ಬ್ರೇಕಿಂಗ್ ನ್ಯೂಸ್
28-08-21 05:36 pm Reena TK, Boldsky ಡಾಕ್ಟರ್ಸ್ ನೋಟ್
ಕೋವಿಡ್ 19ನಿಂದ ಚೇತರಿಸಿದವರಲ್ಲಿ ಬಹುತೇಕ ಜನರು ಇತರ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಕೆಲವರಿಗೆ ಕೊರೊನಾ ಬಂದು ಹೋಗಿ ಹಲವು ತಿಂಗಳಾದರೂ ಎರಡು ಹೆಜ್ಜೆ ಇಡುವಷ್ಟರಲ್ಲಿ ತುಂಬಾ ಸುಸ್ತು ಆಗುತ್ತಿದೆ ಎಂದು ಹೇಳುತ್ತಿದ್ದಾರೆ.
ಕೋವಿಡ್ 19ನ ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಂಡು ಚೇತರಿಸಿಕೊಂಡವರಲ್ಲಿ ಈ ಲಕ್ಷಣಗಳು ಹೆಚ್ಚು ಕಂಡು ಬರುತ್ತಿವೆ, ಹೆಚ್ಚಿನ ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂದು ಹೇಳುತ್ತಿದ್ದಾರೆ. ತಜ್ಞರು ಕೋವಿಡ್ 19ನಿಂದ ಚೇತರಿಸಿದವರು ಹಲ್ಲುಗಳ ಶುಚಿತ್ವ ಹಾಗೂ ಆರೈಕೆ ಕಡೆ ಹೆಚ್ಚಿನ ಗಮನ ನೀಡಬೇಕೆಂದು ಹೇಳುತ್ತಿದ್ದಾರೆ.

ಬ್ಲ್ಯಾಕ್ ಫಂಗಸ್ ಅಪಾಯ
ಕೋವಿಡ್ 19ನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಅಪಾಯ ಹೆಚ್ಚು. ಆದ್ದರಿಂದ ಬಾಯಲ್ಲಿ ಹುಣ್ಣು, ದವಡೆಯಲ್ಲಿ ಊತ, ಹುಣ್ಣು ಮುಂತಾದ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬಾರದು. ಇವುಗಳನ್ನು ತಿಂಗಳವರೆಗೆ ನಿರ್ಲಕ್ಷ್ಯ ಮಾಡಿದರೆ ಅದು ಕ್ಯಾನ್ಸರ್ ಆಗಿ ಬದಲಾಗಬಹುದು. ಅಲ್ಲದೆ ಬ್ಲ್ಯಾಕ್ ಸಮಸ್ಯೆಯೂ ಆಗಿರಬಹುದು, ಏನೇ ಸಮಸ್ಯೆ ಆಗಿರಲಿ ಆರಂಭಿಕ ಹಂತದಲ್ಲಿ ಆದರೆ ಗುಣ ಪಡಿಸಲು ಸುಲಭ. ಆದ್ದರಿಂದ ಕೋವಿಡ್ 19 ಬಳಿಕ ಬಾಯಲ್ಲಿ ಹುಣ್ಣು, ಹಲ್ಲುಗಳಲ್ಲಿ ನೋವು ಮುಂತಾದ ಸಮಸ್ಯೆ ಇದ್ದರೆ ಕೂಡಲೇ ವೈದ್ಯರಿಗೆ ತೋರಿಸಿ.

ಹಲ್ಲುಗಳು ಹೋಗಬಹುದು
ಕೆಲವರಿಗೆ ಕೋವಿಡ್ 19 ಬಳಿಕ ದವಡೆಯಲ್ಲಿ ರಕ್ತಸ್ರಾವ, ಹಲ್ಲುಗಳಲ್ಲಿ ನೋವು ಕಂಡು ಬಂದಿರುವುದರಿಂದ ಹಲ್ಲುಗಳನ್ನು ತೆಗೆಯಬೇಕಾಗಿದೆ. ಆದ್ದರಿಂದ ಕೋವಿಡ್‌ನಿಂದ ಚೇರಿಸಿದವರು ಹಲ್ಲುಗಳ ಆರೈಕೆ ಕಡೆ ತುಂಬಾನೇ ಗಮನ ನೀಡಬೇಕು.

ಹಲ್ಲುಗಳ ಆರೈಕೆ ಹೀಗಿರಲಿ
ಮಲಗುವ ಮುನ್ನ ಹಲ್ಲುಜ್ಜಬೇಕು, ನಂತರ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಬೇಉ. ಸೇ. 1ರಷ್ಟು ಪೋವಿಡೋನ್ ಅಯೋಡಿಯನ್ ಮೌತ್‌ವಾಶ್ ಅನ್ನು ದಿನದಲ್ಲಿ ಬಾರಿ ಬಾಯಿಗೆ ಹಾಕಿ ಬಾಯಿ ಮುಕ್ಕಳಿಸುವುದು ಅವಶ್ಯಕವಾಗಿದೆ.

ಮಧುಮೇಹಿಗಳು ಹಲ್ಲುಗಳ ಆರೈಕೆಗೆ ತುಂಬಾನೇ ಗಮನ ನೀಡಬೇಕು
ಮಧುಮೇಹಿಗಳಿಗೆ ಬೇಗನೆ ಹಲ್ಲುಗಳ ಸಮಸ್ಯೆ ಕಾಡುವುದು. ಆದ್ದರಿಂದ ಹಲ್ಲುಗಳ ಆರೈಕೆ ಕಡೆ ತುಂಬಾನೇ ಗಮನ ನೀಡಿ, ಜೊತೆಗೆ ನಿಯಮಿತವಾಗಿ ದಂತ ವೈದ್ಯರನ್ನು ಕಾಣಿ. ಹಲ್ಲುಗಳ ಬಣ್ಣ ಬದಲಾವಣೆ, ದವಡೆಯಲ್ಲಿ ನೋವು, ಹಲ್ಲು ನೋವು ಇದ್ದರೆ ತುಂಬಾ ದಿನ ಕಾಯಬೇಡಿ, ಕೂಡಲೇ ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆಯಿರಿ. ಇದರಿಂದಾಗಿ ಬ್ಲ್ಯಾಕ್ ಫಂಗಸ್ ತಡೆಗಟ್ಟಬಹುದು, ಜೊತೆಗೆ ಹಲ್ಲುಗಳ ಆರೈಕೆ ಮಾಡಬಹುದು.
27-10-25 10:52 pm
Bangalore Correspondent
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 11:01 pm
Mangalore Correspondent
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
ಹೈಕಮಾಂಡ್ ತೀರ್ಮಾನ ಮಾಡಿದ್ರೆ ಐದು ವರ್ಷ ಸಿಎಂ ಆಗಿರು...
27-10-25 05:56 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm