ಬ್ರೇಕಿಂಗ್ ನ್ಯೂಸ್
05-08-21 02:59 pm Reena TK, Boldsky ಡಾಕ್ಟರ್ಸ್ ನೋಟ್
ಮಳೆಗಾಲದಲ್ಲಿ ಶೀತ, ಕೆಮ್ಮು ಮಾತ್ರವಲ್ಲ ಆಗಾಗ ಹೊಟ್ಟೆ ಸಮಸ್ಯೆ ಕೂಡ ಕಾಡುವುದು. ಇದಕ್ಕೆ ಕಾರಣ ಜೀರ್ಣಕ್ರಿಯೆ ತುಂಬಾ ಕಡಿಮೆ ಇರುತ್ತದೆ ಅಲ್ಲದೆ ಈ ಸಮಯದಲ್ಲಿ ನೀರಿನಿಂದ ಬರುವ ಕಾಯಿಲೆ ಕೂಡ ಅಧಿಕ. ವಾಂತಿ-ಬೇಧಿ ಈ ರೀತಿಯ ಸಮಸ್ಯೆ ಕಾಡುವುದು, ಆದ್ದರಿಂದಲೇ ಮಳೆಗಾಲದಲ್ಲಿ ಹೊರಗಿನ ಆಹಾರ ತಿನ್ನುವುದು ಕಡಿಮೆ ಮಾಡಬೇಕು ಎಂದು ಹೇಳುವುದು.
ಇನ್ನು ಮಳೆಗಾಲದಲ್ಲಿ ಎಣ್ಣೆ ಪದಾರ್ಥಗಳನ್ನು(ಸ್ನ್ಯಾಕ್ಸ್) ಸ್ವಲ್ಪ ಹೆಚ್ಚಾಗಿಯೇ ಸೇವಿಸುತ್ತೇವೆ, ಬಿಸಿ ಬಿಸಿ ಟೀ ಜೊತೆ ಬಿಸಿ ಬಜ್ಜಿ, ಬೋಂಡಾ ಮುಂತಾದ ಸ್ನ್ಯಾಕ್ಸ್ ಸವಿಯಲೇನೋ ಇಷ್ಟವಾಗುವುದು, ಆದರೆ ಇವುಗಳನ್ನು ಜೀರ್ಣ ಮಾಡಲು ಹೊಟ್ಟೆಗೆ ಕಷ್ಟವಾಗಬಹುದು, ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.
ಆದ್ದರಿಂದ ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಕಡೆ ಗಮನ ನೀಡುವುದು ತುಂಬಾ ಮುಖ್ಯ. ನಾವಿಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡಲು ನೀವೇನು ಮಾಡಬೇಕು, ಏನು ಮಾಡಬಾರದು ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:
ಹೊಟ್ಟೆಯ ಆರೋಗ್ಯಕ್ಕಾಗಿ ಏನು ಮಾಡಬಾರದು?
* ಹೊಟ್ಟೆ ತುಂಬಾ ಆಹಾರ ಸೇವಿಸಬೇಡಿ, ಮಳೆಗಾಲದಲ್ಲಿ ಲಘು ಆಹಾರ ಸೇವನೆ ಒಳ್ಳೆಯದು, ಇಲ್ಲದಿದ್ದರೆ ಅಜೀರ್ಣ, ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು.
* ಇನ್ನು ಪಾನಿಪುರಿ, ಗೋಲ್‌ಗಪ್ಪಾ ಇಂಥ ಆಹಾರಗಳು ನಿಮಗೆ ತುಂಬಾ ಇಷ್ಟವಿದ್ದರೆ ಮನೆಯಲ್ಲಿ ಮಾಡಿ ಸವಿಯಿರಿ, ಹೊರಗಡೆಯಿಂದ ಸೇವಿಸಬೇಡಿ, ಏಕೆಂದರೆ ಹೊರಗಡೆ ಅವುಗಳನ್ನು ತಯಾರಿಸಲು ಬಳಸುವ ನೀರು ಇಷ್ಟರಮಟ್ಟಿಗೆ ಶುದ್ಧವಾದದ್ದು ಎಂದು ಹೇಳಲು ಸಾಧ್ಯವಿಲ್ಲ.
* ತಂಪಾದ ಪಾನೀಯ ತೆಗೆದುಕೊಳ್ಳಬೇಡಿ, ಇದು ದೇಹದಲ್ಲಿ ಖನಿಜಾಂಶ ಪ್ರಮಾಣ ಕಡಿಮೆ ಮಾಡುವುದು, ಅಲ್ಲದೆ ಕಿಣ್ವಗಳ ಚಟುವಟಿಕೆ ಕಡಿಮೆ ಮಾಡುವುದು. ದೇಹದಲ್ಲಿ ಖನಿಜಾಂಶಗಳು ಕಡಿಮೆಯಾದರೆ ಜೀರ್ಣಕ್ರಿಯೆ ಕಡಿಮೆಯಾಗುವುದು.
* ಈ ಸಮಯದಲ್ಲಿ ಹಾಲಿನ ಪದಾರ್ಥ ಕಡಿಮೆ ಸೇವಿಸಿ. ಏಕೆಂದರೆ ಮಳೆಗಾಲದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಜೀರ್ಣಮಾಡಿಕೊಳ್ಳಲು(ಮೊಸರು, ಮಜ್ಜಿಗೆ ಬಳಸಬಹುದು) ದೇಹಕ್ಕೆ ಸ್ವಲ್ಪ ಕಷ್ಟವಾಗುವುದು. ಇದರಿಂದ ಅಜೀರ್ಣ ಉಂಟಾಗುವುದು.
* ತಾಜಾ ಹಣ್ಣಿನ ಜ್ಯೂಸ್ ಅನ್ನು ಮನೆಯಲ್ಲೇ ಮಾಡಿ ಕುಡಿಯಿರಿ. ಏಕೆಂದರೆ ಹೊರಗಡೆ ಹಣ್ಣುಗಳನ್ನು ವ್ಯಾಪಾರಸ್ಥರು ತುಂಬಾ ಹೊತ್ತು ಕತ್ತರಿಸಿ ಇಟ್ಟಾಗ ಅದರಲ್ಲಿ ಬ್ಯಾಕ್ಟಿರಿಯಾಗಳು ಇರುವ ಸಾಧ್ಯತೆ ಹೆಚ್ಚು.
* ಸೊಪ್ಪು ಕಡಿಮೆ ಬಳಸಿ. ಸೊಪ್ಪುಗಳು ಆರೋಗ್ಯಕ್ಕೆ ಒಳ್ಳೆಯದು, ಆದರೆ ಮಳೆಗಾಲದಲ್ಲಿ ಅವುಗಳಲ್ಲಿ ಚಿಕ್ಕ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸೊಪ್ಪು ಬಳಕೆ ಕಡಿಮೆ ಮಾಡಿ.
ಏನು ಮಾಡಬೇಕು?
* ಮಿತಿಯಲ್ಲಿ ತಿನ್ನಿ, ಅದರಲ್ಲೂ ಸುಲಭವಾಗಿ ಜೀರ್ಣವಾಗುವಂಥ ಆಹಾರ ಹೆಚ್ಚಾಗಿ ಸೇವಿಸಿ.
* ಹರ್ಬಲ್ ಟೀ, ಮಸಾಲೆ ಟೀ ಬಳಸಿ. ಅಂದ್ರೆ ಚಕ್ಕೆ ಟೀ, ಗ್ರೀನ್ , ಶುಂಠಿ ಟೀ, ಲೆಮನ್ ಟೀ ಇವುಗಳು ಜೀರ್ಣಕ್ರಿಯೆಗೆ ಸಹಕಾರಿ ಅಲ್ಲದೆ ಮೈ ಬೊಜ್ಜು ಕರಗಿಸುವುದು. ಆದ್ದರಿಂದ ಮಳೆಗಾಲದಲ್ಲಿ ಈ ರೀತಿಯ ಟೀ ಕುಡಿಯುವುದರಿಂದ ಮೈ ತೂಕವನ್ನು ನಿಯಂತ್ರಣದಲ್ಲಿಡಬಹುದು.
* ಮೊಸರು, ಮಜ್ಜಿಗೆ, ಚೀಸ್ ಕೆಫೀರ್ ಮುಂತಾದ ಪ್ರೊಬಯೋಟಿಕ್ ಆಹಾರ ಸೇಇಸಿ. ಇವುಗಳಲ್ಲಿ ಆರೋಗ್ಯಕರ ಬ್ಯಾಕ್ಟಿರಿಯಾ ಇದ್ದು ಜೀರ್ಣಕ್ರಿಯೆಗೆ ಒಳ್ಳೆಯದು ಜೊತೆಗೆ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುವುದು, ಇದರಿಂದಾಗಿ ರೊಗ ನಿರೋಧಕ ಶಕ್ತಿ ಹೆಚ್ಚುವುದು.
* ಅಡುಗೆಗೆ ಆರೋಗ್ಯಕರ ಎಣ್ಣೆ ಬಳಸಿ.
* ಮಳೆಗಾಲ ಅಂತ ನೀರು ಕುಡಿಯುವುದು ಕಡಿಮೆ ಮಾಡಬೇಡಿ. ತುಂಬಾ ನೀರು ಕುಡಿಯಿರಿ, ಅದರಲ್ಲೂ ಸ್ವಲ್ಪ ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯದು.
* ಕಹಿ ಆಹಾರ ಪದಾರ್ಥಗಳು ಅಂದ್ರೆ ಹಾಗಾಲಕಾಯಿ, ಮೆಂತೆಕಾಳುಗಳು, ಕಹಿಬೇವಿನ ಕಾಯಿ, ಎಲೆ ಇವುಗಳನ್ನು ಬಳಸಿ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.
* ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ, ಮಳೆಗಾಲದಲ್ಲಿ ಹಸಿ ತರಕಾರಿ ತಿನ್ನಬೇಡಿ, ಇದು ನಿಮ್ಮ ಹೊಟ್ಟೆಯನ್ನು ಹಾಳು ಮಾಡಬಹುಉದ.
* ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡಿ, ಸಕ್ಕರೆ ಬದಲಿಗೆ ಬೆಲ್ಲವನ್ನು ಹೆಚ್ಚಾಗಿ ಬಳಸಿ.
(Kannada Copy of Boldsky Kannada)
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm