ಬ್ರೇಕಿಂಗ್ ನ್ಯೂಸ್
29-06-21 11:24 am Shreeraksha, BoldSky Kannada ಡಾಕ್ಟರ್ಸ್ ನೋಟ್
ನವದೆಹಲಿ, ಜೂನ್ 29: ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಆರೋಗ್ಯ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಗರ್ಭಿಣಿಯರಿಗೆ ಕೊರೊನಾ ಲಸಿಕೆಗಳನ್ನು ನೀಡಬಹುದು. ಅವರ ಆರೋಗ್ಯ ದೃಷ್ಟಿಯಿಂದ ಲಸಿಕೆ ನೀಡುವುದು ಅವಶ್ಯಕ ಕೂಡ ಎಂದು ಎರಡು ದಿನಗಳ ಹಿಂದೆ ಸಚಿವಾಲಯ ಸ್ಪಷ್ಟನೆ ನೀಡಿತ್ತು.
ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಗರ್ಭಿಣಿಯರು ಕೋವಿನ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಬಹುದು ಅಥವಾ ನೇರ ಕೊರೊನಾ ಲಸಿಕೆ ಕೇಂದ್ರಗಳಿಗೆ ಹೋಗಿ ಅಲ್ಲಿ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದು ಎಂದು ಹೇಳಿದೆ. ಮಾರ್ಗಸೂಚಿಯಲ್ಲಿ ಇನ್ನಷ್ಟು ಅಂಶಗಳ ಕುರಿತು ವಿವರಗಳನ್ನು ಹಂಚಿಕೊಂಡಿದೆ. ಮಾರ್ಗಸೂಚಿಯಲ್ಲೇನಿದೆ? ಮುಂದೆ ಓದಿ...
ಮುನ್ನೆಚ್ಚರಿಕೆಯಿಂದ ಗರ್ಭಿಣಿಯರು ಲಸಿಕೆ ಪಡೆಯಬೇಕು
ಬಹುಪಾಲು ಗರ್ಭಿಣಿಯರಿಗೆ ಲಕ್ಷಣರಹಿತ ಸೋಂಕು ಕಾಣಿಸಿಕೊಳ್ಳಬಹುದು ಅಥವಾ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಬಹುದು. ನಿರ್ಲಕ್ಷಿಸಿದರೆ ಮಗುವಿನ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಮುನ್ನೆಚ್ಚರಿಕೆ ವಹಿಸಿ ಲಸಿಕೆ ಪಡೆದುಕೊಳ್ಳುವುದು ಅವಶ್ಯಕ.
80% ಗರ್ಭಿಣಿಯರು ಗುಣಮುಖರಾಗಿದ್ದಾರೆ
ಇದುವರೆಗಿನ ಪ್ರಕರಣಗಳನ್ನು ಗಮನಿಸಿದಾಗ, ಸೋಂಕಿಗೆ ತುತ್ತಾದ ಗರ್ಭಿಣಿಯರಲ್ಲಿ 80% ಮಹಿಳೆಯರಿಗೆ ತೀವ್ರತರ ಸಮಸ್ಯೆಗಳು ಕಂಡುಬಂದಿಲ್ಲ. ಆಸ್ಪತ್ರೆಗೆ ದಾಖಲಾಗದೇ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ಕೆಲವು ಪ್ರಕರಣಗಳು ಗಂಭೀರ ಮಟ್ಟ ತಲುಪಿವೆ. ಹೀಗಾಗಿ ಆರೋಗ್ಯದಲ್ಲಿ ಅಲ್ಪ ಏರುಪೇರು ಕಂಡರೂ ಆಸ್ಪತ್ರೆಗೆ ದಾಖಲಾಗುವುದು ಅವಶ್ಯಕವಾಗುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, 35 ವರ್ಷ ಮೇಲ್ಪಟ್ಟವರು ಜಾಗೃತವಾಗಿರಬೇಕು.
ಮಕ್ಕಳು ಆರೋಗ್ಯಕರವಾಗಿ
ಜನಿಸುತ್ತವೆ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಜನಿಸಿದ ಶೇ 96ಕ್ಕಿಂತ ಹೆಚ್ಚು ಮಕ್ಕಳು ಆರೋಗ್ಯಕರವಾಗಿವೆ. ಕೆಲವೇ ಕೆಲವು ಪ್ರಕರಣಗಳಲ್ಲಿ ಅವಧಿಗೆ ಮುನ್ನ ಮಗು ಜನಿಸಿದ ವರದಿಯಾಗಿದೆ. ಮಗು ಸಾವನ್ನಪ್ಪಿರುವ ಪ್ರಮಾಣ ತೀರ ಕಡಿಮೆಯಿದೆ.
ಯಾರು ಹೆಚ್ಚು ಜಾಗ್ರತೆಯಿಂದರಬೇಕು?
35 ವರ್ಷ ಮೇಲ್ಪಟ್ಟ ಗರ್ಭಿಣಿಯರು, ಗರ್ಭ ಧರಿಸುವ ಮುನ್ನ ಮಧುಮೇಹ, ಅಧಿಕ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇತ್ಯಾದಿಯಿಂದ ಬಳಲುತ್ತಿದ್ದವರಿಗೆ ಕೊರೊನಾ ಸೋಂಕಿನ ಸಾಧ್ಯತೆ ಇರುತ್ತದೆ.
ಲಸಿಕೆ ಪಡೆದ ನಂತರ ಅನಾರೋಗ್ಯ ಸಹಜ
ಕೊರೊನಾ ಲಸಿಕೆ ಪಡೆದುಕೊಂಡ ನಂತರ ಗರ್ಭಿಣಿಯರಿಗೆ ಮೂರು ದಿನಗಳ ಕಾಲ ಅನಾರೋಗ್ಯ ಉಂಟಾಗಬಹುದು. ಜ್ವರ, ನೋವು, ಸುಸ್ತು ಕಾಣಿಸಬಹುದು. ಆದರೆ ಕೊರೊನಾ ಲಸಿಕೆ ಮಗುವಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ.
ಲಸಿಕೆ ಪಡೆದ ನಂತರವೂ ಎಚ್ಚರಿಕೆ ತಪ್ಪಬಾರದು
ಲಸಿಕೆ ಪಡೆದ ನಂತರ ಗರ್ಭಿಣಿಯರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಎರಡು ಮಾಸ್ಕ್ ಧರಿಸುವುದು, ಕೈಗಳನ್ನು ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಹೆಚ್ಚು ಜನರಿದ್ದಲ್ಲಿ ಹೋಗದೇ ಇರುವುದು ಅತ್ಯವಶ್ಯಕವಾಗಿದೆ. ಕೊರೊನಾ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm