ಬ್ರೇಕಿಂಗ್ ನ್ಯೂಸ್
18-03-22 09:54 pm Source: Vijayakarnataka ಡಾಕ್ಟರ್ಸ್ ನೋಟ್
ಇತರ ದೇಹದ ಭಾಗದಂತೆ ಕಿವಿಗಳ ಆರೈಕೆ ಮಾಡುವುದು ಬಹಳ ಮುಖ್ಯ. ಈಗಂತೂ ದಿನಗಟ್ಟಲೆ ಮೊಬೈಲ್‌ನ ಬಳಕೆಯಿಂದಾಗಿ ಕಿವಿಗಳಿಗೆ ಬಿಡುವೇ ಇರುವುದಿಲ್ಲ. ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮಾತಾಡುತ್ತಾ ಇದ್ದರೆ, ಕಿವಿಗೆ ಸಂಬಂಧಿಸಿದ ಸಮಸ್ಯೆ ಅಥವಾ ತ್ವರಿತವಾಗಿ ಕಿವುಡುತನಕ್ಕೂ ಒಳಗಾಗಬಹುದು.
ನಿಮಗೆ ತಿಳಿದಿರಲಿ, ನಿಮ್ಮ ಮೆದುಳಿಗೆ ಧ್ವನಿ ಮತ್ತು ಮಾಹಿತಿಯನ್ನು ಕಳುಹಿಸಲು ಕಿವಿಗಳು ಸಾಕಷ್ಟು ಶ್ರಮಿಸುತ್ತದೆ. ಇಂತಹ ದೇಹದ ಭಾಗವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿರಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಕಿವಿಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.l
ಪ್ರತಿನಿತ್ಯ ಕಿವಿಯನ್ನು ಸ್ವಚ್ಛಗೊಳಿಸಿ
ಕಿವಿಯ ಸುತ್ತಲಿನ ಚರ್ಮವು ಸೂಕ್ಷ್ಮವಾಗಿರುವುದರಿಂದ ಕಿವಿಯಲ್ಲಿನ ಕೊಳೆಯನ್ನು ತೆಗೆಯಲು ಚೂಪಾದ ಉಪಕರಣಗಳನ್ನು ಬಳಸದಿರಿ. ಇದು ಸುಲಭವಾಗಿ ಕಿವಿಯ ಭಾಗಕ್ಕೆ ಹಾನಿಗೊಳಗಾಗಬಹುದು ಅಥವಾ ಗಾಯಗೊಳ್ಳಬಹುದು. ಮಾರುಕಟ್ಟೆಯಲ್ಲಿ ಕಿವಿಗಳನ್ನು ಸ್ವಚ್ಛಗೊಳಿಸಲು ಇಯರ್ ಬಡ್ಸ್ ದೊರೆಯುತ್ತವೆ.
ಈ ಹತ್ತಿಯ ಇಯರ್ ಬಡ್ಸ್ ಗಳನ್ನು ಖರೀದಿ ಮಾಡುವಾಗ ನಿಗಾ ಇರಲಿ. ಸಡಿಲವಾದ ಹತ್ತಿಯು ಕೆಲವೊಮ್ಮೆ ಕಿವಿಯೊಳಗೆ ಪ್ರವೇಶಿಸಬಹುದು. ನಂತರ ಅದನ್ನು ತೆಗೆಯಲು ಗೋಜಲಿಗೆ ಒಳಗಾಗುವುದು ಬೇಡ. ವೈದ್ಯರ ಪ್ರಕಾರ ಇಯರ್ ಬಡ್ಸ್ ಬಳಸುವುದು ಅಷ್ಟು ಉತ್ತಮವಲ್ಲ ಎಂದೇ ಹೇಳಲಾಗುತ್ತದೆ.
ಕಿವಿಯ ಹೊರಭಾಗದ ಆರೈಕೆ ಹೀಗಿರಲಿ
ಕಿವಿಯ ಒಳಭಾಗ ಮಾತ್ರವಲ್ಲ, ಹೊರಭಾಗದ ಸ್ವಚ್ಛತೆ ಕಾಪಾಡುವುದು ಅಷ್ಟೇ ಮುಖ್ಯ. ಕಿವಿಗಳು ಸೂಕ್ಷ್ಮವಾದ ಪ್ರದೇಶವಾಗಿರುವುದರಿಂದ ಸುರಕ್ಷಿತವಾಗಿ ಸ್ವಚ್ಛಗೊಳಿಸಲು ಉಗುರು ಬೆಚ್ಚಗಿನ ನೀರಿನಲ್ಲಿ ಬಟ್ಟೆಯನ್ನು ಅದ್ದಿ ನಿಧಾನವಾಗಿ ಕಿವಿಯ ಹೊರಭಾಗ, ಹಿಂಭಾಗವನ್ನು ಶುಚಿಗೊಳಿಸಿ.
ಸ್ನಾನ ಮಾಡುವಾಗ ಕಿವಿಯ ಹಿಂಬದಿಯನ್ನು ನಿಧಾನವಾಗಿ ತೊಳೆಯಿರಿ. ನೀವು ಕಿವಿಗಳ ನೋವಿನಿಂದ ಬಾಧಿತರಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಸನ್ ಸ್ಕ್ರೀನ್ ಬಳಸಿ
ಇದೇನಪ್ಪಾ ಕಿವಿಗೆ ಸನ್ ಸ್ಕ್ರೀನಾ? ಅಂತ ಅಚ್ಚರಿಗೊಳ್ಳುತ್ತಿದ್ದೀರಾ? ಹೌದು, ಹೊರಗೆ ಹೋಗುವಾಗ ತ್ವಚೆ ಮತ್ತು ಕೈ, ಕಾಲುಗಳಿಗೆ ನೀಡುವಷ್ಟೇ ಆರೈಕೆ ಕಿವಿಗಳಿಗೂ ನೀಡಿ.
ಸನ್ ಸ್ಕ್ರೀನ್ ಬಳಕೆಯು ನಿಮ್ಮ ಕಿವಿಗಳನ್ನು ರಕ್ಷಣೆ ಮಾಡುತ್ತದೆ. ಸೂರ್ಯನ ತೀಕ್ಷ್ಣವಾದ ಕಿರಣಗಳು ಚರ್ಮದ ಮೇಲೆ ಬಿದ್ದಾಗ ಅನೇಕ ಆರೋಗ್ಯ ಮತ್ತು ಚರ್ಮ ಸಮಸ್ಯೆಗಳು ಕಾಡಬಹುದು. ಸುಡು ಸುಡು ಬಿಸಿಲಿಗೆ ಮೈ ಒಡ್ಡುವ ಮುಂಚೆ ಕಿವಿಯ ರಕ್ಷಣೆಗೆ.
ಕಿವುಡುತನ
ಅತಿ ಹೆಚ್ಚಾಗಿ ಮೊಬೈಲ್‌ನಲ್ಲಿ ಮಾತನಾಡುವುದು ಭವಿಷ್ಯದಲ್ಲಿ ಕಿವುಡುತನಕ್ಕೆ ಕಾರಣವಾಗಬಹುದು ಎಂದು ಶ್ರವಣತಜ್ಞರು ಸೂಚಿಸುತ್ತಾರೆ. ಹಾಗಾಗಿ ಮಿತವಾಗಿ ಮೊಬೈಲ್ ಬಳಸಿ.
ಹಾಗೆಯೇ ಶ್ರವಣ ಸಾಧನಗಳನ್ನು ಶುಷ್ಕ ಮತ್ತು ಸ್ವಚ್ಛವಾಗಿಬೇಕಾದದ್ದು ಬಹಳ ಮುಖ್ಯ. ಶ್ರವಣ ಸಾಧನಗಳಲ್ಲಿರುವ ಕೊಳೆಯು ನೀವು ಕಿವಿಗೆ ಬಳಸಿದಾಗ ನೇರವಾಗಿ ಕಿವಿಯೊಳಗೆ ಹೊಕ್ಕುತ್ತದೆ. ಹಾಗಾಗಿ ಶ್ರವಣ ಸಾಧನದ ಆರೈಕೆಯ ಮೇಲೆ ಕೂಡ ನಿಗಾವಹಿಸುವುದು ಅತ್ಯವಶ್ಯಕ.
ಒತ್ತಡದಿಂದ ಹೊರಬನ್ನಿ
ಒತ್ತಡಗಳು ದೇಹವನ್ನು ಅಸ್ವಸ್ಥಗೊಳಿಸುವ ಕಾರಣ, ಪ್ರಶಾಂತವಾದ ವಾತಾವರಣದಲ್ಲಿ ಮೊಬೈಲ್ ಇಲ್ಲದೆ ಪ್ರಕೃತಿಯ ಸುಂದರವಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ.
ಈ ರೀತಿ ಮಾಡುವುದರಿಂದ ನಿಮ್ಮ ನರಗಳು, ರಕ್ತದ ಹರಿವು, ದೇಹದ ಉಷ್ಣತೆ ಮತ್ತು ಹೆಚ್ಚಿನವುಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಕಿವಿಗೆ ಮಾಡುವ ದೊಡ್ಡ ಉಪಕಾರವೆಂದರೆ, ಪ್ರಶಾಂತವಾದ ಸ್ಥಳದಲ್ಲಿ ನೆಮ್ಮದಿಯಾಗಿ ಕಾಲಕಳೆಯುವುದು.
How To Take Care Of Ears In Kannada
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm