ಬ್ರೇಕಿಂಗ್ ನ್ಯೂಸ್
23-03-22 10:28 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಬೆಳಗ್ಗೆ ಎದ್ದ ಕೂಡಲೇ ಹೆಂಗಸರಿಗೆ, ಬ್ರೇಕ್‌ಫಾಸ್ಟ್‌ಗೆ ತಿಂಡಿ ಏನು ಮಾಡುವುದು, ಎನ್ನುವ ಟೆನ್ಷನ್ ಒಂದು ಕಡೆ ಆದರೆ, ಇತ್ತ ಗಂಡಸರಿಗೆ ಬೆಳಗ್ಗೆ ಎದ್ದ ಕೂಡಲೇ, ಇವತ್ತಿನ ಬ್ರೇಕ್‌ಫಾಸ್ಟ್‌ಗೆ ಏನು ಸ್ಪೆಷಲ್ ಇರುತ್ತದೆ ಎನ್ನುವ ಕಾತುರ ಇನ್ನೊಂದು ಕಡೆ! ಹೀಗಾಗಿ ಇಂದಿನ ಲೇಖನದಲ್ಲಿ ಇಬ್ಬರಿಗೂ ಬೆಸ್ಟ್ ಎನಿಸುವ, ಹಾಗೂ ಫಟಾಫಟ್ ಆಗಿ ರೆಡಿ ಮಾಡಬಹುದಾದ ಒಂದು ಸಿಂಪಲ್ ಬ್ರೇಕ್‌ಫಾಸ್ಟ್ ರೆಸಿಪಿ ಇದೆ! ಅದುವೇ ಅವಲಕ್ಕಿ ಉಪ್ಪಿಟ್ಟು...
ಹೌದು ಅಡುಗೆ ಮನೆಯಲ್ಲಿಯೇ ಸಿಗುವ ಕೆಲವೊಂದು ಸಾಮಾಗ್ರಿಗಳನ್ನು ಬಳಸಿಕೊಂಡು ಬಹಳ ಬೇಗನೆ ಸುಲಭವಾಗಿ ಮಾಡಬಹುದಾದ ರುಚಿಕರ ಹಾಗೂ ಪೌಷ್ಟಿಕಾಂಶಗಳಿಂದ ಕೂಡಿದ ತಿಂಡಿ ಇದು. ಇನ್ನು ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಇಷ್ಟಪಟ್ಟು ತಿನ್ನುವ ಒಂದು ಉಪಹಾರ ಎಂದು ಕೂಡ ಇದನ್ನು ಕರೆಯಬಹುದು
ಆರೋಗ್ಯ ತಜ್ಞರು ಹೇಳುವ ಪ್ರಕಾರ ಬೆಳಗ್ಗಿನ ಉಪಾಹಾರವು ಆರೋಗ್ಯವಾಗಿ ಹಾಗೂ ಪೌಷ್ಟಿಕಾಂಶಗಳಿಂದ ಕೂಡಿದ್ದರೆ, ನಮ್ಮ ಇಡೀ ದಿನ ದೇಹವು ಹೆಚ್ಚು ಉಲ್ಲಾಸ ಹಾಗೂ ಚಟುವಟಿಕೆಯಿಂದ ಇರುವುದು. ಇಂಗ್ಲಿಷ್‌ನಲ್ಲಿರುವಂತಹ ಒಂದು ನಾಣ್ಣುಡಿಯ ಪ್ರಕಾರ, ಬೆಳಗ್ಗಿನ ಉಪಾಹಾರವನ್ನು ರಾಜಕುಮಾರನಂತೆ, ಮಧ್ಯಾಹ್ನದ ಊಟ ರಾಜನಂತೆ ಹಾಗೂ ರಾತ್ರಿ ಊಟವನ್ನು ಭಿಕ್ಷುಕನಂತೆ ಮಾಡಬೇಕಂತೆ.
ನಮಗೆಲ್ಲಾ ಗೊತ್ತೇ ಇರುವ ಹಾಗೆ, ಎಂಟು ಗಂಟೆಗಳ ಕಾಲ ಸಂಪೂರ್ಣವಾಗಿ, ನಮ್ಮ ದೇಹವು ನಿದ್ರೆಯ ಸ್ಥಿತಿಯಲ್ಲಿದ್ದು, ಯಾವುದೇ ಆಹಾರವು ಸಿಗದೆ ಇರುವ ಕಾರಣದಿಂದ ದೇಹದಲ್ಲಿ ಶಕ್ತಿಯನ್ನು ಅದು ವ್ಯಯಿಸುವುದು. ಹೀಗಾಗಿ ಬೆಳಗ್ಗೆ ಎದ್ದ ಬಳಿಕ ಆರೋಗ್ಯಕಾರಿ ಉಪಾಹಾರ ಸೇವಿಸಬೇಕು, ಅದರಲ್ಲೂ ಎಣ್ಣೆ ಅಂಶ ಹಾಗೂ ಕ್ಯಾಲೋರಿ ಅಂಶಗಳು ಕಡಿಮೆ ಇರುವ ಉಪಾಹಾರಗಳನ್ನು ಸೇವಿಸಿದರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು. ಬನ್ನಿ ಇಂದಿನ ಲೇಖನದಲ್ಲಿ ಬ್ರೇಕ್‌ಫಾಸ್ಟ್‌ಗೆ ಅವಲಕ್ಕಿ ಉಪ್ಪಿಟ್ಟು ಮಾಡಿ ಸೇವಿಸುವುದರಿಂದ, ಏನೆಲ್ಲಾ ಆರೋಗ್ಯ ಲಾಭಗಳು ಸಿಗುತ್ತದೆ, ಎಂಬುದನ್ನು ನೋಡೋಣ ಬನ್ನಿ...
ಜೀರ್ಣಕ್ರಿಯೆಗೆ ಒಳ್ಳೆಯದು
ತಿಂದ ಆಹಾರಗಳು ಸರಿಯಾಗಿ ಜೀರ್ಣಕ್ರಿಯೆ ಆಗದೇ ಇರುವ ಸಮಸ್ಯೆ ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣಗಳನ್ನು ನೋಡುವುದಾದರೆ, ನಾವು ತಿನ್ನುವಂತಹ ಅನಾರೋಗ್ಯಕಾರಿ ಆಹಾರಗಳು, ಫಾಸ್ಟ್‌ಫುಡ್‌ನಂತಹ ಆಹಾರಗಳು, ಇಲ್ಲಾಂದ್ರೆ ದೀರ್ಘಕಾಲದವರೆಗೆ ಕುಳಿತಲ್ಲೇ ಇರುವುದು ದೈಹಿಕ ಶ್ರಮವಿಲ್ಲದೆ ಇರುವಂತಹ ಕೆಲಸವು ಕೂಡ ಈ ಸಮಸ್ಯೆಗೆ ಕಾರಣವಾಗಿರಬಹುದು!
ಒಮ್ಮೆ ಈ ಸಮಸ್ಯೆ ಕಾಡಲು ಶುರುವಾದರೆ, ಅಜೀರ್ಣತೆ, ಆಸಿಡಿಟಿ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ನಮ್ಮ ಬೆನ್ನಹಿಂದೆ ಬೀಳಲು ಶುರುವಾಗಿ ಬಿಡುತ್ತದೆ. ಅಷ್ಟೇ ಅಲ್ಲದೇ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ ನಿಧಾನವಾಗಿ ಅದರಿಂದ ಹಲವಾರು ರೀತಿಯ ಅನಾರೋಗ್ಯವು ಆರಂಭವಾಗಬಹುದು.
ಹೀಗಾಗಿ ಈ ಸಮಸ್ಯೆ ಇರುವವರು, ಅವಲಕ್ಕಿಯನ್ನು ನೆನೆಸಿ ತಿನ್ನುವುದು ಅಥವಾ ಅದರಿಂದ ಒಗ್ಗರಣೆ ತಯಾರು ಮಾಡಿ ಇಲ್ಲವೆಂದರೆ ಅವಲಕ್ಕಿ ಉಪ್ಪಿಟ್ಟು ತಯಾರು ಮಾಡಿ ಸೇವನೆ ಮಾಡುವುದರಿಂದ, ನಾವು ಸೇವಿಸಿ ಆಹಾರ ಬಹಳ ಬೇಗನೆ ಜೀರ್ಣವಾಗುತ್ತದೆ.
ಏಕೆಂದರೆ ಇದನ್ನು ತಿಂದ ನಂತರ ಕರುಳು ವೇಗವಾಗಿ ಚಲಿಸಲು ಆರಂಭವಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ಅಂಶಗಳು ಇರುವ ಕಾರಣ ಮತ್ತು ಪ್ರೋಟೀನ್ ಅಂಶ ಯಥೇಚ್ಛವಾಗಿ ಸಿಗುವುದರಿಂದ, ದೇಹದ ತೂಕವನ್ನು ಇಳಿಸುವುದರ ಜೊತೆಗೆ, ನಿಮ್ಮ ಆರೋಗ್ಯವನ್ನು ಕೂಡ ಕಾಪಾಡುತ್ತದೆ.
ಕಾರ್ಬೋಹೈಡ್ರೇಟ್
ರಕ್ತದಲ್ಲಿನ ಸಕ್ಕರೆ ಅಂಶದ ನಿರ್ವಹಣೆ
ನಾವೆಲ್ಲಾ ಸಣ್ಣವರಿದ್ದಾಗ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಕಾಯಿಲೆಯ ಬಗ್ಗೆ ಅಷ್ಟು ಕೇಳಿದ್ದೇ ನೆನಪು ಬರುತ್ತಿರಲಿಲ್ಲ! ಯಾಕೆಂದರೆ ಇದು ತುಂಬಾನೇ ಅಪರೂಪ ಕಾಯಿಲೆ ಆಗಿತ್ತು.
ಹೀಗಾಗಿ ಇದನ್ನು ಹಿಂದಿನ ಕಾಲದಲ್ಲಿ ಶ್ರೀಮಂತರ ಕಾಯಿಲೆ ಎಂದೇ ಕರೆಯಲಾಗುತ್ತಿತ್ತು. ಆದರೆ ಈಗ ಹಾಗಲ್ಲ, ಬಡವ-ಬಲ್ಲಿದ ಎಂಬ ಭೇದವಿಲ್ಲದೆ, ಲಕ್ಷ-ಕೋಟಿಗಟ್ಟಲೆ ಮನೆಯಲ್ಲಿ ವಾಸಿಸುವ ಜನರಿಂದ ಹಿಡಿದು, ಗುಡಿಸಲಿನಲ್ಲಿ ವಾಸಿಸುವ ಜನಕ್ಕೂ ಸಕ್ಕರೆ ಕಾಯಿಲೆ ಪೆಡಂಭೂತ ವಾಗಿ ಕಾಡುತ್ತಿದೆ! ಇನ್ನೂ ದುಃಖಕರ ಸಂಗತಿ ಎಂದರೆ ಸಣ್ಣ ಮಕ್ಕಳನ್ನು ಕೂಡ ಈ ಕಾಯಿಲೆ ಬಿಡುತ್ತಿಲ್ಲ!
ಸಾಮಾನ್ಯವಾಗಿ ಮಧುಮೇಹ ಇರುವವರಿಗೆ, ಪ್ರಮುಖವಾಗಿ ಕಾಡುವ ಸಮಸ್ಯೆ ಎಂದರೆ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಏರುಪೇರಾಗುವುದು. ಇದರಿಂದಾಗಿ ಈ ಕಾಯಿಲೆ ನಿಯಂತ್ರಣಕ್ಕೆ ಬಾರದೇ, ವ್ಯಕ್ತಿಯಲ್ಲಿ ಇನ್ನಷ್ಟು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಒಂದು ವೇಳೆ ಈಗಾಗಲೇ ಯಾರಿಗೆ ಮಧುಮೇಹ ಇದೆ, ಅಂತಹವರಿಗೆ ಯಾವುದಾದರೊಂದು ರೂಪದಲ್ಲಿ ಅವಲಕ್ಕಿ ಸೇವಿಸಿದರೆ, ತಕ್ಕಮಟ್ಟಿಗೆ ಆದರೂ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು. ಯಾಕೆಂದರೆ ಇದರಲ್ಲಿ ಕಂಡು ಬರುವ ನಾರಿನಾಂಶ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ದಪ್ಪ ಇದ್ದವರು ಸಣ್ಣ ಆಗಬಹುದು!
ರಕ್ತಹೀನತೆ ಸಮಸ್ಯೆ
ವೈದ್ಯರು ಹೇಳುವ ಪ್ರಕಾರ, ದೇಹಕ್ಕೆ ಕಬ್ಬಿಣಾಂಶ ತುಂಬಾ ಮುಖ್ಯ. ಒಂದು ವೇಳೆ ಇದರಲ್ಲಿ ಕೊರತೆ ಉಂಟಾದರೆ, ರಕ್ತಹೀನತೆ ಸಮಸ್ಯೆಯಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆಯಂತೆ! ಹೀಗಾಗಿ ಈ ಸಮಸ್ಯೆ ಇರುವವರು ಆದಷ್ಟು ಕಬ್ಬಿಣಾಂಶ ಯಥೇಚ್ಛವಾಗಿ ಸಿಗುವ ಆಹಾರ ಪದಾರ್ಥಗಳನ್ನು, ತಮ್ಮ ದೈನಂದಿನ ಆಹಾರಪದ್ಧತಿಗಳಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ.
ಅದರಲ್ಲೂ ಬೆಳಗಿನ ಉಪಹಾರಕ್ಕೆ ಆಗಾಗ ಅವಲಕ್ಕಿಯನ್ನು ನೆನೆಸಿ ತಿನ್ನುವುದು, ಒಗ್ಗರಣೆ ಹಾಕಿಕೊಂಡು ತಿನ್ನುವುದು ಅಥವಾ ಮೇಲೆ ಹೇಳಿದ ಹಾಗೆ ಇದರಿಂದ ಉಪ್ಪಿಟ್ಟು ತಯಾರು ಮಾಡಿಕೊಂಡು ತಿನ್ನುವುದಿಂದ ಕೂಡ ಈ ಸಮಸ್ಯೆಯಿಂದ ಪಾರಾಗಬಹುದು!
ಕೊನೆಯ ಮಾತು
ತಿಂಡಿ ಏನು ತಿನ್ನಬೇಕು ಎಂದು ಆಲೋಚನೆ ಮಾಡುವವರಿಗೆ, ಅವಲಕ್ಕಿ ಒಂದು ಅದ್ಭುತವಾದ ಉಪಹಾರ ಎಂದು ಹೇಳಬಹುದು. ದೇಹಕ್ಕೂ ಹಗುರ, ಆರೋಗ್ಯಕ್ಕೂ ಒಳ್ಳೆಯದು. ಅವಲಕ್ಕಿ ಜೊತೆಗೆ ಸ್ವಲ್ಪ ಈರುಳ್ಳಿ ಮತ್ತು ಕೊಬ್ಬರಿ ತುರಿ ಉಪಯೋಗಿಸಿದರೆ ಬಾಯಿಗೆ ಇನ್ನೂ ರುಚಿ. ತಯಾರು ಮಾಡುವಾಗ ಸ್ವಲ್ಪ ಆಲಿವ್ ಆಯಿಲ್ ಬಳಕೆ ಮಾಡಿ ನೋಡಿ. ಬೆಳಗಿನ ಬ್ರೇಕ್ ಫಾಸ್ಟ್ ಗೆ ಅವಲಕ್ಕಿ ಬೇಕು ಎಂದು ನೀವೇ ಹೇಳುತ್ತೀರಿ!!
Healthiest Reasons Why Poha Is Good For Morning Breakfast.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm