ಬ್ರೇಕಿಂಗ್ ನ್ಯೂಸ್
12-06-21 11:23 am Sumalatha N, BoldSky Kannada ಡಾಕ್ಟರ್ಸ್ ನೋಟ್
ನವದೆಹಲಿ, ಜೂನ್ 12: ಕೊರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆ ನಿಧಾನಕ್ಕೆ ತಗ್ಗುತ್ತಿದ್ದಂತೆ ಮೂರನೇ ಅಲೆಯ ಆತಂಕ ಕಾಡುತ್ತಿದೆ. ಮೂರನೇ ಅಲೆಯಲ್ಲಿ ಈ ವೈರಸ್ ತನ್ನ ಸ್ವರೂಪ ಬದಲಿಸಿಕೊಂಡರೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. "ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವುದಿಲ್ಲ. ಇದಕ್ಕೆ ಯಾವುದೇ ಪುರಾವೆ ಸದ್ಯಕ್ಕೆ ದೊರೆತಿಲ್ಲ" ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಇದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಮಕ್ಕಳಲ್ಲಿ ಕೊರೊನಾ ಚಿಕಿತ್ಸೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೊರತಂದಿದೆ. ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ಏನು ಮಾಡಬೇಕು? ಯಾವ ರೀತಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದೆ. ಯಾವ್ಯಾವ ಔಷಧಗಳನ್ನು ಬಳಕೆ ಮಾಡಬಾರದು ಎಂದು ತಿಳಿಸಿದೆ. ಮುಖ್ಯವಾಗಿ ಮಕ್ಕಳಲ್ಲಿ ರೆಮ್ಡೆಸಿವಿರ್ ಬಳಕೆ ಮಾಡುವಂತಿಲ್ಲ ಹಾಗೂ ಎಚ್‌ಆರ್‌ಸಿಟಿ ಇಮೇಜಿಂಗ್‌ನ ತರ್ಕಬದ್ಧ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಮಾರ್ಗಸೂಚಿ ಕುರಿತು ಇನ್ನಷ್ಟು ಮಾಹಿತಿ ಮುಂದಿದೆ...
ಮಕ್ಕಳಲ್ಲಿ ಸ್ಟೆರಾಯ್ಡ್ ಬಳಕೆ ಮಾಡುವಂತಿಲ್ಲ
ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್‌ಎಸ್) ಮಾರ್ಗಸೂಚಿ ಹೊರಡಿಸಿದ್ದು, ಇದರ ಪ್ರಕಾರ ಮಕ್ಕಳಲ್ಲಿ ಸೌಮ್ಯ ಲಕ್ಷಣಗಳಿರುವ ಹಾಗೂ ಲಕ್ಷಣರಹಿತ ಸೋಂಕಿನ ಪ್ರಕರಣದಲ್ಲಿ ಸ್ಟೆರಾಯ್ಡ್‌ಗಳ ಬಳಕೆ ಹಾನಿಕಾರಕವಾಗಬಹುದು ಎಂದು ತಿಳಿಸಿದೆ. ಗಂಭೀರ ಪ್ರಕರಣಗಳಲ್ಲಿ ಮಾತ್ರ, ಆಸ್ಪತ್ರೆಗೆ ಸೇರಿದ ಮಕ್ಕಳಿಗೆ ಸ್ಟೆರಾಯ್ಡ್ ಬಳಸಬಹುದು ಎಂದು ತಿಳಿಸಿದೆ. ಸ್ಟೆರಾಯ್ಡ್‌ಗಳನ್ನು ಸೂಕ್ತ ಸಮಯದಲ್ಲಿ, ಸೂಕ್ತ ಪ್ರಮಾಣದಲ್ಲಿ ನೀಡಬೇಕು ಎಂದು ಹೇಳಿದೆ
ಪೋಷಕರೇ ನೀವೇ ಮಾತ್ರೆ ನೀಡಬೇಡಿ
ಪೋಷಕರು ಕೂಡ ತಾವೇ ಮಕ್ಕಳಿಗೆ ಮಾತ್ರೆಗಳನ್ನು ನೀಡುವಂತಿಲ್ಲ ಎಂದು ಹೇಳಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರೆಮ್ಡೆಸಿವಿರ್ ಔಷಧಿ ಬಳಕೆಗೆ ಸಂಬಂಧಿಸಿದಂತೆ ಸುರಕ್ಷತೆ ಹಾಗೂ ದಕ್ಷತೆಯ ಕುರಿತು ಮಾಹಿತಿ ಕೊರತೆಯಿದೆ. ಹೀಗಾಗಿ ರೆಮ್ಡೆಸಿವಿರ್ ಬಳಕೆ ಸೂಚಿಸಿಲ್ಲ ಎಂದು ಮಾರ್ಗಸೂಚಿಯಲ್ಲಿ ನಮೂದಿಸಲಾಗಿದೆ. ಎಚ್‌ಆರ್‌ಸಿಟಿ ಸ್ಕ್ಯಾನ್ ಅನ್ನು ಮಕ್ಕಳಿಗೆ ಸುಖಾ ಸುಮ್ಮನೆ ಬಳಸಬೇಡಿ ಎಂದು ಹೇಳಿದ್ದು, ಅತಿ ಅಗತ್ಯವಿದ್ದರೆ ಮಾತ್ರ, ಗಂಭೀರ ಪ್ರಕರಣದಲ್ಲಿ ಎಚ್‌ಆರ್‌ಸಿಟಿ ಸ್ಕ್ಯಾನ್ ಬಳಸಬಹುದು. ಅದರಿಂದ ಪಡೆದ ಹೆಚ್ಚುವರಿ ಮಾಹಿತಿ ಆಧಾರದ ಮೇಲೆ ಚಿಕಿತ್ಸೆ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದೆ.
ಶಿಫಾರಸ್ಸಿನ ಮೇಲೆ ಆ್ಯಂಟಿಮೈಕ್ರೋಬಿಯಲ್ ಬಳಕೆ
ಲಕ್ಷಣ ರಹಿತ ಹಾಗೂ ಸೌಮ್ಯ ಲಕ್ಷಣಗಳಿರುವ ಪ್ರಕರಣಗಳಿಗೆ ಆ್ಯಂಟಿ ಮೈಕ್ರೋಬಿಯಲ್ ಅಥವಾ ರೋಗನಿರೋಧಕ ಶಕ್ತಿಗೆ ಶಿಫಾರಸ್ಸು ಮಾಡಲಾಗುವುದಿಲ್ಲ. ಆದರೆ ಮಧ್ಯಮ ಹಾಗೂ ತೀವ್ರ ಪ್ರಕರಣಗಳಿಗೆ ಆ್ಯಂಟಿಮೈಕ್ರೋಬಿಯಲ್ ಬಳಕೆಯನ್ನು ವೈದ್ಯಕೀಯ ಶಿಫಾರಸ್ಸಿನ ಮೇರೆಗೆ ನಿರ್ಧರಿಸಬಹುದು ಎಂದು ಹೇಳಿದೆ. ಮಕ್ಕಳಲ್ಲಿ ರೋಗ ಲಕ್ಷಣವಿಲ್ಲದ ಸೋಂಕಿಗೆ ಯಾವುದೇ ನಿರ್ದಿಷ್ಟ ಔಷಧಿಯನ್ನು ಮಾರ್ಗಸೂಚಿ ಶಿಫಾರಸ್ಸು ಮಾಡಿಲ್ಲ ಮತ್ತು ಕೊರೊನಾ ಸೋಂಕನ್ನು ದೂರವಿಡಲು ಸೂಕ್ತ ನಡವಳಿಕೆಯನ್ನು (ಮಾಸ್ಕ್, ಸ್ವಚ್ಛತೆ, ದೈಹಿಕ ಅಂತರ ಕಾಯ್ದುಕೊಳ್ಲುವುದು) ಶಿಫಾರಸ್ಸು ಮಾಡಲಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಸೂಚಿಸಲಾಗಿದೆ.
ಮಧ್ಯಮ ಲಕ್ಷಣಗಳಿದ್ದರೆ ಆಮ್ಲಜನಕ ಥೆರಪಿ
ಮಕ್ಕಳಲ್ಲಿ ಸೌಮ್ಯ ಲಕ್ಷಣಗಳಿರುವ ಸೋಂಕಿಗೆ ಅಥವಾ ಜ್ವರವಿದ್ದರೆ, ಗಂಟಲು ನೋವಿದ್ದರೆ ಪ್ಯಾರಾಸಿಟಮಾಲ್ 10-15 ಮಿ.ಗ್ರಾಂ ಡೋಸ್ ಅನ್ನು ಪ್ರತಿ 4-6 ಗಂಟೆಗಳಿಗೊಮ್ಮೆ ಬಳಸಲು ಸೂಚಿಸಲಾಗಿದೆ. ಮಧ್ಯಮ ಲಕ್ಷಣಗಳಿರುವ ಸಂದರ್ಭದಲ್ಲಿ ಆಮ್ಲಜನಕ ಥೆರಪಿ ಬಳಸಲು ಸಲಹೆ ನೀಡಲಾಗಿದೆ. ಮಧ್ಯಮ ಸೋಂಕಿರುವ ಎಲ್ಲಾ ಮಕ್ಕಳಿಗೆ ಕಾರ್ಟಿಕೊಸ್ಟೆರಾಯ್ಡ್‌ಗಳ ಅಗತ್ಯವಿಲ್ಲ. ಸಮಸ್ಯೆ ಗಂಭೀರ ಸ್ವರೂಪ ಕಾಣಿಸಿಕೊಳ್ಳುತ್ತಿದ್ದರೆ ಮಾತ್ರ ಬಳಸಬೇಕಾಗುತ್ತದೆ ಎಂದು ತಿಳಿಸಿದೆ. ಆದರೆ ಮಕ್ಕಳಲ್ಲಿ ಕೊರೊನಾ ಸೋಂಕು ತೀವ್ರ ಸ್ವರೂಪ ಪಡೆದರೆ, ತೀವ್ರ ಉಸಿರಾಟ ತೊಂದರೆ ಉಂಟಾದರೆ ಅಗತ್ಯವಾಗಿ ಆರೋಗ್ಯ ನಿರ್ವಹಣೆ ಮಾರ್ಗಸೂಚಿಗಳನ್ನು ಪ್ರಾರಂಭಿಸಬೇಕು ಎಂದು ತಿಳಿಸಿದೆ.
6 ನಿಮಿಷಗಳ ನಡಿಗೆ ಪರೀಕ್ಷೆ
ಸೋಂಕಿನ ಪ್ರಮಾಣ ಪತ್ತೆಗೆ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಆರು ನಿಮಿಷಗಳ ನಡಿಗೆ ಪರೀಕ್ಷೆ ಮಾಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದು ಸರಳವಾದ ವೈದ್ಯಕೀಯ ಪರೀಕ್ಷೆಯಾಗಿದೆ. ಪೋಷಕರು ಮಕ್ಕಳ ಬೆರಳಿಗೆ ಪಲ್ಸ್ ಆಕ್ಸಿಮೀಟರ್ ಅಳವಡಿಸಿ 6 ನಿಮಿಷ ನಡಿಗೆಗೆ ಸೂಚಿಸಬೇಕು. ದೇಹದಲ್ಲಿನ ಆಮ್ಲಜನಕ ಮಟ್ಟದ ಮೇಲೆ ನಿಗಾ ವಹಿಸಿ. ಉಸಿರಾಡಲು ಅವರಿಗೆ ತೊಂದರೆ ಎನಿಸಿದರೆ ತಕ್ಷಣ ಚಿಕಿತ್ಸೆ ದೊರಕಿಸಿ ಎಂದು ಸೂಚಿಸಲಾಗಿದೆ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 10:21 pm
HK News Desk
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm