ ಭಯ ಪಡಬೇಕಾಗಿಲ್ಲ, ಲಸಿಕೆಯೂ ನಿಮ್ಮ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ಕೋವಿಡ್ 19 ಬಂದಾಗ ಎರಡನೇ ಡೋಸ್ ಯಾವಾಗ ಪಡೆಯಬೇಕು?
ಮೊದಲ ಡೋಸ್ ಪಡೆದ ಬಳಿಕ ಕೋವಿಡ್ 19 ಬಂದಾಗ ಎರಡನೇ ಡೋಸ್ ಯಾವಾಗ ಪಡೆಯಬೇಕು? ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದಿರುವುದರಿಂದ ಕೊರೊನಾ ಸೋಂಕಿನಿಂದ ಬೇಗನೆ ಚೇತರಿಸಿಕೊಳ್ಳಬಹುದು. ಕೊರೊನಾದಿಂದ ಚೇತರಿಸಿದ ಬಳಿಕ 4 ವಾರಗಳನ್ನು ಕಳೆದ ಮೇಲೆ ಲಸಿಕೆ ಪಡೆಯಿರಿ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm