ಬೇಸಿಗೆ ಕಾಲದಲ್ಲಿ ಚಹಾ ಕುಡಿಯಬಹುದೇ?

22-03-22 08:27 pm       Source: Vijayakarnataka   ಡಾಕ್ಟರ್ಸ್ ನೋಟ್

ಬೇಸಿಗೆ ಕಾಲದಲ್ಲಿ ಚಹಾ ಕುಡಿಯುವುದರಿಂದ ದೊರೆಯುವ ಆರೋಗ್ಯ ಲಾಭಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.

ಬೇಸಿಗೆ ಕಾಲದಲ್ಲಿ ತಂಪು ತಂಪಾದ ಪಾನೀಯಗಳ ಮೇಲೆ ಮನಸ್ಸು ಹಾತೊರೆಯುತ್ತದೆ. ಅವು ದೇಹವನ್ನು ತಂಪಾಗಿಸುತ್ತವೆ ಎಂಬ ತಪ್ಪು ಪರಿಕಲ್ಪನೆ ನಮ್ಮಲ್ಲಿವೆ. ಆದರೆ ಕೃತಕ ಪಾನೀಯಗಳು ದೇಹವನ್ನು ತಂಪಾಗಿಸುವ ಬದಲಾಗಿ ಅನೇಕ ಆರೋಗ್ಯ ತೊಡಕುಗಳನ್ನು ಸೃಷ್ಟಿಸುತ್ತವೆ.

ಪ್ರತಿನಿತ್ಯ ನಾವು ಬೆಳಗೆದ್ದು ತಪ್ಪದೇ ಕುಡಿಯುವ ಕಾಫಿ, ಚಹಾವನ್ನು ಬೇಸಿಗೆಯ ಕಾಲದಲ್ಲಿ ಕುಡಿಯಬಹುದೇ ಎಂಬ ಸಂಶಯ ಸಹಜವಾಗಿ ಮೂಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಾಫಿಯ ಹೊರತಾಗಿ ಚಹಾವನ್ನು ಸೇವನೆ ಮಾಡುವುದು ಉತ್ತಮ ಎನ್ನುತ್ತಾರೆ. ಅಷ್ಟಕ್ಕೂ ಬೇಸಿಗೆ ಕಾಲದಲ್ಲಿ ಚಹಾ ಕುಡಿಯುವುದರಿಂದ ಪಡೆಯಬಹುದಾದ ಲಾಭಗಳು ಯಾವುವು ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ತಿಳಿಯಿರಿ.

​ಚಹಾ ಕುಡಿಯುವುದರಿಂದ ಆಗುವ ಲಾಭಗಳು

Benefits of masala chai in hindi drink one cup masala tea daily to get fit  and healthy body - आम चाय से ज्यादा दमदार है मसाला चाय, ठंड में खांसी-जुकाम  से राहत

  • ಚಹಾವು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.
  • ಚಹಾದಲ್ಲಿ ಕಾಫಿಗಿಂತ ಕಡಿಮೆ ಕೆಫೀನ್‌ ಒಳಗೊಂಡಿರುತ್ತದೆ.
  • ಚಹಾವು ನಿಮ್ಮ ಹೃದಯಾಘಾತ ಮತ್ತು ಪಾರ್ಶ್ವವಾಯುವಂತಹ ಅಪಾಯವನ್ನು ತಗ್ಗಿಸುತ್ತದೆ.
  • ಇನ್ನು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
  • ಮೂಳೆಗಳನ್ನು ರಕ್ಷಿಸಲು ಚಹಾ ನಿರ್ಣಾಯಕವಾದ ಪಾತ್ರ ವಹಿಸುತ್ತದೆ.

ಚಹಾ ಏಕೆ ಕುಡಿಯಬೇಕು?

Masala Tea Health Benefits: How Can It Improve Your Immunity

ಚಹಾವನ್ನು ಪ್ರತಿನಿತ್ಯ ನಿಯಮಿತವಾಗಿ ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದು ಕೇವಲ ನಿಮ್ಮನ್ನು ಉಲ್ಲಾಸಮಯವಾಗಿಸುವುದಿಲ್ಲ, ಬದಲಾಗಿ ಉರಿಯೂತದ ವಿರುದ್ಧ ಹೋರಾಡುತ್ತದೆ. ಇನ್ನು ಖಿನ್ನತೆಯನ್ನು ದೂರವಾಗಿಸುತ್ತದೆ.

ಅಪಾಯಕಾರಿ ಕ್ಯಾನ್ಸರ್‌ ಮತ್ತು ಹೃದ್ರೋಗದಂತಹ ಕಾಯಿಲೆಗಳಿಂದ ದೂರವಿಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಈ ಬೇಸಿಗೆಯ ಕಾಲದಲ್ಲಿ ಕಾಫಿಯ ಬದಲಾಗಿ ಚಹಾವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಅಧ್ಯಯನಗಳು ಕೂಡ ಹೇಳುತ್ತವೆ.

ಬೇಸಿಗೆಯಲ್ಲಿ ಚಹಾ

ಊಟದ ನಂತ್ರ ಬಿಸಿ ಬಿಸಿ ಟೀ, ಕಾಫಿ: ನಾಲಗೆಗೆ ರುಚಿ, ಆರೋಗ್ಯಕ್ಕೆ..? | What happens  when you drink tea or coffee after meal

ಕಾಫಿಯಂತೆ ಚಹಾ ಕೂಡ ಬಿಸಿ ಪಾನೀಯವಾಗಿದೆ. ಬೇಸಿಗೆಯಲ್ಲಿ ಬಿಸಿ ಬಿಸಿ ಚಹಾ ಕುಡಿಯುವುದರಿಂದ ಬೆವರುವಿಕೆಯ ಹೆಚ್ಚುತ್ತದೆ. ಅಂದರೆ ದೇಹದಲ್ಲಿನ ಶಾಖವನ್ನು ಉತ್ಪಾದನೆ ಮಾಡುತ್ತದೆ. ಹೆಚ್ಚಿದ ಬೆವರು ಉತ್ಪಾದನೆಯ ಪರಿಣಾಮವಾಗಿ ಬೆವರು ಆವಿಯಾಗಿ, ದೇಹವನ್ನು ತಂಪಾಗುವಂತೆ ಮಾಡುತ್ತದೆ.

ಸಾಕಷ್ಟು ಮಂದಿ ಸುಡುವ ಶಾಖದಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಸಂಶೋಧನೆಗಳು ಮಾತ್ರ ಬೇಸಿಗೆಯಲ್ಲಿ ಬಿಸಿ ಚಹಾವನ್ನು ಕುಡಿಯುವುದು ದೇಹವನ್ನು ಹೆಚ್ಚು ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ ಎಂದು ಹೇಳುತ್ತದೆ.ಚಹಾವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಮನಸ್ಥಿತಿ, ಖಿನ್ನತೆಯಂತಹ ಲಕ್ಷಣಗಳನ್ನು ನಿವಾರಿಸಲು ಚಹಾ ಸೂಕ್ತವಾದ ಪಾನೀಯವಾಗಿದೆ. ಇಷ್ಟೇ ಅಲ್ಲ, ಚಹಾ ಕಣ್ಣಿನ ಆರೋಗ್ಯವನ್ನು

ಸುಡುವ ಬಿಸಿಲಿಗೆ ಪಾನೀಯ

ಈ ಬೇಸಿಗೆಯ ಸಮಯದಲ್ಲಿ ಜನರು ನಿರ್ಜಲೀಕರಣ ಮತ್ತು ಶಾಖದ ಹೊಡೆತವನ್ನು ತಡೆಯಲು ಸಾಕಷ್ಟು ದ್ರವ ರೂಪದ ಆಹಾರ ಅಥವಾ ಕುಡಿಯುವುದು ಬಹಳ ಮುಖ್ಯ. ಬಿಸಿ ವಾತಾವರಣದ ಅವಧಿಯಲ್ಲಿ ಸಾಕಷ್ಟು ನೀರು, ತಾಜಾ ಹಣ್ಣಿನ ಜ್ಯೂಸ್‌ಗಳನ್ನು ಸೇವನೆ ಮಾಡಲಾಗುತ್ತದೆ. ಅದೇ ಸಾಲಿನಲ್ಲಿ ಚಹಾ ಕೂಡ ಕಡಿಮೆ ಕೊಬ್ಬನ್ನು ಹೊಂದಿರುವುದರಿಂದ ಅತ್ಯುತ್ತಮವಾದ ಪಾನೀಯವಾಗಿದೆ.

 

Drinking Tea During Summer Is Good Or Bad.