ಬ್ರೇಕಿಂಗ್ ನ್ಯೂಸ್
21-07-21 01:45 pm Reena TK, BoldSky Kannada ಡಾಕ್ಟರ್ಸ್ ನೋಟ್
ಕಿವಿಯಲ್ಲಿ ಫಂಗಸ್ ಆಗುವುದು ಇಯರ್ ಫಂಗಲ್ ಇನ್‌ಫೆಕ್ಷನ್ ಅನೇಕರನ್ನು ಕಾಡುವ ಕಿವಿಯ ಸಮಸ್ಯೆಯಾಗಿದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ otomycosis (ಒಟೊಮೈಕೋಸಿಸ್) ಎಂದು ಕರೆಯಲಾಗುವುದು.
ಕಿವಿಯ ಫಂಗಸ್ ಸೋಂಕು ಎಂದರೇನು? ಲಕ್ಷಣಗಳೇನು, ಯಾರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುವುದು, ತಡೆಗಟ್ಟುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ:
ಕಿವಿಯಲ್ಲಿ ಫಂಗಸ್ ಸಮಸ್ಯೆ ಉಂಟಾಗಿದೆ ಎಂದು ಸೂಚಿಸುವ ಲಕ್ಷಣಗಳು
* ಕಿವಿಯಲ್ಲಿ ಒಂಥರಾ ತುರಿಕೆ ಕಂಡು ಬರುವುದು. ತುಂಬಾ ಹೆಚ್ಚಾದರೆ ನೋವು ಕಂಡು ಬರುವುದು.
* ಕಿವಿಯ ಒಳಭಾಗದ ಸಿಪ್ಪೆ ಏಳುವುದು
* ಕಿವಿಯಲ್ಲಿ ಗುಗ್ಗೆ ತುಂಬಾ ಇರದಿದ್ದರೂ ಕಿವಿಯಲ್ಲಿ ತುಂಬಾ ತುರಿಕೆ, ಕಿರಿಕಿರಿ ಉಂಟಾಗುವುದು.
* ಊತ * ಕಿವಿ ಒಳಗ್ಗೆ ಕೆಂಪಾಗುವುದು
* ಕಿವಿ ಬಂದ್ ಆದಂತೆ ಅನಿಸುವುದು
* ಕೇಳುವುದಕ್ಕೆ ತೊಂದರೆ
ಯಾರಿಗೆ ಫಂಗಲ್ ಇಯರ್ ಇನ್‌ಫೆಕ್ಷನ್ ಸೋಂಕು ಬರುತ್ತದೆ?
ಉಷ್ಣವಲಯದಲ್ಲಿ ವಾಸಿಸುವವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಅಲ್ಲದೆ ವಾಟರ್ ಸ್ಪೋರ್ಟ್ಸ್‌ನಲ್ಲಿ ಇರುವವರಿಗೆ, ಸ್ವಿಮ್ಮಿಂಗ್ ಮಾಡುವವರಿಗೆ ಈ ಸಮಸ್ಯೆ ಕಂಡು ಬರುವುದು.
ಫಂಗಲ್ ಇಯರ್ ಇನ್‌ಫೆಕ್ಷನ್ ಹೇಗೆ ಉಂಟಾಗುತ್ತದೆ?
ಕಿವಿಯಲ್ಲಿ ಗುಗ್ಗೆ ಬ್ಯಾಕ್ಟಿರಿಯಾಗಳಿಂದ ಕಿವಿಯನ್ನು ರಕ್ಷಣೆ ಮಾಡುತ್ತದೆ. ಗುಗ್ಗೆ ಕಮ್ಮಿಯಾದಾಗ ಬ್ಯಾಕ್ಟಿರಿಯಾಗಳು ಕಿವಿಯೊಳಗೆ ಹೋಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ.
* ಅಧಿಕ ಉಷ್ಣಾಂಷ ಇರುವ ಹಾಗೂ ತುಂಬಾ ಶೀತ ಇರುವ ಕಡೆ ವಾಸಿಸುವವರಿಗೆ ಈ ರೀತಿಯ ಸಮಸ್ಯೆ ಕಂಡು ಬರುವುದು.
* ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಅಥವಾ ಕಿವಿಯ ಸಮಸ್ಯೆ ಇರುವವರಲ್ಲಿ ಈ ಸಮಸ್ಯೆ ಕಂಡು ಬರುವುದು.
* ಗಂಭೀರ ಚರ್ಮ ಸಮಸ್ಯೆ ಇರುವವರಲ್ಲಿಯೂ ಈ ಸಮಸ್ಯೆ ಕಂಡು ಬರುವುದು.
ಯಾವಾಗ ವೈದ್ಯರನ್ನು ಕಾಣಬೇಕು?
ಕಿವಿಯಲ್ಲಿ ನೋವು, ತುರಿಕೆ ಅಥವಾ ಇತರ ಕಿರಿಕಿರಿ ಇದ್ದರೆ ವೈದ್ಯರನ್ನು ಕಾಣಬೇಕು. ವೈದ್ಯರು ಕಿವಿ, ಕಿವಿ ತಮಟೆ ಪರೀಕ್ಷಿಸಿ ಸೂಕ್ತ ಔಷಧಿ ಸೂಚಿಸಬಹುದು.
*ಕಿವಿಯನ್ನು ಸ್ವಚ್ಛ ಮಾಡಿ ಮಾತ್ರೆ ನೀಡಬಹುದು
*ಕೆಲವರಿಗೆ ಇಯರ್ ಡ್ರಾಪ್ ನೀಡಬಹುದು (ಕಿವಿ ಸಮಸ್ಯೆ ತುಂಬಾ ಇದ್ದರೆ ಮಾತ್ರ ಡ್ರಾಪ್ ನೀಡುತ್ತಾರೆ) ಹಾಗೂ ಈ ಸಮಸ್ಯೆ ತಡೆಗಟ್ಟಲು ಏನು ಮಾಡಬೇಕೆಂಬ ಸಲಹೆ ನೀಡುತ್ತಾರೆ.
ತಡೆಗಟ್ಟಲು ಏನು ಮಾಡಬೇಕು?
* ಸ್ವಿಮ್ಮಿಂಗ್ ಮಾಡುವಾಗ ಅಥವಾ ಸರ್ಫಿಂಗ್ ಮಾಡುವಾಗ ಕಿವಿಗೆ ನೀರು ನುಗ್ಗದಂತೆ ಎಚ್ಚರವಹಿಸಿ
* ಸ್ನಾನ ಮಾಡಿದ ಬಳಿಕ ಕಿವಿಯಲ್ಲಿರುವ ನೀರಿನಂಶ ಮೃದುವಾದ ಟವಲ್‌ನಿಂದ ತೆಗೆಯಿರಿ (ಬಡ್ಸ್ ಬಳಸಬೇಡಿ, ಬಳಸಿದರೆ ಸಮಸ್ಯೆ ಮತ್ತಷ್ಟು ಹೆಚ್ಚುವುದು)
* ಹತ್ತಿಯ ಉಂಡೆಗಳನ್ನು ಕಿವಿಗೆ ಇಡಬೇಡಿ (ಸ್ನಾನ ಮಾಡುವಾಗ ಮಾತ್ರ ಇಡಿ)
* ಕಿವಿಯನ್ನು ತುರಿಸುವುದು, ಉಜ್ಜುವುದು ಮಾಡಬೇಡಿ
* ಕಿವಿಗೆ ನೀರು ಹೋದರೆ acetic acid ಇಯರ್ ಡ್ರಾಪ್ ಬಳಸಿ.
10-04-25 04:40 pm
Bangalore Correspondent
Lokayukta Shivamogga arrest: ಶಿವಮೊಗ್ಗ ಸ್ಮಾರ್ಟ...
09-04-25 09:31 pm
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
10-04-25 01:25 pm
HK News Desk
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
ರಾಜ್ಯದ ಬಳಿಕ ಕೇಂದ್ರ ಸರ್ಕಾರದಿಂದಲೂ ಜನರಿಗೆ ಬೆಲೆ ಏ...
07-04-25 10:01 pm
09-04-25 10:57 pm
Mangalore Correspondent
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
PUC Results 2025, Mangalore Udupi topper: ಪಿಯ...
08-04-25 03:00 pm
Praveen Nettaru, Shafi Bellare, SDPI, Mangalo...
07-04-25 07:01 pm
10-04-25 08:41 pm
HK News Desk
Puttur crime, Sword, Mangalore: ಪುತ್ತೂರಿನಲ್ಲಿ...
10-04-25 02:57 pm
ಸಾಮೂಹಿಕ ವಿವಾಹ ಹೆಸರಲ್ಲಿ ಬಡ ಯುವತಿಯರ ಮಾರಾಟ ಜಾಲ ;...
09-04-25 11:17 pm
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm