ಬ್ರೇಕಿಂಗ್ ನ್ಯೂಸ್
25-03-22 11:09 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಮಳೆಗಾಲದಲ್ಲಿ ಇಷ್ಟವಾಗುವ ಕೆಲವೊಂದು ತಿಂಡಿ ತಿನಿಸುಗಳು, ಆಹಾರ ಪದಾರ್ಥಗಳು ಬೇಸಿಗೆ ಕಾಲದಲ್ಲಿ ಇಷ್ಟವಾಗುವುದಿಲ್ಲ. ಉದಾಹರಣೆಗೆ ನೋಡುವುದಾದರೆ ಮಳೆಗಾಲದಲ್ಲಿ ಬಿಸಿ ಬಿಸಿಯಾಗಿರುವ ಪಾನೀಯಗಳು ಇಷ್ಟವಾಗುವುದಾದರೆ, ಬೇಸಿಗೆಯಲ್ಲಿ ತಂಪು ಪಾನೀಯಗಳನ್ನು ಕುಡಿಯಬೇಕೆಂದು ಮನಸ್ಸು ಬಯಸುತ್ತದೆ.
ಅದರಂತೆ ಈ ಸಮಯದಲ್ಲಿ ನಾವು ತಯಾರು ಮಾಡುವ ಅಡುಗೆ ಪದಾರ್ಥಗಳು ಕೂಡ ಅಷ್ಟೇ, ಕೆಲವು ಆಹಾರ ಪದಾರ್ಥಗಳು ಮನೆಯಲ್ಲಿ ಕೆಲವು ಮಂದಿಗೆ ತುಂಬಾ ಪ್ರಿಯವಾಗಿರುತ್ತವೆ ಇನ್ನು ಕೆಲವರಿಗೆ ಕಷ್ಟವಾಗುತ್ತವೆ! ಆದರೆ ಮೊಸರನ್ನದ ವಿಷ್ಯಕ್ಕೆ ಬಂದಾಗ ಎಲ್ಲರೂ ಇಷ್ಟ ಪಟ್ಟು ತಿನ್ನುವ ಮನಸ್ಸು ಮಾಡುತ್ತಾರೆ..
ಇನ್ನು ನಮಗೆಲ್ಲಾ ಗೊತ್ತೇ ಇರುವ ಹಾಗೆ ಹಾಲಿನ ಉಪಉತ್ಪನ್ನವಾದ ಮೊಸರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲೂ ಇದರಲ್ಲಿ ಹಾಲಿನ ಎಲ್ಲಾ ಗುಣಗಳನ್ನು ಅಂದರೆ ಕ್ಯಾಲ್ಸಿಯಂ, ವಿಟಮಿನ್ ' ಬಿ 2 ', ವಿಟಮಿನ್ ' ಬಿ 12 ', ಪೊಟ್ಯಾಸಿಯಮ್ ಮತ್ತು ಮೆಗ್ನೀಷಿಯಂ ನಂತಹ ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಒಂದು ವೇಳೆ ಹೊಟ್ಟೆ ಕೆಟ್ಟು ಹೋದ ಸಮಸ್ಯೆ ಇದ್ದವರಿಗೆ, ಇದು ಬಹಳ ಬೇಗನೆ ಪರಿಹಾರ ಒದಗಿಸುತ್ತದೆ ಎಂದು ಹೇಳುತ್ತಾರೆ. ಮೊಸರನ್ನ ಸೇವನೆ ಮಾಡುವವರು ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹುದು. ಬನ್ನಿ ಇಂದಿನ ಲೇಖನದಲ್ಲಿ ಮೊಸರನ್ನ ಸೇವನೆ ಮಾಡುವುದರಿಂದ ಸಿಗುವ ಆರೋಗ್ಯದ ಲಾಭಗಳು ಏನು ಎಂಬುದನ್ನು ನೊಡೋಣ ಬನ್ನಿ...
ಜೀರ್ಣಶಕ್ತಿ ಅಧಿಕವಾಗುತ್ತದೆ

ಸಾಕಷ್ಟು ಜನರಿಗೆ, ಬೇಸಿಗೆಯಲ್ಲಿ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದಕ್ಕೆ ಕಾರಣಗಳನ್ನು ನೋಡುವುದಾದರೆ, ಎಣ್ಣೆಯಂಶ ಹೊಂದಿರುವ ಮಸಾಲೆ ಪದಾರ್ಥಗಳು, ಜಂಕ್ ಫುಡ್‌ಗಳ ಸೇವನೆ ಇತ್ಯಾದಿಗಳಿಂದಾಗಿ, ದೇಹದ ಜೀರ್ಣಶಕ್ತಿ ಸರಿಯಾಗಿ ಕಾರ್ಯ ನಿರ್ಹಿಸುವುದನ್ನೇ ನಿಲ್ಲಿಸಿ ಬಿಡುತ್ತದೆ.
ಇಂತಹ ಸಮಯದಲ್ಲಿ ಸೇವನೆ ಮಾಡಿದ ಯಾವುದೇ ಆಹಾರ ಹೊಟ್ಟೆಯ ಭಾಗದಲ್ಲಿ ಅಜೀರ್ಣತೆ ಮತ್ತು ಹೊಟ್ಟೆ ಉಬ್ಬರವನ್ನು ತಂದುಕೊಡುತ್ತದೆ. ಆದರೆ ಇದಕ್ಕೆಲ್ಲಾ ಮೆಡಿಕಲ್‌ನಿಂದ ತಂದ ಡೈಜೇಷನ್ ಮಾತ್ರೆ ಅಥವಾ ಪೌಡರ್ ಕುಡಿಯುವ ಬದಲು, ಮನೆಯಲ್ಲಿಯೇ ಮೊಸರನ್ನ ಮಾಡಿ ಸೇವಿಸುವುದರಿಂದ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು.
ಇನ್ನು ಜೀರ್ಣಕ್ರಿಯೆ ಸರಿಯಾಗಿ ನಡೆಯದೇ ಇರುವ ಸಮಯದಲ್ಲಿ ಮೊಸರನ್ನ ಸೇವನೆ ಮಾಡಿದರೆ ತನ್ನ ಪ್ರೋಬಯೋಟಿಕ್ ಗುಣಲಕ್ಷಣಗಳಿಂದ ಆರೋಗ್ಯಕರವಾದ ಬ್ಯಾಕ್ಟೀರಿಯಗಳನ್ನು ಕರುಳಿನ ಭಾಗಕ್ಕೆ ಮತ್ತು ಹೊಟ್ಟೆಯ ಭಾಗಕ್ಕೆ ತಲುಪುವಂತೆ ಮಾಡಿ ಮಲಬದ್ಧತೆ ಮತ್ತು ಹೊಟ್ಟೆ ನೋವಿನ ಸಮಸ್ಯೆಯಿಂದ ರಕ್ಷಣೆ ಮಾಡುತ್ತದೆ. ಅಷ್ಟೇ ಅಲ್ಲದೇ ಕೆಲವೊಮ್ಮೆ ಅಜೀರ್ಣ ಸಮಸ್ಯೆಗಳಿಂದ ಉಂಟಾಗುವ ಫುಡ್ ಪಾಯಿಸನ್ ಸಮಸ್ಯೆಯಿಂದ ಕೂಡ ನಮ್ಮನ್ನು ರಕ್ಷಿಸುತ್ತದೆ.
ದೇಹವನ್ನು ತಂಪಾಗಿಡುತ್ತದ

ಬೇಸಿಗೆಯಲ್ಲಿ ವಿಪರೀತ ಬಿಸಿಲಿನಿಂದಾಗಿ, ಉಷ್ಣತೆಯ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಕೆಲವೊಮ್ಮೆ ಇದೇ ಸಮಸ್ಯೆಯಿಂದಾಗಿ ಕೆಲವೊಮ್ಮೆ ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳು ಕೂಡ ಕಾಡಲು ಶುರುವಾಗುತ್ತದೆ. ಉದಾಹರಣೆಗೆ ನಿಶ್ಯಕ್ತಿ, ಬಳಲಿಕೆ, ವಾಕರಿಕೆ ಮತ್ತು ತಲೆನೋವು ಕಾಣಿಸಬಹುದು. ಸ್ನಾಯುಗಳಲ್ಲಿ ನೋವು, ತೀವ್ರ ರೀತಿಯ ಬಳಲಿಕೆ ಮತ್ತು ಹೃದಯದ ಸಮಸ್ಯೆಯು ಕೂಡ ಕಂಡುಬರುವ ಅಪಾಯ ಹೆಚ್ಚಿರುತ್ತದೆ.ಹೀಗಾಗಿ ಬೇಸಿಗೆಯಲ್ಲಿ ದೇಹವನ್ನು ಸಾಧ್ಯವಾದಷ್ಟು ಇಂತಹ ಸಂದರ್ಭದಲ್ಲಿ ತಂಪಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ನಮ್ಮ ದೈನಂದಿನ ಆಹಾರಪದ್ಧತಿಯಲ್ಲಿ, ಸಾಧ್ಯವಾದಷ್ಟು ಮಟ್ಟಿಗೆ ಮೊಸರನ್ನ ಸೇವಿಸಲು ಮರೆಯಬಾರದು. ದೇಹವನ್ನು ತಂಪಾಗಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆಒಂದು ವೇಳೆ, ಬೇಸಿಗೆಯಲ್ಲಿ ಬಾಡಿ ಹೀಟ್ ಅಥವಾ ದೇಹದ ಉಷ್ಣತೆಯ ಸಮಸ್ಯೆಗಳಿಂದಾಗಿ ಜ್ವರ ಬಂದ ಅನುಭವ ಉಂಟಾದರೆ ನಿಮ್ಮ ಮೊಟ್ಟಮೊದಲನೆಯ ಆಹಾರ ಮೊಸರು ಅನ್ನ ಆದರೆ ತುಂಬಾ ಒಳ್ಳೆಯದು. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.
ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ
![]()
ದೇಹದ ತೂಕ ನಿಯಂತ್ರಣ ಮಾಡುತ್ತದೆ
![]()
ದೇಹದ ತೂಕ ಹೆಚ್ಚಾಗುತ್ತಾ ಹೋದರೆ, ಅದರಿಂದ ಹಲವಾರು ರೀತಿಯ ಅನಾರೋಗ್ಯಗಳು ಮುತ್ತಿ ಕೊಳ್ಳುವುದು. ಹೀಗಾಗಿ ಸರಿಯಾದ ಆಹಾರ ಪಥ್ಯದ ಜತೆಗೆ ಕೆಲವೊಂದು ವ್ಯಾಯಾಮಗಳನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ತೂಕ ಇಳಿಸಲು ಇದು ಸಹಕಾರಿ ಆಗಿರುವುದು.
ಇನ್ನು ಮೊಸರನ್ನ ಇಷ್ಟಪಡುವವರಿಗೆ ಒಂದು ಸಿಹಿ ಸುದ್ದಿಯಿದೆ! ಮಿತವಾಗಿ ದಿನಕ್ಕೆ ಒಮ್ಮೆ ಯಾದರೂ ಮೊಸರನ್ನ ಸೇವಿಸುವುದರಿಂದ ದೇಹದ ತೂಕ ಇಳಿಸಿಕೊಳ್ಳಬಹುದು. ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ ಇದರಲ್ಲಿ ಕ್ಯಾಲೋರಿಗಳ ಅಂಶಗಳು, ತುಂಬಾನೇ ಕಡಿಮೆ ಪ್ರಮಾಣದಲ್ಲಿ ಸಿಗುವ ಕಾರಣ ಹಾಗೂ ಬೇರೆ ಯಾವುದೇ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿಗುವಂತಹ ಎಣ್ಣೆಯ ಪ್ರಮಾಣ ಕಡಿಮೆ ಇರುವುದರಿಂದ, ಇದೊಂದು ಸಮತೋಲನದ ಆಹಾರ ಎನ್ನುವು ದರಲ್ಲಿ ಎರಡು ಮಾತಿಲ್ಲ! ಅದರಲ್ಲೂ ದೇಹದ ತೂಕವನ್ನು ಅಚ್ಚುಕಟ್ಟಾಗಿ ನಿರ್ವಹಿಸು ವಲ್ಲಿಯೂ ಕೂಡ ಪ್ರಮುಖ ಪಾತ್ರವಹಿಸುತ್ತದೆ.
ಮೊಸರನ್ನ ತಯಾರು ಮಾಡುವ ವಿಧಾನ

ರೆಡಿ ಮಾಡುವ ವಿಧಾನ

What Happens If We Eat Curd Rice Daily During Summer Season These Thing You Must Know
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
26-10-25 04:42 pm
Mangalore Correspondent
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಆಗೇ ಆಗುತ್ತೆ,...
25-10-25 08:08 pm
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm