ಬ್ರೇಕಿಂಗ್ ನ್ಯೂಸ್
26-05-21 11:29 am Shreeraksha , BoldSky Kannada ಡಾಕ್ಟರ್ಸ್ ನೋಟ್
ಗ್ಯಾಸ್ಟ್ರಿಕ್ ಸಮಸ್ಯೆ ಯಾರಿಗಿಲ್ಲ ಹೇಳಿ? ಇಂದಿನ ಕಾಲದಲ್ಲಿ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆ. ಇದಕ್ಕೆ ಕಾರಣ ನಾವೇ. ಸರಿಯಾದ ಸಮಯಕ್ಕೆ ತಿನ್ನದೇ ಇರುವುದರಿಂದ ಈ ಗ್ಯಾಸ್ಟ್ರಿಕ್ ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ಉತ್ತಮ ಮನೆಮದ್ದು ಅಂದ್ರೆ ಹುರಿದ ಜೀರಿಗೆ ಮತ್ತು ಕಪ್ಪು ಉಪ್ಪು ಅಥವಾ ಬ್ಲಾಕ್ ಸಾಲ್ಟ್. ಇದನ್ನು ತಿನ್ನುವುದರಿಂದ ನಿಮಗೆ ತಕ್ಷಣ ಗ್ಯಾಸ್ಟ್ರಿಕ್ ನಿಂದ ಮುಕ್ತಿ ದೊರೆಯುತ್ತದೆ ಮತ್ತು ನಿಮ್ಮ ಚಯಾಪಚಯವನ್ನು ಬಲಪಡಿಸುತ್ತದೆ. ಇದಷ್ಟೇ ಅಲ್ಲದೆ ಹುರಿದ ಜೀರಿಗೆ ಮತ್ತು ಕಪ್ಪು ಉಪ್ಪಿನಿಂದ ಇನ್ನೂ ಅನೇಕ ಪ್ರಯೋಜನಗಳಿವೆ, ಅವುಗಳೆಲ್ಲದರ ಬಗ್ಗೆ ತಿಳಿದುಕೊಳ್ಳೋಣ.
ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ:
ಎನ್‌ಸಿಬಿಐ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಜೀರ್ಣಕಾರಿ ಸಮಸ್ಯೆಗಳಾದ ಅತಿಸಾರ, ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ವಾಯುಭಾರವನ್ನು ಕಡಿಮೆ ಮಾಡಲು ಜೀರಿಗೆಯನ್ನು ದೀರ್ಘಕಾಲದಿಂದ ಬಳಸಲಾಗುತ್ತದೆ.
ಅಲ್ಲದೆ, ಕಪ್ಪು ಉಪ್ಪು ವಿರೇಚಕ ಗುಣಗಳನ್ನು ಹೊಂದಿದ್ದು, ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಹುರಿದ ಜೀರಿಗೆ ಮತ್ತು ಕಪ್ಪು ಉಪ್ಪನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
ತೂಕ ನಷ್ಟಕ್ಕೆ ಸಹಾಯ:
ಜೀರಿಗೆ ಜೀವಾಣು ಮತ್ತು ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಆದ್ದರಿಂದ ಇದರ ಬಳಕೆಯು ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಜೈವಿಕ ತಂತ್ರಜ್ಞಾನ ಮಾಹಿತಿ ರಾಷ್ಟ್ರೀಯ ಕೇಂದ್ರದ ಪ್ರಕಾರ, ಕಪ್ಪು ಉಪ್ಪು ಬೊಜ್ಜು ವಿರೋಧಿ ಗುಣಗಳನ್ನು ಹೊಂದಿದ್ದು, ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಕ್ತದೊತ್ತಡ ನಿಯಂತ್ರಣ :
ರಕ್ತದೊತ್ತಡವನ್ನು ನಿಯಂತ್ರಿಸಲು ಕಪ್ಪು ಉಪ್ಪು ಮತ್ತು ಜೀರಿಗೆ ಎರಡೂ ಬಹಳ ಪರಿಣಾಮಕಾರಿ. ಕಪ್ಪು ಉಪ್ಪಿನಲ್ಲಿ ಸೋಡಿಯಂ ಪ್ರಮಾಣವು ತುಂಬಾ ಕಡಿಮೆ ಮತ್ತು ಸಾಮಾನ್ಯ ಉಪ್ಪಿನ ಬದಲಿಗೆ ಬಳಸಿದರೆ ಅದು ರಕ್ತದೊತ್ತಡವನ್ನು ಸುಧಾರಿಸುತ್ತದೆ. ಇದಲ್ಲದೆ, ಜೀರಿಗೆ ಆಂಟಿ-ಡಯಾಬಿಟಿಕ್ ಪರಿಣಾಮಗಳನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೊಟ್ಟೆ ನೋವಿನಿಂದ ಪರಿಹಾರ:
ಹುರಿದ ಜೀರಿಗೆ ಮತ್ತು ಕಪ್ಪು ಉಪ್ಪು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಒಂದು ರಾಮಬಾಣವಾಗಿದ್ದು, ಸಾಮಾನ್ಯ ಹೊಟ್ಟೆನೋವಿನ ಜೊತೆಗೆ ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಸಹ ತುಂಬಾ ಪರಿಣಾಮಕಾರಿಯಾಗಿದೆ. ಹೊಟ್ಟೆನೋವಿನ ಸಂದರ್ಭದಲ್ಲಿ ಅರ್ಧ ಟೀ ಚಮಚ ಹುರಿದ ಜೀರಿಗೆ ಮತ್ತು ಕಪ್ಪು ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ತೆಗೆದುಕೊಳ್ಳಿ.
ರೋಗನಿರೋಧಕ ಶಕ್ತಿಯ ಹೆಚ್ಚಳ :
ಈ ಪಾಕವಿಧಾನವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲ್ಲಾ ಸಮಸ್ಯೆಗಳು ಹೊಟ್ಟೆಯ ಮೂಲಕ ಹಾದುಹೋಗುವುದೇ ಇದಕ್ಕೆ ಕಾರಣ. ಕಪ್ಪು ಉಪ್ಪು ಮತ್ತು ಜೀರಿಗೆ ನಿಮ್ಮ ಕರುಳಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು, ಎರಡೂ ಕಬ್ಬಿಣದಿಂದ ಸಮೃದ್ಧವಾಗಿದ್ದು ರೋಗನಿರೋಧಕ ವ್ಯವಸ್ಥೆಗೆ ಸಹಕಾರಿ.
(Kannada Copy of Boldsky Kannada)
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 07:32 pm
Mangalore Correspondent
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am