ಬಿಸಿನೀರು ಒಳ್ಳೆಯದೇ, ಆದರೆ ಅತಿಯಾಗಿ ಕುಡಿಯುವುದರಿಂದ ಆರೋಗ್ಯಕ್ಕೆ ಆಗುವ ಹಾನಿಗಳೇನು ಗೊತ್ತಾ?

29-06-21 12:03 pm       Shreeraksha, BoldSky Kannada   ಡಾಕ್ಟರ್ಸ್ ನೋಟ್

ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿರುವ ಬಿಸಿನೀರನ್ನು ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿಯುವುದು ಒಳ್ಳೆಯದು. ಆದರೆ ಬಿಸಿನೀರನ್ನು ಮತ್ತೆ ಮತ್ತೆ ಕುಡಿಯುವುದರಿಂದ ಅನೇಕ ಅನಾನುಕೂಲಗಳಿವೆ.

ಒಬ್ಬ ವ್ಯಕ್ತಿ ತನ್ನ ತೂಕ ಇಳಿಸಿಕೊಳ್ಳಲು ಅಥವಾ ತನ್ನನ್ನು ತಾನು ಸದೃಢವಾಗಿಡಲು, ಪ್ರತಿದಿನ ಬಿಸಿನೀರನ್ನು ಕುಡಿಯಬೇಕು ಎಂದು ಹೇಳಲಾಗುವುದು. ಈ ಬಿಸಿನೀರು ಕುಡಿಯುವುದರಿಂದ ನಿಮ್ಮ ಬಾಯಾರಿಕೆ ತಣಿಯದಿದ್ದರೂ, ನಿಮ್ಮ ಗಂಟಲಿಗೆ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿರುವ ಬಿಸಿನೀರನ್ನು ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿಯುವುದು ಒಳ್ಳೆಯದು. ಆದರೆ ಬಿಸಿನೀರನ್ನು ಮತ್ತೆ ಮತ್ತೆ ಕುಡಿಯುವುದರಿಂದ ಅನೇಕ ಅನಾನುಕೂಲಗಳಿವೆ. ಅವುಗಳೇನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಮೂತ್ರಪಿಂಡಗಳ ಮೇಲೆ ಪರಿಣಾಮ:

ನಮ್ಮ ಮೂತ್ರಪಿಂಡಗಳು ವಿಶೇಷ ಕ್ಯಾಪಿಲ್ಲರಿ ವ್ಯವಸ್ಥೆಯನ್ನು ಹೊಂದಿವೆ. ಇದು ದೇಹದಿಂದ ಹೆಚ್ಚುವರಿ ನೀರು ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಯಾವಾಗ ನಾವು ಬಿಸಿನೀರು ಕುಡಿಯುತ್ತೇವೋ, ಅದು ನಮ್ಮ ಮೂತ್ರಪಿಂಡಗಳ ಮೇಲೆ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡವನ್ನು ಬೀರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಇದರಿಂದಾಗಿ ಸಾಮಾನ್ಯವಾಗಿ ಮೂತ್ರಪಿಂಡದ ಕಾರ್ಯಗಳ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಅತಿಯಾಗಿ ಬಿಸಿನೀರು ಸೇವನೆ ಒಳ್ಳೆಯದಲ್ಲ.



ನಿದ್ರಾಹೀನತೆಯ ಸಮಸ್ಯೆ:

ರಾತ್ರಿ ಮಲಗುವ ಮುನ್ನ ಬಿಸಿನೀರು ಸೇವನೆಯಿಂದ ನಿಮಗೆ ನಿದ್ರೆ ಬರದೇ ಇರಬಹುದು. ಅದರ ಜೊತೆಗೆ ಮಲಗುವ ಸಮಯದಲ್ಲಿ ಬಿಸಿನೀರು ಕುಡಿಯುವುದರಿಂದ ನೀವು ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತೀರಿ. ಇದರಿಂದ ಕೂಡ ನಿಮ್ಮ ನಿದ್ದೆ ಹಾಳಾಗಬಹುದು. ಅಷ್ಟೇ ಅಲ್ಲ ನಿಮ್ಮ ರಕ್ತನಾಳಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿದ್ದೆ ಮಾಡುವ ಮೊದಲು ಬಿಸಿನೀರು ಕುಡಿಯಬೇಡಿ.



ದೇಹದ ಆಂತರಿಕ ಅಂಗಗಳಿಗೆ ಹಾನಿ:

ಬಿಸಿನೀರಿನ ಉಷ್ಣತೆಯು ದೇಹದ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ನಿರಂತರವಾಗಿ ಬಿಸಿನೀರನ್ನು ಕುಡಿಯುವುದರಿಂದ ದೇಹದೊಳಗಿನ ಅಂಗಗಳು ಸುಡುವ ಅಪಾಯವಿದೆ. ಆದ್ದರಿಂದ ಅತಿಯಾಗಿ ಬಿಸಿಯಾಗಿರುವ ನೀರನ್ನು ಕುಡಿಯಬೇಡಿ. ದೇಹದ ಆಂತರಿಕ ಅಂಗಗಳ ಅಂಗಾಂಶಗಳು ಅತ್ಯಂತ ಸೂಕ್ಷ್ಮವಾಗಿದ್ದು, ಆಗಾಗ್ಗೆ ಬಿಸಿನೀರನ್ನು ಕುಡಿಯುತ್ತಿದ್ದರೆ, ಅದು ನಿಮ್ಮ ಆಂತರಿಕ ಅಂಗಗಳಲ್ಲಿ ಗುಳ್ಳೆಗಳಿಗೆ ಕಾರಣವಾಗಬಹುದು.



ರಕ್ತದ ಪ್ರಮಾಣ ಮೇಲೆ ಪರಿಣಾಮ:

ಅತಿಯಾಗಿ ಬಿಸಿನೀರು ಕುಡಿಯುವುದರಿಂದ ರಕ್ತದ ಪ್ರಮಾಣಕ್ಕೂ ಅಪಾಯಕಾರಿಯಾಗಬಹುದು. ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಬಿಸಿನೀರನ್ನು ಸೇವಿಸುವುದರಿಂದ ನಿಮ್ಮ ಒಟ್ಟು ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ರಕ್ತ ಪರಿಚಲನೆಯು ಒಂದು ಮುಚ್ಚಿದ ವ್ಯವಸ್ಥೆಯಾಗಿದ್ದು, ರಕ್ತ ಹೆಚ್ಚಳದಿಂದ ಅನಗತ್ಯ ಒತ್ತಡವನ್ನು ಪಡೆಯಬಹುದು. ಇದರಿಂದ ಅಧಿಕ ರಕ್ತದೊತ್ತಡ ಮತ್ತು ಇತರ ಅನೇಕ ಹೃದಯ ಸಮಸ್ಯೆಗಳು ಉಂಟಾಗಬಹುದು.



ರಕ್ತದ ಪ್ರಮಾಣ ಮೇಲೆ ಪರಿಣಾಮ:

ಅತಿಯಾಗಿ ಬಿಸಿನೀರು ಕುಡಿಯುವುದರಿಂದ ರಕ್ತದ ಪ್ರಮಾಣಕ್ಕೂ ಅಪಾಯಕಾರಿಯಾಗಬಹುದು. ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಬಿಸಿನೀರನ್ನು ಸೇವಿಸುವುದರಿಂದ ನಿಮ್ಮ ಒಟ್ಟು ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ರಕ್ತ ಪರಿಚಲನೆಯು ಒಂದು ಮುಚ್ಚಿದ ವ್ಯವಸ್ಥೆಯಾಗಿದ್ದು, ರಕ್ತ ಹೆಚ್ಚಳದಿಂದ ಅನಗತ್ಯ ಒತ್ತಡವನ್ನು ಪಡೆಯಬಹುದು. ಇದರಿಂದ ಅಧಿಕ ರಕ್ತದೊತ್ತಡ ಮತ್ತು ಇತರ ಅನೇಕ ಹೃದಯ ಸಮಸ್ಯೆಗಳು ಉಂಟಾಗಬಹುದು.

(Kannada Copy of Boldsky Kannada)