ಬ್ರೇಕಿಂಗ್ ನ್ಯೂಸ್
15-06-21 11:44 am Reena TK, BoldSky Kannada ಡಾಕ್ಟರ್ಸ್ ನೋಟ್
ರಕ್ತದಾನದಷ್ಟೇ ಪುಣ್ಯವಾದ ದಾನ ಅಂಗಾಂಗ ದಾನ. ನಾವು ಸತ್ತ ಮೇಲೆ ನಮ್ಮ ದೇಹವನ್ನು ಸುಡುವುದು ಅಥವಾ ಮಣ್ಣಿನಲ್ಲಿ ಊಳುವುದು ಮಾಡುತ್ತಾರೆ. ಆದರೆ ಅಂಗಾಂಗಾ ದಾನ ಮಾಡುವುದರಿಂದ ನಮ್ಮಿಂದ ಇತರ ವ್ಯಕ್ತಿಗಳಿಗೆ ಪ್ರಯೋಜನವಾಗುತ್ತದೆ, ನಮ್ಮ ಅಂಗಾಂಗಗಳಿಂದಾಗಿ 2-3 ಜನರಿಗೆ ಪ್ರಾಣದಾನ ಮಾಡಿದಂತಾಗುವುದು. ಯಾರು ನಮ್ಮ ದೇಹದಿಂದ ಮತ್ತೊಬ್ಬರಿಗೆ ಉಪಕಾರವಾಗಲಿ ಎಂದು ಬಯಸುತ್ತಾರೋ ಅವರು ಅಂಗಾಂಗ ದಾನ ಮಾಡುತ್ತಾರೆ.
ಯಾರು ಅಂಗಾಂಗ ದಾನ ಮಾಡಬಹುದು?
ಯಾವುದೇ ವಯಸ್ಸಿನ ಅಂತರವಿಲ್ಲದೆ, ಲಿಂಗ ಬೇಧವಿಲ್ಲದೆ ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು. 18 ವರ್ಷ ಕೆಳಗಿನವರ ಅಂಗಾಂಗಗಳನ್ನು ಪೋಷಕರು ದಾನ ಮಾಡಬಹುದು.

ಅಂಗಾಂಗ ದಾನ ಹೇಗೆ ಮಾಡಬಹುದು?
ಯಾವೆಲ್ಲಾ ಅಂಗಾಂಗಗಳನ್ನು ದಾನ ಮಾಡಬಹುದು?
ಕಿಡ್ನಿ, ಶ್ವಾಸಕೋಶ, ಹೃದಯ, ಕಣ್ಣುಗಳು, ಲಿವರ್, ಪ್ಯಾಂಕ್ರಿಯಾಸ್, ಅಕ್ಷಿಪಟಲ, ಚಿಕ್ಕ ನರಗಳು, ತ್ವಚೆಯ ನರಗಳು, ಮೂಳೆಯ ನರಗಳು, ಹೃದಯ, ರಕ್ತನಾಳಗಳು(Veins).

ವ್ಯಕ್ತಿಯ ಮೆದುಳನ್ನು ಯಾವಾಗ ದಾನ ಮಾಡಬಹುದು?
ನ್ಯೂರೋಲಾಜಿಕಲ್ ಸರ್ಜನ್ ವ್ಯಕ್ತಿಯ ಬ್ರೈನ್ ಡೆಡ್ ಆಗಿದೆ (ಮೆದುಳು ನಿಷ್ಕ್ರಿಯೆ ಆಗಿದೆ) ಎಂದು ತಿಳಿಸಿದ ಬಳಿಕ ಅಂಗಾಂಗ ದಾನದ ಪ್ರಕ್ರಿಯೆ ಪ್ರಾರಂಭವಾಗುವುದು.
ಬ್ರೈನ್ ಡೆಡ್ ಎಂದು ಹೇಳಿದ ಬಳಿಕ ಎಷ್ಟು ಸಮಯ ವ್ಯಕ್ತಿಯನ್ನು ವೆಂಟಿಲೇಟರ್ನಲ್ಲಿ ಇಡಲಾಗುವುದು?
ಅಂಗಾಂಗಗಳನ್ನು ತೆಗೆಗೆಯಲು ಸರ್ಜರಿಗೆ ವ್ಯವಸ್ಥೆ ಮಾಡುವವರಿಗೆ ಬ್ರೈನ್ ಡೆಡ್ ಆದ ವ್ಯಕ್ತಿಯನ್ನು ವೆಂಟಿಲೇಟರ್ನಲ್ಲಿ ಇಡಬೇಕಾಗುತ್ತದೆ. ಆಮ್ಲಜನಕದ ಪೂರೈಕೆ ಆಗದೇ ಹೋದರೆ ಆ ಅಂಗಾಂಗಗಳ ಕಸಿ ಮಾಡಲು ಸಾಧ್ಯವಾಗುವುದಿಲ್ಲ.

ಸರ್ಜರಿಗೆ ಎಷ್ಟು ಸಮಯ ಬೇಕಾಗುತ್ತೆ?
ಯಾವ ಅಂಗಾಂಗಗಳನ್ನು ತೆಗೆಯುತ್ತಿದ್ದಾರೆ ಅದರ ಅನುಸಾರ ಸಮಯ ಬೇಕಾಗಿರುತ್ತದೆ. ಸಾಮಾನ್ಯವಾಗಿ ಸರ್ಜರಿಗೆ 4-6 ಗಂಟೆ ಸಮಯ ಬೇಕಾಗಿರುತ್ತದೆ.
ದಾನಿಗಳ ಕುಟುಂಬ ಸರ್ಜರಿಗೆ ದುಡ್ಡ ನೀಡಬೇಕೆ?
ಇಲ್ಲ, ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವಾಗ ಸರ್ಜರಿಗೆ ದುಡ್ಡು ನೀಡಬೇಕಾಗಿಲ್ಲ, ಅಲ್ಲದೆ ಮನೆಯವರಿಗೂ ದುಡ್ಡು ಸಿಗುವುದಿಲ್ಲ, ಎಲ್ಲಾ ಖರ್ಚು-ವೆಚ್ಚಗಳನ್ನು UW OTD ಭರಿಸುತ್ತದೆ.
ಅಂಗಾಂಗ ದಾನ ಮಾಡಿದರೆ ದೇಹದ ಆಕಾರ ಬದಲಾಯಿಸುವುದೇ?
ಕಣ್ಣುಗಳು, ಮೆದುಳು ಹೀಗೆ ಅಂಗಾಂಗಗಳನ್ನು ದಾನ ಮಾಡಿದ ಮೃತ ಶರೀರದ ಆಕಾರವೇನು ವಿಕಾರವಾಗುವುದಿಲ್ಲ. ಅವರ ಮುಖವನ್ನು ವಿರೂಪಗೊಳಿಸುವುದಿಲ್ಲ. ಅಂಗಾಂಗ ದಾನ ಸಾವಿನಲ್ಲೂ ಸಾರ್ಥಕತೆ ಕಾಣುವ ಪುಣ್ಯಕಾರ್ಯವಾಗಿದೆ.
(Kannada Copy of Boldsky Kannada)
03-12-25 03:01 pm
HK News Desk
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
03-12-25 07:19 pm
HK News Desk
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
ಅಫ್ಘಾನಿಸ್ತಾನದಲ್ಲಿ ಒಂದೇ ಕುಟುಂಬದ 13 ಜನರನ್ನು ಕೊಂ...
03-12-25 03:04 pm
ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್...
02-12-25 11:19 pm
03-12-25 10:35 pm
Mangalore Correspondent
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
K. C. Venugopal, Mangalore, Dk Shivakumar: ಮಂ...
03-12-25 11:54 am
Bjp, Arun Puthila, Puttur, Mangalore: ಬಿಜೆಪಿ...
01-12-25 09:25 pm
03-12-25 01:41 pm
Bangalore Correspondent
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm
Udupi Rape, Crime, Hindu Jagaran Vedike: ಮದುವ...
01-12-25 04:50 pm