ಬ್ರೇಕಿಂಗ್ ನ್ಯೂಸ್
10-08-21 02:58 pm Megha Shree, Boldsky ಡಾಕ್ಟರ್ಸ್ ನೋಟ್
ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಉತ್ತಮ ಆರೊಗ್ಯಕ್ಕಾಗಿ ಡ್ರೈ ಫ್ರೂಟ್ಸ್ ಸೇವನೆಯನ್ನು ಆರಂಭಿಸಿದ್ದಾರೆ. ನಮ್ಮ ಆರೋಗ್ಯ ದೀರ್ಘ ಕಾಲ ಉತ್ತಮವಾಗಿರಲು ಒಣ ಹಣ್ಣುಗಳನ್ನು (ಡ್ರೈ ಫ್ರೂಟ್ಸ್) ಸೇವಿಸುವುದು ಬಹಳ ಮುಖ್ಯವಾಗುತ್ತದೆ, ಇದನ್ನು ವೈದ್ಯರು ಸಹ ಬೆಂಬಲಿಸುತ್ತಾರೆ.
ಉತ್ತಮ ಪೋಷಕಾಂಶ ಉಳ್ಳ ಡ್ರೈ ಫ್ರೂಟ್ಸ್ಗಳಲ್ಲಿ ಖರ್ಜೂರ ಸಹ ಒಂದು. ಅನೇಕ ಸಿಹಿ ಖಾದ್ಯಗಳಿಗೂ ಬಳಸುವ ಖರ್ಜೂರ, ಹಲವಾರು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ನಾರಿನಂಶ ಇತ್ಯಾದಿಗಳ ಉತ್ತಮ ಮೂಲವಾಗಿದೆ. ಅಲ್ಲದೇ, ಆರೋಗ್ಯದ ಜತೆಗೆ ಸೌಂದರ್ಯದ ಪ್ರಯೋಜನಗಳನ್ನು ಸಹ ಹೊಂದಿರುವ ಖರ್ಜೂರದ ಸೇವನೆ ಅತಿಯಾದರೆ ಕೆಲವು ಅಡ್ಡಪರಿಣಾಮಗಳ ಸಹ ಎದುರಾಗುತ್ತದೆ.
ನಾವಿಂದು, ಖರ್ಜೂರದ ಅತಿಯಾದ ಸೇವನೆಯಿಂದ ಆಗಬಹುದಾದ ಅಡ್ಡಪರಿಣಾಮಗಳ ಬಗ್ಗೆ ವಿವರವಾಗಿ ತಿಳಿಸಲಿದ್ದೇವೆ:
1. ರಕ್ತದ ಸಕ್ಕರೆ ಮಟ್ಟ ಹೆಚ್ಚಿಸಬಹುದು
ಮಧುಮೇಹದಿಂದ ಬಳಲುತ್ತಿರುವವರಿಗೆ ಖರ್ಜೂರ ಅಧಿಕವಾಗಿ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ, ಏಕೆಂದರೆ ಅವುಗಳ ಅಧಿಕ ಕ್ಯಾಲೋರಿ ಮೌಲ್ಯ ಮತ್ತು ಅಧಿಕ ಸಕ್ಕರೆಯ ಅಂಶವಿದೆ. ಕಾಲು ಕಪ್ ಖರ್ಜೂರವನ್ನು ತಿನ್ನುವುದರಿಂದ ಸುಮಾರು 24 ಗ್ರಾಂ ಕಾರ್ಬೋಹೈಡ್ರೇಟ್ಗಳು ಮತ್ತು 105 ಕ್ಯಾಲೊರಿಗಳಷ್ಟು ಶಕ್ತಿಯನ್ನು ನೀಡುತ್ತದೆ. ಖರ್ಜೂರವು ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್ ನಂತಹ ನೈಸರ್ಗಿಕ ಸಕ್ಕರೆಗಳ ಸಮೃದ್ಧ ಮೂಲವಾಗಿದೆ ಮತ್ತು ಅವುಗಳ ಗ್ಲೈಸೆಮಿಕ್ ಸೂಚ್ಯಂಕವು 103 ಆಗಿದ್ದು ಇದು ಗ್ಲೂಕೋಸ್ ಗಿಂತಲೂ ಅಧಿಕವಾಗಿದೆ. ಹೆಚ್ಚಿನ ಗ್ಲೈಸೆಮಿಕ್ನ ಖರ್ಜೂರವನ್ನು ಸೇವಿಸಿದಾಗ ಅವು ನಮ್ಮ ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತೀವ್ರ ಹೆಚ್ಚಳವನ್ನು ಉಂಟುಮಾಡಬಹುದು ಮತ್ತು ಇದು ಮಧುಮೇಹ ಇರುವವರಿಗೆ ಅಪಾಯಕಾರಿಯಾಗಿದೆ. ಆದ್ದರಿಂದ, ನೀವು ಮಧುಮೇಹದಿಂದ ಬಳಲುತ್ತಿದ್ದರೆ ನಿಮ್ಮ ಡೇಟ್ ಸೇವನೆಯನ್ನು ದಿನಕ್ಕೆ ಒಂದು ಮಾತ್ರ ಸೀಮಿತಗೊಳಿಸುವುದು ಉತ್ತಮ. ಮಧುಮೇಹದಿಂದ ಬಳಲುತ್ತಿರುವ ಆರೋಗ್ಯವಂತ ವ್ಯಕ್ತಿಗಳಿಗೆ ಸಹ ಖರ್ಜೂರವನ್ನು ಮಿತವಾಗಿ ಸೇವಿಸುವುದು ಒಳ್ಳೆಯದು.
2. ಖರ್ಜೂರ ತಿಂದ ನಂತರ ನೀರು ಸೇವಿಸಬೇಡಿ
ನೀರು ಹಾಗೂ ಖರ್ಜೂರ ಒಟ್ಟಾಗಿ ಸೇವಿಸುವುದು ಆರೋಗ್ಯಕರವಲ್ಲ. ಅಧ್ಯಯನಗಳ ಪ್ರಕಾರ, ಅಧಿಕ ಸಕ್ಕರೆಯ ಮಟ್ಟಗಳು ಖರ್ಜೂರ ಮತ್ತು ನೀರಿನ ನಡುವಿನ ಪರಸ್ಪರ ಕ್ರಿಯೆಯಿಂದಾಗಿ ಅನಿಲ ರಚನೆಯಾಗಿರಬಹುದು. ಖರ್ಜೂರ ತಿಂದ ತಕ್ಷಣ ನೀರು ಕುಡಿಯುವುದು ಕೆಮ್ಮನ್ನು ಸಹ ಉಂಟುಮಾಡಬಹುದು.
3. ಹಲ್ಲು ಮತ್ತು ಒಸಡಿನ ಸಮಸ್ಯೆ
ಖರ್ಜೂರವು ಫ್ಲೋರಿನ್ನ ಉತ್ತಮ ಮೂಲವಾಗಿದ್ದು ಅದು ನಮ್ಮ ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ನಮ್ಮ ಹಲ್ಲಿನ ದಂತಕವಚವನ್ನು ಬಲಪಡಿಸುತ್ತದೆ ಮತ್ತು ಹಲ್ಲುಗಳು ಕೊಳೆಯದಂತೆ ತಡೆಯುತ್ತದೆ. ಇದು ನಮ್ಮ ಬಾಯಿಯ ಆರೋಗ್ಯಕ್ಕೆ ಖರ್ಜೂರವನ್ನು ತುಂಬಾ ಪ್ರಯೋಜನಕಾರಿಯಾದೆ. ಆದರೂ, ಖರ್ಜೂರ ನಮ್ಮ ಹಲ್ಲುಗಳಿಗೆ ಅಷ್ಟೊಂದು ಒಳ್ಳೆಯದಲ್ಲ ಎಂಬುದನ್ನು ಸಹ ಗಮನಿಸುವುದು ಮುಖ್ಯ. ಖರ್ಜೂರವು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳಿಂದ ಸಮೃದ್ಧವಾಗಿದೆ, ಇದು ಹಲ್ಲುಗಳು ಕೊಳೆಯುವುದನ್ನೂ ಪ್ರಚೋದಿಸುತ್ತದೆ ಮತ್ತು ಕುಳಿಗಳಿಗೆ ಕಾರಣವಾಗುತ್ತದೆ. ನಮ್ಮ ಹಲ್ಲುಗಳನ್ನು ಕೊಳೆಯದಂತೆ ರಕ್ಷಿಸಲು ಉತ್ತಮ ಮಾರ್ಗವೆಂದರೆ ನೀವು ಖರ್ಜೂರ ತಿಂದ ತಕ್ಷಣ ನಿಮ್ಮ ಬಾಯಿಯನ್ನು ಬೆಚ್ಚಗಿನ ಉಪ್ಪುನೀರಿನಿಂದ ತೊಳೆಯುವುದು ಉತ್ತಮ. ಇದು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳು ಹಲ್ಲುಗಳ ಮೇಲ್ಮೈಗೆ ಅಂಟದಂತೆ ತೆಗೆದುಹಾಕಲು ಸಹಾಯ ಮಾಡುತ್ತದೆ. ಬ್ಯಾಕ್ಟೀರಿಯಾವನ್ನು ದೂರವಿರಿಸುತ್ತದೆ ಮತ್ತು ನಿಮ್ಮ ಹಲ್ಲುಗಳು ಕೊಳೆಯುವುದನ್ನು ತಡೆಯುತ್ತದೆ.
4. ತೂಕ ಹೆಚ್ಚಿಸುತ್ತೆ ಖರ್ಜೂರ
ತೂಕ ಕಡಿಮೆ ಮಾಡಲು ನೀವು ಖರ್ಜೂರ ಸೇವಿಸುತ್ತೀರಾ ಎಂದಾದರೆ ಇದು ಖಂಡಿತ ಅಸಾಧ್ಯದ ಮಾತು. ಖರ್ಜೂರ ಫೈಬರ್ಗಳ ಉತ್ತಮ ಮೂಲವಾಗಿದ್ದು, ಇದು ಹೆಚ್ಚು ಸಮಸಯ ಹಸಿವಾಗದಂತೆ ತಡೆಯುತ್ತದೆ, ಪದೇ ಪದೇ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡುತ್ತದೆ, ಇದು ಒಂದು ರೀತಿ ತೂಕ ಇಳಿಸಲು ಕಾರಣವಾದರೂ, ಅವುಗಳಲ್ಲಿರುವ ಹೆಚ್ಚಿನ ಕ್ಯಾಲೊರಿಯು ತೂಕ ಕಡಿಮೆ ಮಾಡುವ ನಮ್ಮ ಪ್ರಯತ್ನವನ್ನು ತಡೆಯುತ್ತದೆ. ಆದರೆ ಅತಿಯಾಗಿ ಸೇವಿಸದೆ ಮಿತವಾಗಿ ಸೇವಿಸಿದರೆ ತೂಕ ಇಳಿಸಲು ಸಾಧ್ಯವಾಗಬಹುದು.
5. ಪೊಟ್ಯಾಶಿಯಂ ಹೆಚ್ಚಿರುತ್ತದೆ
ಖರ್ಜೂರವು ಪ್ರೋಟೀನ್, ವಿಟಮಿನ್, ಖನಿಜಗಳು ಮುಂತಾದ ಹಲವಾರು ಪೋಷಕಾಂಶಗಳ ಉತ್ತಮ ಮೂಲವಾಗಿದೆ ಮತ್ತು ಈ ಎಲ್ಲಾ ಪೋಷಕಾಂಶಗಳು ನಮ್ಮ ದೇಹಕ್ಕೆ ಬಹಳಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಆದರೂ, ಈ ಪೋಷಕಾಂಶಗಳ ಅತಿಯಾದರು ಕೆಟ್ಟದು ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ನಕಾರಾತ್ಮಕ ಪರಿಣಾಮಗಳಿವೆ. ಉದಾಹರಣೆಗೆ, ಖರ್ಜೂರದಲ್ಲಿ ಇರುವ ಪೊಟ್ಯಾಶಿಯಂ ಪ್ರಮುಖ ಪೋಷಕಾಂಶವಾಗಿದ್ದು, ಇದರಿಂಧ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಹೌದು, ಆದರೆ ಹೆಚ್ಚಿನ ಪೊಟ್ಯಾಶಿಯಂ ಸೇವನೆಯು ತೀವ್ರ ಆಯಾಸ, ಮರಗಟ್ಟುವಿಕೆ ಭಾವನೆ, ವಾಕರಿಕೆ, ಉಸಿರಾಟದ ತೊಂದರೆ, ಎದೆ ನೋವು, ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗಬಹುದು. ಇದು ಹೈಪರ್ಕಲೆಮಿಯಾ ಅಪಾಯವನ್ನು ಹೆಚ್ಚಿಸಬಹುದು.
6. ಹೊಟ್ಟೆ ನೋವು ಮತ್ತು ಕಿಬ್ಬೊಟ್ಟೆಯ ಸೆಳೆತ
ಖರ್ಜೂರವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ, ಆದರೂ ಖರ್ಜೂರದ ಅತಿಯಾದ ಸೇವನೆಯು ಹೊಟ್ಟೆಯಲ್ಲಿ ತೀವ್ರ ಕಿರಿಕಿರಿಯನ್ನು ಉಂಟುಮಾಡಬಹುದು, ನಂತರ ತೀವ್ರ ಹೊಟ್ಟೆ ಸೆಳೆತ ಮತ್ತು ಅತಿಯಾದ ಹೊಟ್ಟೆ ನೋವಿಗೆ ಕಾರಣವಾಗಬಹುದು.
(Kannada Copy of Boldsky Kannada)
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm