ಬ್ರೇಕಿಂಗ್ ನ್ಯೂಸ್
05-06-21 12:16 pm Reena TK, BoldSky Kannada ಡಾಕ್ಟರ್ಸ್ ನೋಟ್
ಮೇ. 5 ವಿಶ್ವ ಪರಿಸರ ದಿನ. ಎಲ್ಲಾ ಬಗೆಯ ಮಾಲಿನ್ಯದಿಂದ ಪರಿಸರವನ್ನು ರಕ್ಷಿಸುವುದು ಇಂದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಆಶಯದೊಂದಿಗೆ ಪ್ರತೀ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡುವುದರ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದು.
ಈಗ ನಮ್ಮ ಪರಿಸರ ಹೇಗಿದೆ, ಇದನ್ನು ರಕ್ಷಣೆ ಮಾಡದಿದ್ದರೆ ಮುಂದೇನು ಆಗುವುದು ಎಂಬ ಕಟು ವಾಸ್ತವ ಎಲ್ಲರಿಗೂ ಗೊತ್ತು. ಆದರೂ ಅಭಿವೃದ್ಧಿಯ ಹೆಸರಿನಲ್ಲಿ ಜಾಣ ಕುರುಡರಾಗಿ ವರ್ತಿಸುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಎಷ್ಟೋ ಮರ ಗಿಡಗಳನ್ನು ಕಡೆಯಲಾಗಿದೆ, ನದಿ ನೀರುಗಳ ಕಲುಷಿತಗೊಂಡಿವೆ, ವಾಹನಗಳು, ಕೈಗಾರಿಕೆಗಳಿಂದಾಗಿ ಗಾಳಿ ಕಲುಷಿತಗೊಂಡಿದೆ.
ಪರಿಸರ ಕಲುಷಿತವಾದರೆ ಏನೆಲ್ಲಾ ಸಮಸ್ಯೆ ಎದುರಿಸಬೇಕಾದಿತು ಈಗಾಗಲೇ ಎಲ್ಲರ ಅನುಭವಕ್ಕೆ ಬರಲಾರಂಭಿಸಿದೆ. ಮರಗಳು ಕೊಡುವ ಶುದ್ಧ ಆಮ್ಲಜನಕದ ಕೊರತೆಯಾದರೆ ಉಳಿಗಾಲವಿಲ್ಲ ಎಂಬುವುದರ ಅರಿವೂ ಆಗಿದೆ, ಆದ್ದರಿಂದ ಪರಿಸರದ ಬಗ್ಗೆ ಈ ಹಿಂದೆಗಿಂತಲೂ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.
ಇತಿಹಾಸ
ಪರಿಸರದ ಬಗ್ಗೆ ಜಾಗೃತಿ ಮೂಡಿಸಲು 1974ರಲ್ಲಿ ಅಮೆರಿಕದ ಸ್ಲೋಕಾನೆ ನಗರದಲ್ಲಿ ಈ ದಿನವನ್ನು ಮೊದಲಿಗೆ ಆಚರಿಸಲಾಯಿತು. ಅಲ್ಲಿಂದ ಪ್ರತೀವರ್ಷ ಜೂನ್ 5ನ್ನು ವಿಶ್ವ ಪರಿಸರ ದಿನವೆಂದು ಆಚರಿಸಲಾಗುತ್ತಿದೆ. ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಒಂದು ಜಾಗತಿಕ ವೇದಿಕೆಯೂ ಆಗಿದೆ. ಪ್ರತೀ ವರ್ಷ 143ಕ್ಕೂ ಅಧಿಕ ದೇಶಗಳು ಇದರಲ್ಲಿ ಭಾಗವಹಿಸುವುದು. "ನಮಗೆ ಇರುವುದೊಂದೇ ಭೂಮಿ, ಅದರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆ" ಎಂಬುವುದು ಇದರ ಇದರ ಆಶಯವಾಗಿದೆ.
2021ರ ಥೀಮ್
ಪ್ರತೀ ವರ್ಷ ಒಂದೊಂದು ಥೀಮ್‌ನಲ್ಲಿ ಈ ದಿನವನ್ನು ಆಚರಿಸಲಾಗುವುದು. ಈ ವರ್ಷದ ವಿಷಯವೆಂದರೆ 'ಪರಿಸರ ವ್ಯವಸ್ಥೆ ಪುನಃಸ್ಥಾಪನೆ" ಎಂಬುವುದಾಗಿದೆ.
ಈ ದಿನದ ಮಹತ್ವ
ಸಕಲ ಜೀವರಾಶಿಯ ದೃಷ್ಟಿಯಿಂದ ಪರಿಸರ ರಕ್ಷಣೆ ಆದ್ಯ ಕರ್ತವ್ಯವಾಗಿದೆ. ಪರಿಸರಕ್ಕೆ ಮುಖ್ಯವಾಗಿ ಹಾನಿಯಾಗುತ್ತಿರುವುದೇ ಮನುಷ್ಯರಿಂದ, ಮನುಷ್ಯ ಆ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ. ಪರಿಸರ ರಕ್ಷಣೆಗೆ ಮನುಷ್ಯ ತುಂಬಾ ಶ್ರಮಿಸಬೇಕಾಗಿಲ್ಲ, ಅನಗ್ಯತವಾಗಿ ಅದನ್ನು ಹಾಳು ಮಾಡದಿರುವುದು ಹಾಗೂ ಪ್ರತೀಯೊಬ್ಬರು ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಸಾಕು ಪರಿಸರ ಸಮೃದ್ಧಿಯಾಗಿರುತ್ತದೆ.
ಅನೇಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಭೂಮಿಯನ್ನು ಸೇರುತ್ತಿವೆ, ಇವೆಲ್ಲಾ ಭೂಮಿಗೆ ಮಾರಕವಾಗಿದೆ, ಈ ಬಗ್ಗೆ ಪರಿಣಾಮಕಾರಿಯಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ, ಅನಗ್ಯತ ತ್ಯಾಜ್ಯ ನದಿಗಳಿಗೆ ಸೇರದಂತೆ ಎಚ್ಚರವಹಿಸಬೇಕಾಗಿದೆ, ಆದಷ್ಟು ವಾಯು ಮಾಲಿನ್ಯ ಕಡಿಮೆ ಮಾಡಬೇಕು. ಗಿಡ ಮರಗಳು ಹೆಚ್ಚಾದರೆ ವಾಯು ಶುದ್ಧವಾಗುವುದು.
ಕೋವಿಡ್ 19ನಿಂದ ಹೆಚ್ಚಾಗಿರುವ ಪ್ಲಾಸ್ಟಿಕ್ ಬಳಕೆ
2018ರಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಿ ಎಂಬ ಧ್ಯೇಯವನ್ನು ಹೊಂದಿತ್ತು... ಜನರು ಕೂಡ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದರು.. ತರಕಾರಿ ತರಲು, ಸಾಮಾನುಗಳನ್ನು ತರಲು ಕೈ ಚೀಲ ಹಿಡಿದು ಹೋಗುತ್ತಿದ್ದರು. ಇದೀಗ ಕೋವಿಡ್ 19 ಬಂದಾಗಿನಿಂದ ಅಗ್ಯತವಾಗಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಫೇಸ್ ಶೀಲ್ಡ್ ಬಳಸುವುದು, ಅಲ್ಲದೆ ಮಾಸ್ಕ್, ಗ್ಲೌಸ್ ಅಂಥ ತ್ಯಾಜ್ಯ ಕೂಡ ಹೆಚ್ಚಾಗಿದೆ ಸೂಕ್ತವಾದ ಪರ್ಯಾಯ ಮಾರ್ಗಗಳನ್ನು ಕಂಡು ಕೊಳ್ಳುವ ಮೂಲಕ ಈ ಭೂಮಿಯನ್ನು ರಕ್ಷಣೆ ಮಾಡಬೇಕಾಗಿದೆ. ಪ್ರತಿಯೊಬ್ಬರು ನಮ್ಮ ಸುತ್ತ-ಮುತ್ತ ಗಿಡ ನೆಟ್ಟು ಬೆಳೆಸೋಣ... ಆಗ ಇಡೀ ನಾಡೇ ಹಸಿರಾಗಿ ಇರುವುದು.
(Kannada Copy of Boldsky Kannada)
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am