ಕೋವಿಡ್ ಲಸಿಕೆ ಎರಡನೇ ಡೋಸ್ ನ ಅಡ್ಡಪರಿಣಾಮಗಳು ಯಾಕೆ ಹೆಚ್ಚು ತೀವ್ರವಾಗಿರುತ್ತವೆ? ಅದನ್ನು ಎದುರಿಸಲು ಹೇಗೆ ತಯಾರಾಗಬೇಕು?

14-07-21 02:43 pm       Shreeraksha, BoldSky Kannada   ಡಾಕ್ಟರ್ಸ್ ನೋಟ್

ಡೆಲ್ಟಾದಂತಹ ಕೊರೊನಾದ ರೂಪಾಂತರಿ ತಳಿಗಳನ್ನು ಎದುರಿಸಲು ಲಸಿಕೆಯ ಎರಡು ಡೋಸ್ ಗಳನ್ನು ಪಡೆಯುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಕೊರೊನಾದಿಂದ ದೂರವಿರಲು ಸದ್ಯ ಇರುವ ಒಂದೇ ಮಾರ್ಗ ಲಸಿಕೆ ಹಾಕಿಸಿಕೊಳ್ಳುವುದು ಎಂದು ಜನರಿಗೆ ಈಗೀಗ ಮನವರಿಕೆಯಾಗುತ್ತಿದೆ. ಆದರೆ ಡೆಲ್ಟಾದಂತಹ ಕೊರೊನಾದ ರೂಪಾಂತರಿ ತಳಿಗಳನ್ನು ಎದುರಿಸಲು ಲಸಿಕೆಯ ಎರಡು ಡೋಸ್ ಗಳನ್ನು ಪಡೆಯುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಲಸಿಕೆಯ ಮೊದಲನೇ ಡೋಸ್ ಪಡೆದಾಗ ಅಡ್ಡಪರಿಣಾಮಗಳನ್ನು ಎದುರಿಸಿದ ಸಾಕಷ್ಟು ಜನರು, ಎರಡನೇ ಡೋಸ್ ಪಡೆದುಕೊಂಡ ಮೇಲೆ ಎದುರಾಗುವ ಅಡ್ಡಪರಿಣಾಮಗಳ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ತಜ್ಞರ ಪ್ರಕಾರ, ಮೊದಲನೇ ಡೋಸ್ ಗೆ ಹೋಲಿಕೆ ಮಾಡಿದರೆ ಎರಡನೇ ಡೋಸ್ ತೆಗೆದುಕೊಂಡ ಮೇಲೆ ಹೆಚ್ಚಿನ ಅಡ್ಡಪರಿಣಾಮಗಳು ಉಂಟಾಗಬಹುದು ಎಂದಿದ್ದಾರೆ. ಆದರೆ ಚಿಂತೆ ಮಾಡುವ ಅಗತ್ಯವಿಲ್ಲ. ಕೆಲವು ಮುಂಜಾಗೃತಾ ಕ್ರಮಗಳೊಂದಿಗೆ ಈ ಅಡ್ಡಪರಿಣಾಮಗಳನ್ನು ಸುಲಭವಾಗಿ ಎದುರಿಸಬಹುದು.



ಲಸಿಕೆಯ ಎರಡನೇ ಡೋಸ್ ನಿಂದ ಅಡ್ಡಪರಿಣಾಮ ಹೆಚ್ಚು ಏಕೆ?: ಕೊರೊನಾ ವಿರುದ್ಧ ಸಂಪೂರ್ಣ ರೋಗನಿರೋಧಕ ಶಕ್ತಿಯನ್ನು ಪಡೆಯಲು ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆಯುವುದು ಅತ್ಯಗತ್ಯ. ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಾಗ ಉರಿಯೂತದ ಪ್ರತಿಕ್ರಿಯೆಗಳು ಪ್ರಾರಂಭವಾಗಿ, ಪ್ರತಿಕಾಯಗಳನ್ನು ನಿರ್ಮಾಣವಾಗಲು ಪ್ರಾರಂಭವಾಗುತ್ತವೆ. ಎರಡನೇ ಡೋಸ್ ಹಾಕಿಸಿಕೊಂಡಾಗ ಮೆದುಳಿನ ಕೋಶಗಳಲ್ಲಿ ಕಾರ್ಯರೂಪಕ್ಕೆ ಬರುತ್ತವೆ. ಈ ಸಮಯದಲ್ಲಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಲು ಪ್ರಾರಂಭವಾಗುವುದರಿಂದ ಹೆಚ್ಚು ತೀವ್ರವಾದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.

ಲಸಿಕೆಯ ಎರಡನೇ ಡೋಸ್ ನಿಂದ ಅಡ್ಡಪರಿಣಾಮ ಹೆಚ್ಚು ಏಕೆ?:

ಕೊರೊನಾ ವಿರುದ್ಧ ಸಂಪೂರ್ಣ ರೋಗನಿರೋಧಕ ಶಕ್ತಿಯನ್ನು ಪಡೆಯಲು ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆಯುವುದು ಅತ್ಯಗತ್ಯ. ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಾಗ ಉರಿಯೂತದ ಪ್ರತಿಕ್ರಿಯೆಗಳು ಪ್ರಾರಂಭವಾಗಿ, ಪ್ರತಿಕಾಯಗಳನ್ನು ನಿರ್ಮಾಣವಾಗಲು ಪ್ರಾರಂಭವಾಗುತ್ತವೆ. ಎರಡನೇ ಡೋಸ್ ಹಾಕಿಸಿಕೊಂಡಾಗ ಮೆದುಳಿನ ಕೋಶಗಳಲ್ಲಿ ಕಾರ್ಯರೂಪಕ್ಕೆ ಬರುತ್ತವೆ. ಈ ಸಮಯದಲ್ಲಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಲು ಪ್ರಾರಂಭವಾಗುವುದರಿಂದ ಹೆಚ್ಚು ತೀವ್ರವಾದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.



ಕೊರೊನಾ ಲಸಿಕೆ ಇತರ ಲಸಿಕೆಗಿಂತ ಭಿನ್ನ:

ಇತರ ಲಸಿಕೆಗಿಂತ ಕೊರೊನಾ ಲಸಿಕೆ ಭಿನ್ನವಾದ ಅಡ್ಡಪರಿಣಾಮಗಳನ್ನು ನೀಡುವುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇತರ ಲಸಿಕೆಗಳು ಸೋಂಕನ್ನು ಗುರುತಿಸಿ, ನಿಧಾನವಾಗಿ ಪ್ರತಿಕ್ರಿಯಿಸುತ್ತವೆ. ಆದರೆ ಕೊರೊನಾ ಲಸಿಕೆ ಹಾಗಲ್ಲ, ಇದರ ಪ್ರತಿಕ್ರಿಯೆ ತೀವ್ರ ಹಾಗೂ ವೇಗವಾಗಿರುತ್ತದೆ. ಜೊತೆಗೆ ಮೊದಲನೇ ಡೋಸ್ ಪಡೆದುದರಿಂದ ಈಗಾಗಲೇ ದೇಹದಲ್ಲಿ ಪ್ರತಿಕಾಯ (ಆಂಟಿಬಾಡಿ)ಗಳು ನಿರ್ಮಾಣವಾಗಿವೆ. ಲಸಿಕೆಯ ಎರಡನೇ ಡೋಸ್ ನೀಡಿದಾಗ, ಇನ್ನಷ್ಟು ಪ್ರತಿಕಾಯಗಳನ್ನು ನಿರ್ಮಿಸಬೇಕೇ ಎಂದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕೇಳುತ್ತದೆ. ಇದರ ಪರಿಣಾಮವಾಗಿಯೇ, ಎರಡನೇ ಡೋಸ್ ನಲ್ಲಿ ಅಡ್ಡಪರಿಣಾಮಗಳು ಹೆಚ್ಚಾಗುವುದು.



ಕೊರೊನಾ ಲಸಿಕೆ ಇತರ ಲಸಿಕೆಗಿಂತ ಭಿನ್ನ:

ಇತರ ಲಸಿಕೆಗಿಂತ ಕೊರೊನಾ ಲಸಿಕೆ ಭಿನ್ನವಾದ ಅಡ್ಡಪರಿಣಾಮಗಳನ್ನು ನೀಡುವುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇತರ ಲಸಿಕೆಗಳು ಸೋಂಕನ್ನು ಗುರುತಿಸಿ, ನಿಧಾನವಾಗಿ ಪ್ರತಿಕ್ರಿಯಿಸುತ್ತವೆ. ಆದರೆ ಕೊರೊನಾ ಲಸಿಕೆ ಹಾಗಲ್ಲ, ಇದರ ಪ್ರತಿಕ್ರಿಯೆ ತೀವ್ರ ಹಾಗೂ ವೇಗವಾಗಿರುತ್ತದೆ. ಜೊತೆಗೆ ಮೊದಲನೇ ಡೋಸ್ ಪಡೆದುದರಿಂದ ಈಗಾಗಲೇ ದೇಹದಲ್ಲಿ ಪ್ರತಿಕಾಯ (ಆಂಟಿಬಾಡಿ)ಗಳು ನಿರ್ಮಾಣವಾಗಿವೆ. ಲಸಿಕೆಯ ಎರಡನೇ ಡೋಸ್ ನೀಡಿದಾಗ, ಇನ್ನಷ್ಟು ಪ್ರತಿಕಾಯಗಳನ್ನು ನಿರ್ಮಿಸಬೇಕೇ ಎಂದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕೇಳುತ್ತದೆ. ಇದರ ಪರಿಣಾಮವಾಗಿಯೇ, ಎರಡನೇ ಡೋಸ್ ನಲ್ಲಿ ಅಡ್ಡಪರಿಣಾಮಗಳು ಹೆಚ್ಚಾಗುವುದು.

ತೀವ್ರ ಅಡ್ಡಪರಿಣಾಮಗಳು ಈ ಹಿಂದೆ ಕೊರೊನಾಗೆ ತುತ್ತಾಗಿರುವುದರ ಸಂಕೇತವೇ:

ಕೊರೊನಾದಿಂದ ಚೇತರಿಸಿಕೊಂಡವರು ಲಸಿಕೆ ಪಡೆದಾಗ ಹೆಚ್ಚು ತೀವ್ರವಾದ ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ ಎಂದು ಇತ್ತೀಚಿನ ಹಲವಾರು ಅಧ್ಯಯನಗಳು ಹೇಳಿವೆ. ಇದಕ್ಕೆ ಕಾರಣ ಕೊರೊನಾ ತಗುಲಿ ಇವರ ದೇಹದಲ್ಲಿ ಈಗಾಗಲೇ ಕೆಲವು ಪ್ರತಿಕಾಯಗಳು ಅಸ್ತಿತ್ವದಲ್ಲಿರಬಹುದು ಮತ್ತು ರೋಗವನ್ನು ಸಹಿಸಿಕೊಳ್ಳುವಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮವಾಗಿ ರೂಪಿಸಿರಬಹುದು. ಇದರಿಂದಾಗಿ ಅಹಿತಕರವಾದ ನೋವಿನ ಅಡ್ಡಪರಿಣಾಮಗಳನ್ನು ಎದುರಿಸಬಹುದು. ಈ ಕುರಿತು ಇನ್ನಷ್ಟು ಸಂಶೋಧನೆ ನಡೆಯಬೇಕಾಗಿದ್ದರೂ, ಮೇಲ್ನೋಟಕ್ಕೆ ಇದು ಸತ್ಯಕ್ಕೆ ಹತ್ತಿರವಾಗಿದೆ.



ಎರಡನೇ ಡೋಸ್ ಪಡೆದ ಮೇಲೆ ಯಾವ ಅಡ್ಡಪರಿಣಾಮಗಳು ಎದುರಾಗಬಹುದು?:

ಮೊದಲನೇ ಅಥವಾ ಎರಡನೇ ಡೋಸ್ ಇರಲಿ ಅಲ್ಲಿ ಜ್ವರ ಅಂತೂ ಇದ್ದೇ ಇರುತ್ತದೆ. ಆದರೆ ಅದರ ತೀವ್ರತೆ ಹೆಚ್ಚು-ಕಮ್ಮಿ ಇರಬಹುದು. ಇವುಗಳ ಜೊತೆಗೆ ಚಚ್ಚುಮದ್ದಿನ ಸ್ಥಳದಲ್ಲಿ ನೋವು, ಸೆಳೆತ, ಆಯಾಸ, ದಣಿವು ಮೊದಲ ಚಿಹ್ನೆಗಳಾಗಿವೆ. ಎರಡನೆಯ ಡೋಸ್ ನಂತರ ವಾಕರಿಕೆ ಅಥವಾ ವಾಂತಿ ಅನುಭವಿಸುತ್ತಿರುವುದನ್ನು ಕೆಲವರು ವರದಿ ಮಾಡಿದ್ದಾರೆ. ತಲೆನೋವು ಮತ್ತು ಶೀತ ಸಹ ಹೆಚ್ಚಾಗಬಹುದು. ಅಲರ್ಜಿಯೂ ಆಗಬಹುದು. ಇದು ಕೇವಲ ಎರಡನೇ ಡೋಸ್ ಗೆ ಸೀಮಿತವಾಗಿಲ್ಲ. ಇದರಲ್ಲಿ ಕೆಲವನ್ನು ಮೊದಲನೇ ಡೋಸ್ ಪಡೆದಾಗಲೂ ಅನುಭವಿಸಿದ ಉದಾಹರಣೆಗಳಿವೆ.

ಜಬ್ ಪಡೆಯುವ ಮೊದಲು ನೀವು ಹೇಗೆ ತಯಾರಾಗಬೇಕು?:

ಲಸಿಕೆ ಅಡ್ಡಪರಿಣಾಮಗಳು ಅನಾನುಕೂಲವಾಗಿರುತ್ತವೆ. ಆದ್ದರಿಂದ ನೀವು ಎಷ್ಟೇ ಆರೋಗ್ಯಕರವಾಗಿದ್ದರೂ ಸಾಕಷ್ಟು ವಿಶ್ರಾಂತಿ ಮತ್ತು ಚೇತರಿಕೆ ಅಗತ್ಯವಿರುತ್ತದೆ. ಲಸಿಕೆ ಪಡೆದಾಗ ನಿಮ್ಮ ದೈನಂದಿನ ಕಾರ್ಯ ಮಾಡುವುದು ಉತ್ತಮವೇ, ಆದರೆ ಆಯಾಸ ತರುವಂತಹ ಯಾವುದೇ ಕೆಲಸಕ್ಕೆ ಕೈ ಹಾಕಬೇಡಿ. ಲಸಿಕೆ ತೆಗೆದುಕೊಳ್ಳುವ ಹಿಂದಿನ ರಾತ್ರಿ ಚೆನ್ನಾಗಿ ನಿದ್ರೆ ಮಾಡಿ. ಲಸಿಕೆ ಪಡೆದ ನಂತರ, ಸಾಕಷ್ಟು ನೀರು, ಹೈಡ್ರೇಟಿಂಗ್ ದ್ರವಗಳು ಮತ್ತು ನಿಮ್ಮ ದೇಹಕ್ಕೆ ಪೂರಕವಾದ ಆಹಾರವನ್ನು ತಿನ್ನಿರಿ. ಜೊತೆಗೆ ಲಸಿಕೆ ಪಡೆದ ಮೇಲ ಒಂದೆರಡು ದಿನ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ.

(Kannada Copy of Boldsky Kannada)